ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿ ದಿಢೀರ್ ವಿದಾಯ ಘೋಷಿಸಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ಚೆನ್ನೈ(ಆ.15): ದೇಶವೇ 74ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿದೆ. ಕ್ರಿಕೆಟ್ ಅಭಿಮಾನಿಗಳು ಐಪಿಎಲ್ ಟೂರ್ನಿ ಆರಂಭಕ್ಕೆ ಕಾಯುತ್ತಿದ್ದಾರೆ. ಅದರಲ್ಲೂ ಸಿಎಸ್‌ಕೆ ನಾಯಕ ಎಂ,ಎಸ್.ಧೋನಿ ಬ್ಯಾಟಿಂಗ್ ನೋಡಲು ಕಾತರರಾಗಿದ್ದಾರೆ. ಇದರ ನಡುವೆ ಧೋನಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಎಂ.ಎಸ್. ಧೋನಿ ದಿಢೀರ್ ವಿದಾಯ ಘೋಷಿಸಿದ್ದಾರೆ.
2020ರ ಐಪಿಎಲ್ ಟೂರ್ನಿ ಪ್ರದರ್ಶನ ಗಮನದಲ್ಲಿಟ್ಟುಕೊಂಡು 2020ರ ಟಿ20 ವಿಶ್ವಕಪ್ ಟೂರ್ನಿ ಆಯ್ಕೆಗೆ ಧೋನಿ ಪರಿಗಣಿಸಲಾಗುವುದು ಎಂದು ಆಯ್ಕೆ ಸಮಿತಿ ಹೇಳಿತ್ತು. ಆದರೆ ಕೊರೋನಾ ವೈರಸ್ ಕಾರಣ ಐಪಿಎಲ್ ಟೂರ್ನಿ ಮುಂದೂಡಲ್ಪಟ್ಟಿತ್ತು. ಇತ್ತ ಟಿ20 ವಿಶ್ವಕಪ್ ಟೂರ್ನಿ ರದ್ದಾಯಿತು. ಹೀಗಾಗಿ ಧೋನಿ ಕಮ್‌ಬ್ಯಾಕ್ ಮತ್ತಷ್ಟು ಕಠಿಣವಾಯಿತು. ಇಷ್ಟಾದರೂ ಅಭಿಮಾನಿಗಳು ಮಾತ್ರ ಧೋನಿ ಟೀಂ ಇಂಡಿಯಾ ಮರಳುವುದನ್ನು ಕಾಯುತ್ತಿದ್ದರು. ಆದರೆ ಐಪಿಎಲ್ ಟೂರ್ನಿಗಾಗಿ ಅಭ್ಯಾಸ ಆರಂಭಿಸಿದ ಧೋನಿ ಇನ್ಸ್‌ಸ್ಟಾಗ್ರಾಂ ಮೂಲಕ ವಿದಾಯ ಹೇಳಿದ್ದಾರೆ.
ಧೋನಿ ನಾಯಕತ್ವಕ್ಕೆ ಸರಿಸಾಟಿ ಇಲ್ಲ, ಟೀಂ ಇಂಡಿಯಾಗೆ ಹೊಸ ಭಾಷ್ಯ ಬರೆದ ನಾಯಕ
2014ರಲ್ಲಿ ಟೆಸ್ಟ್ ಮಾದರಿಗೆ ವಿದಾಯ ಹೇಳಿರುವ ಧೋನಿ ನಿಗದಿತ ಓವರ್ ಕ್ರಿಕೆಟ್‌ನಲ್ಲಿ ಮುಂದುವರಿದಿದ್ದರು. ಆದರೆ 2019ರ ವಿಶ್ವಕಪ್ ಟೂರ್ನಿ ಬಳಿಕ ಧೋನಿ, ಟೀಂ ಇಂಡಿಯಾದಿಂದ ದೂರ ಉಳಿದಿದ್ದರು. ಇದೀಗ ವಿದಾಯ ಹೇಳುತ್ತಿರುವುದಾಗಿ ಧೋನಿ ತಮ್ಮ ಪೋಸ್ಟ್ ಮೂಲಕ ಹೇಳಿದ್ದಾರೆ.
