ಟೀಮ್ ಇಂಡಿಯಾ ಕೋಚ್ ಸ್ಥಾನಕ್ಕೆ ಗೌತಮ್ ಗಂಭೀರ್, ವಿರೋಧಿಸಿ ಟ್ವೀಟ್ ಮಾಡಿದ್ರಾ ಸೌರವ್ ಗಂಗೂಲಿ?
ಗೌತಮ್ ಗಂಭೀರ್ (Gautam Gambhir) ಟೀಮ್ ಇಂಡಿಯಾದ ಕೋಚ್ (Team India Coach)ಆಗಿ ನೇಮಕವಾಗೋದಕ್ಕೆ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಅಸಮಾಧಾನ ಹೊಂದಿದ್ದಾರೆ ಎನ್ನುವ ಸುದ್ದಿಗಳು ವೈರಲ್ ಆಗಿವೆ. ಅದಕ್ಕೆ ಕಾರಣ ಸೌರವ್ ಗಂಗೂಲಿ ಮಾಡಿರುವ ಒಂದು ಟ್ವೀಟ್.
ನವದೆಹಲಿ (ಮೇ.30): ಟೀಮ್ ಇಂಡಿಯಾದ ಮುಂದಿನ ಕೋಚ್ (Team India Coach) ಯಾರಾಗ್ತಾರೆ ಅನ್ನೋ ಬಗ್ಗೆ ಇನ್ನೂ ವರದಿಗಳು ಬರುತ್ತಿರುವಂತೆಯೇ ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಬಿಸಿಸಿಐನ (BCCI) ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಕ್ರಿಕೆಟ್ ಮಂಡಳಿಗೆ ಪರೋಕ್ಷವಾಗಿ ಸಂದೇಶವನ್ನು ರವಾನಿಸಿದ್ದಾರೆ. ಟೀಮ್ ಇಂಡಿಯಾಗೆ ಕೋಚ್‌ಅನ್ನು ಬಹಳ ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿ ಎಂದು ಬಿಸಿಸಿಐ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ಭಾರತದ ಮಾಜಿ ಆರಂಭಿಕ ಮತ್ತು ಪ್ರಸ್ತುತ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮೆಂಟರ್ ಗೌತಮ್ ಗಂಭೀರ್ (Gautam Gambhir) ಅವರು ಟಿ20 ವಿಶ್ವಕಪ್ (T20 World Cup) ನಂತರ ಭಾರತದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಸ್ಥಾನಕ್ಕೆ ಏರಲಿದ್ದಾರೆ ಎನ್ನುವ ಸುದ್ದಿಗಳ ನಡುವೆ ಎಕ್ಸ್‌ನಲ್ಲಿ ಗಂಗೂಲಿ ಮಾಡಿರುವ ಈ ಕಾಮೆಂಟ್‌ಗಳು ಮಹತ್ವ ಪಡೆದುಕೊಂಡಿದೆ.
ಉತ್ತಮ ಕೋಚ್‌ನ ಮಹತ್ವವದ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಗಂಗೂಲಿ, "ಒಬ್ಬರ ಜೀವನದಲ್ಲಿ ತರಬೇತುದಾರನ ಮಹತ್ವ, ಅವರ ಮಾರ್ಗದರ್ಶನ ಮತ್ತು ಪಟ್ಟುಬಿಡದ ತರಬೇತಿಯು ಮೈದಾನದ ಒಳಗೆ ಮತ್ತು ಹೊರಗೆ ಯಾವುದೇ ವ್ಯಕ್ತಿಯ ಭವಿಷ್ಯವನ್ನು ರೂಪಿಸುತ್ತದೆ. ಆದ್ದರಿಂದ ಕೋಚ್ ಮತ್ತು ಸಂಸ್ಥೆಯನ್ನು ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿ..." ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.ಗಂಗೂಲಿ ಅವರ ಟ್ವೀಟ್‌ಗೆ ನೆಟಿಜನ್‌ಗಳಿಂದ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಮಾಜಿ ಬ್ಯಾಟರ್ ಅವರು ತಮ್ಮ ಆಟದ ದಿನಗಳಲ್ಲಿ ಗ್ರೆಗ್ ಚಾಪೆಲ್ ಅವರ ಕಠಿಣ ಸಮಯವನ್ನು ನೆನಪಿಸಿಕೊಂಡಿದ್ದಾರೆ ಎಂದು ಕೆಲವರು ಹೇಳಿದ್ದರೆ, ಇನ್ನೂ ಕೆಲವರು ಗಂಭೀರ್ ಅವರ ಕೋಚ್ ಆಗುವುದರ ಬಗ್ಗೆ ಸೌರವ್ ಗಂಗೂಲಿ ವಿರೋಧ ಹೊಂದಿದ್ದಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ನ್ಯೂಜಿಲೆಂಡ್ ಮೂಲದ ಜಾನ್ ರೈಟ್ ಅವರ ಅವಧಿಯಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ಆಗಿದ್ದ ಸೌರವ್ ಗಂಗೂಲಿ, ರೈಟ್ ಅವರ ಕೋಚ್ ಅವಧಿ ಮುಗಿದ ಬಳಿಕ ಆಸ್ಟ್ರೇಲಿಯಾದ ಮಾಜಿ ಬ್ಯಾಟರ್ ಗ್ರೇಗ್ ಚಾಪೆಲ್ ಅವರನ್ನು ಭಾರತದ ಮುಖ್ಯ ಕೋಚ್ ಆಗಿ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2003-04 ರಲ್ಲಿ ಭಾರತದ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಚಾಪೆಲ್ ಮತ್ತು ಗಂಗೂಲಿ ಬಾಂಧವ್ಯ ಉತ್ತಮವಾಗಿತ್ತು. ಆ ಸಮಯದಲ್ಲಿ ಚಾಪೆಲ್ ಅವರು ಬೌನ್ಸಿ ಆಸ್ಟ್ರೇಲಿಯನ್ ಟ್ರ್ಯಾಕ್‌ಗಳಲ್ಲಿ ಯಶಸ್ವಿಯಾಗಲು ಎಡಗೈ ಆಟಗಾರರೊಂದಿಗೆ ಕೆಲಸ ಮಾಡಿದರು ಎಂದು ವರದಿಯಾಗಿತ್ತು.
