Asianet Suvarna News Asianet Suvarna News

ಭಾರತ ಏಕದಿನ ತಂಡದಲ್ಲಿ ಸ್ಥಾನ ಗಿಟ್ಟಿಸಿದ ಕನ್ನಡತಿ ಶ್ರೇಯಾಂಕ ಪಾಟೀಲ್

ಶ್ರೇಯಾಂಕ ಪಾಟೀಲ್ ಅವರು ಏಕದಿನ ಸರಣಿ ಜತೆಗೆ ಆಸೀಸ್ ಟಿ20 ಸರಣಿಯಲ್ಲೂ ಆಡಲಿದ್ದಾರೆ. 3 ಏಕದಿನ ಡಿ.28, ಡಿ.30 ಹಾಗೂ ಜ.2ಕ್ಕೆ ನಡೆಯಲಿದ್ದು, 3 ಟಿ20 ಪಂದ್ಯಗಳು ಜ.5, ಜ.7, ಜ.9ಕ್ಕೆ ನಿಗದಿಯಾಗಿವೆ.

Shreyanka Patil Kashyap Sadhu get maiden ODI call-ups for Australia series kvn
Author
First Published Dec 26, 2023, 4:58 PM IST

ಮುಂಬೈ(ಡಿ.26): ಕರ್ನಾಟಕದ ಉದಯೋನ್ಮುಖ ಆಟಗಾರ್ತಿ ಶ್ರೇಯಾಂಕ ಪಾಟೀಲ್ ಇದೇ ಮೊದಲ ಬಾರಿ ಭಾರತ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಟಿ20 ಪಂದ್ಯದ ಮೂಲಕ ಭಾರತಕ್ಕೆ ಪಾದಾರ್ಪಣೆ ಮಾಡಿದ್ದರು. ಅವರು ಆಸೀಸ್ ಟಿ20 ಸರಣಿಯಲ್ಲೂ ಆಡಲಿದ್ದಾರೆ. 3 ಏಕದಿನ ಡಿ.28, ಡಿ.30 ಹಾಗೂ ಜ.2ಕ್ಕೆ ನಡೆಯಲಿದ್ದು, 3 ಟಿ20 ಪಂದ್ಯಗಳು ಜ.5, ಜ.7, ಜ.9ಕ್ಕೆ ನಿಗದಿಯಾಗಿವೆ.

ಏಕದಿನ ತಂಡ: ಹರ್ಮನ್‌ಪ್ರೀತ್(ನಾಯಕಿ), ಸ್ಮೃತಿ, ಜೆಮಿಮಾ, ಶಫಾಲಿ, ದೀಪ್ತಿ, ಯಸ್ತಿಕಾ, ರಿಚಾ, ಅಮನ್ ಜೋತ್, ಶ್ರೇಯಾಂಕ, ಮನ್ನತ್, ಇಶಾಕ್, ರೇಣುಕಾ, ಟಿಟಾಸ್, ಪೂಜಾ, ಸ್ನೇಹ, ಹರ್ಲೀನ್ 

ಟಿ20 ತಂಡ: ಹರ್ಮನ್‌ಪ್ರೀತ್(ನಾಯಕಿ), ಸ್ಮೃತಿ, ಜೆಮಿಮಾ, ಶಫಾಲಿ, ಯಸ್ತಿಕಾ, ದೀಪ್ತಿ, ರಿಚಾ, ಅಮನ್ ಜೋತ್, ಶ್ರೇಯಾಂಕ, ಮನ್ನತ್, ಇಶಾಕ್, ರೇಣುಕಾ, ಟಿಟಾಸ್, ಪೂಜಾ, ಕನಿಕಾ ಅಹುಜಾ, ಮಿನ್ನು.

ಟಿ20 ಭವಿಷ್ಯದ ಬಗ್ಗೆ ಶೀಘ್ರ ಉತ್ತರ ಸಿಗುತ್ತೆ: ರೋಹಿತ್

ಜೋಹಾನ್‌ಸ್ಬರ್ಗ್: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮುಂದುವರಿಯುವ ಬಗ್ಗೆ ಭಾರತದ ನಾಯಕ ರೋಹಿತ್ ಶರ್ಮಾ ಮೌನ ಮುರಿದಿದ್ದು, ಅದರ ಬಗ್ಗೆ ಶೀಘ್ರದಲ್ಲೇ ಉತ್ತರ ಕೊಡುತ್ತೇನೆ ಎಂದಿದ್ದಾರೆ. 

