ಕರಾಚಿ(ಡಿ.28): ಐಸಿಸಿ ದಶಕದ ಕ್ರಿಕೆಟ್ ತಂಡ ಪ್ರಕಟಿಸಿದ ಬೆನ್ನಲ್ಲೇ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಯೆಬ್ ಅಕ್ತರ್ ಕೆಂಡಾಮಂಡಲವಾಗಿದ್ದಾರೆ. ಐಸಿಸಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಐಸಿಸಿ ಪ್ರಕಟಿಸಿದ ದಶಕದ ಟಿ20 ತಂಡದಲ್ಲಿ ಯಾವ ಪಾಕಿಸ್ತಾನ ಆಟಗಾರ ಸ್ಥಾನ ಪಡೆದಿಲ್ಲ. ಇದು ಶೋಯೆಬ್ ಅಕ್ತರ್ ಆಕ್ರೋಶ ಹೆಚ್ಚಿಸಿದೆ.

ದಶಕದ ಟಿ20 ತಂಡ ಪ್ರಕಟಿಸಿದ ಐಸಿಸಿ; ನಾಲ್ವರು ಭಾರತೀಯರಿಗೆ ಸ್ಥಾನ.

ಐಸಿಸಿ ಪ್ರಕಟಿಸಿರುವು ದಶಕದ ಐಪಿಎಲ್ ತಂಡದವಾಗಿದೆ. ಇದು ವಿಶ್ವದ ತಂಡವಲ್ಲ ಎಂದು ಐಸಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 10 ವರ್ಷಗಳಲ್ಲಿ ಪಾಕಿಸ್ತಾನ ಚುಟುಕು ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ. ರ್ಯಾಂಕಿಂಗ್ ಪಟ್ಟಿಯಲ್ಲಿ ಪಾಕಿಸ್ತಾನ ಬ್ಯಾಟ್ಸ್‌ಮನ್ ಬಾಬರ್ ಅಜಮ್ ಸ್ಥಾನಪಡೆದಿದ್ದಾರೆ. ಆದರೆ ದಶಕದ ಕ್ರಿಕೆಟ್‌ನಲ್ಲಿ ಯಾರೋಬ್ಬರು ಇಲ್ಲ. ಇದು ಹೇಗೆ ಎಂದು ಅಕ್ತರ್ ಪ್ರಶ್ನಿಸಿದ್ದಾರೆ.

ICC ದಶಕದ ಪ್ರಶಸ್ತಿ ಪ್ರಕಟ; ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಅತ್ಯುನ್ನತ ಗರಿ!.

ಬಾಬರ್ ಅಜಮ್ ಐಸಿಸಿ ಟಿ20ಯಲ್ಲಿ ನಂಬರ್ 1 ಬ್ಯಾಟ್ಸ್‌ಮನ್. ಆದರೆ ಮೊದಲ ಸ್ಥಾನದಲ್ಲಿರುವ ಬಾಬರ್‌ಗೆ ಐಸಿಸಿ ಅವಕಾಶ ನೀಡಿಲ್ಲ. ಐಸಿಸಿಗೆ ಕೇವಲ ಹಣ ಬೇಕಾಗಿದೆ. ಟಿವಿ ಹಕ್ಕು, ಪ್ರಾಯೋಜಕತ್ವ ಸೇರಿದಂತೆ ಆದಾಯ ಬರುವ ಕಡೆ ಮಾತ್ರ ಐಸಿಸಿ ಹೆಜ್ಜೆ ಹಾಕುತ್ತಿದೆ. ಪ್ರತಿಭಾವಂತರಿಗೆ ಮಣೆ ಹಾಕುತ್ತಿಲ್ಲ ಎಂದು ಅಕ್ತರ್ ತಮ್ಮ ಯು ಟ್ಯೂಬ್ ಚಾನೆಲ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.