ಸದ್ಯ ಮಾ.22ರಿಂದ ಏ.7ರ ವರೆಗಿನ ವೇಳಾಪಟ್ಟಿ ಪ್ರಕಟಗೊಂಡಿದ್ದು, ಈ ಅವಧಿಯಲ್ಲಿ ಆರ್‌ಸಿಬಿ ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3 ಪಂದ್ಯಗಳನ್ನಾಡಲಿದೆ. ಮಾ.25ಕ್ಕೆ ಪಂಜಾಬ್‌, 29ಕ್ಕೆ ಕೋಲ್ಕತಾ, ಏ.2ಕ್ಕೆ ಲಖನೌ ವಿರುದ್ಧ ಆಡಲಿದ್ದು, ಈ ಪಂದ್ಯಗಳ ಕನಿಷ್ಠ ಟಿಕೆಟ್‌ ಬೆಲೆ ₹2,300 ಹಾಗೂ ಗರಿಷ್ಠ ಮೌಲ್ಯ ₹42,350 ವರೆಗೂ ಇದೆ. ಆರ್‌ಸಿಬಿ ವೆಬ್‌ಸೈಟ್‌ನಲ್ಲಿ ಟಿಕೆಟ್‌ಗಳನ್ನು ಮಾರಾಟಕ್ಕೆ ಇಡಲಾಗಿದೆ.

ಬೆಂಗಳೂರು(ಮಾ.15): 17ನೇ ಆವೃತ್ತಿ ಐಪಿಎಲ್‌ನ ಮೊದಲ ಹಂತದ ತನ್ನ ತವರಿನ 3 ಪಂದ್ಯಗಳ ಟಿಕೆಟ್‌ಗಳನ್ನು ಆರ್‌ಸಿಬಿ ಗುರುವಾರ ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಇಟ್ಟಿದ್ದು, ಟಿಕೆಟ್‌ ಬೆಲೆ ನೋಡಿ ಅಭಿಮಾನಿಗಳು ಹೌಹಾರಿದ್ದಾರೆ.

ಸದ್ಯ ಮಾ.22ರಿಂದ ಏ.7ರ ವರೆಗಿನ ವೇಳಾಪಟ್ಟಿ ಪ್ರಕಟಗೊಂಡಿದ್ದು, ಈ ಅವಧಿಯಲ್ಲಿ ಆರ್‌ಸಿಬಿ ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3 ಪಂದ್ಯಗಳನ್ನಾಡಲಿದೆ. ಮಾ.25ಕ್ಕೆ ಪಂಜಾಬ್‌, 29ಕ್ಕೆ ಕೋಲ್ಕತಾ, ಏ.2ಕ್ಕೆ ಲಖನೌ ವಿರುದ್ಧ ಆಡಲಿದ್ದು, ಈ ಪಂದ್ಯಗಳ ಕನಿಷ್ಠ ಟಿಕೆಟ್‌ ಬೆಲೆ ₹2,300 ಹಾಗೂ ಗರಿಷ್ಠ ಮೌಲ್ಯ ₹42,350 ವರೆಗೂ ಇದೆ. ಆರ್‌ಸಿಬಿ ವೆಬ್‌ಸೈಟ್‌ನಲ್ಲಿ ಟಿಕೆಟ್‌ಗಳನ್ನು ಮಾರಾಟಕ್ಕೆ ಇಡಲಾಗಿದೆ.

WPL 2024: ಎಲಿಮಿನೇಟರ್‌ನಲ್ಲಿ ಇಂದು ಆರ್‌ಸಿಬಿ vs ಮುಂಬೈ ಫೈಟ್‌

ಕಳೆದ ವರ್ಷವೂ ಆರ್‌ಸಿಬಿ ಪಂದ್ಯಗಳ ಟಿಕೆಟ್‌ ಮೌಲ್ಯ ₹2,000ಕ್ಕಿಂತ ಹೆಚ್ಚಿತ್ತು. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಈ ಬಾರಿ ಟಿಕೆಟ್‌ ಬೆಲೆ ಮತ್ತಷ್ಟು ಹೆಚ್ಚಾಗಿದೆ. ಇನ್ನು, ಟಿಕೆಟ್‌ಗಳನ್ನು ಬಾಕ್ಸ್ ಆಫೀಸ್‌ನಲ್ಲಿ ಮಾರಾಟ ಮಾಡುವ ಬಗ್ಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಕಳೆದ ವರ್ಷ ಬಾಕ್ಸ್‌ ಆಫೀಸ್‌ನಲ್ಲಿ ಟಿಕೆಟ್‌ಗೆ ಕನಿಷ್ಠ ₹1,200 ನಿಗದಿಪಡಿಸಲಾಗಿತ್ತು.

