CSK ವೃದ್ಧರ ಟೀಂ ಎಂದವರಿಗೆ ಗೆಲುವಿನ ಮೂಲಕ ಉತ್ತರಿಸಿದ ಧೋನಿ

-ಕೆಕೆಆರ್‌ ವಿರುದ್ಧ ಜಯ ದಾಖಲಿಸುವ ಮೂಲಕ ಚಾಂಪಿಯನ್‌ ಆದ ಸಿಎಸ್‌ಕೆ
-ವೃದ್ಧರ ಟಿಂ ಎಂದವರಿಗೆ ತಕ್ಕ ಉತ್ತರ ನೀಡಿದ ಧೋನಿ ಬಾಯ್ಸ್‌
-ನಾಯಕನಾಗಿ 8 T20  ಟ್ರೋಫಿ ಗೆದ್ದಿರುವ ಮೊದಲಿಗೆ ಕ್ಯಾಪ್ಟನ್‌ ಕೂಲ್‌ ಧೋನಿ

CSK Shuts mouths of trollers by winning 4th IPL tropphy

ಬೆಂಗಳೂರು(ಅ.16): ಐಪಿಎಲ್‌ 14ನೇ ಆವೃತ್ತಿ (IPL 2021) ಯ ಫೈನಲ್‌ ಪಂದ್ಯದಲ್ಲಿ ಕೋಲ್ಕತ ನೈಟ್‌ ರೈಡರ್ಸ್‌ (Kolkata Knight Riders) ವಿರುದ್ಧ 27 ರನ್‌ ಗಳ ಜಯ ದಾಖಲಿಸುವ ಮೂಲಕ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) 4ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. 7 ವರ್ಷಗಳ ಬಳಿಕ ಐಪಿಎಲ್‌ (IPL) ಟ್ರೋಫಿ ಗೆಲ್ಲುವ ಕೆಕೆಆರ್‌ ತಂಡದ ಕನಸು ನನಸಾಗಿಯೇ ಉಳಿದಿದೆ.

2020 ರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ 7ನೇ ಸ್ಥಾನ ಪಡೆದಾಗ ಈ ತಂಡಕ್ಕೆ ಇನ್ನು ಭವಿಷ್ಯವಿಲ್ಲ, ವಯಸ್ಸಾದ ಆಟಗಾರರನ್ನು ಇಟ್ಟುಕೊಂಡು ಪ್ರಯೋಜನವಿಲ್ಲ ಎಂದು ಕ್ರಿಕಟ್‌ ಅಭಿಮಾನಿಗಳು ಟೀಕಿಸಿದ್ದರು. ಚೆನ್ನೈ ತಂಡದ ಬಹುತೇಕ ಆಟಗಾರರ ವಯಸ್ಸು 30ಕ್ಕಿಂತ ಹೆಚ್ಚಿರುವುದರಿಂದ ತಂಡವನ್ನು ʼಡ್ಯಾಡ್ಸ್‌ ಆರ್ಮಿʼ (Dad's Army) ಎಂದು ಹಲವರು ಕರೆದಿದ್ದರು. ಆದರೆ ಟ್ರೋಲ್‌ಗಳಿಗೆ ತಕ್ಕ ಉತ್ತರ ನೀಡಿರುವ ಸಿಎಸ್‌ಕೆ ತಂಡ ತನ್ನ ಅದ್ಭುತ ಪ್ರದರ್ಶನದ ಮೂಲಕ ಚಾಂಪಿಯನ್ (Champion) ಪಟ್ಟ ಮುಡಿಗೇರಸಿಕೊಂಡಿದೆ.  2010, 2011, 2018 ರಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದ ತಂಡ ಈಗ ಕ್ಯಾಪ್ಟನ್‌ ಕೂಲ್‌ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ನೇತೃತ್ವದಲ್ಲೇ 4ನೇ ಬಾರಿಗೆ 2021 ರಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. 

