ಐಪಿಎಲ್‌ನಲ್ಲಿ ಮಿಂಚಿದ್ದ ಈ ಮೂವರಿಗೆ ವಿಶ್ವಕಪ್‌ನಲ್ಲಿ ಸಿಗಲೇ ಇಲ್ಲ ಚಾನ್ಸ್..! ಒಂದೂ ಪಂದ್ಯವಾಡದೇ ಕಪ್ ಗೆದ್ದ ತ್ರಿಮೂರ್ತಿಗಳು
2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿದೆ. ಆದರೆ ಐಪಿಎಲ್‌ನಲ್ಲಿ ಮಿಂಚಿದ ಮೂವರು ಆಟಗಾರರಿಗೆ ಟೂರ್ನಿಯಲ್ಲಿ ಆಡಲು ಒಂದೇ ಒಂದು ಅವಕಾಶ ಸಿಗಲಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ
ಬೆಂಗಳೂರು: ಟೀಂ ಇಂಡಿಯಾದ ಈ ಇಬ್ಬರು ಆಟಗಾರರು, ಐಪಿಎಲ್‌ನಲ್ಲಿ ಜಬರ್ದಸ್ತ್ ಆಟವಾಡಿದ್ರು. ತಮ್ಮ ತಂಡದ ಗೆಲುವಿನಲ್ಲಿ ಮಿಂಚಿದ್ರು. ಆದ್ರೀಗ, ಟಿ20 ವಿಶ್ವಕಪ್ನಲ್ಲಿ ಮಾತ್ರ ಅವಕಾಶಕ್ಕಾಗಿ ಕಾದು ಕಾದು ಸುಸ್ತಾದ್ರು. ಯಾರು ಆಟಗಾರರು..? ಅವ್ರಿಗೆ ಯಾಕೆ ಚಾನ್ಸ್ ಸಿಗಲಿಲ್ಲ ಅಂತೀರಾ..? ಇಲ್ಲಿದೆ ನೋಡಿ ಡಿಟೇಲ್ಸ್..!
ಒಂದೇ ಒಂದು ಪಂದ್ಯವಾಡದೇ ವಿಶ್ವಕಪ್ ಎತ್ತಿಹಿಡಿದ್ರು..!
ಟಿ20 ವಿಶ್ವಕಪ್ ಸಮರದಲ್ಲಿ ಟೀಂ ಇಂಡಿಯಾದ ಕೆಲ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ರು. ಐಪಿಎಲ್‌ನಲ್ಲಿ ಫ್ಲಾಪ್ ಶೋ ನೀಡಿದ್ದವರು, ದೇಶದ ಪರ ಅಬ್ಬರಿಸಿದ್ರು. ಆದ್ರೆ, ಐಪಿಎಲ್‌ನಲ್ಲಿ ಮಿಂಚಿದ್ದ ಕೆಲ ಆಟಗಾರರಿಗೆ ಫೀಲ್ಡಿಗಿಳಿಯೋ ಚಾನ್ಸ್ ಸಿಗಲೇ ಇಲ್ಲ. ಟೂರ್ನಿಯುದ್ಧಕ್ಕೂ ಬೆಂಚ್‌ಗೆ ಸೀಮಿತರಾದ್ರು.
ಟೀಂ ಇಂಡಿಯಾ ಆಟಗಾರರ ಜತೆ ಕುಮಟಾ ಯುವಕನ ಫೋಟೋ ವೈರಲ್..! ಕನ್ನಡಿಗ ಭಾರತ ತಂಡ ಸೇರಿದ್ದು ಹೇಗೆ?
ಟೂರ್ನಿಯುದ್ಧಕ್ಕೂ ಬೆಂಚ್‌ಗೆ ಸೀಮಿತರಾದ ಯಶಸ್ವಿ, ಸಂಜು, ಚಹಲ್..!
ಯೆಸ್, ಟೀಮ್ ಇಂಡಿಯಾ ವಿಶ್ವಕಪ್ ಗೆದ್ದರೂ, ಯಂಗ್ ಬ್ಯಾಟರ್ ಯಶಸ್ವಿ ಜೈಸ್ವಾಲ್, ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಹಾಗೂ ಯುಜುವೇಂದ್ರ ಚಹಲ್ ಮಾತ್ರ ನಿರಾಸೆ ಅನುಭವಿಸಿದ್ರು. ಈ ವರ್ಷದ ಐಪಿಎಲ್‌ನಲ್ಲಿ ಈ ಮೂವರು ರಾಜಸ್ಥಾನ ರಾಯಲ್ಸ್ ಪರ ಮಿಂಚಿದ್ರು. ಇದೇ ಕಾರಣಕ್ಕೆ, ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದ್ರೆ, ಕೊನೆಯವರೆಗೂ ಈ ಮೂವರಿಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳಲಿಲ್ಲ.
ಯಶಸ್ವಿ ಜೈಸ್ವಾಲ್‌ಗೆ ರನ್‌ಮಷಿನ್ ಕೊಹ್ಲಿಯೇ ಅಡ್ಡಗಾಲು..!
