ಒಂದು ಗಾದೆ ಮಾತಿದೆ, 'ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಕೊಟ್ರು..' ಅನ್ನೋ ಹಾಗೆ, ನ್ಯೂಜಿಲೆಂಡ್‌ ವಿರುದ್ಧ ದ್ವಿಶತಕ ಸಿಡಿಸಿ ಗಮನಸೆಳೆದಿದ್ದು ಟೀಮ್‌ ಇಂಡಿಯಾ ಆರಂಭಿಕ ಆಟಗಾರ ಶುಭ್‌ಮಾನ್‌ ಗಿಲ್‌. ಆದರೆ, ಅಚ್ಚರಿ ಎನ್ನುವಂತೆ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗಿರುವುದು ಸಚಿನ್‌ ತೆಂಡುಲ್ಕರ್‌ ಪುತ್ರಿ ಸಾರಾ ತೆಂಡುಲ್ಕರ್‌.

ಬೆಂಗಳೂರು (ಜ.19): ಪ್ರವಾಸಿ ನ್ಯೂಜಿಲೆಂಡ್‌ ತಂಡದ ವಿರುದ್ಧ ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್‌ ಇಂಡಿಯಾದ ಯುವ ಬ್ಯಾಟ್ಸ್‌ಮನ್‌ ಶುಭ್‌ಮನ್‌ ಗಿಲ್‌ ಅತ್ಯಾಕರ್ಷಕವಾದ ದ್ವಿಶತಕ ಸಿಡಿಸಿ ಗಮನಸೆಳೆದರು. ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಟೀಮ್‌ ಇಂಡಿಯಾ 8 ವಿಕೆಟ್‌ಗೆ 349 ರನ್‌ಗಳನ್ನು ಬಾರಿಸಿತು. ಲಾಕಿ ಫರ್ಗ್ಯುಸನ್‌ ಎಸೆದ 49ನೇ ಓವರ್‌ನಲ್ಲಿ ಮೂರು ಆಕರ್ಷಕ ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಶುಭ್‌ಮನ್‌ ಗಿಲ್‌, ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ದ್ವಿಶತಕವನ್ನು ಪೂರೈಸಿದ್ದರು. ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಶುಭಮನ್‌ ಗಿಲ್‌ ದ್ವಿಶತಕ ಬಾರಿಸಿದ ಬಳಿಕ, ಟ್ವಿಟರ್‌, ಫೇಸ್‌ಬುಕ್‌ ಹಾಗೂ ಇನ್ಸ್‌ಟಾಗ್ರಾಮ್‌ಗಳಲ್ಲಿ ತಕ್ಷಣವೇ ಟ್ರೆಂಡ್‌ ಆಗಿಬಿಟ್ಟರು. ಆದರೆ, ಸಮಯ ಕಳೆದಂತೆ ಶುಭ್‌ಮನ್‌ ಗಿಲ್‌ ಜೊತೆ ಸಚಿನ್‌ ತೆಂಡುಲ್ಕರ್‌ ಅವರ ಪುತ್ರಿ ಸಾರಾ ತೆಂಡುಲ್ಕರ್‌ ಕೂಡ ಟ್ರೆಂಡ್‌ ಆಗಿಬಿಟ್ಟರು. ಇದಕ್ಕೆ ಕಾರಣವೂ ಇದೆ.

View post on Instagram


ಸೈಫ್‌ ಅಲಿ ಖಾನ್‌ ಅವರ ಪುತ್ರಿ ಸಾರಾ ಅಲಿ ಖಾನ್‌ ಹಾಗೂ ಶುಭ್‌ಮನ್‌ ಗಿಲ್‌ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಅದಕ್ಕೂ ಮುನ್ನ ಶುಭ್‌ ಮನ್‌ ಗಿಲ್‌ ಅವರ ಹೆಸರು ಸಚಿನ್‌ ತೆಂಡುಲ್ಕರ್‌ ಅವರ ಪುತ್ರಿ ಸಾರಾ ತೆಂಡುಲ್ಕರ್‌ ಅವರೊಂದಿಗೆ ತಳುಕು ಹಾಕಿಕೊಂಡಿತ್ತು. 25 ವರ್ಷದ ಸಾರಾ ತೆಂಡುಲ್ಕರ್‌, ಸದ್ಯ ಇಂಗ್ಲೆಂಡ್‌ನಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದು, ಮಾಡೆಲಿಂಗ್‌ ಕ್ಷೇತ್ರಕ್ಕೆ ಕಾಲಿಡುವ ಹಾದಿಯಲ್ಲಿದ್ದಾರೆ. ಇನ್ಸ್‌ಟಾಗ್ರಾಮ್‌ನಲ್ಲಿ ಅವರ ಪೋಸ್ಟ್‌ಗಳಿಗೆ ಸಾಕಷ್ಟು ಲೈಕ್ಸ್‌, ಕಾಮೆಂಟ್‌ಗಳು ಬರುತ್ತದೆ. ಇತ್ತೀಚೆಗೆ ಶ್ರೀಲಂಕಾ ವಿರುದ್ಧದ ಪಂದ್ಯದ ವೇಳೆ ಶುಭ್‌ಮನ್‌ ಗಿಲ್‌ ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್‌ ಮಾಡುತ್ತಿದ್ದಾಗ ಅಲ್ಲಿದ್ದ ಅಭಿಮಾನಿಗಳು ಸಾರಾ ಸಾರಾ ಎಂದು ಕೂಗುತ್ತಿದ್ದರು. ಆ ವಿಡಿಯೋ ಕೂಡ ವೈರಲ್‌ ಆಗಿತ್ತು. ಕೆಲ ತಿಂಗಳ ಹಿಂದೆ ಸೋನಮ್‌ ಬಜ್ವಾಗೆ ಕೂಡ ಸಾರಾ ಅಲಿ ಖಾನ್‌ ಜೊತೆ ಡೇಟಿಂಗ್‌ ನಡೆಸುತ್ತಿದ್ದ ಬಗ್ಗೆ ಗಿಲ್‌ ಹೇಳಿದ್ದರು.

