Asianet Suvarna News Asianet Suvarna News

ZIM vs IND ಟೀಂ ಇಂಡಿಯಾ ಹೊಡೆತಕ್ಕೆ ಜಿಂಬಾಬ್ವೆ ಸುಸ್ತು, ರಾಹುಲ್ ಸೈನ್ಯಕ್ಕೆ ಭರ್ಜರಿ 10 ವಿಕೆಟ್ ಗೆಲುವು!

ಟೀಂ ಇಂಡಿಯಾ ಅಲ್ರೌಂಡರ್ ಪರ್ಫಾಮೆನ್ಸ್‌ಗೆ ಜಿಂಬಾಬ್ವೆ ಸುಸಸ್ತಾಗಿದೆ. ಬೌಲಿಂಗ್ ಬಳಿಕ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಟೀಂ ಇಂಡಿಯಾ ಭರ್ಜರಿ 10 ವಿಕೆಟ್ ಗೆಲುವು ಕಂಡಿದೆ.

Shikhar Dhawan Shubman Gill help team India to beat Zimbabwe by 10 wickets in 1st odi ckm
Author
Bengaluru, First Published Aug 18, 2022, 6:43 PM IST

ಹರಾರೆ(ಆ.18):  ಬೌಲರ್‌ಗಳ ಮಿಂಚಿನ ದಾಳಿ, ಶಿಖರ್ ಧವನ್ ಹಾಗೂ ಶುಭಮನ್ ಗಿಲ್ ಅಬ್ಬರದ ಬ್ಯಾಟಿಂಗ್‌ನಿಂದ ಟೀಂ ಇಂಡಿಯಾ ನಿರಾಯಾಸವಾಗಿ ಜಿಂಬಾಬ್ವೆ ವಿರುದ್ದ ಗೆಲುವಿನ ಸಿಹಿ ಕಂಡಿದೆ. ಜಿಂಬಾಬ್ವೆ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 10 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಜಿಂಬಾಬ್ವೆ ತಂಡವನ್ನು ಕೇವಲ 189 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಭಾರತ ಯಶಸ್ವಿಯಾಗಿತ್ತು. ದೀಪಕ್ ಚಹಾರ್, ಪ್ರಸಿದ್ಧ ಕೃಷ್ಣ ಹಾಗೂ ಅಕ್ಸರ್ ಪಟೇಲ್ ಬೌಲಿಂಗ್‌ನಲ್ಲಿ ಮೋಡಿ ಮಾಡಿದರೆ. ಶಿಖರ್ ಧವನ್ ಹಾಗೂ ಶುಭಮನ್ ಗಿಲ್ ಹಾಫ್ ಸೆಂಚುರಿ ಮೂಲಕ ಟೀಂ ಇಂಡಿಯಾಗ ಗೆಲುವು ತಂದುಕೊಟ್ಟರು. ಭಾರತ 30.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗೆಲುವು ಸಾಧಿಸಿತು. ಈ ಮೂಲಕ ಎದುರಾಳಿ ವಿರುದ್ಧ ಗರಿಷ್ಠ ಸತತ ಗೆಲುವು ಸಾಧಿಸಿದ ದಾಖಲೆ ಬರೆಯಿತು.  

ಟೀಂ ಇಂಡಿಯಾ ಸತತ ಗೆಲುವಿನ ದಾಖಲೆ 
13* vs ಜಿಂಬಾಬ್ವೆ (2013-22)
12 vs ಬಾಂಗ್ಲಾದೇಶ (1988-04)
11 vs ನ್ಯೂಜಿಲೆಂಡ್ (1986-88)
10 vs ಜಿಂಬಾಬ್ವೆ (2002-05)

ಜಿಂಬಾಬ್ವೆ ತಂಡವನ್ನು 189 ರನ್‌ಗೆ ಕಟ್ಟಿಹಾಕಿದ ಟೀಂ ಇಂಡಿಯಾ ಚೇಸಿಂಗ್ ವೇಳೆ ಯಾವುದೇ ಆತಂಕಕ್ಕೆ ಒಳಗಾಗಲಿಲ್ಲ. ಶಿಖರ್ ಧವನ್ ಹಾಗೂ ಶುಭಮನ್ ಗಿಲ್ ಉತ್ತ ಆರಂಭ ನೀಡಿದರು. ಇವರಿಬ್ಬರ ಜೊತೆಯಾಟ ಬ್ರೇಕ್ ಮಾಡಲು ಜಿಂಬಾಬ್ವೆ ಇನ್ನಿಲ್ಲದ ಕಸರತ್ತು ನಡೆಸಿತ್ತು. ಆದರೆ ಪ್ರಯೋಜವಾಗಲಿಲ್ಲ. ಧವನ್ ಹಾಗೂ ಗಿಲ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. 

ಹಾಫ್ ಸೆಂಚುರಿ ಬಳಿಕವೂ ಟೀಂ ಇಂಡಿಯಾ ದಿಟ್ಟ ಹೋರಾಟ ನೀಡಿತು. 30. 5 ಓವರ್‌ಗಳಲ್ಲಿ ಭಾರತ ಗೆಲುವಿನ ದಡ ಸೇರಿತು. ಶಿಖರ್ ಧವನ್ ಅಜೇಯ 81 ರನ್ ಸಿಡಿಸಿದರೆ, ಗಿಲ್ ಅಜೇಯ 82 ರನ್ ಸಿಡಿಸಿದರು. ಈ ಆರಂಭಿಕ ಜೋಡಿ 192 ರನ್ ಜೊತೆಯಾಟ ನೀಡಿತು. 10 ವಿಕೆಟ್ ಗೆಲುವಿನ ಪಂದ್ಯಗಳಲ್ಲಿ ನೀಡಿದ 2ನೇ ಗರಿಷ್ಠ ಜೊತೆಯಾಟ ಅನ್ನೋ ಹೆಗ್ಗಳೆಕೆಗೂ ಈ ಪಂದ್ಯ ಪಾತ್ರವಾಗಿದೆ. 

10 ವಿಕೆಟ್ ಗೆಲುವಿನಲ್ಲಿ ಟೀಂ ಇಂಡಿಯಾದ ಗರಿಷ್ಠ ಜೊತೆಯಾಟ(ಏಕದಿನ)
197/0 vs ಜಿಂಬಾಬ್ವೆ,  1998
192/0 vs ಜಿಂಬಾಬ್ವೆ, 2022 *
126/0 vs ಜಿಂಬಾಬ್ವೆ, 2016
123/0 vs ಈಸ್ಟ್ ಆಫ್ರಿಕಾ,  1975
116/0 vs ವೆಸ್ಟ್ ಇಂಡೀಸ್, 1997
114/0 vs ಇಂಗ್ಲೆಂಡ್, 2022
97/0 vs ಶ್ರೀಲಂಕಾ, 1984
91/0 vs ಕೀನ್ಯಾ, 2001

Follow Us:
Download App:
  • android
  • ios