ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಲೀಗ್‌ ಪಂದ್ಯದಲ್ಲಿ ಮಯಾಂಕ್‌ ಅಗರ್‌ವಾಲ್‌ರನ್ನು ಔಟ್‌ ಮಾಡಿದ ಬಳಿಕ ಹರ್ಷಿತ್‌ ಫ್ಲೈಯಿಂಗ್‌ ಕಿಸ್‌ ನೀಡಿ ಕ್ರೀಸ್‌ನಿಂದ ಬೀಳ್ಕೊಟ್ಟಿದ್ದರು.

ಚೆನ್ನೈ: 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಚಾಂಪಿಯನ್‌ ಆದ ಬಳಿಕ ಕೋಲ್ಕತಾ ನೈಟ್‌ರೈಡರ್ಸ್‌ ತಂಡ ಯುವ ವೇಗಿ ಹರ್ಷಿತ್‌ ರಾಣಾ ಅವರ ಫ್ಲೈಯಿಂಗ್‌ ಕಿಸ್‌ ಶೈಲಿಯಲ್ಲಿ ಸಂಭ್ರಮಿಸಿ ಗಮನ ಸೆಳೆಯಿತು. ತಂಡದ ಪ್ರತಿಯೊಬ್ಬರಿಗೂ ಫ್ಲೈಯಿಂಗ್‌ ಕಿಸ್‌ ನೀಡುವಂತೆ ಮಾಲಿಕ ಶಾರುಖ್‌ ಖಾನ್‌ ಸೂಚಿಸಿದ ಹಿನ್ನೆಲೆಯಲ್ಲಿ ಈ ಸಂಭ್ರಮಾಚರಣೆ ಮೂಡಿಬಂತು. 

ಇದಕ್ಕೆ ಕಾರಣವೂ ಇದೆ. ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಲೀಗ್‌ ಪಂದ್ಯದಲ್ಲಿ ಮಯಾಂಕ್‌ ಅಗರ್‌ವಾಲ್‌ರನ್ನು ಔಟ್‌ ಮಾಡಿದ ಬಳಿಕ ಹರ್ಷಿತ್‌ ಫ್ಲೈಯಿಂಗ್‌ ಕಿಸ್‌ ನೀಡಿ ಕ್ರೀಸ್‌ನಿಂದ ಬೀಳ್ಕೊಟ್ಟಿದ್ದರು. ಅವರ ಈ ನಡೆಗೆ ಮ್ಯಾಚ್‌ ರೆಫ್ರಿ ಪಂದ್ಯದ ಸಂಭಾವನೆಯ ಶೇ.60ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಿದ್ದರು. ಇದೀಗ ಶಾರುಖ್ & ಅವರ ಟೀಂ ಐಪಿಎಲ್ ಟ್ರೋಫಿ ಗೆದ್ದು, ಬಿಸಿಸಿಐ ಕಾಲೆಳೆದಿದ್ದು ಹೆಚ್ಚು ಗಮನ ಸೆಳೆದಿದೆ.

Scroll to load tweet…

2015ರ ಏಕದಿನ ವಿಶ್ವಕಪ್‌ ಫೈನಲ್‌ ನೆನಪಸಿದ ಸ್ಟಾರ್ಕ್‌!

ಭಾನುವಾರದ ಪಂದ್ಯದಲ್ಲಿ ಮಿಚೆಲ್‌ ಸ್ಟಾರ್ಕ್‌ 2015ರ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯವನ್ನು ನೆನಪಿಸಿದರು. 2015ರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ ಟೂರ್ನಿಯುದ್ದಕ್ಕೂ ಸ್ಫೋಟಕ ಆಟವಾಡಿ ಫೈನಲ್‌ಗೇರಿತ್ತು. ಫೈನಲ್‌ನ ಮೊದಲ ಓವರಲ್ಲಿ ಸ್ಟಾರ್ಕ್‌, ಕಿವೀಸ್‌ನ ಅತಿ ಮುಖ್ಯ ಬ್ಯಾಟರ್‌ ಆಗಿದ್ದ ಬ್ರೆಂಡನ್‌ ಮೆಕ್ಕಲಂರನ್ನು ಔಟ್‌ ಮಾಡಿದ್ದರು. ಇದರಿಂದ ಕಿವೀಸ್‌ ಸಾಧಾರಣ ಮೊತ್ತಕ್ಕೆ ಕುಸಿದಿತ್ತು. 2024ರ ಐಪಿಎಲ್‌ ಫೈನಲ್‌ನಲ್ಲೂ ಸ್ಟಾರ್ಕ್‌, ಎದುರಾಳಿ (ಸನ್‌ರೈಸರ್ಸ್‌) ಪಡೆಯ ಪ್ರಮುಖ ಬ್ಯಾಟರ್‌ ಅಭಿಷೇಕ್‌ ಶರ್ಮಾರನ್ನು ಔಟ್‌ ಮಾಡಿದರು. ಸನ್‌ರೈಸರ್ಸ್‌ ಕಳಪೆ ಮೊತ್ತಕ್ಕೆ ಕುಸಿಯಿತು. ಸ್ಟಾರ್ಕ್‌ ತಾವೇಕೆ ಇಂದಿಗೂ ವಿಶ್ವ ಶ್ರೇಷ್ಠ ಬೌಲರ್‌ ಎನಿಸಿದ್ದಾರೆ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

ಸ್ಟಾರ್ಕ್‌ ಬೇಕೆಂದು ಪಟ್ಟು ಹಿಡಿದಿದ್ದ ಗಂಭೀರ್..! ಕೆಕೆಆರ್ ಗೆಲುವಿನ ಹಿಂದಿದೆ ಹಲವು ಕಾಣದ ಕೈಗಳು..!

