ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವು ಕ್ರಿಕೆಟ್ ದಿಗ್ಗಜರು ಟ್ವಿಟರ್ ಮೂಲಕ ಶುಭ ಕೋರಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಬೆಂಗಳೂರು(ಆ.15) ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಯುಗಾಂತ್ಯವಾಗಿದೆ. ಐಪಿಎಲ್ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ದಿಢೀರ್ ಆಗಿ ಗುಡ್‌ಬೈ ಆಗಿದ್ದಾರೆ.
ಭಾರತ ಪರ 350 ಏಕದಿನ ಪಂದ್ಯಗಳನ್ನಾಡಿ 50.57ರ ಸರಾಸರಿಯಲ್ಲಿ 10773 ರನ್ ಬಾರಿಸಿದ್ದಾರೆ. ಇದರಲ್ಲಿ 10 ಶತಕ, 73 ಅರ್ಧಶತಕಗಳು ಸೇರಿವೆ. ಇನ್ನು 98 ಟಿ20 ಪಂದ್ಯಗಳನ್ನಾಡಿ 37.60ರ ಸರಾಸರಿಯಲ್ಲಿ 1617 ರನ್ ಗಳಿಸಿದ್ದಾರೆ. 2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಧೋನಿ, ಒಟ್ಟಾರೆ 538 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಈ ಪೈಕಿ 332 ಬಾರಿ ಟೀಂ ಇಂಡಿಯಾವನ್ನು ನಾಯಕನಾಗಿ ಮುನ್ನಡೆಸಿದ್ದಾರೆ. ಮೂರು ಮಾದರಿಯ ಕ್ರಿಕೆಟ್‌ನಿಂದ 17 ಸಾವಿರಕ್ಕೂ ಅಧಿಕ ರನ್ ಬಾರಿಸಿದ್ದಾರೆ.
ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಭವಿಷ್ಯದ ಜೀವನಕ್ಕೆ ಶುಭ ಹಾರೈಕೆಗಳು ಹರಿದು ಬಂದಿವೆ. ಅದರಲ್ಲೂ ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡುಲ್ಕರ್ ಧೋನಿ ನಿವೃತ್ತಿಗೆ ಭಾರತೀಯ ಕ್ರಿಕೆಟ್‌ಗೆ ನಿಮ್ಮ ಕೊಡುಗೆ ಅಪಾರ. ನಿಮ್ಮ ನಾಯಕತ್ವದಲ್ಲಿ ಜತೆಯಾಗಿ 2011ರ ಏಕದಿನ ವಿಶ್ವಕಪ್ ಗೆದ್ದಿದ್ದು ನನ್ನ ಜೀವನದ ಅವಿಸ್ಮರಣೀಯ ಕ್ಷಣಗಳಲ್ಲಿ ಒಂದು. ನಿಮ್ಮ ಎರಡನೇ ಇನಿಂಗ್ಸ್ ಕೂಡಾ ಉತ್ತಮವಾಗಿರಲಿ ಎಂದು ಶುಭ ಹಾರೈಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಎಂ.ಎಸ್.ಧೋನಿ!
ಇಂತಹ ಮತ್ತೊಬ್ಬ ಆಟಗಾರ ಸಿಗುವುದು ಅಸಾಧ್ಯ. ಇಂತಹ ಮತ್ತೊಬ್ಬ ಈಗ ಇಲ್ಲ, ಹಿಂದೆಯೂ ಇರಲಿಲ್ಲ, ಮುಂದೆಯೂ ಇರಲಾರ. ಎಷ್ಟೋ ಆಟಗಾರರು ಬರುತ್ತಾರೆ, ಹೋಗುತ್ತಾರೆ. ಆದರೆ ಅವರಂತಹ ತಾಳ್ಮೆಯ ಮತ್ತೊಬ್ಬ ಆಟಗಾರನಿಲ್ಲ. ಅಸಂಖ್ಯಾತ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಧೋನಿ ಮನೆಯ ಮತ್ತೊಬ್ಬ ಸದಸ್ಯನಂತಿದ್ದರು. ಆ ಮಟ್ಟಿಗೆ ಧೋನಿ ಹತ್ತಿರವಾಗಿದ್ದರು ಎಂದು ವಿರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