ಧೋನಿ ಮಗಳು ಸಾಕ್ಷಿಯ ಪುಟ್ಟ ಕೈಯಲ್ಲಿ ದೊಡ್ಡ ಟ್ರೋಫಿ, ಇಂಟರ್‌ನೆಟ್‌ನಲ್ಲಿ ಕ್ಯೂಟೆಸ್ಟ್ ಫೋಟೋ

ಪ್ಲೇ ಆಫ್‌ಗೂ ಮೊದಲು 3 ಪಂದ್ಯಗಳಲ್ಲಿ ಸೋತು ಲಯ ಕಳೆದುಕೊಂಡಿದ್ದ ಚೆನ್ನೈ, ಕ್ಯಾಲಿಫೈಯರ್‌ 1 ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಮಣಿಸಿ ಫೈನಲ್‌ ಪ್ರವೇಶಿಸಿತ್ತು.‌ ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಫಿಲ್ಢೀಂಗ್‌ ಆಯ್ಕೆ ಮಾಡಿದ್ದ ಕೆಕೆಆರ್‌ ತಂಡಕ್ಕೆ ಚೆನ್ನೈ 192 ರನ್‌ ಗಳ ಬೃಹತ್‌ ಮೊತ್ತದ ಗುರಿಯನ್ನ ನೀಡಿತ್ತು. ಆದರೆ ಈ ಗುರಿಯನ್ನು ತಲುಪಲು ವಿಫಲವಾದ ಕೆಕೆಆರ್‌ ತಂಡ 20 ವೋವರನಲ್ಲಿ 9 ವಿಕೆಟ್‌ ನಷ್ಟಕ್ಕೆ 165 ರನ್‌ ಗಳನ್ನು ಮಾತ್ರ ಕಲೆ ಹಾಕಿತು. ಇನ್ನೇನು ಗೆಲುವಿನ ಹಾದಿ ಖಚಿತವಾಗಿದ್ದರೂ, ಕ್ಯಾಪ್ಟನ್‌ ಕೂಲ್‌ ಧೋನಿ ಕೊನೆಯ ಓವರ್‌ನವರೆಗೂ ತಂಡವನ್ನು ಮುನ್ನಡೆಸುತ್ತ ಸಹ ಆಟಗಾರರಿಗೆ ಮಾರ್ಗದರ್ಶನ ನೀಡಿ, ಯಾವುದೇ ತಪ್ಪುಗಳು ಆಗದಂತೆ ಕಾಳಜಿ ವಹಿಸಿದ ಪರಿಯಂತೂ ಅವರ ನಾಯಕತ್ವಕ್ಕೆ ಹಿಡಿದ ಕೈಗನ್ನಡಿಯಾಗಿತ್ತು. ನಾಯಕರಾಗಿ ಮಹೇಂದ್ರ ಸಿಂಗ್ ಧೋನಿ ಆಡಿದ 300ನೇ ಪಂದ್ಯ ಇದಾಗಿತ್ತು. ಧೋನಿ ನಾಯಕತ್ವದಲ್ಲಿ ಚೆನ್ನೈ ತಂಡವು ಈವರೆಗೂ 9 ಬಾರಿ ಫೈನಲ್‌ ಪ್ರವೇಶಿಸಿ ಒಟ್ಟು 4 ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ. ಈ ಮೂಲಕ ತಾವೊಬ್ಬ ಅದ್ವಿತೀಯ ನಾಯಕ ಎಂಬುದನ್ನು ಧೋನಿ ಸಾಬೀತುಪಡಿಸಿದ್ದಾರೆ. ಅಲ್ಲದೇ  4 ಐಪಿಎಲ್‌, 2 ಚಾಂಪಿಯನ್ಸ್‌ ಲೀಗ್‌ , 1 ವಿಶ್ವಕಪ್‌, 1 ಏಷ್ಯಾ ಕಪ್‌ ಗೆದ್ದು, ನಾಯಕರಾಗಿ ಒಟ್ಟು 8 ಟಿ20 ಟ್ರೋಫಿ ಗೆದ್ದಿರುವ ಮೊದಲಿಗೆ ಎಂಬ ಹೆಗ್ಗಳಿಕೆಗೂ ಧೋನಿ ಪಾತ್ರರಾಗಿದ್ದಾರೆ. 

