ಯುವ ಕ್ರಿಕೆಟಿಗ ತಿಲಕ್ ವರ್ಮಾ ಫಿಫ್ಟಿ ತಪ್ಪಿಸಿದ ಸ್ವಾರ್ಥಿ ಪಾಂಡ್ಯ..! ಧೋನಿ ನೋಡಿ ಕಲಿಯಿರಿ ಎಂದ ಫ್ಯಾನ್ಸ್
ಸಿಕ್ಸರ್ ಚಚ್ಚಿ ತಿಲಕ್ ವರ್ಮಾ ಫಿಫ್ಟಿ ತಪ್ಪಿಸಿದ ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ ಓರ್ವ ಸ್ವಾರ್ಥಿ ಎಂದು ಟೀಕಿಸಿದ ನೆಟ್ಟಿಗರು
ನಿಸ್ವಾರ್ಥಿ ಧೋನಿಯನ್ನು ನೋಡಿ ಕಲಿಯಿರಿ ಎಂದು ಕಿವಿಹಿಂಡಿದ ಫ್ಯಾನ್ಸ್
ಪ್ರಾವಿಡೆನ್ಸ್(ಆ.10): ವೆಸ್ಟ್ ಇಂಡೀಸ್ ಎದುರಿನ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಸಿಕ್ಸರ್ ಸಿಡಿಸುವ ಮೂಲಕ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದರು. ಹೀಗಿದ್ದೂ ಹಾರ್ದಿಕ್ ಪಾಂಡ್ಯ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಟೀಕೆ ವ್ಯಕ್ತಪಡಿಸಿದ್ದಾರೆ. ಈ ಪೈಕಿ ಕೆಲವರು ಕ್ಯಾಪ್ಟನ್ ಕೂಲ್ ಧೋನಿಯನ್ನು ನೋಡಿ ಕಲಿಯಿರಿ ಎಂದು ಕಿವಿಮಾತು ಹೇಳಿದ್ದಾರೆ.
ಗಯಾನದಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡವು ವೆಸ್ಟ್ ಇಂಡೀಸ್ ನೀಡಿದ್ದ 159 ರನ್‌ಗಳ ಗುರಿ ಬೆನ್ನತ್ತಿತ್ತು. ಈ ವೇಳೆ 17.4 ಓವರ್‌ಗಳಲ್ಲಿ 158 ರನ್ ಗಳಿಸಿದ್ದ ಭಾರತಕ್ಕೆ ಗೆಲುವಿಗೆ ಕೇವಲ 2 ರನ್ ಅಗತ್ಯವಿತ್ತು. ಈ ವೇಳೆ ಹಾರ್ದಿಕ್ ಪಾಂಡ್ಯ ಸಿಕ್ಸರ್ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಆದರೆ ನಾನ್ ಸ್ಟ್ರೈಕ್‌ನಲ್ಲಿದ್ದ ತಿಲಕ್ ವರ್ಮಾಗೆ ಅರ್ಧಶತಕ ಬಾರಿಸಲು ಹಾರ್ದಿಕ್ ಪಾಂಡ್ಯ ಅವಕಾಶ ನೀಡಿಲ್ಲವೆಂದು ಹಲವರು ಟೀಕಿಸಿದ್ದಾರೆ
ವೆಸ್ಟ್ ಇಂಡೀಸ್ ಎದುರಿನ ಮೊದಲೆರಡು ಪಂದ್ಯಗಳಲ್ಲೂ ಅದ್ಭುತ ಪ್ರದರ್ಶನ ತೋರಿದ್ದ ತಿಲಕ್ ವರ್ಮಾ, ವೆಸ್ಟ್ ಇಂಡೀಸ್ ಎದಿರಿನ ಮೂರನೇ ಟಿ20 ಪಂದ್ಯದಲ್ಲಿ ಕೇವಲ 37 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಅಜೇಯ 49 ರನ್ ಬಾರಿಸಿದರು. ಆದರೆ ಸರಣಿಯಲ್ಲಿ ಸತತ ಎರಡನೇ ಅರ್ಧಶತಕ ಬಾರಿಸುವ ಅವಕಾಶವನ್ನು ಹಾರ್ದಿಕ್ ಪಾಂಡ್ಯ ತಪ್ಪಿಸಿದರು.
