Ind vs WI: ವಿಂಡೀಸ್ ಎದುರು ಡ್ರಾ ಬೆನ್ನಲ್ಲೇ ಟೀಂ ಇಂಡಿಯಾ ಕೈತಪ್ಪಿದ 8 ಅಂಕ..!

ಭಾರತ-ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಡ್ರಾನಲ್ಲಿ ಅಂತ್ಯ
ತಲಾ 4 ಅಂಕಗಳನ್ನು ಹಂಚಿಕೊಂಡ ಉಭಯ ತಂಡಗಳು
ಟೆಸ್ಟ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಕುಸಿದ ಭಾರತ

Second test ended in a draw with India and West Indies each receiving 4 points kvn

ಪೋರ್ಟ್‌ ಆಫ್‌ ಸ್ಪೇನ್‌(ಜು.26): ವೆಸ್ಟ್‌ಇಂಡೀಸ್‌ ವಿರುದ್ಧ 2ನೇ ಟೆಸ್ಟ್‌ನಲ್ಲಿ ಸುಲಭ ಜಯ ಸಾಧಿಸಿ, 12 ಅಂಕ ಪಡೆದು2023-25ರ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿಯುವ ಭಾರತಕ್ಕೆ ಆಸೆಗೆ ಹಿನ್ನಡೆಯಾಗಿದೆ. ಸೋಮವಾರ ಇಡೀ ದಿನದಾಟವನ್ನು ಮಳೆ ಆಹುತಿ ಪಡೆದ ಪರಿಣಾಮ ಪಂದ್ಯ ಡ್ರಾಗೊಂಡಿತು. ಇದರಿಂದಾಗಿ ಭಾರತಕ್ಕೆ ಕೇವಲ 4 ಅಂಕಕ್ಕೆ ತೃಪ್ತಿಪಡಬೇಕಾಯಿತು.

ಟೆಸ್ಟ್‌ ಚಾಂಪಿಯನ್‌ಶಿಪ್‌ ವ್ಯಾಪ್ತಿಗೆ ಸೇರುವ ಪಂದ್ಯಗಳಲ್ಲಿ ಗೆದ್ದರೆ 12, ಟೈ ಆದರೆ 6, ಡ್ರಾಗೊಂಡರೆ 4 ಅಂಕ ಸಿಗಲಿದೆ. ಚಾಂಪಿಯನ್‌ಶಿಪ್‌ನ ಕೊನೆಯಲ್ಲಿ ಒಟ್ಟು ಅಂಕಗಳ ಪ್ರತಿಶತದ ಆಧಾರದಲ್ಲಿ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ಫೈನಲ್‌ ಪ್ರವೇಶಿಸಲಿವೆ. ಮಳೆಯಿಂದಾಗಿ ಭಾರತಕ್ಕೆ 8 ಅಂಕ ನಷ್ಟವಾಗಿದ್ದು, ಮುಂದೆ ತಂಡದ ಫೈನಲ್‌ ಹಾದಿಗೆ ಇದು ಮುಳುವಾಗಬಹುದು.

2ನೇ ಸ್ಥಾನಕ್ಕೆ ಕುಸಿತ

ಮೊದಲ ಟೆಸ್ಟ್‌ನಲ್ಲಿ ಗೆದ್ದು ಶುಭಾರಂಭ ಮಾಡಿದ್ದ ಭಾರತ, 12 ಅಂಕಗಳೊಂದಿಗೆ ವಿಶ್ವ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿತ್ತು. ಆದರೆ ಈಗ 2 ಪಂದ್ಯಗಳಲ್ಲಿ ಒಟ್ಟು 24 ಅಂಕಗಳಿಗೆ ಸ್ಪರ್ಧಿಸಿ 16 ಅಂಕ ಹೊಂದಿರುವ ಭಾರತ, ಶೇ.66.67 ಅಂಕ ಪ್ರತಿಶತದೊಂದಿಗೆ 2ನೇ ಸ್ಥಾನಕ್ಕೆ ಕುಸಿದಿದೆ. ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್‌ ಗೆದ್ದಿದ್ದ ಪಾಕಿಸ್ತಾನ ಮೊದಲ ಸ್ಥಾನಕ್ಕೇರಿದ್ದು, ಲಂಕಾ ವಿರುದ್ಧ 2ನೇ ಪಂದ್ಯವನ್ನೂ ಗೆದ್ದರೆ ಪಾಕಿಸ್ತಾನ ಮೊದಲ ಸ್ಥಾನದಲ್ಲೇ ಮುಂದುವರಿಯಲಿದೆ.

