ಕೊರೋನಾ ವೈರಸ್ ತೀವ್ರತೆ ಹೆಚ್ಚಾಗುತ್ತಿದೆ. ಮುಂಜಾಗ್ರತ ಕ್ರಮ ಕೈಗೊಂಡು ಎಚ್ಚರಿಕೆ ವಹಿಸಿದ್ದವರಿಗೆ ಕೊರೋನಾ ವಕ್ಕರಿಸುತ್ತಿದೆ. ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಕುಟುಂಬಕ್ಕೆ ಕೊರೋನಾ ತಗುಲಿದೆ. ಇದೀಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೂ ಕೊರೋನಾ ಆತಂಕ ಎದುರಾಗಿದ್ದು, ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. 

ಕೋಲ್ಕತಾ(ಜು.16): ಕೊರೋನಾ ವೈರಸ್ ಭೀಕರತೆ ಹೆಚ್ಚಾಗುತ್ತಿದೆ. ಲಕ್ಷಣಗಳೇ ಇಲ್ಲದವರಲ್ಲೂ ಕೊರೋನಾ ಕಾಣಿಸುತ್ತಿದೆ. ಇತ್ತ ಯಾರ ಸಂಪರ್ಕಕ್ಕೂ ಸಿಗದವರಿಗೂ ಕರೋನಾ ಅಂಟಿಕೊಳ್ಳುತ್ತಿದೆ. ಇದೀಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಕೊರೋನಾ ಆತಂಕ ತಗುಲಿದೆ. ಇದಕ್ಕೆ ಕಾರಣ ಗಂಗೂಲಿ ಸಹೋದರ, ಬಂಗಾಳ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಸ್ನೇಹಶಿಷ್‌ಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಭಾರತ-ಇಂಗ್ಲೆಂಡ್ ಸರಣಿ ಮುಂದೂ​ಡಿಕೆ..! IPL ನಡೆಯೋದು ಪಕ್ಕಾ..?

ಕೊರೋನಾ ಸೋಂಕು ಲಕ್ಷಣಗಳು ಕಾಣಿಸಿಕೊಂಡ ಕಾರಣ ಸ್ನೇಹಶಿಷ್ ಪರೀಕ್ಷೆಗೆ ಒಳಗಾಗಿದ್ದರು. ಬುಧವಾರ(ಜು.15) ವರದಿ ಬಂದಿದ್ದು, ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕಳೆದ ತಿಂಗಳು ಸ್ನೇಹಶಿಷ್ ಪತ್ನಿ ಹಾಗೂ ಆತ್ತೆಗೂ ಕೊರೋನಾ ವೈರಸ್ ದೃಢಪಟ್ಟಿತ್ತು. ಕಳೆದ ವಾರ ಸ್ನೇಹಶಿಷ್‌ ಜ್ವರದಿಂದ ಬಳಲಿದ್ದರು. ಹೀಗಾಗಿ ಪರೀಕ್ಷೆ ಮಾಡಿಸಲಾಗಿತ್ತು. 

ಟೀಂ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸ ಖಚಿತ ಪಡಿಸಿದ BCCI!

ಕೊರೋನಾ ವೈರಸ್ ದೃಢಪಟ್ಟ ಕಾರಣ ಸ್ನೇಹಶಿಷ್ ಅವರನ್ನು ಬೆಲ್ಲೆ ವ್ಯೂ ಆಸ್ಪತ್ರೆಗೆ ದಾಖಲಾಗಿದೆ. ಸ್ನೇಹಶಿಷ್‌ಗೆ ಕೊರೋನಾ ವೈರಸ್‌ ದೃಢಪಟ್ಟ ಹಿನ್ನಲೆಯಲ್ಲಿ ಕುಟುಂಬದ ಸದಸ್ಯರು ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಸೌರವ್ ಗಂಗೂಲಿ ಹಾಗೂ ಕುಟುಂಬ ಕೂಡ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. 10 ದಿನಗಳ ಕಾರಣ ಗಂಗೂಲಿ ಕ್ವಾಂರೈಟನ್‌ಗೆ ಒಳಗಾಗಲಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಕೊರೋನಾ ವೈರಸ್ ಪ್ರಕರಣ ಹೆಚ್ಚಾಗುತ್ತಿದೆ. ಒಟ್ಟು 32,838 ಕೊರೋನಾ ವೈರಸ್ ಪ್ರಕರಣ ದೃಢವಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 11,927.