Asianet Suvarna News Asianet Suvarna News

RIP Shane warne ಮಾರ್ಶ್ ನಿಧನಕ್ಕೆ ಸಂತಾಪ ಸೂಚಿಸಿ ಕೊನೆಯ ಟ್ವೀಟ್, ಕೆಲವೇ ಗಂಟೆಗಳಲ್ಲಿ ವಾರ್ನ್‌ಗೆ ಹೃದಯಾಘಾತ!

  • ಆಸ್ಟ್ರೇಲಿಯಾ ದಿಗ್ಗಜ ಕ್ರಿಕೆಟಿಗ, ಮಾಜಿ ಸ್ಪಿನ್ನರ್ ಶೇನ್ ವಾರ್ನ್ ನಿಧನ
  • ಬೆಳಗ್ಗೆ ರೊಡ್ ಮಾರ್ಶ್ ನಿಧನಕ್ಕೆ ಸಂತಾಪ ಸೂಚಿಸಿ ಕೊನೆಯ ಟ್ವೀಟ್
  • ಸಂಜೆ ವಾರ್ನ್ ನಿಧನ, ಸ್ಪಿನ್ನರ್ ಅಗಲಿಕೆಯಿಂದ ಕ್ರೀಡಾಜಗತ್ತಿಗೆ ಶಾಕ್
Shane warne last tweet pay respect to rod marsh just hours before he died after suffering heart attack ckm
Author
Bengaluru, First Published Mar 4, 2022, 8:17 PM IST | Last Updated Mar 4, 2022, 10:46 PM IST

ಸಿಡ್ನಿ(ಮಾ.04): ಆಸ್ಟ್ರೇಲಿಯಾ ದಿಗ್ಗಜ ಸ್ಪಿನ್ನರ್ ಕೇವಲ 52ರ ಹರೆಯ ಶೇನ್ ವಾರ್ನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಥಾಯ್ಲೆಲೆಂಡ್‌ನ ಕೊಹ್ ಸಮೈು ವಿಲ್ಲಾದಲ್ಲಿ ವಿಶ್ರಾಂತಿಯಲ್ಲಿದ್ದ ವೇಳೆ ವಾರ್ನ್‌ಗೆ ತೀವ್ರ ಅಸ್ವಸ್ಥರಾಗಿದ್ದಾರೆ. ತಕ್ಷಣವೇ ವೈದ್ಯಕೀಯ ನೆರವು ನೀಡಿದರೂ ವಾರ್ನ್ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬರಲಿಲ್ಲ. ತೀವ್ರ ಹೃದಯಾಘಾತದಿಂದ ವಾರ್ನ್ ನಿಧನರಾಗಿದ್ದಾರೆ ಎಂದು ವಾರ್ನ್ ಮ್ಯಾನೇಜ್ಮೆಂಟ್ ತಂಡ ಪ್ರಕಟಣೆ ಹೊರಡಿಸಿದೆ. ಇಂದು ಬೆಳಗ್ಗೆ ಆಸೀಸ್ ದಿಗ್ಗಜ ಕ್ರಿಕೆಟಿಗ ರೋಡ್ ಮಾರ್ಶ್ ನಿಧನಕ್ಕೆ ಸಂತಾಪ ಸೂಚಿಸಿದ್ದ ಶೇನ್ ವಾರ್ನ್ ಇದೀಗ ವಾರ್ನ್ ಇನ್ನಿಲ್ಲ ಅನ್ನೋದು ಕ್ರಿಕೆಟ್ ಜಗತ್ತಿಗೆ ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ.

ಆಸ್ಟ್ರೇಲಿಯಾ ದಿಗ್ಗಜ ಕ್ರಿಕೆಟಿಗ ರೊಡ್ ಮಾರ್ಶ್ ಇಂದು(ಮಾ.04) ನಿಧನರಾಗಿದ್ದರು.74ರ ಹರೆಯದ ರೊಡ್ ಮಾರ್ಶ್ ನಿಧನಕ್ಕೆ ಸಂತಾಪ ಸೂಚಿಸಿ ಶೇನ್ ವಾರ್ನ್ ಕೊನೆಯ ಟ್ವೀಟ್ ಮಾಡಿದ್ದರು. ರೊಡ್ ಮಾರ್ಶ್ ನಿಧನ ಸುದ್ದಿ ತೀವ್ರ ನೋವನ್ನುಂಟು ಮಾಡಿದೆ. ಶ್ರೇಷ್ಠ ಕ್ರಿಕೆಟಿಗನಾಗಿರುವ ರೊಡ್ ಮಾರ್ಶ್ ಯುವ ಕ್ರಿಕೆಟಿಗರಿಗೆ ಸ್ಪೂರ್ತಿಯಾಗಿದ್ದರು. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಕ್ರಿಕೆಟ್‌ಗೆ ರೊಡ್ ಕೊಡುಗೆ ಅಪಾರವಾಗಿದೆ. ರೊಡ್ ಮಾರ್ಶ್ ಕುಟುಂಬಕ್ಕ ದುಃಖ ಎದುರಿಸುವ ಶಕ್ತಿ ಸಿಗಲಿ ಎಂದು ಶೇನ್ ವಾರ್ನ್ ಟ್ವೀಟ್ ಮಾಡಿದ್ದಾರೆ.

