Asianet Suvarna News Asianet Suvarna News

ಟೆನ್ಷನ್‌ನಲ್ಲಿ ಸ್ಟೇಡಿಯಂನೊಳಗೆ ಸಿಗರೇಟ್ ಸ್ಮೋಕ್ ಮಾಡಿದ KKR ಓನರ್ ಶಾರುಕ್ ಖಾನ್...! ವಿಡಿಯೋ ವೈರಲ್

ಕೋಲ್ಕತಾ ನೈಟ್ ರೈಡರ್ಸ್ ತಂಡವು 10 ಓವರ್ ಅಂತ್ಯದ ವೇಳೆಗೆ ಕೇವಲ 77 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ವೇಳೆಯಲ್ಲಿ ಟೆನ್ಷನ್‌ನಲ್ಲಿ ಶಾರುಕ್ ಖಾನ್ ಸಿಗರೇಟ್ ಸ್ಮೋಕ್ ಮಾಡಿದ್ದಾರೆ ಎನ್ನಲಾಗುತ್ತಿದೆ.

Shah Rukh Khan Caught Smoking During KKR vs SRH IPL Match In Kolkata Video Goes Viral kvn
Author
First Published Mar 24, 2024, 11:54 AM IST

ಕೋಲ್ಕತಾ(ಮಾ.24): 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು ಆತಿಥೇಯ ಕೋಲ್ಕತಾ ನೈಟ್ ರೈಡರ್ಸ್ ತಂಡವು 4 ರನ್ ರೋಚಕ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದೆ. ಆದರೆ ಪಂದ್ಯ ನಡೆಯುವ ವೇಳೆಯಲ್ಲೇ ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಾಲೀಕ ಹಾಗೂ ಬಾಲಿವುಡ್ ನಟ ಶಾರುಕ್ ಖಾನ್ ಸಿಗರೇಟ್ ಸ್ಮೋಕ್ ಮಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಟೆನ್ಷನ್‌ನಲ್ಲಿ ಶಾರುಕ್ ಖಾನ್ ಸ್ಮೋಕ್ ಮಾಡಿರುವ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಹೌದು, ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್‌ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನ ಆತಿಥ್ಯ ವಹಿಸಿತ್ತು. ವಿಐಪಿ ಬಾಕ್ಸ್‌ನಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದ ಶಾರುಕ್ ಖಾನ್ ಸಿಗರೇಟ್ ಸೇದಿರುವಂತಹ ದೃಶ್ಯಾವಳಿಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆಯಾದರೂ, ಈ ಬಗ್ಗೆ ಅಧಿಕೃತ ಸಂಸ್ಥೆಗಳು ಖಚಿತಪಡಿಸಿಲ್ಲ. ಈ ದೃಶ್ಯಾವಳಿಗಳನ್ನು ಗಮನಿಸಿದ ನೆಟ್ಟಿಗರು ಗರಂ ಆಗಿದ್ದು, ಪಂದ್ಯದ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಕಿಂಗ್ ಖಾನ್ ಮೇಲೆ ಹರಿಹಾಯ್ದಿದ್ದಾರೆ. ಇದೇ ರೀತಿಯ ದೃಶ್ಯಾವಳಿಗಳು ಇತ್ತೀಚೆಗಷ್ಟೇ ನಡೆದ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿಯೂ ಬೆಳಕಿಗೆ ಬಂದಿತ್ತು. ಪಿಎಸ್‌ಎಲ್ ಟೂರ್ನಿಯ ಫೈನಲ್ ಪಂದ್ಯದ ವೇಳೆಯಲ್ಲಿ ಡ್ರೆಸ್ಸಿಂಗ್ ರೂಂನಲ್ಲಿದ್ದ ಇಮಾದ್ ವಾಸೀಂ ಸಿಗರೇಟ್ ಸ್ಮೋಕ್ ಮಾಡಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.  

ದುಬಾರಿಯಾದ ಐಪಿಎಲ್‌ನ ಕಾಸ್ಟ್ಲಿ ಆಟಗಾರ ಮಿಚೆಲ್ ಸ್ಟಾರ್ಕ್..! ಕೆಕೆಆರ್ ಫ್ರಾಂಚೈಸಿ ಟ್ರೋಲ್ ಮಾಡಿದ ನೆಟ್ಟಿಗರು

ಕೋಲ್ಕತಾ ನೈಟ್ ರೈಡರ್ಸ್ ತಂಡವು 10 ಓವರ್ ಅಂತ್ಯದ ವೇಳೆಗೆ ಕೇವಲ 77 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ವೇಳೆಯಲ್ಲಿ ಟೆನ್ಷನ್‌ನಲ್ಲಿ ಶಾರುಕ್ ಖಾನ್ ಸಿಗರೇಟ್ ಸ್ಮೋಕ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ಹೀಗಿದೆ ನೋಡಿ ಆ ವಿಡಿಯೋ:

ಇನ್ನು ಇದಾದ ಬಳಿಕ ಕೊನೆಯಲ್ಲಿ ರಮನ್‌ದೀಪ್ ಸಿಂಗ್(35) ಹಾಗೂ ರಿಂಕು ಸಿಂಗ್(23) ಸಿಡಿಸಿದರೆ, ಆಂಡ್ರೆ ರಸೆಲ್ ಕೇವಲ 25 ಎಸೆತಗಳಲ್ಲಿ 3 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ ಅಜೇಯ 64 ಸಿಡಿಸುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು. ಅಂತಿಮವಾಗಿ ಕೆಕೆಆರ್ ತಂಡವು 20 ಓವರ್ ಅಂತ್ಯದ ವೇಳೆಗೆ 7 ವಿಕೆಟ್ ಕಳೆದುಕೊಂಡು 208 ರನ್ ಕಲೆಹಾಕಿತು.

ಇನ್ನು ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಸಂಘಟಿತ ಬ್ಯಾಟಿಂಗ್ ಹೊರತಾಗಿಯೂ ಕೊನೆಯ ಓವರ್‌ನಲ್ಲಿ ಪ್ರಮುಖ ಎರಡು ವಿಕೆಟ್ ಕಳೆದುಕೊಂಡು 4 ರನ್ ರೋಚಕ ಸೋಲು ಅನುಭವಿಸಿತು.

Follow Us:
Download App:
  • android
  • ios