ಬ್ಯಾಟ್‌ನಿಂದ ವಿಕೆಟ್‌ ಚೆಲ್ಲಾಪಿಲ್ಲಿ ಮಾಡಿದ ಹರ್ಮನ್‌ಪ್ರೀತ್ ಕೌರ್‌ಗೆ ಐಸಿಸಿಯಿಂದ ಬ್ಯಾನ್ ಶಿಕ್ಷೆ..!

ವಿಂಡೀಸ್‌ ವಿರುದ್ಧ ಸತತ 9ನೇ ಸರಣಿ ಗೆದ್ದ ಭಾರತ!

ಮೊದಲ ಟೆಸ್ಟ್‌ನಲ್ಲಿ ಇನ್ನಿಂಗ್ಸ್‌ ಜಯ ಸಾಧಿಸಿದ್ದ ಭಾರತ, 2 ಪಂದ್ಯಗಳ ಸರಣಿಯನ್ನು 1-0ಯಲ್ಲಿ ತನ್ನದಾಗಿಸಿಕೊಂಡಿತು. ಇದು ವಿಂಡೀಸ್‌ ವಿರುದ್ಧ ಭಾರತಕ್ಕೆ ಸತತ 9ನೇ ಸರಣಿ ಗೆಲುವು. ಭಾರತ ವಿರುದ್ಧ ವಿಂಡೀಸ್‌ ಕೊನೆಯ ಬಾರಿಗೆ ಟೆಸ್ಟ್ ಗೆದ್ದಿದ್ದು 2002ರಲ್ಲಿ.

ವಿಂಡೀಸ್‌ ವಿರುದ್ಧ ಸತತ 25 ಟೆಸ್ಟ್‌ಗಳಲ್ಲಿ ಭಾರತ ಅಜೇಯ!

ವಿಂಡೀಸ್‌ ವಿರುದ್ಧ ಭಾರತ ಸತತ 25 ಟೆಸ್ಟ್‌ಗಳಲ್ಲಿ ಅಜೇಯವಾಗಿ ಉಳಿದಿದೆ. ಅತಿಹೆಚ್ಚು ಪಂದ್ಯಗಳಲ್ಲಿ ಅಜೇಯವಾಗಿ ಉಳಿದ ತಂಡಗಳ ಪಟ್ಟಿಯಲ್ಲಿ ಆಸೀಸ್‌, ವಿಂಡೀಸನ್ನು ಭಾರತ ಹಿಂದಿಕ್ಕಿದೆ. ದ.ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ(1911-52), ಭಾರತ ವಿರುದ್ಧ ವಿಂಡೀಸ್‌(1948-71) ಸತತ 24 ಪಂದ್ಯಗಳಲ್ಲಿ ಅಜೇಯವಾಗಿದ್ದವು. ನ್ಯೂಜಿಲೆಂಡ್‌ ವಿರುದ್ಧ ಇಂಗ್ಲೆಂಡ್‌(1930-75) ಸತತ 47 ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿದ್ದು ವಿಶ್ವ ದಾಖಲೆ ಎನಿಸಿದೆ.

ಪಾಕ್‌ ಅಂಡರ್ 23 ಏಷ್ಯಾಕಪ್ ಗೆದ್ದ ಬೆನ್ನಲ್ಲೇ ಪಠಾಣ್ ಟ್ರೋಲ್‌; ಇರ್ಫಾನ್ ಒಂದೇ ಟ್ವೀಟ್‌ಗೆ ಟ್ರೋಲರ್ಸ್‌ ಸೈಲೆಂಟ್..!

ಮುಂದಿನ 4 ತಿಂಗಳು ಭಾರತಕ್ಕೆ ಟೆಸ್ಟ್‌ ಇಲ್ಲ!

ಭಾರತ ತಂಡ ಮತ್ತೆ ಟೆಸ್ಟ್‌ ಪಂದ್ಯವಾಡುವುದು ಈ ವರ್ಷಾಂತ್ಯದಲ್ಲಿ. ಏಕದಿನ ವಿಶ್ವಕಪ್‌ ಬಳಿಕ ಡಿಸೆಂಬರ್‌ನಲ್ಲಿ ದಕ್ಷಿಣ ಪ್ರವಾಸ ಕೈಗೊಳ್ಳಲಿರುವ ಭಾರತ, 2 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಲಿದೆ.

Latest Videos
Follow Us:
Download App:
  • android
  • ios