Asianet Suvarna News Asianet Suvarna News

ಐಪಿಎಲ್‌ನಲ್ಲಿ ಅತಿಹೆಚ್ಚು ರನ್‌: 2ನೇ ಸ್ಥಾನಕ್ಕೇರಿದ ಶಿಖರ್‌ ಧವನ್‌!

ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್‌ ಧವನ್‌,  ಸುರೇಶ್ ರೈನಾ ಹಿಂದಿಕ್ಕಿ ಐಪಿಎಲ್‌ನಲ್ಲಿ ಗರಿಷ್ಠ ರನ್‌ ಬಾರಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Shikhar Dhawan becomes 2nd highest run scorer in IPL after 46 run knock against KKR kvn
Author
Ahmedabad, First Published May 1, 2021, 9:02 AM IST

ಅಹಮದಾಬಾದ್‌(ಮೇ.01): ಐಪಿಎಲ್‌ನಲ್ಲಿ ಅತಿಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ 2ನೇ ಸ್ಥಾನಕ್ಕೇರಿದ್ದಾರೆ. 

ಕೆಕೆಆರ್‌ ವಿರುದ್ಧ ಇಲ್ಲಿ ನಡೆದ ಪಂದ್ಯದಲ್ಲಿ 46 ರನ್‌ ಬಾರಿಸಿದ ಧವನ್‌, ಈ ಸಾಧನೆ ಮಾಡಿದರು. ಸದ್ಯ ಧವನ್‌ 183 ಪಂದ್ಯಗಳಲ್ಲಿ 5508 ರನ್‌ ಗಳಿಸಿದ್ದಾರೆ. 5489 ರನ್‌ ಗಳಿಸಿ 2ನೇ ಸ್ಥಾನದಲ್ಲಿದ್ದ ಸುರೇಶ್‌ ರೈನಾ ಅವರನ್ನು ಧವನ್‌ ಹಿಂದಿಕ್ಕಿದರು. ಇನ್ನು 6000ಕ್ಕೂ ಹೆಚ್ಚು ರನ್‌ ಗಳಿಸಿರುವ ವಿರಾಟ್‌ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. 5447 ರನ್‌ಗಳೊಂದಿಗೆ ಡೇವಿಡ್‌ ವಾರ್ನರ್‌ 4ನೇ ಸ್ಥಾನ ಪಡೆದರೆ, 5445 ರನ್‌ಗಳೊಂದಿಗೆ ರೋಹಿತ್‌ ಶರ್ಮಾ 5ನೇ ಸ್ಥಾನ ಪಡೆದಿದ್ದಾರೆ.

ಸತತ ಎರಡು ಐಪಿಎಲ್‌ ಪಂದ್ಯಗಳಲ್ಲಿ 2 ಶತಕ ಬಾರಿಸಿದ ಏಕೈಕ ಬ್ಯಾಟ್ಸ್‌ಮನ್ ಎನ್ನುವ ದಾಖಲೆ ಹೊಂದಿರುವ ಧವನ್, ಐಪಿಎಲ್‌ನಲ್ಲಿ 127.14ರ ಸ್ಟ್ರೈಕ್‌ರೇಟ್‌ನಲ್ಲಿ 34.86ರ ಬ್ಯಾಟಿಂಗ್‌ ಸರಾಸರಿಯಲ್ಲಿ ರನ್‌ ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಒಟ್ಟು 4  ತಂಡವನ್ನು ಪ್ರತಿನಿಧಿಸಿರುವ ಗಬ್ಬರ್ ಸಿಂಗ್ ಖ್ಯಾತಿಯ ಧವನ್, ಡೆಲ್ಲಿ ಕ್ಯಾಪಿಟಲ್ಸ್ ಪರ 1790, ಮುಂಬೈ ಇಂಡಿಯನ್ಸ್ ಪರ 231, ಡೆಕ್ಕನ್ ಚಾರ್ಜಸ್‌ ಪರ 969 ಹಾಗೂ ಸನ್‌ರೈಸರ್ಸ್‌ ಹೈದರಾಬಾದ್ ಪರ 6 ಆವೃತ್ತಿಗಳನ್ನಾಡಿ 2518 ರನ್‌ ಬಾರಿಸಿದ್ದಾರೆ. 

ಸತತ 6 ಬೌಂಡರಿ ಬಾರಿಸಲು ನನಗೂ ಅಗಿರಲಿಲ್ಲ; ಪೃಥ್ವಿ ಸಾಧನೆಗೆ ಜೈ ಹೋ ಎಂದ ಸೆಹ್ವಾಗ್

14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿಯೂ ಅಬ್ಬರಿಸುತ್ತಿರುವ ಶಿಖರ್ ಧವನ್ 7 ಪಂದ್ಯಗಳನ್ನಾಡಿ 44.43ರ ಬ್ಯಾಟಿಂಗ್‌ ಸರಾಸರಿಯಲ್ಲಿ 311 ರನ್ ಬಾರಿಸುವ ಮೂಲಕ ಗರಿಷ್ಠ ರನ್ ಬಾರಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
 

Follow Us:
Download App:
  • android
  • ios