ಸೋಮವಾರ ದ. ಆಫ್ರಿಕಾ ವಿರುದ್ಧದ ಟೆಸ್‌ಟ್ಗೂ ಮುನ್ನ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಈ ವೇಳೆ, ನೀವು ಮತ್ತು ಕೊಹ್ಲಿ ಟಿ20 ವಿಶ್ವಕಪ್ ಆಡಲು ಬಯಸುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ, ‘ಪ್ರತಿಯೊಬ್ಬರು ತಮಗೆ ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಮಾಡಬೇಕೆಂದು ಬಯಸುತ್ತಾರೆ. ನೀವು ಏನನ್ನು ಕೇಳುತ್ತಿದ್ದೀರಿ ಎಂಬುದು ನನಗೆ ಗೊತ್ತಿದೆ. ಅದರ(ಟಿ20) ಬಗ್ಗೆ ನಿಮಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ’ ಎಂದುಪ್ರತಿಕ್ರಿಯಿಸಿದ್ದಾರೆ.

Boxing Day Test: ಭಾರತ ಎದುರು ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ಕೆ

2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಸೋಲಿನ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವೈಯುಕ್ತಿಕ ಕಾರಣ ನೀಡಿ ಸೀಮಿತ ಓವರ್‌ಗಳ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದಾರೆ. ಇದರ ಬೆನ್ನಲ್ಲೇ ಈ ಇಬ್ಬರು ಆಟಗಾರರ ಸೀಮಿತ ಓವರ್‌ಗಳ ಕ್ರಿಕೆಟ್ ಬದುಕು ಮುಗಿಯಿತು ಎನ್ನುವಂತಹ ಮಾತುಗಳು ಕೇಳಿ ಬರುತ್ತಿವೆ. ಹೀಗಿರುವಾಗಲೇ ರೋಹಿತ್ ಶರ್ಮಾ ಅವರ ಈ ಮಾತು ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. 

2024ರ ಟಿ20 ವಿಶ್ವಕಪ್‌ನ ನಾಯಕ ಸ್ಥಾನಕ್ಕೆ ರೋಹಿತ್‌ ಮೊದಲ ಆಯ್ಕೆ: ವರದಿ

ಮುಂಬೈ: ಐಪಿಎಲ್‌ನ ಮುಂಬೈ ಇಂಡಿಯನ್ಸ್‌ ತಂಡದ ನಾಯಕತ್ವ ಕಳೆದುಕೊಂಡರೂ 2024ರ ಟಿ20 ವಿಶ್ವಕಪ್‌ಗೆ ಭಾರತ ತಂಡದ ನಾಯಕನ ಸ್ಥಾನಕ್ಕೆ ರೋಹಿತ್‌ ಶರ್ಮಾ ಅವರೇ ಬಿಸಿಸಿಐ ಮುಂದಿರುವ ಮೊದಲ ಆಯ್ಕೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ರೋಹಿತ್‌ ಏಕದಿನ ವಿಶ್ವಕಪ್‌ ಸೇರಿದಂತೆ ಎಲ್ಲಾ ಮಾದರಿಯಲ್ಲೂ ನಾಯಕತ್ವದಲ್ಲಿ ಮಿಂಚಿದ್ದು, ಅವರನ್ನೇ ಟಿ20 ವಿಶ್ವಕಪ್‌ಗೂ ನಾಯಕನಾಗಿ ಮುಂದುವರಿಸಲು ಬಿಸಿಸಿಐ ಆಯ್ಕೆ ಸಮಿತಿ ಒಲವು ತೋರಿದೆ ಎಂದು ಹೇಳಲಾಗುತ್ತಿದೆ. 

IPL 2024 ಪಾಂಡ್ಯಗಾಗಿ ಗುಜರಾತ್ ಟೈಟಾನ್ಸ್‌ಗೆ ಮುಂಬೈ ಇಂಡಿಯನ್ಸ್‌ ನೀಡಿದ್ದು ₹100 ಕೋಟಿ?

ವರದಿಗಳ ಪ್ರಕಾರ ಮುಂಬೈ ಇಂಡಿಯನ್ಸ್‌ನ ನಾಯಕತ್ವ ಬದಲಾವಣೆ ಭಾರತ ತಂಡದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಅಲ್ಲದೆ ಹಾರ್ದಿಕ್‌ಗೆ ಭಾರತ ಟಿ20 ನಾಯಕತ್ವ ನೀಡುವ ಯಾವುದೇ ಯೋಚನೆ ಸದ್ಯ ಬಿಸಿಸಿಐ ಮುಂದೆ ಇಲ್ಲ ಎಂದು ತಿಳಿದುಬಂದಿದೆ. ಗಮನಾರ್ಹ ಸಂಗತಿ ಏನೆಂದರೆ ರೋಹಿತ್‌ 2022ರ ನವೆಂಬರ್‌ ಬಳಿಕ ಒಂದೂ ಅಂತಾರಾಷ್ಟ್ರೀಯ ಟಿ20 ಪಂದ್ಯವಾಡಿಲ್ಲ.
 

Follow Us:
Download App:
  • android
  • ios