17ನೇ ಆವೃತ್ತಿ ಐಪಿಎಲ್‌ಗೆ ಆರ್‌ಸಿಬಿ ಅಭ್ಯಾಸ ಆರಂಭ

ಬೆಂಗಳೂರು: ಬಹುನಿರೀಕ್ಷಿತ 17ನೇ ಆವೃತ್ತಿ ಐಪಿಎಲ್‌ಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) ಅಭ್ಯಾಸ ಆರಂಭಿಸಿದೆ. ನಾಯಕ ಫಾಫ್‌ ಡು ಪ್ಲೆಸಿ ಸೇರಿದಂತೆ ಕೆಲ ಆಟಗಾರರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆಟ್‌ ಅಭ್ಯಾಸದಲ್ಲಿ ತೊಡಗಿಸಿಕೊಂಡರು.

ಕನ್ನಡಿಗ ವೇಗಿ ವಿಜಯ್‌ಕುಮಾರ್‌ ವೈಶಾಖ್‌, ಸುಯಾಶ್‌ ಪ್ರಭುದೇಸಾಯಿ, ವೆಸ್ಟ್‌ಇಂಡೀಸ್‌ನ ಅಲ್ಜಾರಿ ಜೋಸೆಫ್‌ ಸೇರಿದಂತೆ ಇನ್ನೂ ಕೆಲ ಆಟಗಾರರು ಅಭ್ಯಾಸದ ವೇಳೆ ಕಾಣಿಸಿಕೊಂಡರು. ಆದರೆ ತಂಡದ ಪ್ರಮುಖ ಆಟಗಾರ ವಿರಾಟ್‌ ಕೊಹ್ಲಿ ಇನ್ನಷ್ಟೇ ತಂಡ ಕೂಡಿಕೊಳ್ಳಬೇಕಿದೆ. ಇಂಗ್ಲೆಂಡ್‌ ವಿರುದ್ಧ ಸರಣಿಗೂ ಗೈರಾಗಿದ್ದ ಕೊಹ್ಲಿ ಇತ್ತೀಚೆಗಷ್ಟೇ 2ನೇ ಮಗುವಿಗೆ ತಂದೆಯಾಗಿದ್ದರು. ಕೆಲ ತಿಂಗಳುಗಳಿಂದ ಕ್ರಿಕೆಟ್‌ನಿಂದ ದೂರ ಉಳಿದಿರುವ ಕೊಹ್ಲಿ ಈ ವಾರಾಂತ್ಯದ ವೇಳೆಗೆ ತಂಡ ಕೂಡಿ ಅಭ್ಯಾಸ ಆರಂಭಿಸುವ ನಿರೀಕ್ಷೆಯಿದೆ.

ಟಿ20 ವಿಶ್ವಕಪ್ ಸಮರಕ್ಕೆ ವಿರಾಟ್ ಕೊಹ್ಲಿ ಬೇಡ್ವಾ..? ರನ್‌ ಮಷಿನ್ ಪಾಲಿಗೆ ವಿಲನ್ ಆಗಿರೋದ್ಯಾರು..?

ಆರ್‌ಸಿಬಿ ಈ ಬಾರಿ ಐಪಿಎಲ್‌ನ ಉದ್ಘಟಾನಾ ಪಂದ್ಯದಲ್ಲೇ ಚೆನ್ನೈ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಈ ಪಂದ್ಯಕ್ಕೆ ಚೆನ್ನೈ ಆತಿಥ್ಯ ವಹಿಸಲಿದೆ. ಬಳಿಕ ಮಾ.25ಕ್ಕೆ ಪಂಜಾಬ್‌ ವಿರುದ್ಧ ತವರಿನಲ್ಲಿ ತನ್ನ ಮೊದಲ ಪಂದ್ಯವಾಡಲಿದೆ.