Asianet Suvarna News Asianet Suvarna News

2022ರ ರನ್​​ ಸಾಧಕರಿಗಿಲ್ಲ ಏಷ್ಯಾಕಪ್​ನಲ್ಲಿ ಸ್ಥಾನ..!

* ಏಷ್ಯಾಕಪ್‌ ಟೂರ್ನಿಗೆ ಪ್ರಕಟವಾದ ಭಾರತ ತಂಡದಲ್ಲಿ ರನ್‌ ಸರದಾರರಿಗಿಲ್ಲ ಸ್ಥಾನ
* ಶ್ರೇಯಸ್ ಅಯ್ಯರ್ ಹಾಗೂ ಇಶಾನ್‌ ಕಿಶನ್‌ಗೆ ಏಷ್ಯಾಕಪ್‌ಗಿಲ್ಲ ಸ್ಥಾನ..!
* ಈ ಇಬ್ಬರು ಆಟಗಾರರು ಟಿ20 ವಿಶ್ವಕಪ್‌ನಲ್ಲೂ ಸ್ಥಾನ ಪಡೆಯುವುದು ಡೌಟ್

Shreyas Iyer and Ishan Kishan 2 India most successful batter this year did not got chance to Asia Cup 2022 kvn
Author
Bengaluru, First Published Aug 12, 2022, 12:12 PM IST

ಬೆಂಗಳೂರು(ಆ.12): ಈ ವರ್ಷ ಭಾರತದ ಪರ ಟಿ20 ಕ್ರಿಕೆಟ್​ನಲ್ಲಿ ಗರಿಷ್ಠ ರನ್ ಹೊಡೆದಿರೋದು ಯಾರು ಹೇಳಿ..? ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್​, ಹಾರ್ದಿಕ್‌ ಪಾಂಡ್ಯ, ದಿನೇಶ್ ಕಾರ್ತಿಕ್. ದೀಪಕ್ ಹೂಡಾ. ಉಫ್.. ನೋ ಚಾನ್ಸ್​.. ಏಷ್ಯಾಕಪ್ ಟೂರ್ನಿಗೆ ಟೀಂ​ ಇಂಡಿಯಾದಲ್ಲಿ ಸ್ಥಾನ  ಪಡೆದಿರೋ ಈ ಆರು ಬ್ಯಾಟರ್​ಗಳಲ್ಲಿ ಯಾರೂ ಈ ವರ್ಷ ಭಾರತದ ಪರ ಹೆಚ್ಚು ರನ್ ಹೊಡೆದಿಲ್ಲ. ಮತ್ತಿನ್ಯಾರು ಅಂತಿರಾ..? ಪಾಪ ಅವರಿಬ್ಬರು ಏಷ್ಯಾಕಪ್ ಟೀಮ್​ನಲ್ಲೂ ಇಲ್ಲ, ಟಿ20 ವರ್ಲ್ಡ್​ಕಪ್ ಟೀಮ್​ನಲ್ಲೂ ಇರಲ್ಲ.

ಟಿ20 ರನ್​ಧೀರ ಈಗ ಮೀಸಲು ಆಟಗಾರ: 

ನಿಮಗೆ ಆಶ್ಚರ್ಯವಾಗ್ತಿದ್ಯಾ..? ಹೌದು, ಶ್ರೇಯಸ್​ ಅಯ್ಯರ್ ಅಸ್ಥಿರ ಪ್ರದರ್ಶನ ನೀಡ್ತಿದ್ದಾರೆ. ಕ್ಯಾಪ್ಟನ್ ರೋಹಿತ್​ ಶರ್ಮಾ ಕೃಪೆಯಿಂದ ಟೀಂ ಇಂಡಿಯಾದಲ್ಲಿದ್ದಾರೆ ಅಂತ ನಾವೇ ಸ್ಟೋರಿ ಮಾಡಿದ್ವಿ. ಅದು ನಿಜ ಕೂಡ. ಈಗ ಶ್ರೇಯಸ್ಸೇ ಈ ವರ್ಷ ಭಾರತದ ಪರ ಟಿ20ಯಲ್ಲಿ ಗರಿಷ್ಠ ರನ್ ಸರದಾರ. ಆದ್ರೆ ಇದೇ ಮುಂಬೈಕರ್​ಗೆ ಏಷ್ಯಾಕಪ್​ ಟೀಂ​ನಲ್ಲಿ ಸ್ಥಾನವಿಲ್ಲ. ಕೇವಲ ಮೀಸಲು ಆಟಗಾರ ಅಷ್ಟೆ. ಆಕಸ್ಮಾತ್ ಆರು ಬ್ಯಾಟರ್​ಗಳಲ್ಲಿ ಯಾರಾದ್ರೂ ಇಂಜುರಿಯಾದ್ರೆ ಮಾತ್ರ ಶ್ರೇಯಸ್, ಏಷ್ಯಾಕಪ್ ಮತ್ತು ವರ್ಲ್ಡ್​ಕಪ್ ಆಡ್ತಾರೆ. ಇಲ್ಲದಿದ್ದರೆ ಮುಂಬೈನಲ್ಲೇ ಕೂತು ಮ್ಯಾಚ್ ನೋಡ್ತಾರೆ.

