ತವರಿನಲ್ಲಿ ಸ್ಮೃತಿ ಮಂಧನಾ ಮೊದಲ ಶತಕ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 143 ರನ್‌ ಗೆಲುವು

ಮೊದಲು ಬ್ಯಾಟ್‌ ಮಾಡಿದ ಭಾರತ 50 ಓವರಲ್ಲಿ 8 ವಿಕೆಟ್‌ಗೆ 265 ರನ್‌ ಕಲೆಹಾಕಿತು. ಸ್ಮೃತಿ 127 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್‌ನೊಂದಿಗೆ 117 ರನ್‌ ಸಿಡಿಸಿದರು. ಏಕದಿನ ಕ್ರಿಕೆಟ್‌ನಲ್ಲಿ ಇದು ಅವರ 6ನೇ ಶತಕ. ತವರಿನಲ್ಲಿ ಮೊದಲ ಶತಕ ಎನ್ನುವುದು ವಿಶೇಷ.

Smriti Mandhana elated to contribute after match winning hundred vs South Africa kvn

ಬೆಂಗಳೂರು: ಸ್ಮೃತಿ ಮಂಧನಾ ಅವರ ಅಮೋಘ ಶತಕ, ಸ್ಪಿನ್ನರ್‌ಗಳ ಆಕರ್ಷಕ ಪ್ರದರ್ಶನದ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡ 143 ರನ್‌ಗಳ ಬೃಹತ್‌ ಗೆಲುವು ಸಾಧಿಸಿತು. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು.

ಮೊದಲು ಬ್ಯಾಟ್‌ ಮಾಡಿದ ಭಾರತ 50 ಓವರಲ್ಲಿ 8 ವಿಕೆಟ್‌ಗೆ 265 ರನ್‌ ಕಲೆಹಾಕಿತು. ಸ್ಮೃತಿ 127 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್‌ನೊಂದಿಗೆ 117 ರನ್‌ ಸಿಡಿಸಿದರು. ಏಕದಿನ ಕ್ರಿಕೆಟ್‌ನಲ್ಲಿ ಇದು ಅವರ 6ನೇ ಶತಕ. ತವರಿನಲ್ಲಿ ಮೊದಲ ಶತಕ ಎನ್ನುವುದು ವಿಶೇಷ.

ದೊಡ್ಡ ಗುರಿ ಬೆನ್ನತ್ತಿದ ದ.ಆಫ್ರಿಕಾ, 37.4 ಓವರಲ್ಲಿ 122 ರನ್‌ಗೆ ಆಲೌಟ್‌ ಆಯಿತು. ಪಾದಾರ್ಪಣಾ ಪಂದ್ಯದಲ್ಲಿ ಲೆಗ್‌ ಸ್ಪಿನ್ನರ್‌ ಆಶಾ ಶೋಭನಾ 4 ವಿಕೆಟ್‌ ಕಿತ್ತರು. ದೀಪ್ತಿ 2, ರಾಧಾ 1 ವಿಕೆಟ್‌ ಪಡೆದರು. 2ನೇ ಪಂದ್ಯ ಜೂ.19ರಂದು ನಡೆಯಲಿದೆ. ಸರಣಿಯ ಎಲ್ಲಾ 3 ಪಂದ್ಯಗಳಿಗೂ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವೇ ಆತಿಥ್ಯ ವಹಿಸಲಿದೆ.

ಸ್ಕೋರ್‌: ಭಾರತ 50 ಓವರಲ್ಲಿ 265/8 (ಸ್ಮೃತಿ 117, ದೀಪ್ತಿ 37, ಖಾಕ 3-47), ದ.ಆಫ್ರಿಕಾ 37.4 ಓವರಲ್ಲಿ 122/10 (ಲುಸ್‌ 33, ಸಿನಾಲೊ 27*, ಆಶಾ 4-21)

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ ನಮೀಬಿಯಾದ ವೀಸಾ

ನಾರ್ಥ್‌ಂಡ್: ನಮೀಬಿಯಾದ ಆಲ್ರೌಂಡರ್ ಡೇವಿಡ್ ವೀಸಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಶನಿವಾರ ಇಂಗ್ಲೆಂಡ್ ವಿರುದ್ಧದ ಪಂದ್ಯದಬಳಿಕ ಅವರು ತಮ್ಮ ನಿರ್ಧಾರಪ್ರಕಟಿಸಿದರು. 2013ರಲ್ಲಿ ದ.ಆಫ್ರಿಕಾ ಪರ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ವೀಸಾ, 2015ರಲ್ಲಿ ಏಕದಿನ ಕ್ರಿಕೆಟ್‌ಗೆ ಕಾಲಿಟ್ಟಿದ್ದರು. 

2016ರ ಟಿ20 ವಿಶ್ವಕಪ್‌ನಲ್ಲಿ ದ.ಆಫ್ರಿಕಾವನ್ನು ಪ್ರತಿನಿಧಿಸಿದ್ದ ವೀಸಾ, 2021ರಲ್ಲಿ ನಮೀಬಿಯಾ ತಂಡಕ್ಕೆ ಸೇರ್ಪಡೆಗೊಂಡು, ಟಿ20 ವಿಶ್ವಕಪ್‌ನಲ್ಲಿ ಆಡಿದ್ದರು. 2022ರ ಟಿ20 ವಿಶ್ವಕಪ್ ನಲ್ಲೂ ವೀಸಾ ಪಾಲ್ಗೊಂಡಿದ್ದರು. ಡೇವಿಡ್ ಒಟ್ಟು 15 ಏಕದಿನ, 40 ಅಂ.ರಾ. ಟಿ20 ಪಂದ್ಯವನ್ನಾಡಿದ್ದಾರೆ.

ಐರ್ಲೆಂಡ್ ವಿರುದ್ಧ ತಿಣುಕಾಡಿ ಗೆದ್ದ ಪಾಕಿಸ್ತಾನ!

ಲಾಡರ್‌ಹಿಲ್: ಟಿ20 ವಿಶ್ವಕಪ್ ಅಭಿಯಾನವನ್ನು ಪಾಕಿಸ್ತಾನ ಜಯದೊಂದಿಗೆ ಮುಕ್ತಾಯಗೊಳಿಸಿದೆ. ಭಾನುವಾರ ನಡೆದ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ, 3 ವಿಕೆಟ್‌ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ 32 ರನ್‌ಗೆ 6 ವಿಕೆಟ್ ಕಳೆದುಕೊಂಡ ಹೊರತಾ ಗಿಯೂ 9 ವಿಕೆಟ್‌ಗೆ 106 ರನ್ ಗಳಿಸಿತು. ಪಾಕಿಸ್ತಾನ ಒಂದು ಹಂತದಲ್ಲಿ 62ಕ್ಕೆ 6 ವಿಕೆಟ್ ಕಳೆದು ಕೊಂಡು ಸಂಕಷ್ಟದಲ್ಲಿತ್ತು. ಆದರೆ ಅಬ್ಬಾಸ್ ಹಾಗೂ ಶಾಹೀನ್ ಹೋರಾಟ ತಂಡವನ್ನು ಗೆಲ್ಲಿಸಿತು.
 

Latest Videos
Follow Us:
Download App:
  • android
  • ios