ICC ದಶಕದ ಪ್ರಶಸ್ತಿ ಪ್ರಕಟ; ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಅತ್ಯುನ್ನತ ಗರಿ!
2020ನೇ ವರ್ಷದ ಅಂತ್ಯದಲ್ಲಿ ಐಸಿಸಿ ಕಳೆದೊಂದು ದಶಕರದಲ್ಲಿ ಕ್ರಿಕೆಟ್‌ನಲ್ಲಿ ಸಾಧನೆಗೈದ ಕ್ರಿಕೆಟಿಗನ್ನು ಗೌರವವಿಸಿದೆ. 2011ರಿಂದ 2020ರ 10 ವರ್ಷಗಳ ಅವಧಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕ್ರಿಕೆಟಿಗರನ್ನು ಐಸಿಸಿ ಗುರತಿಸಿ ಪ್ರಶಸ್ತಿ ನೀಡಿದೆ. ಹಲವು ವಿಭಾಗದಲ್ಲಿ ಐಸಿಸಿ ದಶಕದ ಕ್ರಿಕೆಟಿಗ ಪ್ರಶಸ್ತಿ ಪ್ರಕಟಿಸಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಅತ್ಯುನ್ನತ ಪ್ರಶಸ್ತಿ ಲಭಿಸಿದೆ. ಐಸಿಸಿ ಪ್ರಶಸ್ತಿ ವಿವರ ಇಲ್ಲಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಕಳೆದ 10 ವರ್ಷಗಳ ಸಾಲಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕ್ರಿಕೆಟಿಗರನ್ನು ದಶಕದ ಕ್ರಿಕೆಟಿಗ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇದೀಗ ನಾಯಕ ವಿರಾಟ್ ಕೊಹ್ಲಿಗೆ ದಶಕದ ಕ್ರಿಕೆಟಿಗ ಪ್ರಶಸ್ತಿ ನೀಡಿದೆ.
ಐಸಿಸಿ ಗ್ಯಾರಿ ಸೋಬರ್ಸ್ ಪ್ರಶಸ್ತಿಗೆ ವಿರಾಟ್ ಭಾಜನರಾಗಿದ್ದಾರೆ. 2011ರ ವಿಶ್ವಕಪ್, 2013ರ ಚಾಂಪಿಯನ್ಸ್ ಟ್ರೋಫಿ, 2018ರಲ್ಲಿ ಆಸೀಸ್ ನೆಲದಲ್ಲಿ ಟೆಸ್ಟ್ ಸರಣಿ ಗೆಲುವು ಸೇರಿದಂತೆ ಹಲವು ಸಾಧನೆಗಳಿಗೆ ಕೊಹ್ಲಿಗೆ ಅತ್ಯುನ್ನತ ಪ್ರಶಸ್ತಿ ನೀಡಲಾಗಿದೆ.
ಐಸಿಸಿ ದಶಕದ ಮಹಿಳಾ ಕ್ರಿಕೆಟಿಗ ಪ್ರಶಸ್ತಿಗೆ ಆಸ್ಟ್ರೇಲಿಯಾ ಆಟಗಾರ್ತಿ ಎಲ್ಲಿಸ್ ಪೆರಿ ಆಯ್ಕೆಯಾಗಿದ್ದಾರೆ. 4349 ಅಂತಾರಾಷ್ಟ್ರೀಯ ರನ್, 213 ವಿಕೆಟ್, 4 ಬಾರಿ ಟಿ20 ಚಾಂಪಿಯನ್ ಹಾಗೂ 2013ರ ವಿಶ್ವಕಪ್ ಗೆಲುವು ಸಾಧನೆ ಮಾಡಿದ್ದಾರೆ
ಐಸಿಸಿ ಟೆಸ್ಟ್ ಕ್ರಿಕೆಟರ್ ಆಫ್ ದಿ ಡಿಕೆೇಡ್ ಪ್ರಶಸ್ತಿಗೆ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಪಾತ್ರರಾಗಿದ್ದಾರೆ. ಈ ದಶಕದಲ್ಲಿ ಸ್ಮಿತ್ 7040 ಟೆಸ್ಟ್ ರನ್, 26 ಶತಕ ಹಾಗೂ 65.79ರ ಸರಾಸರಿಯಲ್ಲಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.
ದಶಕದ ಏಕದಿನ ಕ್ರಿಕೆಟಿಗ ಪ್ರಶಸ್ತಿ ವಿರಾಟ್ ಕೊಹ್ಲಿಗೆ ಒಲಿದಿದೆ. ಈ ಮೂಲಕ ವಿರಾಟ್ ಕೊಹ್ಲಿ ಎರಡು ದಶಕದ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ದಶಕದ ಟಿ20 ಕ್ರಿಕೆಟಿಗ ಪ್ರಶಸ್ತಿಗೆ ಅಫ್ಘಾನಿಸ್ತಾನದ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಪಾತ್ರರಾಗಿದ್ದಾರೆ. ಈ ಮೂಲಕ ರಶೀದ್ ಖಾನ್ ದಶಕದ ಚುಟುಕು ಸಾಮ್ರಾಟ್ ಆಗಿದ್ದಾರೆ.
ದಶಕದ ಕ್ರಿಕೆಟ್ ಸ್ಪೂರ್ತಿ ಪ್ರಶಸ್ತಿಗೆ(ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್) ಟೀಂ ಇಂಡಿಯಾ ಮಾಜಿ ನಾಯಕ, ದಿಗ್ಗಜ ಕ್ರಿಕೆಟಿಗ ಎಂ.ಎಸ್.ಧೋನಿ ಪಾತ್ರರಾಗಿದ್ದಾರೆ.
ಇತ್ತೀಚೆಗಷ್ಟೇ ಐಸಿಸಿ ದಶಕಕದ ತಂಡ ಪ್ರಕಟಿಸಿತ್ತು. ಈ ತಂಡಲ್ಲೂ ನಾಯಕ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದರು. ಇದೀಗ ದಶಕದ ಕ್ರಿಕೆಟಿಗ ಪ್ರಶಸ್ತಿಗೂ ಭಾಜನರಾಗಿದ್ದಾರೆ.