ಕಳೆದ ವರ್ಷ ವಿಶ್ವಕಪ್ ಆಡಿದ್ದ, ಈ ವರ್ಷ ಏಷ್ಯಾಕಪ್​ ಸಹ ಆಡಲ್ಲ: 

ವೇಗ ಎಂದಿದ್ದರೂ ಅಪಾಯಕಾರಿ ಅನ್ನೋ ಮಾತಿದೆ. ಹಾಗೆ ಆಗಿದೆ ಇಶಾನ್ ಕಿಶನ್ ಕಥೆ. ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ಪರ ಆರ್ಭಟಿಸಿದ ಬೆನ್ನಲ್ಲೇ ಕಳೆದ ವರ್ಷ ಟಿ20 ವರ್ಲ್ಡ್​​ಕಪ್​ಗೆ ಸೆಲೆಕ್ಟ್ ಮಾಡಲಾಯ್ತು. ವಿಶ್ವಕಪ್ ನಂತರವೂ ಟೀಂ ಇಂಡಿಯಾದಲ್ಲಿ ಇದ್ದರು. ಈ ವರ್ಷ ಭಾರತದ ಪರ 2ನೇ ಗರಿಷ್ಠ ರನ್ ಹೊಡೆದ ಆಟಗಾರ ಎನಿಸಿಕೊಂಡಿದ್ದಾರೆ. ಆದ್ರೆ ಪಾಪ ಏಷ್ಯಾಕಪ್ ಟೀಮ್​​ನಲ್ಲಿ ಸ್ಥಾನ ಸಿಕ್ಕಿಲ್ಲ. ಇನ್ನು ಟಿ20 ವಿಶ್ವಕಪ್ ಆಡೋದು ಕನಸಿನ ಮಾತೇ ಅನ್ನಿ.

Asia Cup 2022: ಅಕ್ಷರ್ ಪಟೇಲ್‌ಗೆ ಸ್ಥಾನ ನೀಡದಿದ್ದಕ್ಕೆ ಅಚ್ಚರಿ ವ್ಯಕ್ತಪಡಿಸಿದ ಪಾರ್ಥಿವ್ ಪಟೇಲ್..!

ಈ ವರ್ಷ ಭಾರತದ ಪರ ಟಿ20 ಕ್ರಿಕೆಟ್​ನಲ್ಲಿ ಗರಿಷ್ಠ ರನ್ ಹೊಡೆದ ಟಾಪ್​-4 ಬ್ಯಾಟರ್ಸ್​ ಇಲ್ಲಿದ್ದಾರೆ ನೋಡಿ. ಶ್ರೇಯಸ್ ಅಯ್ಯರ್​​ 14 ಇನ್ನಿಂಗ್ಸ್​ನಿಂದ 142.99ರ ಸ್ಟ್ರೈಕ್​ರೇಟ್​ನಲ್ಲಿ 449 ರನ್ ಹೊಡೆದಿದ್ದಾರೆ. ಇಶಾನ್ ಕಿಶನ್ ಸಹ 14 ಇನ್ನಿಂಗ್ಸ್ ಆಡಿದ್ದು 130.30ರ ಸ್ಟ್ರೈಕ್​ರೇಟ್​ನಲ್ಲಿ 430 ರನ್ ಬಾರಿಸಿದ್ದಾರೆ.  ಸೂರ್ಯಕುಮಾರ್ 12 ಇನ್ನಿಂಗ್ಸ್​ಗಳಲ್ಲಿ 428 ರನ್ ಗಳಿಸಿದ್ದಾರೆ. 189.38ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ರೋಹಿತ್ ಶರ್ಮಾ 13 ಇನ್ನಿಂಗ್ಸ್​ನಿಂದ 140.09ರ ಸ್ಟ್ರೈಕ್​ರೇಟ್​ನಲ್ಲಿ 290 ರನ್ ಹೊಡೆದಿದ್ದಾರೆ.

ನೋಡಿ, ಈ ವರ್ಷ ಟಿ20ಯಲ್ಲಿ ಗರಿಷ್ಠ ರನ್ ಹೊಡೆದಿರುವ ಪಟ್ಟಿಯಲ್ಲಿ ಟಾಪ್​-4ನಲ್ಲಿ ಕೊಹ್ಲಿಯೂ ಇಲ್ಲ, ರಾಹುಲ್ಲೂ ಇಲ್ಲ, ಪಾಂಡ್ಯನೂ ಇಲ್ಲ, ಡಿಕೆಯಂತೂ ಇಲ್ಲವೇ ಇಲ್ಲ. ಪಂತ್ ಅಡ್ರೆಸ್ಸಿಗೇ ಇಲ್ಲ ಬಿಡಿ. ಆದ್ರೂ ಅವರೆಲ್ಲಾ ಏಷ್ಯಾಕಪ್ ಮತ್ತು ಟಿ20 ವರ್ಲ್ಡ್​ಕಪ್​ ಆಡಲು ರೆಡಿಯಾಗಿದ್ದಾರೆ.  ಆದ್ರೆ ಈ ವರ್ಷ ಚುಟುಕು ಕ್ರಿಕೆಟ್​ನಲ್ಲಿ ರನ್​ ಧೀರರೆನಿಸಿಕೊಂಡಿದ್ದ ಇಬ್ಬರು ಆಟಗಾರರು ಮಾತ್ರ ಟೀಂ ಇಂಡಿಯಾದಿಂದ ಕಿಕೌಟ್ ಆಗಿ ಮನೆಗೆ ಕೂತಿದ್ದಾರೆ. ಈ ಇಬ್ಬರ ಸ್ಥಾನವನ್ನ ಕಸಿದುಕೊಂಡಿದ್ದು ಮಾತ್ರ ಒಬ್ಬ ಆಟಗಾರ. ಆತನೇ ಯಾವ್ದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡೋ ತಕತ್ತಿರೋ ದೀಪಕ್ ಹೂಡಾ.

Follow Us:
Download App:
  • android
  • ios