ಶ್ರೇಯಸ್ ಅಯ್ಯರ್‌ಗೆ ಮೇಲಿಂದ ಮೇಲೆ ಪೆಟ್ಟು..! IPL 2024 ನಿಂದಲೂ ಔಟ್..?
ಅದ್ಯಾಕೋ ಸದ್ಯ ಮುಂಬೈಕರ್ ಶ್ರೇಯಸ್ ಅಯ್ಯರ್ ಟೈಮೇ ಸರಿ ಇಲ್ಲ ಅನ್ಸುತ್ತೆ. ಕಳೆದ ತಿಂಗಳಷ್ಟೇ BCCI ಸೆಂಟ್ರಲ್ ಕಾಂಟ್ರ್ಯಾಕ್ಟ್ನಿಂದ ಕೈ ಬಿಟ್ಟಿದೆ. ಈಗ ಇಂಜುರಿ ಸಮಸ್ಯೆ ಮತ್ತೆ ಶ್ರೇಯಸ್ ಬೆನ್ನೇರಿದೆ. ರಣಜಿ ಪಂದ್ಯದ ವೇಲೆ ಶ್ರೇಯಸ್ಗೆ ಬೆನ್ನು ನೋವು ಕಾಣಿಸಿಕೊಂಡಿದೆ.
ಬೆಂಗಳೂರು(ಮಾ.15) ಟೀಂ ಇಂಡಿಯಾದ ಈ ಆಟಗಾರ ಇಂಜುರಿ ಕಾರಣದಿಂದಾಗಿ, ಕಳೆದ ವರ್ಷ IPLನಿಂದ ಔಟಾಗಿದ್ರು. ದುರಾದೃಷ್ಟ ಅಂದ್ರೆ, 2024ರಲ್ಲೂ ಈ ಸ್ಟಾರ್ ಪ್ಲೇಯರ್‌ಗೆ ಇಂಜುರಿ ಸಮಸ್ಯೆ ಬಿಟ್ಟು ಬಿಡದೇ ಕಾಡ್ತಿದೆ. ಇದ್ರಿಂದ ಈ ಬಾರಿಯ IPLನಲ್ಲೂ ಆಡೋದು ಅನುಮಾನವಾಗಿದೆ. ಯಾರು ಆ ಆಟಗಾರ..? ಏನ್ ಕಥೆ ಅಂತೀರಾ..? ಈ ಸ್ಟೋರಿ ನೋಡಿ...!
ಪಾಪ, ಮುಂಬೈಕರ್ ಟೈಮೇ ಸರಿ ಇಲ್ಲ..!
ಅದ್ಯಾಕೋ ಸದ್ಯ ಮುಂಬೈಕರ್ ಶ್ರೇಯಸ್ ಅಯ್ಯರ್ ಟೈಮೇ ಸರಿ ಇಲ್ಲ ಅನ್ಸುತ್ತೆ. ಕಳೆದ ತಿಂಗಳಷ್ಟೇ BCCI ಸೆಂಟ್ರಲ್ ಕಾಂಟ್ರ್ಯಾಕ್ಟ್ನಿಂದ ಕೈ ಬಿಟ್ಟಿದೆ. ಈಗ ಇಂಜುರಿ ಸಮಸ್ಯೆ ಮತ್ತೆ ಶ್ರೇಯಸ್ ಬೆನ್ನೇರಿದೆ. ರಣಜಿ ಪಂದ್ಯದ ವೇಲೆ ಶ್ರೇಯಸ್ಗೆ ಬೆನ್ನು ನೋವು ಕಾಣಿಸಿಕೊಂಡಿದೆ. ರಣಜಿ ಫೈನಲ್ ಪಂದ್ಯದ ವೇಳೆಯೇ ನೋವು ತಾಳಲಾರದೇ ಶ್ರೇಯಸ್ ಒದ್ದಾಡಿದ್ದಾರೆ. ಇದ್ರಿಂದ ಪಂದ್ಯದ 5ನೇ ದಿನ ಶ್ರೇಯಸ್ ಫೀಲ್ಡಿಂಗ್ ಮಾಡಲಿಲ್ಲ.
IPL 2024: ಈ ಸಲ ಕಪ್ ಗೆಲ್ಲಬೇಕಿದ್ದರೆ RCB ಈ 5 ಕೆಲಸ ಮಾಡಲೇಬೇಕು..!