Shane Warne Dies ಸ್ಪಿನ್ ದಿಗ್ಗಜ ಶೇನ್ ವಾರ್ನ್ ನಿಧನ

ಮಾರ್ಶ್‌ಗೆ ಸಂತಾಪ ಸೂಚಿಸಿ ಮಾಡಿರುವುದು ವಾರ್ನ್ ಅವರ ಕೊನೆಯ ಟ್ವೀಟ್.  ಈ ಟ್ವೀಟ್ ಬಳಿಕ ಶೇನ್ ತಮ್ಮ ಕಾರ್ಯದಲ್ಲಿ ತೊಡಗಿದ್ದಾರೆ. ವಿಶ್ರಾಂತಿಗೆ ಜಾರಿದ್ದಾರೆ. ಆದರೆ 11 ಗಂಟೆಯೊಳಗಡೆ ಶೇನ್ ವಾರ್ನ್ ನಿಧನರಾಗಿದ್ದಾರೆ. ಹಿರಿಯ ಕ್ರಿಕೆಟಿಗನಿಗೆ ಸಂತಾಪ ಸೂಚಿಸಿದ ವಾರ್ನ್ ಇದೀಗ ಇನ್ನಿಲ್ಲ ಅನ್ನೋದು ಕ್ರಿಕೆಟ್ ಪ್ರೀಯರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

 

ಶೇನ್ ವಾರ್ನ್ ನಿಧನಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರ ಸಂತಾಪ
ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್ ನಿಧನಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರು, ಹಾಲಿ ಕ್ರಿಕೆಟಿಗರು ಸಂತಾಪ ಸೂಚಿಸಿದ್ದಾರೆ. ಈ ಕುರಿತು ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸೇರಿದಂತೆ ಹಲವರು ಟ್ವೀಟ್ ಮೂಲಕ ಆಘಾತ ವ್ಯಕ್ತಪಡಿಸಿದ್ದಾರೆ

ಶೇನ್ ವಾರ್ನ್ ನಿಧನ ವಾರ್ತೆ ನಂಬಲು ಸಾಧ್ಯವಾಗುತ್ತಿಲ್ಲ. ಅತ್ಯಂತ ಶ್ರೇಷ್ಠ ಸ್ಪಿನ್ನರ್ ಇನ್ನಿಲ್ಲ ಅನ್ನೋದು ಆಘಾತ ತಂದಿದೆ. ವಾರ್ನ್ ನಿಧನದಿಂದ ಜೀವನ ದುರ್ಬಲವಾಗಿದೆ. ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿದೆ. ವಾರ್ನ್ ಕುಟುಂಬಕ್ಕೆ, ಅಭಿಮಾನಿಗಳಿಗೆ ಸಂತಾಪಗಳು ಎಂದು ವಿರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

 

ಶೇನ್ ವಾರ್ನ್ ನಿಧನ ಅತೀವ ದುಃಖ ತಂದಿದೆ. ತೀವ್ರ ಆಘಾತ ನೀಡಿದೆ. ವಾರ್ನ್ ನಿಧನ ಕ್ರಿಕೆಟ್‌ಗೆ ತುಂಬಲಾರದ ನಷ್ಟವಾಗಿದೆ. ನನ್ನ ಬಳಿ ಪದಗಳೇ ಇಲ್ಲ. ಕ್ರಿಕೆಟ್‌ಗೆ ವಾರ್ನ್ ಕೊಡುಗೆ ಅಪಾರವಾಗಿದೆ. ವಾರ್ನ್ ಪ್ರೀತಿಪಾತ್ರರಿಗೆ ಸಂತಾಪ ಎಂದು ಟೀಂ ಇಂಡಿಯಾ ಕ್ರಿಕೆಟಿಗ ಶೇನ್ ವಾರ್ನ್ ಹೇಳಿದ್ದಾರೆ.

 

ಶೇನ್ ವಾರ್ನ್ ಕ್ರಿಕೆಟ್
ಸ್ಪಿನ್ ಮಾಂತ್ರಿಕ ಎಂದೇ ಗುರುತಿಸಿಕೊಂಡಿರುವ ಶೇನ್ ವಾರ್ನ್ ಕ್ರಿಕೆಟ್ ಕಂಡ ಅತ್ಯುತ್ತಮ ಹಾಗೂ ಶತಮಾನದ ಸ್ಪಿನ್ನರ್. ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಕಬಸಿಸಿದ ಎರಡನೇ ಕ್ರಿಕೆಟಿಗ ಶೇನ್ ವಾರ್ನ್. 800 ವಿಕೆಟ್ ಕಬಳಿಸಿರುವ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿರು ಶೇನ್ ವಾರ್ನ್ 708 ವಿಕೆಟ್ ಕಬಳಿಸಿದ್ದಾರೆ. ವಾರ್ನ್ ಕೇವಲ 145 ಟೆಸ್ಟ್ ಪಂದ್ಯದಿಂದ 708 ವಿಕೆಟ್ ಕಬಳಿಸಿದ್ದಾರೆ. 194 ಏಕದಿನ ಪಂದ್ಯದಿಂದ 293 ವಿಕೆಟ್ ಉರುಳಿಸಿದ್ದಾರೆ. 

ಐಪಿಎಲ್ ಟೂರ್ನಿಲ್ಲೂ ಶೇನ್ ವಾರ್ನ್ ಸಾಧನೆ ಅಪಾರ. 2008ರ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ಹೆಗ್ಗಳಿಕೆ ಶೇನ್ ವಾರ್ನ್‌ಗಿದೆ. ರಾಜಸ್ಥಾನ ರಾಯಲ್ಸ್ ನಾಯಕನಾಗಿದ್ದ ವಾರ್ನ್ ಮೊದಲ ಟ್ರೋಫಿ ಗೆದ್ದು ಇತಿಹಾಸ ರಚಿಸಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ 55 ಪಂದ್ಯಗಳಿಂದ 57 ವಿಕೆಟ್ ಉರುಳಿಸಿದ್ದಾರೆ.

Latest Videos
Follow Us:
Download App:
  • android
  • ios