ಐಪಿಎಲ್‌ನಲ್ಲಿ ಮುಂಬೈಕರ್ ಯಶಸ್ವಿ ಜೈಸ್ವಾಲ್, ಅದ್ಭುತ ಪ್ರದರ್ಶನ ನೀಡಿದ್ರು. ಡು ಆರ್ ಡೈ ಮ್ಯಾಚ್ಗಳಲ್ಲಿ ಅಬ್ಬರಿಸಿದ್ರು. ಲೀಗ್ನಲ್ಲಿ ಆಡಿದ 16 ಪಂದ್ಯಗಳಿಂದ 155.91ರ ಸ್ಟ್ರೈಕ್ರೇಟ್ನಲ್ಲಿ 1 ಶತಕ ಮತ್ತು 1 ಅರ್ಧಶತಕದ ನೆರವಿನಿಂದ 435 ರನ್‌ಗಳಿಸಿದ್ರು. ಅಲ್ಲದೇ, ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಮಿಂಚಿದ್ರು. ಕಳೆದೊಂದು ವರ್ಷದಲ್ಲಿ 17 ಪಂದ್ಯಗಳಿಂದ 161.93ರ ಸ್ಟ್ರೈಕ್ರೇಟ್ನಲ್ಲಿ 502 ರನ್ ಸಿಡಿಸಿದ್ದಾರೆ.
ಟೀಂ ಇಂಡಿಯಾಕ್ಕೆ ಶೀಘ್ರವೇ ಹೊಸ ಕೋಚ್, ಟಿ20 ನಾಯಕ ನೇಮಕ: ಜಯ್ ಶಾ
ಸೂಪರ್ ಫಾರ್ಮ್ನಲ್ಲಿದ್ದ ಜೈಸ್ವಾಲ್‌ಗೆ ಟಿ20 ವಿಶ್ವಕಪ್ನಲ್ಲಿ ಬ್ಯಾಟ್ ಬೀಸೋ ಅದೃಷ್ಟ ಸಿಗಲಿಲ್ಲ. ಯಶಸ್ವಿ ಆಡುತ್ತಿದ್ದ ಆರಂಭಿಕ ಆಟಗಾರನ ಸ್ಥಾನದಲ್ಲಿ ಕೊಹ್ಲಿ ಆಡಿದ್ರು. ಇದ್ರಿಂದ ಜೈಸ್ವಾಲ್‌ಗೆ ಬೆಂಚ್ ಕಾಯದೇ ಬೇರೆ ದಾರಿ ಇರಲಿಲ್ಲ.
ಶಿವಂ ದುಬೆಯಿಂದ ಸಂಜು ಸ್ಯಾಮ್ಸನ್‌ಗೆ ಸಿಗಲಿಲ್ಲ ಅವಕಾಶ..!
ಯಶಸ್ವಿ ಜೈಸ್ವಾಲ್‌ರಂತೆ ಸಂಜು ಸ್ಯಾಮ್ಸನ್ ಕೂಡ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿ ಮಿಂಚಿದ್ರು. 16 ಪಂದ್ಯಗಳಿಂದ 153.46ರ ಸ್ಟ್ರೈಕ್ರೇಟ್ನಲ್ಲಿ 5 ಅರ್ಧಶತಕಗಳೊಂದಿಗೆ 531 ರನ್ ದಾಖಲಿಸಿದ್ರು. ಟೂರ್ನಿಯಲ್ಲಿ ಅತಿಹೆಚ್ಚು ರನ್ ಗಳಿಸಿದ 5ನೇ ಬ್ಯಾಟರ್ ಆಗಿದ್ರು. ಇದೇ ಕಾರಣಕ್ಕೆ, ಕೆ. ಎಲ್ ರಾಹುಲ್ ಬದಲಾಗಿ ಸಂಜುಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಲಾಯ್ತು. ಆದ್ರೆ, ರಿಷಭ್ ಪಂತ್ ವಿಕೆಟ್ ಕೀಪರ್ ಆಗಿ ಕಣಕ್ಕಿಳಿದ್ರು. ಮಿಡಲ್ ಆರ್ಡರ್ನಲ್ಲಿ ಶಿವಂ ದುಬೆ ಫಿಕ್ಸ್ ಆಗಿದ್ರು. ಇದ್ರಿಂದ ಸಂಜುಗೆ ಚಾನ್ಸ್ ಇಲ್ಲದಂತಾಯ್ತು.
ಚಹಲ್‌ಗೂ ಇಲ್ಲ ಛಾನ್ಸ್..!
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಪರ ಗರಿಷ್ಠ ಪಡೆದ ಬೌಲರ್ ಎನಿಸಿಕೊಂಡಿರುವ ಯುಜುವೇಂದ್ರ ಚಹಲ್‌ಗೂ ಕೂಡಾ ಒಂದೇ ಒಂದು ಟಿ20 ವಿಶ್ವಕಪ್ ಪಂದ್ಯ ಆಡಲು ಅವಕಾಶ ಸಿಗಲಿಲ್ಲ. ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ ಹೊರತಾಗಿಯೂ, ತಂಡದಲ್ಲಿ ಜಡೇಜಾ, ಅಕ್ಷರ್ ಹಾಗೂ ಕುಲ್ದೀಪ್ ಸ್ಪಿನ್ನರ್ ರೂಪದಲ್ಲಿ ಸ್ಥಾನ ಪಡೆದಿದ್ದರಿಂದ ಚಹಲ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗಲಿಲ್ಲ.
ಒಟ್ಟಿನಲ್ಲಿ ಈ ಮೂವರು ಆಟಗಾರರು ತಮ್ಮ ಸಾಮರ್ಥ್ಯ ಪ್ರೂವ್ ಮಾಡಲು ಕಾದು ಕಾದು ಸುಸ್ತಾದ್ರು. ಆದ್ರೆ, ಒಂದೂ ಮ್ಯಾಚ್ ಆಡದೇ, ವಿಶ್ವಕಪ್ ಎತ್ತಿಹಿಡಿದ್ರು.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್