ಪಂದ್ಯದ ಬಳಿಕ ಮಾತನಾಡಿದ ಮಹೇಂದ್ರ ಸಿಂಗ್‌ ಧೋನಿ ಮತ್ತೆ 2022 ರ ಐಪಿಎಲ್‌ನ 15ನೇ ಆವೃತ್ತಿಯಲ್ಲೂ ಕಣಕ್ಕಿಳಿಯುವ ಸೂಚನೆ ನೀಡಿದ್ದಾರೆ. ಜತೆಗೆ ಫೈನಲ್‌ನಲ್ಲಿ  ತಮ್ಮ ಎದುರಾಳಿ ತಂಡವಾಗಿದ್ದ ಕೆಕೆಆರ್‌ ಬಗ್ಗೆ ಮಾತನಾಡುತ್ತ ʼಕೆಕೆಆರ್‌ ತಂಡ ಈ ಆವೃತ್ತಿಯಲ್ಲಿ ಉತ್ತಮ ಕಮ್‌ಬ್ಯಾಕ್‌ ಮಾಡಿದೆ‌ ಎಂದು ಹೇಳಿದ್ದಾರೆ. ಕೊರೋನಾ ಸಂಕಷ್ಟದಿಂದ ಭಾರತದಲ್ಲಿ ನಡೆಯುತ್ತಿದ್ದ ಐಪಿಎಲ್‌ (IPL) ಪಂದ್ಯಾವಳಿಗಳನ್ನು ತಾತ್ಕಾಲಿಕವಾಗಿ ಸ್ಥತಿಗೊಳಿಸಲಾಗಿತ್ತು. ಭಾರತದಲ್ಲಿ ನಡೆದ ಪಂದ್ಯಾವಳಿಗಳ ಅಂತ್ಯದಲ್ಲಿ ಕೆಕೆಆರ್‌ ಪಾಯಿಂಟ್ಸ ಟೇಬಲ್‌ನಲ್ಲಿ 7 ನೇ ಸ್ಥಾನದಲ್ಲಿತ್ತು. ‌ ಕೆಕೆಆರ್  ಆಡಿದ ಒಟ್ಟು 7 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳಲ್ಲಿ ಮಾತ್ರ ಜಯಗಳಿಸಿತ್ತು. ಆದರೆ ಯುಎಇ ಚರಣದಲ್ಲಿ ಕಮ್‌ಬ್ಯಾಕ್‌ ಮಾಡಿದ ಕೆಕೆಆರ್‌, ಎಲಿಮಿನೆಟರ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ವಿರುದ್ದ ಜಯ ಸಾಧಿಸಿ, ಕ್ವಾಲಿಫೈಯರ್‌2 ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿ ಫೈನಲ್‌ ಪ್ರವೇಶಿಸಿತ್ತು.  

2012ರ ಐಪಿಎಲ್‌ ಫಲಿತಾಂಶ 2021ರಲ್ಲಿ ಸಂಪೂರ್ಣ ಉಲ್ಟಾ! ಅಚ್ಚರಿಯಾದ್ರೂ ಇದು ಸತ್ಯ..!

ಸಿಎಸ್‌ಕೆ ಬಗ್ಗೆ ಮಾತನಾಡುವ ಮುನ್ನ, ಕೆಕೆಆರ್‌ ಬಗ್ಗೆ ಮಾತನಾಡುವುದು ಅತ್ಯವಶ್ಯವಾಗಿದೆ. ಭಾರತದ ಚರಣದಲ್ಲಿ ನಡೆದ ಮೊದಲ ಹಂತದ ಪಂದ್ಯಾವಳಿಗಳಲ್ಲಿ ಅವರಿದ್ದ ಸ್ಥಾನವನ್ನು ಗಮನಿಸಿದಾಗ, ಮತ್ತೆ ಕಮ್‌ ಬ್ಯಾಕ್‌ ಮಾಡಿ ಕೆಕೆಆರ್ ಮಾಡಿರುವ ಸಾಧನೆ ಮೆಚ್ಚುವಂತದ್ದು. ಯಾವುದಾದರೂ ತಂಡ ಈ ಬಾರಿ ಐಪಿಎಲ್‌ ಗೆಲ್ಲುವುದಿದ್ದರೆ ಅದು ಕೆಕೆಆರ್‌ ತಂಡ ಎಂದು ನನಗನಿಸುತ್ತದೆ. ಭಾರತ ಮತ್ತು ಯುಎಇ ಪಂದ್ಯಾವಳಿಗಳ ನಡುವಿನ ಬ್ರೇಕ್‌ ಕೆಕೆಆರ್‌ ತಂಡಕ್ಕೆ ಸಹಾಯ ಮಾಡಿದೆʼ ಎಂದು ಧೋನಿ ಹೇಳಿದ್ದಾರೆ. ಸಿಎಸ್‌ಕೆ ಗೆಲುವಿನ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬಂದಿದ್ದು ಚೆನ್ನೈ ತಂಡದ ಸಾರಥಿ ಧೋನಿ ಅದ್ಭುತ ನಾಯಕತ್ವವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಸಿಎಸ್‌ಕೆ ತಂಡದ ಅಮೋಘ ಸಾಧನೆ ಬಗ್ಗೆ  ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

 

 

 

 

Latest Videos
Follow Us:
Download App:
  • android
  • ios