ಆದರೆ, ಗಂಗೂಲಿ ಮತ್ತು ಚಾಪೆಲ್ ನಡುವಿನ ಸಂಬಂಧವು ಶೀಘ್ರವಾಗಿ ಹಳಸಿತು. ಭಿನ್ನಾಭಿಪ್ರಾಯಗಳು ಎಷ್ಟು ಬೆಳೆದವು ಎಂದರೆ ಗಂಗೂಲಿಯನ್ನು ನಾಯಕನ ಸ್ಥಾನದಿಂದ ವಜಾಗೊಳಿಸಲಾಯಿತು ಮತ್ತು ಬಿಸಿಸಿಐಗೆ ಕೋಚ್‌ನ ಇಮೇಲ್ ಸೋರಿಕೆಯಾದ ನಂತರ ಅವರನ್ನು ತಂಡದಿಂದ ಕೈಬಿಡಲಾಯಿತು.
2006ರಲ್ಲಿ ಗಂಗೂಲಿ ಟೀಮ್ ಇಂಡಿಯಾಗೆ ರೀ ಎಂಟ್ರಿ ಪಡೆದರಾದರೂ, ಗ್ರೇಗ್ ಚಾಪೆಲ್ ಅವರ ಜೊತೆಗಿನ ಸಂಬಂಧ ಮೊದಲಿನಂತೆ ಇದ್ದಿರಲಿಲ್ಲ. ನಿಧಾನವಾಗಿ, ತಂಡದ ಇತರ ಹಿರಿಯರೂ ಸಹ ಆಸ್ಟ್ರೇಲಿಯಾ ಮೂಲಕ ಚಾಪೆಲ್ ಅವರ ಕೋಚಿಂಗ್ ಶೈಲಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಶುರು ಮಾಡಿದರು. 2007 ರ ODI ವಿಶ್ವಕಪ್‌ನಲ್ಲಿ ಭಾರತವು ಗುಂಪು ಹಂತದಿಂದ ನಿರ್ಗಮಿಸಿದ ನಂತರ ಅವರನ್ನು ವಜಾಗೊಳಿಸಲಾಯಿತು.
ಒಂದಲ್ಲ, ಎರಡೆರಡು ಅತ್ಯಾಧುನಿಕ ಶೈಲಿಯ ಐಶಾರಾಮಿ ಮನೆ ಹೊಂದಿರುವ ಕ್ರಿಕೆಟಿಗರಿವರು! ಯಾರ ಮನೆ ಎಲ್ಲಿದೆ?
ಇನ್ನು ಗಂಗೂಲಿ ಹಾಗೂ ಗಂಭೀರ್ ನಡುವೆ ಯಾವುದೇ ವೈಮನಸ್ಯಗಳಿಲ್ಲ. ಮೈದಾನದ ಹೊರಗೆ ಇವರಿಬ್ಬರೂ ಅನೇಕ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ಮೊದಲ ಮೂರು ಆವೃತ್ತಿಗಳ ಐಪಿಎಲ್‌ನಲ್ಲಿ ಕೆಕೆಆರ್ ಟ್ರೋಫಿ ಗೆಲ್ಲಲು ವಿಫಲವಾದ ಬಳಿಕ, ಗಂಗೂಲಿ ಬದಲಿಗೆ ಗಂಭೀರ್ ಅವರನ್ನು ಕೆಕೆಆರ್ ನಾಯಕರನ್ನಾಗಿ ಮಾಡಲಾಗಿತ್ತು. ಆ ಬಳಿಕ ಗಂಭೀರ್ ನಾಯಕತ್ವದ ಮೂರು ಋತುಗಳಲ್ಲಿ ಕೆಕೆಆರ್ ಎರಡು ಟ್ರೋಫಿ ಜಯಿಸಿತ್ತು.
ಪ್ರೇಯಸಿಯಿಂದಲೇ ಪಂದ್ಯದಲ್ಲಿ ಕೆಟ್ಟ ಪ್ರದರ್ಶನ ನೀಡಿದ್ದಾರೆಂದು ದೂಷಿಸಲ್ಪಟ್ಟ ಐವರು ಟೀಂ ಇಂಡಿಯಾ ಕ್ರಿಕೆಟಿಗರು!