Asia Cup 2023: ಟೀಂ ಇಂಡಿಯಾ ಜೆರ್ಸಿ ಮೇಲೆ ಪಾಕಿಸ್ತಾನ ಹೆಸರು..! ಇತಿಹಾಸದಲ್ಲೇ ಮೊದಲು, ಜೆರ್ಸಿ ಫೋಟೋ ವೈರಲ್
ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಕೂಡಾ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಪಂದ್ಯದಲ್ಲಿ ತಿಲಕ್ ವರ್ಮಾ ಅವರಿಗೆ ಅರ್ಧಶತಕ ಸಿಡಿಸಲು ಅವಕಾಶ ಬಾರಿಸಲು ಹಾರ್ದಿಕ್ ಪಾಂಡ್ಯ ಅವಕಾಶ ನೀಡಬೇಕಿತ್ತು ಎಂದಿತ್ತು. ಇದಷ್ಟೇ ಅಲ್ಲದೇ ಹಲವು ನೆಟ್ಟಿಗರು ಹಾರ್ದಿಕ್ ಪಾಂಡ್ಯ ಅವರನ್ನು ಸ್ವಾರ್ಥಿ ಎಂದು ಜರಿದಿದ್ದಾರೆ. ಪಂದ್ಯದಲ್ಲಿ ಇನ್ನೂ 13 ಎಸೆತ ಬಾಕಿ ಇತ್ತು. ಈ ವೇಳೆ ಹಾರ್ದಿಕ್ ಪಾಂಡ್ಯ ಸಿಕ್ಸರ್ ಸಿಡಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ.
ಧೋನಿ ನೋಡಿ ಕಲಿಯಿರಿ ಎಂದ ಫ್ಯಾನ್ಸ್..!
2014ರಲ್ಲಿ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಏಕಾಂಗಿಯಾಗಿ ದಿಟ್ಟ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಪಂದ್ಯವನ್ನು ಗೆಲುವಿನ ಸಮೀಪಕ್ಕೆ ಕೊಂಡೊಯ್ದಿದ್ದರು. ಈ ಸಂದರ್ಭದಲ್ಲಿ ಧೋನಿ ಕ್ರೀಸ್‌ಗಿಳಿದಾಗ ಟೀಂ ಇಂಡಿಯಾ ಗೆಲ್ಲಲು 7 ಎಸೆತಗಳಲ್ಲಿ ಕೇವಲ ಒಂದು ರನ್ ಅಗತ್ಯವಿತ್ತು. ಆಗ ಧೋನಿ ಬೌಂಡರಿ ಬಾರಿಸಬಹುದಿತ್ತು. ಆದರೆ ಕ್ಯಾಪ್ಟನ್ ಕೂಲ್ ಹಾಗೆ ಮಾಡಲಿಲ್ಲ, ಬದಲಾಗಿ ಚೆಂಡನ್ನು ರಕ್ಷಣಾತ್ಮಕವಾಗಿ ಆಡುವ ಮೂಲಕ ಕೊಹ್ಲಿ ಸ್ಟ್ರೈಕ್‌ಗೆ ಬರುವಂತೆ ನೋಡಿಕೊಂಡರು. ಆಗ ವಿರಾಟ್ ಕೊಹ್ಲಿ 42 ಎಸೆತಗಳಲ್ಲಿ ಅಜೇಯ 67 ರನ್ ಬಾರಿಸಿದ್ದರು. ಓವರ್ ಮುಕ್ತಾಯದ ಬಳಿಕ ಧೋನಿ, ಕೊಹ್ಲಿಗೆ ನೀನೇ ಮ್ಯಾಚ್ ಫಿನೀಶ್ ಮಾಡು ಎಂದು ಪ್ರೋತ್ಸಾಹಿಸಿದ್ದರು. ಇದೀಗ ಹಾರ್ದಿಕ್ ಪಾಂಡ್ಯ ಮಾಡಿದ ಸ್ವಾರ್ಥದ ನಡೆಯನ್ನು ನೆಟ್ಟಿಗರು ಟೀಕಿಸಿದ್ದು ಮಾತ್ರವಲ್ಲದೇ, ನಾಯಕರೆನಿಸಿಕೊಂಡವರು ಹೀಗಿರಬೇಕು ಎಂದು ಧೋನಿಯ ನಡೆಯನ್ನು ಸ್ಮರಿಸಿಕೊಂಡಿದ್ದಾರೆ.
ಸೂರ್ಯನಬ್ಬರಕ್ಕೆ ಕರಗಿದ ವೆಸ್ಟ್ ಇಂಡೀಸ್; ಟೀಂ ಇಂಡಿಯಾಗೆ ಮೊದಲ ಟಿ20 ಗೆಲುವು..!
