ಮುಂಬೈ(ಡಿ.01): ಬಿಸಿಸಿಐ ನೂತನ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಆಯ್ಕೆಯಾದಾಗ ಅಭಿಮಾನಿಗಳಲ್ಲಿ ಸಂತಸ ಹಾಗೂ ಬೇಸರವೂ ಮೂಡಿತ್ತು. ಕಾರಣ ಲೋಧ ಶಿಫಾರಸು ಪ್ರಕಾರ, ಗಂಗೂಲಿ ಅಧ್ಯಕ್ಷ ಅವಧಿ ಕೇವಲ 9 ತಿಂಗಳ  ಮಾತ್ರ. ಆದರೆ ಇಂದು(ಡಿ.01) ನಡೆದ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಗಂಗೂಲಿಗೆ ಹೆಚ್ಚಿನ ಅಧಿಕಾರವದಿ ನೀಡಲು ಮುಂದಾಗಿದೆ.

ಇದನ್ನೂ ಓದಿ: ಕಲಿತಿದ್ದು ನಿಮ್ಮಿಂದಲೇ; ಸೌರವ್ ಗಂಗೂಲಿಗೆ ಪುತ್ರಿ ಟಕ್ಕರ್!.

ಶಿಫಾರಸಿನಲ್ಲಿ ತಿದ್ದುಪಡಿ ತರಲು ಬಿಸಿಸಿಐ 88ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ನೂತನ ತಿದ್ದುಪಡಿ ಪ್ರಕಾರ ಸೌರವ್ ಗಂಗೂಲಿ 2024ರ ವರೆಗೆ ಬಿಸಿಸಿಐ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ವಾರ್ಷಿಕ ಸಭೆಯಲ್ಲಿ ಗಂಗೂಲಿ ಅಧ್ಯಕ್ಷರಾಗಿ ಮುಂದುವರಿಯುವ ಕುರಿತ ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ. ತಿದ್ದುಪಡಿ ನಿಯವನ್ನು ಸುಪ್ರೀಂ ಕೋರ್ಟ್‌ಗೆ ಕಳುಹಿಸಲಾಗಿದ್ದು, ಶೀಘ್ರದಲ್ಲೇ ಅನುಮೋದನೆ ಸಿಗುವ ಎಲ್ಲಾ ಸಾದ್ಯತೆಗಳಿವೆ.

 

ಇದನ್ನೂ ಓದಿ: ಪಿಂಕ್ ಬಾಲ್‌ ಟೆಸ್ಟ್ ಯಶಸ್ವಿ ಬೆನ್ನಲ್ಲೆ ಅಚ್ಚರಿಯ ಹೇಳಿಕೆ ನೀಡಿದ ದಾದಾ

ಬಿಸಿಸಿಐ ಆಡಳಿತ ಮಂಡಳಿ ಅಧಿಕಾರವಧಿಯಲ್ಲಿ ತಿದ್ದುಪಡಿ ತರಲು ಸುಪ್ರೀಂ ಕೋರ್ಟ್ ಈಗಾಗಲೇ ಬಿಸಿಸಿಐಗೆ ಗ್ರೀನ್ ಸಿಗ್ನಲ್ ನೀಡಿತ್ತು. ಸದ್ಯ ಅಧಿಕಾರ ಅವಧಿಯನ್ನು ಗರಿಷ್ಠ 6 ವರ್ಷಕ್ಕೆ ಏರಿಸಲಾಗಿದೆ. ಈ ಮೂಲಕ ಮಹತ್ತರ ಬದಲಾವಣೆಗೆ ಮೊದಲ ಹೆಜ್ಜೆ ಇಟ್ಟಿದೆ.