ಶ್ರೇಯಸ್ ಅಯ್ಯರ್‌ಗೆ ಇಂಜುರಿಗೊಳಗಾಗಿದ್ದು, IPLನ KKR ಫ್ರಾಂಚೈಸಿ ಚಿಂತೆ ಹೆಚ್ಚಿಸಿದೆ. ಯಾಕಂದ್ರೆ, ಶ್ರೇಯಸ್ IPLನ KKR ತಂಡದ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗೋ ಎನ್ನಲಾಗ್ತಿದೆ. ಒಂದು ವೇಳೆ ಮೆಡಿಕಲ್ ಟೆಸ್ಟ್‌ನಲ್ಲಿ ಅಯ್ಯರ್ ಇಂಜುರಿ ಸೀರಿಯಸ್ ಅಂತ ಗೊತ್ತಾದ್ರೆ, IPL ಟೂರ್ನಿಯಿಂದಲೇ ಔಟ್ ಆಗೋ ಸಾಧ್ಯತೆಯಿದೆ. ಇದೇ KKR ಟೀಮ್ ಮ್ಯಾನೇಜ್ಮೆಂಟ್ ಮತ್ತು ಫ್ರಾಂಚೈಸಿಯ ಟೆನ್ಷನ್‌ಗೆ ಕಾರಣವಾಗಿದೆ.
ಎರಡು ವರ್ಷಗಳಿಂದ ಇಂಜುರಿ ಕಾಟ..!
ಯೆಸ್, ಸತತ 2 ವರ್ಷಗಳಿಂದ ಶ್ರೇಯಸ್‌ಗೆ ಇಂಜುರಿ ಸಮಸ್ಯೆ ಬಿಟ್ಟು ಬಿಡದೇ ಕಾಡ್ತಿದೆ. 2021ರಲ್ಲಿ ಶ್ರೇಯಸ್ ಭುಜದ ನೋವಿನಿಂದ ಬಳಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 2022ರಲ್ಲಿ ಮುಂಬೈಕರ್ ಶತಕ ಸಿಡಿಸೋ ಮೂಲಕ ಗ್ರೇಟ್ ಕಮ್‌ಬ್ಯಾಕ್ ಮಾಡಿದ್ದರು. 2023ರಲ್ಲಿ ಮತ್ತೆ ಇಂಜುರಿಗೆ ತುತ್ತಾಗಿ, IPL, WTC ಫೈನಲ್, ವೆಸ್ಟ್ ಇಂಡೀಸ್ ಟೂರ್ ಮಿಸ್ ಮಾಡಿಕೊಂಡಿದ್ರು. ಬೆನ್ನು ನೋವಿನ ಶಸ್ತ್ರಚಿಕಿತ್ಸೆಗೊಳಗಾಗಿ, ಏಷ್ಯಾಕಪ್ ವೇಳೆ ತಂಡಕ್ಕೆ ವಾಪಸ್ಸಾಗಿದ್ರು. ಕಮ್‌ಬ್ಯಾಕ್ ಮಾಡಿದ್ಮೇಲೂ ಅಯ್ಯರ್‌ಗೆ ಫಿಟ್ನೆಸ್ ಸಮಸ್ಯೆ ಕಾಣಿಸಿಕೊಂಡಿತ್ತಾದ್ರೂ, ನಂತರ ರಿಕವರಿಯಾಗಿದ್ರು.
ಈ ಸಲವೂ ಆರ್‌ಸಿಬಿ ಪಂದ್ಯಗಳ ಟಿಕೆಟ್ ದುಬಾರಿ: ಬೆಂಗಳೂರು ಫ್ಯಾನ್ಸ್ ಕಂಗಾಲು..!
ಏಕದಿನ ವಿಶ್ವಕಪ್ ವೇಳೆಯೂ ಅಯ್ಯರ್ ಫುಲ್ ಫಿಟ್ ಆಗಿರಲಿಲ್ಲ. ನೋವಿನಲ್ಲೇ ಪೇಯ್ನ್ ಕಿಲ್ಲರ್ಸ್ ಇಂಜೆಕ್ಷನ್ಸ್ ತಗೊಂಡು ವರ್ಲ್ಡ್‌ಕಪ್ ಆಡಿದ್ರು ಅನ್ನೋ ಅಂಶ ಇತ್ತೀಚೆಗೆ ರಿವೀಲ್ ಆಗಿತ್ತು. ಈಗ ಮತ್ತೆ ಅಯ್ಯರ್ ಇಂಜುರಿ ಲಿಸ್ಟ್ ಸೇರಿದ್ದಾರೆ.
