Watch: ಭಾರತಕ್ಕೆ ಬಂದಿಳಿದ ಪಾಕಿಸ್ತಾನ ಆಟಗಾರರಿಗೆ ಕೇಸರಿ ಶಾಲು ಹಾಕಿ ಭವ್ಯ ಸ್ವಾಗತ!
ಕ್ರಿಕೆಟ್ ಜಗತ್ತಿನ ಮಹಾಕುಂಭ ಏಕದಿನ ವಿಶ್ವಕಪ್ ಟೂರ್ನಿ ಆಡಲು ಪಾಕಿಸ್ತಾನ ಕ್ರಿಕೆಟ್ ತಂಡ ಬುಧವಾರ ತಡರಾತ್ರಿ ಹೈದರಾಬಾದ್ಗೆ ಆಗಮಿಸಿತು.. ಈ ವೇಳೆ ಪಾಕಿಸ್ತಾನ ತಂಡದ ಆಟಗಾರ ಬಾಬರ್ ಅಜಮ್ ಗೆ ಕೇಸರಿ ಶಾಲು ಹೊದಿಸಿ ಸ್ವಾಗತಿಸಿರುವುದು ಭಾರೀ ವೈರಲ್ ಆಗುತ್ತಿದೆ. ಇಲ್ಲಿ ವಿಡಿಯೋ ವೀಕ್ಷಿಸಿ
ಹೈದರಾಬಾದ್ (ಸೆ.28) : ಕ್ರಿಕೆಟ್ ಜಗತ್ತಿನ ಮಹಾಕುಂಭ ಎಂದೇ ಖ್ಯಾತಿ ಪಡೆದಿರುವ ಐಸಿಸಿ ವಿಶ್ವಕಪ್ ಶೀಘ್ರದಲ್ಲೇ ಆರಂಭವಾಗಲಿದೆ. ಇದೇ ಅಕ್ಟೋಬರ್ 5 ರಿಂದ ಭಾರತದಲ್ಲಿ ನಡೆಯಲಿರುವ ಈ ವಿಶ್ವಕಪ್‌ಗಾಗಿ ತಂಡಗಳು ದೇಶಕ್ಕೆ ಬರಲಾರಂಭಿಸಿವೆ.ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನದ ಕ್ರಿಕೆಟ್ ತಂಡ ಬುಧವಾರ ತಡರಾತ್ರಿ ಭಾರತವನ್ನು ತಲುಪಿದೆ. ಪಾಕ್ ನಾಯಕ ಬಾಬರ್ ಅಜಂ ಮತ್ತು ಇತರ ಆಟಗಾರರನ್ನು ಭಾರತೀಯ ಶೈಲಿಯಲ್ಲಿ ಶಾಲು ಹೊದಿಸಿ ಸ್ವಾಗತಿಸಲಾಯಿತು. ಈ ವೇಳೆ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಆಜಂ ಸೇರಿದಂತೆ ಕೆಲವು ಆಟಗಾರರು ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಕೇಸರಿ ಶಾಲು ಹಾಕಿ ಸ್ವಾಗತಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
7 ವರ್ಷಗಳ ಬಳಿಕ ಪಾಕಿಸ್ತಾನ ತಂಡ ಭಾರತ ಪ್ರವಾಸ ಕೈಗೊಂಡಿದೆ. 2016ರಲ್ಲಿ ಕೊನೆಯ ಬಾರಿಗೆ ಪಾಕಿಸ್ತಾನ ಕ್ರಿಕೆಟ್‌ಗಾಗಿ ಭಾರತಕ್ಕೆ ಬಂದಿತ್ತು. ಪಾಕಿಸ್ತಾನದ ಆಟಗಾರರು ವಿಮಾನ ನಿಲ್ದಾಣಕ್ಕೆ ಭವ್ಯ ಸ್ವಾಗತ ದೊರೆತಿದೆ. ಈ ಬಗ್ಗೆ ಬಾಬರ್ ತನ್ನ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ 'ಭಾರತದಲ್ಲಿ ತಮಗೆ ಸಿಕ್ಕಿದ ಸ್ವಾಗತಕ್ಕೆ ಮನಸೋತಿದ್ದೇನೆ' ಸಂತೋಷ ವ್ಯಕ್ತಪಡಿಸಿದ್ದಾರೆ. ಬಾಬರ್ ಜೊತೆಗೆ, ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ಕೂಡ ಪೋಸ್ಟ್ ಮೂಲಕ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
'ರೋಹಿತ್ ಶರ್ಮ ತರ ಇರ್ಬೇಕು..' ವಿಶ್ವಕಪ್‌ಗೂ ಮುನ್ನ ಶುರುವಾಯ್ತು ಬಾಂಗ್ಲಾ ಟೀಮ್‌ನಲ್ಲಿ ಕಿತ್ತಾಟ!
ವೈರಲ್ ಆಗ್ತಿದೆ ಬಾಬರ್ ವಿಡಿಯೋ:
ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಬಾಬರ್ ಆಜಮ್ ಅವರಿಗೆ ಕೇಸರಿ ಶಾಲು ಹಾಕಿ ಸ್ವಾಗತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಕೇಸರಿ ಜನರು ವಿವಿಧ ರೀತಿಯ ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ವಿಶ್ವಕಪ್‌ಗಾಗಿ ಪಾಕಿಸ್ತಾನ ತಂಡ ಹೀಗಿದೆ:
ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಅಬ್ದುಲ್ಲಾ ಶಫೀಕ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಇಫ್ತಿಕರ್ ಅಹ್ಮದ್, ಇಮಾಮ್-ಉಲ್-ಹಕ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಮ್, ಸಲ್ಮಾನ್ ಅಘಾ, ಸೌದ್ ಶಕೀಲ್, ಶಾಹೀನ್ ಶಾ ಅಫ್ರಿದಿ, ಉಸಾಮಾ ಮಿರ್.
ರಿಸರ್ವ್: ಮೊಹಮ್ಮದ್ ಹ್ಯಾರಿಸ್, ಇಬ್ರಾರ್ ಅಹ್ಮದ್, ಜಮಾನ್ ಖಾನ್.
ಬೃಹತ್ ಮೊತ್ತಕ್ಕೆ ಭಾರತ ಕಂಗಾಲು, 3ನೇ ಏಕದಿನಲ್ಲಿ ಆಸ್ಟ್ರೇಲಿಯಾಗೆ 66 ರನ್ ಗೆಲುವು!