ಇನ್ನು ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಶತಕದ ಹೊಸ್ತಿಲಲ್ಲಿ ಇದ್ದಾಗಲೂ ಕೂಡಾ ಇದೇ ರೀತಿ ರಕ್ಷಣಾತ್ಮಕವಾಗಿ ಆಡುವ ಮೂಲಕ ಯುವ ಕ್ರಿಕೆಟಿಗನನ್ನು ಬೆಂಬಲಿಸಿದ್ದರು.
ಹೇಗಿತ್ತು ಭಾರತ-ವೆಸ್ಟ್ ಇಂಡೀಸ್ ಮೂರನೇ ಟಿ20 ಪಂದ್ಯ?
ನಾಯಕ ರೋವ್ಮನ್ ಪೋವೆಲ್(19 ಎಸೆತದಲ್ಲಿ 40 ರನ್)ರ ವೀರಾವೇಶದ ನೆರವಿನಿಂದ ವಿಂಡೀಸ್ 5 ವಿಕೆಟ್‌ಗೆ 159 ರನ್ ಕಲೆಹಾಕಿ, ಭಾರತಕ್ಕೆ ಸ್ಪರ್ಧಾತ್ಮಕ ಗುರಿ ನೀಡಿತು. ಪಾದಾರ್ಪಣಾ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಕೇವಲ 1 ರನ್‌ಗೆ ಔಟಾದರೆ, ಗಿಲ್(11 ಎಸೆತದಲ್ಲಿ 6 ರನ್) ಮತ್ತೊಮ್ಮೆ ವೈಫಲ್ಯ ಕಂಡರು. ಆದರೆ ಸೂರ್ಯ ಹಾಗೂ ತಿಲಕ್ ವರ್ಮಾ, ವಿಂಡೀಸ್ ಬೌಲರ್‌ಗಳನ್ನು ದಂಡಿಸಿದರು.
ಸಣ್ಣಗೆ ಮಳೆ ಬೀಳುತ್ತಿದ್ದ ಕಾರಣ, ಮೊದಲು 5 ಓವರ್ ಮುಕ್ತಾಯಕ್ಕೆ ಡಕ್ವರ್ತ್ ಲೂಯಿಸ್ ನಿಯಮದನ್ವಯ ಬೇಕಿದ್ದ ಗುರಿ ದಾಟುವುದು ಭಾರತದ ಉದ್ದೇಶವಾಗಿತ್ತು. ಹೀಗಾಗಿ ತಿಲಕ್ ಕ್ರೀಸ್ಗಿಳಿಯುತ್ತಿದ್ದಂತೆ ಸತತ 2 ಬೌಂಡರಿ ಬಾರಿಸಿದರು. 5 ಓವರಲ್ಲಿ ಭಾರತ 40 ರನ್ ಗಳಿಸಬೇಕಿತ್ತು. ತಂಡ 2 ವಿಕೆಟ್‌ಗೆ 43 ರನ್ ಕಲೆಹಾಕಿ ಮುಂದಿತ್ತು.
ಪವರ್-ಪ್ಲೇ ಮುಕ್ತಾಯಕ್ಕೆ 60 ರನ್ ಚಚ್ಚಿದ ಭಾರತ, ವಿಂಡೀಸ್‌ಗೆ ಪುಟಿದೇಳಲು ಬಿಡಲಿಲ್ಲ. ಸೂರ್ಯ 23 ಎಸೆತದಲ್ಲಿ ಅರ್ಧಶತಕ ಪೂರೈಸಿ ಶತಕದತ್ತ ಮುನ್ನುಗ್ಗಿದರು. ಆದರೆ 83 ರನ್ (44 ಎಸೆತ, 10 ಬೌಂಡರಿ, 4 ಸಿಕ್ಸರ್) ಗಳಿಸಿದ್ದಾಗ ಅವರ ಇನ್ನಿಂಗ್‌್ಸಗೆ ತೆರೆ ಬಿತ್ತು. ತಿಲಕ್ ಜೊತೆ 50 ಎಸೆತದಲ್ಲಿ 87 ರನ್‌ಗಳ ಜೊತೆಯಾಟವೂ ಕೊನೆಗೊಂಡಿತು. ತಿಲಕ್(49*), ಹಾರ್ದಿಕ್(20*) ಭಾರತವನ್ನು 13 ಎಸೆತ ಬಾಕಿ ಇರುವಂತೆಯೇ ದಡ ಸೇರಿಸಿದರು.