ಶ್ರೇಯಸ್ ಇಂಜುರಿಗೆ BCCI ಕಾರಣ..!
ಹೌದು, ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್‌ಗಳಲ್ಲಿ ಅಯ್ಯರ್ ಫ್ಲಾಪ್ ಶೋ ನೀಡಿದ್ರು. ಇದ್ರಿಂದ ಸರಣಿಯ ಮಧ್ಯದಲ್ಲೇ ಅವ್ರನ್ನ ತಂಡದಿಂದ ಡ್ರಾಪ್ ಮಾಡಲಾಯ್ತು. ಅಲ್ಲದೇ, ರಣಜಿಯಲ್ಲಿ ಆಡಿ ಫಾರ್ಮ್ಗೆ ಮರಳುವಂತೆ ಸೂಚಿಸಲಾಗಿತ್ತು. ಆದ್ರೆ ಬೆನ್ನು ನೋವಿನ ಕಾರಣ ನೀಡಿ, ಅಯ್ಯರ್ ರಣಜಿಯಿಂದ ದೂರ ಉಳಿದ್ರು. ಮತ್ತೊಂದೆಡೆ NCA ಅಯ್ಯರ್ ಫುಲ್ ಫಿಟ್ ಇದ್ದು, ಯಾವುದೇ ಸಮಸ್ಯೆ ಇಲ್ಲ ಅಂತ ಹೇಳಿತ್ತು. ಇದು BCCIನ ಕೆರಳಿಸಿತ್ತು. ಇದೇ ಕಾರಣಕ್ಕೆ ಸೆಂಟ್ರಲ್ ಕಾಂಟ್ರ್ಯಾಕ್ಟ್ ಆಟಗಾರರ ಪಟ್ಟಿಯಿಂದ ಅಯ್ಯರ್ನ ಕೈ ಬಿಡ್ತು.
BCCI ನೀಡಿದ ಪೆಟ್ಟಿನಿಂದ ಎಚ್ಚೆತ್ತ ಅಯ್ಯರ್, ರಣಜಿ ಸೆಮಿಫೈನಲ್ನಲ್ಲಿ ಮುಂಬೈ ಪರ ಆಡಿದ್ರು. ಫೈನಲ್‌ನಲ್ಲೂ ಬ್ಯಾಟ್ ಬೀಸಿದ್ರು. ಇದ್ರಿಂದ ಅಯ್ಯರ್ ಮತ್ತೆ ಇಂಜುರಿಗೆ ತುತ್ತಾಗಲು BCCI ಕಾರಣ. BCCI ಸೂಚಿಸಿದ್ದರಿಂದ ಫುಲ್ ಫಿಟ್ ಇರದಿದ್ದರೂ, ರಣಜಿಯಲ್ಲಿ ಅಯ್ಯರ್ ಆಡಬೇಕಾಯ್ತು. T20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಅಯ್ಯರ್‌ಗೆ IPL ವೇದಿಕೆಯಾಗಿತ್ತು. ಒಂದು ವೇಳೆ IPLನಲ್ಲಿ ಆಡದೇ ಇದ್ರೆ, T20 ವಿಶ್ವಕಪ್ ತಂಡದ ಆಯ್ಕೆಯ ರೇಸ್ನಿಂದ ಔಟಾಗೋದು ಪಕ್ಕಾ ..! ಆದ್ರೆ, ಹಾಗಾಗದಿರಲಿ , IPL ಆರಂಭದ ವೇಳೆಗೆ ಶ್ರೇಯಸ್ ಕಂಪ್ಲೀಟ್ ಫಿಟ್ ಆಗಲಿ. IPLನಲ್ಲಿ ಕಣಕ್ಕಿಳಿಯಲಿ ಅನ್ನೋದೆ ಅಭಿಮಾನಿಗಳ ಆಶಯ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್