Asianet Suvarna News Asianet Suvarna News

ಕಾಳಿ ಪೂಜೆಯಲ್ಲಿ ಪಾಲ್ಗೊಂಡ ಶಕೀಬ್ ವಿರುದ್ಧ ಆಕ್ರೋಶ, ಬಹಿರಂಗ ಕ್ಷಮೆಯಾಚಿಸಿದ ಕ್ರಿಕೆಟಿಗ!

ಹಿಂದೂ ಪೂಜೆಯಲ್ಲಿ ಪಾಲ್ಗೊಂಡ ಬಾಂಗ್ಲಾದೇಶ ಕ್ರಿಕೆಟಿಗ ಶಕೀಬ್ ಅಲ್ ಹಸನ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕೇವಲ ಪ್ರತಿಭಟನೆ ಮಾತ್ರವಲ್ಲ, ಹಿಂದೂ ಪೂಜೆಯಲ್ಲಿ ಪಾಲ್ಗೊಳ್ಳೋ ಮೂಲಕ ಇಸ್ಲಾಂ ಧರ್ಮಕ್ಕೆ ಅವಮಾನ ಮಾಡಿದ ಶಕೀಬ್‌ಗೆ ಕೊಲೆ ಬೆದರಿಕೆ ಕೂಡ ಬಂದಿದೆ. ಇದರ ಬೆನ್ನಲ್ಲೇ ಶಕೀಬ್ ಬಹಿರಂಗ ಕ್ಷಮೆ ಯಾಚಿಸಿದ್ದಾರೆ.

Shakib Al Hasan forced to make a public apology after receiving Islamist threats ckm
Author
Bengaluru, First Published Nov 17, 2020, 8:38 PM IST

ಢಾಕಾ(ನ.17): ಕೋಲ್ಕತಾದಲ್ಲಿ ಆಯೋಜಿಸಿದ್ದ ಕಾಳಿ ಪೂಜೆಯಲ್ಲಿ ಬಾಂಗ್ಲಾದೇಶ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಪಾಲ್ಗೊಂಡಿರುವುದು ಇದೀಗ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಬಾಂಗ್ಲಾದ ಮುಸ್ಲಿಂ ಸಂಪ್ರದಾಯವಾದಿಗಳು ಶಕೀಬ್ ಅಲ್ ಹಸನ್ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನೆ ಮಾತ್ರವಲ್ಲ ಕೊಲೆ ಬೆದರಿಕೆ ಹಾಕಿದ್ದಾರೆ. ಇದರ ಪರಿಣಾಮವಾಗಿ ಶಕೀಬ್ ಅಲ್ ಹಸನ್ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ.

8 ತಿಂಗಳ ಬಳಿಕ ಆರಂಭಗೊಂಡ ಪಾಕಿಸ್ತಾನ ಸೂಪರ್ ಲೀಗ್ ಪಂದ್ಯ ನಿಲ್ಲಿಸಿದ ನಾಯಿ!.

ನಾನೋರ್ವ ಮುಸ್ಲಿಂ. ಮುಸ್ಲಿಂ ಧರ್ಮದ ಎಲ್ಲಾ ಸಂಪ್ರದಾಯಗಳನ್ನು ಚಾಚೂ ತಪ್ಪದೆ ಪಾಲಿಸುತ್ತೇನೆ. ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ ಎಂದು ಶಕೀಬ್ ಅಲ್ ಹಸನ್ ಹೇಳಿದ್ದಾರೆ.

ಕೋಲ್ಕತಾದಲ್ಲಿ ನಡೆದ ಕಾಳಿ ಪೂಜೆಯಲ್ಲಿ ಪಾಲ್ಗೊಂಡ ಬೆನ್ನಲ್ಲೇ ಪ್ರತಿಭಟನೆ ಹೆಚ್ಚಾಗಿತ್ತು. ಇನ್ನು ಮೂಲಭೂತವಾದಿಯೊಬ್ಬ ಫೇಸ್‌ಬುಕ್ ಲೈವ್ ಮೂಲಕ ಶಕೀಬ್ ಅಲ್ ಹಸನ್‌ಗೆ ಬೆದರಿಕೆ ಹಾಕಿದ್ದಾನೆ. ಮಚ್ಚು ಹಿಡಿದು, ನಾನೇ ಶಕೀಬ್‌ನನ್ನು ತುಂಡು ತುಂಡು ಮಾಡುವುದಾಗಿ ಲೈವ್‌ನಲ್ಲೇ ಹೇಳಿದ್ದಾನೆ. ಇದರ ಬೆನ್ನಲ್ಲೇ ಶಕೀಬ್ ಕ್ಷಮೆಯಾಚಿಸಿದ್ದಾರೆ.

ಅಬ್ಬಬ್ಬಾ, ದುಬೈನಿಂದ ಬರೋಬ್ಬರಿ 1 ಕೋಟಿ ಮೌಲ್ಯದ ಚಿನ್ನ ತಂದಿದ್ದ ಕೃನಾಲ್‌ ಪಾಂಡ್ಯ..!.

ಶಕೀಬ್ ಕ್ಷಮೆಯಾಚಿಸಿದರೂ ಮುಸ್ಲಿಂ ಮೂಲಭೂತ ಸಂಪ್ರದಾಯವಾದಿಗಳ ಆಕ್ರೋಶ ತಗ್ಗಿಲ್ಲ. ಕ್ಷಮೆ ಕೇಳಿದರೆ ತಪ್ಪು ಇಲ್ಲವಾಗುವುದಿಲ್ಲ. ತಪ್ಪು ಮಾಡಿದ ಶಕೀಬ್‌ ಶಿಕ್ಷೆ ಅನುಭವಿಸಬೇಕು ಅನ್ನೋ ಮಾತುಗಳು ಕೇಳಿ ಬಂದಿದೆ

Follow Us:
Download App:
  • android
  • ios