ಅಥಿಯಾ ಶೆಟ್ಟಿ- ಸಾರಾ ತೆಂಡುಲ್ಕರ್ : ಕ್ರಿಕೆಟ್ ಸ್ಟಾರ್ಸ್‌ನ ಗರ್ಲ್‌ಫ್ರೆಂಡ್ಸ್‌!

'ಶುಭ್‌ಮನ್‌ ಗಿಲ್‌ ದ್ವಿಶತಕದ ಬಳಿಕ ಸಾರಾ ತೆಂಡುಲ್ಕರ್‌, ರೀಲ್ಸ್‌ಗಳಿಗೆ ಬಳಸುವ ಎಲ್ಲಾ ವಿಡಿಯೋಗಳು ಪಂಜಾಬಿ ಸಾಂಗ್‌ಗಳೇ ಆಗಿರುತ್ತದೆ' ಎನ್ನುವ ಅರ್ಥದಲ್ಲಿ ಇನ್ನೊಬ್ಬರು ಬರೆದಿದ್ದಾರೆ.

ಸಾರಾ ತೆಂಡುಲ್ಕರ್ ಬ್ಯೂಟಿಗಿಲ್ಲ ಸರಿಸಾಟಿ; ಬಾಲಿವುಡ್ ನಟಿಯರನ್ನೇ ಮೀರಿಸಿದ ಸಚಿನ್ ಪುತ್ರಿ!

'ವೋ ಸಾರಾ ನೇ ಬೋಲ್‌ ದಿಯಾ ಥಾ. ಪಾಪಾ ಕೋ ಖುಷ್‌ ಕರ್ನಾ. ಹೇ ತೋ ಉನ್ಕೇ ಜೈಸೇ ಸೆಂಚುರೀಸ್‌ ಲಗಾಕೆ ದಿಖಾವೋ' (ಅದು ಸಾರಾ ಹೇಳಿದ್ದಳು. ಅಪ್ಪನನ್ನು ಖುಷಿ ಪಡಿಸಿ ಅಂತಾ. ಅಥವಾ ಅವರ ರೀತಿಯಲ್ಲಿ ಶತಕಗಳನ್ನು ಹೊಡೆದು ತೋರಿಸಿ ಅಂತಾ)' ಅದಕ್ಕಾಗಿಯೇ ಶುಭ್‌ಮನ್‌ ಗಿಲ್‌ ಈ ರೀತಿಯ ಇನ್ನಿಂಗ್ಸ್‌ ಆಡಿದ್ದಾರಂತೆ. 'ನನ್ನ ಬ್ಯಾಗ್‌ನಲ್ಲಿ ಬಾಬಾ ನೀಡಿದ್ದ ಪ್ರಸಾದವನ್ನು ನೀನು ತಿಂದೆ ಅಂತಾ ಕಾಣುತ್ತದೆ' ಎಂದು ಸ್ವತಃ ವಿರಾಟ್‌ ಕೊಹ್ಲಿ ಶುಭ್‌ಮನ್‌ ಗಿಲ್‌ಗೆ ಹೇಳುತ್ತಿರುವ ರೀತಿ ಇನ್ನೊಬ್ಬರು ಮೀಮ್‌ ಹಂಚಿಕೊಂಡಿದ್ದಾರೆ. ಶುಭ್‌ ಮನ್‌ ಗಿಲ್‌ಗಾಗಿ ಸಾರಾ ತೆಂಡುಲ್ಕರ್‌ ಹಾಗೂ ಸಾರಾ ಅಲಿ ಖಾನ್‌, ಮಿರ್ಜಾಪುರ್‌ ವೆಬ್‌ ಸಿರೀಸ್‌ ಸ್ಟೈಲ್‌ ಅಲ್ಲಿ ಈ ರೀತಿ ಮಾತನಾಡಿಕೊಳ್ಳಬಹುದು ಎಂದು ಮೀಮ್‌ ಹಂಚಿಕೊಂಡಿದ್ದಾರೆ.