ಸೌರಾಷ್ಟ್ರ(ಮಾ.13): ರಣಜಿ ಟ್ರೋಫಿ ಫೈನಲ್ ಪಂದ್ಯವೇ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಸೌರಾಷ್ಟ್ರ ಹಾಗೂ ಬಂಗಾಳ ಪ್ರಶಸ್ತಿಗಾಗಿ ತೀವ್ರ ಪೈಪೋಟಿ ನಡೆಸಿತ್ತು. ಆದರೆ ಮೊದಲ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ಸೌರಾಷ್ಟ್ರ ತಂಡ ಚೊಚ್ಚಲ ಬಾರಿಗೆ ರಣಜಿ ಟ್ರೋಫಿ ಗೆದ್ದುಕೊಂಡಿತು. 

 

ಇದನ್ನೂ ಓದಿ: ರಣಜಿ ಫೈನಲ್‌: ಸೌರಾಷ್ಟ್ರಕ್ಕೆ ಅರ್ಪಿತ್‌ ಶತಕದಾಸರೆ

ಸೌರಾಷ್ಟ್ರ ಮೊದಲ ಇನಿಂಗ್ಸ್‌ನಲ್ಲಿ 425 ರನ್ ಸಿಡಿಸಿತ್ತು. ಅರ್ಪಿತ್ ವಸವದಾ ಸಿಡಿಸಿದ ಭರ್ಜರಿ ಶತಕ, ಚೇತೇಶ್ವರ್ ಪೂಜಾರಾ, ವಿಶ್ವರಾಜ್ ಜಡೇಜಾ ಹಾಗೂ ಅವಿ ಬರೋತ್ ಸಿಡಿಸಿದ ಅರ್ಧಶತಕ ನೆರವಿನಿಂದ ಸೌರಾಷ್ಟ್ರ ಬೃಹತ್ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ಬಂಗಾಳ ದಿಟ್ಟ ಹೋರಾಟ ನೀಡಿತು. ಆದರೆ 381 ರನ್ ಸಿಡಿಸಿ ಆಲೌಟ್ ಆಯಿತು. 

ಇದನ್ನೂ ಓದಿ: ರಣಜಿ ಟ್ರೋಫಿ ಫೈನಲ್‌: ಬಂಗಾಳ ಹೋರಾಟ; ಸೌರಾಷ್ಟ್ರ ಮೇಲುಗೈ!.

ಮೊದಲ ಇನಿಂಗ್ಸ್‌ನಲ್ಲಿ 44 ರನ್ ಮುನ್ನಡೆ ಪಡೆದ ಸೌರಾಷ್ಟ್ರ ಮಂದಹಾಸ ಬೀರಿತ್ತು. ಇನ್ನು ದ್ವಿತೀಯ ಇನಿಂಗ್ಸ್ ಆರಂಭಿಸಿದ ಸೌರಾಷ್ಟ್ರ ಎಚ್ಚರಿಕೆಯ ಹೆಜ್ಜೆ ಇಟ್ಟಿತು. ಪಂದ್ಯದ ಅಂತಿಮ ದಿನದಾಟದಲ್ಲಿ ಸೌರಾಷ್ಚ್ರ 4 ವಿಕೆಟ್ ನಷ್ಟಕ್ಕೆ 105 ರನ್ ಸಿಡಿಸಿತು. ಈ ಮೂಲಕ ಸೌರಾಷ್ಟ್ರ ಮೊದಲ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ಪಂದ್ಯ ಗೆದ್ದುಕೊಂಡಿತು.