ದುಬಾರಿ ವೇಗಿ ಸ್ಟಾರ್ಕ್‌ಗೆ ಒಲಿದ ಐಪಿಎಲ್‌ ಟ್ರೋಫಿ

ಐಪಿಎಲ್‌ ಹರಾಜಿನಲ್ಲೇ ದುಬಾರಿ ಆಟಗಾರ ಮಿಚೆಲ್‌ ಸ್ಟಾರ್ಕ್‌ (24.75 ಕೋಟಿ) ತಮ್ಮ ತಂಡಕ್ಕೆ ಟ್ರೋಫಿ ಗೆಲ್ಲಿಸಲು ನೆರವಾಗಿದ್ದಾರೆ. ಆವೃತ್ತಿಯೊಂದರ ದುಬಾರಿ ಆಟಗಾರ ಎನಿಸಿಕೊಂಡವರು ಇದ್ದ ತಂಡ ಐಪಿಎಲ್‌ ಚಾಂಪಿಯನ್‌ ಆಗಿರುವುದು ಇದು 2ನೇ ಬಾರಿ. 2013ರಲ್ಲಿ ಮ್ಯಾಕ್ಸ್‌ವೆಲ್‌(₹5.3 ಕೋಟಿ) ಮುಂಬೈ ಇಂಡಿಯನ್ಸ್‌ ಪರ ಆಡಿದ್ದಾಗ ತಂಡ ಚಾಂಪಿಯನ್‌ ಆಗಿತ್ತು.

ಟಿ20 ವಿಶ್ವಕಪ್‌: ಅಭ್ಯಾಸ ಪಂದ್ಯಕ್ಕೆಆಸೀಸ್‌ಗೆ ಆಟಗಾರರ ಕೊರತೆ!

ಮೆಲ್ಬರ್ನ್‌: ಟಿ20 ವಿಶ್ವಕಪ್‌ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಐಪಿಎಲ್‌ ಪ್ಲೇ-ಆಫ್‌ನಲ್ಲಿ ಆಡಿದ ಆಸ್ಟ್ರೇಲಿಯಾದ ಆಟಗಾರರು ಇನ್ನೂ ವೆಸ್ಟ್‌ಇಂಡೀಸ್‌ ತಲುಪಿಲ್ಲ. ಈ ಕಾರಣದಿಂದಾಗಿ ಅಭ್ಯಾಸ ಪಂದ್ಯಗಳಿಗೆ ಆಸ್ಟ್ರೇಲಿಯಾಗೆ ಆಟಗಾರರ ಕೊರತೆ ಎದುರಾಗಬಹುದು ಎಂದು ತಂಡದ ನಾಯಕ ಮಿಚೆಲ್‌ ಮಾರ್ಷ್‌ ಹೇಳಿದ್ದಾರೆ. 

ಕನ್ನಡ ನಿರ್ದೇಶಕನೊಂದಿಗೆ ಅನುಷ್ಕಾ ಶೆಟ್ಟಿ ಮದ್ವೆ? ಈ ಕ್ರಿಕೆಟಿಗನ ಮೇಲೆ ಬಾಹುಬಲಿ ನಟಿ ಲವ್ವಲ್ಲಿ ಬಿದ್ದಿದ್ದರಂತೆ!

ಸದ್ಯ ಕೇವಲ 8 ಆಟಗಾರರು ಟ್ರಿನಿಡಾಡ್‌ನಲ್ಲಿದ್ದು, ನಮೀಬಿಯಾ ಹಾಗೂ ವಿಂಡೀಸ್‌ ನಡುವಿನ ಅಭ್ಯಾಸ ಪಂದ್ಯಗಳಲ್ಲಿ ಸಹಾಯಕ ಸಿಬ್ಬಂದಿಯನ್ನು ಫೀಲ್ಡಿಂಗ್‌ಗೆ ಬಳಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಬಹುದು ಎಂದು ಮಾರ್ಷ್‌ ಹೇಳಿದ್ದಾರೆ. ಆಸ್ಟ್ರೇಲಿಯಾ ಜೂ.5ರಂದು ಒಮಾನ್‌ ವಿರುದ್ಧ ಕಣಕ್ಕಿಳಿಯುವ ಮೂಲಕ ವಿಶ್ವಕಪ್‌ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.