Asianet Suvarna News Asianet Suvarna News

ಪಾಕ್‌ ದಾಳಿಗೆ ತತ್ತರಿಸಿದ ಆತಿಥೇಯ ಇಂಗ್ಲೆಂಡ್..!

ಮೊದಲ ಟೆಸ್ಟ್ ಪಂದ್ಯದಲ್ಲೇ ಆತಿಥೇಯ ಇಂಗ್ಲೆಂಡ್ ಮೇಲೆ ಪ್ರವಾಸಿ ಪಾಕಿಸ್ತಾನ ತಂಡ ಸವಾರಿ ಮಾಡಿದೆ. ಎರಡನೇ ದಿನದಾಟದಂತ್ಯದ ವೇಳೆಗೆ ಇಂಗ್ಲೆಂಡ್ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Shan Masood has proved himself as marathon century puts visitors on top against England in 1St Test
Author
Manchester, First Published Aug 7, 2020, 1:42 PM IST

ಮ್ಯಾಂಚೆ​ಸ್ಟರ್(ಆ.07)‌: ಇಲ್ಲಿ ನಡೆ​ಯು​ತ್ತಿ​ರುವ ಇಂಗ್ಲೆಂಡ್‌ ವಿರು​ದ್ಧದ ಮೊದಲ ಟೆಸ್ಟ್‌ನಲ್ಲಿ ಪಾಕಿ​ಸ್ತಾನ ಮೇಲುಗೈ ಸಾಧಿ​ಸಿದೆ. ಮೊದಲಿಗೆ ಬ್ಯಾಟಿಂಗ್‌ನಲ್ಲಿ ಪ್ರಾಬಲ್ಯ ಮೆರೆದಿದ್ದ ಪಾಕ್, ಬಳಿಕ ಬೌಲಿಂಗ್‌ನಲ್ಲೂ ತನ್ನ ಸಾಮರ್ಥ್ಯವನ್ನು ಅನಾವರಣ ಮಾಡಿದೆ. 

ಪಾಕಿ​ಸ್ತಾನ ಆರಂಭಿಕ ಬ್ಯಾಟ್ಸ್‌ಮನ್ ಶಾನ್‌ ಮಸೂದ್‌ (156) ಬಾರಿ​ಸಿದ ಆಕ​ರ್ಷಕ ಶತ​ಕದ ನೆರ​ವಿ​ನಿಂದ ಮೊದಲ ಇನ್ನಿಂಗ್ಸ್‌ನಲ್ಲಿ 326 ರನ್‌ ಗಳಿ​ಸಿತು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಮತ್ತೊಂದೆಡೆ ನೆಲಕಚ್ಚಿ ಬ್ಯಾಟಿಂಗ್ ಪ್ರದರ್ಶನ ತೋರಿದ ಮಸೂದ್ 319 ಎಸೆತಗಳನ್ನು ಎದುರಿಸಿ 18 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 156 ರನ್‌ ಗಳಿಸಿ 9ನೇಯವರಾಗಿ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಶಾದಾಬ್ ಖಾನ್(45) ಉತ್ತಮ ಸಾಥ್ ನೀಡಿದರು. ಇಂಗ್ಲೆಂಡ್ ಪರ ಸ್ಟುವರ್ಟ್ ಬ್ರಾಡ್ ಹಾಗೂ ಜೋಫ್ರಾ ಆರ್ಚರ್ ತಲಾ ಮೂರು ವಿಕೆಟ್ ಪಡೆದರೆ, ಕ್ರಿಸ್ ವೋಕ್ಸ್ 2 ಹಾಗೂ ಆಂಡರ್‌ಸನ್ 1 ವಿಕೆಟ್ ಪಡೆದರು.

ಐತಿಹಾಸಿಕ, ಸಾರ್ಥಕ ದಿನ: ರಾಮ ಮಂದಿರ ನಿರ್ಮಾಣ ಕೊಂಡಾಡಿದ ಪಾಕ್ ಕ್ರಿಕೆಟಿಗ ಕನೇರಿಯಾ!

ಇಂಗ್ಲೆಂಡ್‌ಗೆ ಆರಂಭಿಕ ಆಘಾತ: ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಮೊದಲ ಓವರ್‌ನಲ್ಲೇ ರೋರಿ ಬರ್ನ್ಸ್ ವಿಕೆಟ್ ಕಳೆದುಕೊಂಡಿತು. ನಾಲ್ಕನೇ ಓವರ್‌ನಲ್ಲಿ ಮತ್ತೋರ್ವ ಆರಂಭಿಕ ಬ್ಯಾಟ್ಸ್‌ಮನ್‌ ಸಿಬ್ಲಿಯನ್ನು ಮೊಹಮ್ಮದ್ ಅಬ್ಬಾಸ್ ಪೆವಿಲಿಯನ್ ಹಾದಿ ತೋರಿಸಿದರು. ಬೆನ್‌ ಸ್ಟೋಕ್ಸ್ ಶೂನ್ಯ ಸುತ್ತಿ ಅಬ್ಬಾಸ್‌ಗೆ ಎರಡನೇ ಬಲಿಯಾದರು. ಇದೀಗ 2ನೇ ದಿನದಂತ್ಯಕ್ಕೆ ಇಂಗ್ಲೆಂಡ್‌ ತಂಡ​ವನ್ನು 4 ವಿಕೆಟ್‌ ನಷ್ಟಕ್ಕೆ 92 ರನ್‌ಗಳಿಸಿದೆ. 

ಇಂಗ್ಲೆಂಡ್‌ ಇನ್ನೂ 234 ರನ್‌ಗಳಿಂದ ಹಿಂದಿದ್ದು, ಓಲಿ ಪೋಪ್‌ (ಅಜೇಯ 46) ಹಾಗೂ ಜೋಸ್‌ ಬಟ್ಲರ್‌ (ಅ​ಜೇಯ 15) 3ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದು​ಕೊಂಡಿ​ದ್ದಾರೆ.

ಸ್ಕೋರ್‌: ಪಾಕಿ​ಸ್ತಾನ 326, ಇಂಗ್ಲೆಂಡ್‌ 92/4(2ನೇ ದಿನ​ದಂತ್ಯಕ್ಕೆ)

Follow Us:
Download App:
  • android
  • ios