ಇಂಥ ಕ್ಯಾಚ್ ಹಿಡಿಯೋಕೆ ಕ್ರಿಕೆಟ್ ಜೊತೆ ಫುಟ್‌ಬಾಲ್ ಕೂಡ ಗೊತ್ತಿರ್ಬೇಕು ಎಂದು ಸಚಿನ್ ಹೇಳಿದ್ದೇಕೆ?
ಬೆಳಗಾವಿಯ ಲೋಕಲ್ ಕ್ರಿಕೆಟ್ ಟೂರ್ನಿಯಲ್ಲಿ ಫೀಲ್ಡರ್ ಒಬ್ಬ ಹಿಡಿದ ಕ್ಯಾಚ್‌ಗೆ ಸ್ವತಃ ಸಚಿನ್ ತೆಂಡುಲ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂಥ ಕ್ಯಾಚ್‌ಗಳನ್ನು ಆಟಗಾರನೊಬ್ಬ ಕ್ರಿಕೆಟ್ ಜೊತೆಗೆ ಫುಟ್‌ಬಾಲ್ ಆಟದಲ್ಲೂ ಪ್ರಚಂಡನಾಗಿದ್ದರೆ ಮಾತ್ರವೇ ಸಾಧ್ಯ ಎಂದು ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಬೆಂಗಳೂರು (ಫೆ.12): ಬೆಳಗಾವಿಯ ಲೋಕಲ್ ಕ್ರಿಕೆಟ್ ಟೂರ್ನಿಯಲ್ಲಿ ಆಟಗಾರನೊಬ್ಬನ ಅತ್ಯಾಕರ್ಷಕ ಫೀಲ್ಡಿಂಗ್ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದೆ. ಟೂರ್ನಮೆಂಟ್‌ನ ಸೆಮಿಫೈನಲ್ ಪಂದ್ಯದಲ್ಲಿ ಆಟಗಾರನೊಬ್ಬ ಬೌಂಡರಿಗೆ ಹೋದಂಥ ಎಸೆತವನ್ನು ಬೌಂಡರಿ ಲೈನ್‌ನಿಂದ ಆಚೆ ಫುಟ್‌ಬಾಲ್ ಶೈಲಿಯಲ್ಲಿ ಕಿಕ್ ಮಾಡುವ ಮೂಲಕ ತಡೆದ ದೃಶ್ಯ ಇದಾಗಿದೆ. ಸಚಿನ್ ತೆಂಡುಲ್ಕರ್ ಈ ವಿಡಿಯೋವನ್ನು ರೀಟ್ವೀಟ್ ಮಾಡಿದ್ದಾರೆ. ರೀಟ್ವೀಟ್ ಮಾಡುವ ವೇಳೆ, 'ಕ್ರಿಕೆಟ್‌ನೊಂದಿಗೆ ಆಟಗಾರನೊಬ್ಬ ಫುಟ್‌ಬಾಲ್ ಆಟವಾಡುವುದು ಹೇಗೆ ಎಂದು ತಿಳಿದುಕೊಂಡಿದ್ದರೆ ಮಾತ್ರವೇ ಇಂಥ ದೃಶ್ಯ ಕಾಣಲು ಸಾಧ್ಯ' ಎಂದು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಬೌಲರ್ ಎಸೆದ ಚೆಂಡನ್ನು ಬ್ಯಾಟ್ಸ್‌ಮನ್ ಸಿಕ್ಸರ್ ಬಾರಿಸಲು ಯತ್ನಿಸುತ್ತಾನೆ. ದೊಡ್ಡ ಹೊಡೆತ ಬಾರಿಸಲು ಯಶಸ್ವಿಯಾದ ಬಳಿಕ, ಬೌಂಡರಿ ಲೈನ್‌ನಲ್ಲಿದ್ದ ಫೀಲ್ಡರ್ ಈ ಚೆಂಡನ್ನು ತಡೆಯಲು ಯತ್ನಿಸುತ್ತಾನೆ. ಆದರೆ, ಚೆಂಡನ್ನು ಹಿಡಿದ ಬಳಿಕ ಬ್ಯಾಲೆನ್ಸ್ ಮಾಡಲು ಸಾಧ್ಯವಾಗೋದಿಲ್ಲ. ಬೌಂಡರಿ ಲೈನ್‌ನಿಂದ ಹೊರಹೋಗಲು ಆರಂಭಿಸುತ್ತಾನೆ. ಈ ನಡುವೆ ಆತ ಚೆಂಡನ್ನು ಗಾಳಿಯಲ್ಲಿ ಮತ್ತೆ ಹಾಕುತ್ತಾನೆ. ಚೆಂಡು ಕೆಳಗೆ ಬರಲು ಆರಂಭವಾದಾಗ, ಬೌಂಡರಿ ಲೈನ್‌ನ ಹೊರಗಡೆ ಇದ್ದ ಫೀಲ್ಡರ್ ಹಾರಿ, ಚೆಂಡನ್ನು ಬೌಂಡರಿ ಲೈನ್ ಒಳಗೆ ಕಿಕ್ ಮಾಡುತ್ತಾನೆ. ಬಳಿಕ ಆತ ಬೌಂಡರಿ ಲೈನ್‌ನ ಒಳಗಡೆ ಬಂದರೆ, ಇನ್ನೊಬ್ಬ ಆಟಗಾರ ಕ್ಯಾಚ್ ಪಡೆದುಕೊಳ್ಳುತ್ತಾನೆ. ಇವಿಷ್ಟು ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.
ಈ ವಿಡಿಯೋವನ್ನು ಸಚಿನ್ ತೆಂಡುಲ್ಕರ್ ರೀ ಶೇರ್ ಮಾಡಿಕೊಂಡಿದ್ದಾರೆ. ಸಚಿನ್ ಶೇರ್ ಮಾಡಿದ ಈ ವಿಡಿಯೋಗೆ ಟ್ವಿಟರ್‌ನಲ್ಲಿ 1.3 ಮಿಲಿಯನ್ ವೀವ್ಸ್ ಸಿಕ್ಕಿದೆ. 3340 ಮಂದಿ ರೀಟ್ವೀಟ್ ಮಾಡಿದ್ದು, 73 ಮಂದಿ ಕೋಟ್ ಟ್ವೀಟ್ ಮಾಡಿದ್ದಾರೆ. ಅಂದಾಜು 50 ಸಾವಿರ ಮಂದಿ ಈ ವಿಡಿಯೋವನ್ನು ಲೈಕ್ ಕೂಡ ಮಾಡಿದ್ದಾರೆ. ಮೂಲ ವಿಡಿಯೋವನ್ನು ಓಂಕಾರ್ ಮನ್ಕಮೇ ಎನ್ನುವ ವ್ಯಕ್ತಿ ಪೋಸ್ಟ್ ಮಾಡಿದ್ದಾರೆ.
ಶುಭ್‌ಮನ್ ಗಿಲ್ ದ್ವಿಶತಕಕ್ಕೆ ಟ್ರೆಂಡ್ ಆದ್ರು ಸಚಿನ್ ಪುತ್ರಿ ಸಾರಾ ತೆಂಡುಲ್ಕರ್!
'ಬೌಂಡರಿ ಕ್ಯಾಚ್ ಪಡೆದುಕೊಳ್ಳೋದು ಇನ್ನೊಂದು ಸ್ತರಕ್ಕೇರಿದೆ' ಎಂದು ಅವರು ಬರೆದಿದ್ದಾರೆ. ವಾಟ್ಸ್‌ಆಪ್‌ನಲ್ಲಿ ಮೂಲಕ ಸಿಕ್ಕ ವಿಡಿಯೋ ಎಂದೂ ಬರೆದಿದ್ದಾರೆ. ಇನ್ನು ಸಚಿನ್ ತೆಂಡುಲ್ಕರ್ ಅವರ ಪೋಸ್ಟ್‌ನಲ್ಲಿ ರೀಟ್ವೀಟ್ ಮಾಡಿದಕ್ಕೂ ಪ್ರತಿಕ್ರಿಯೆ ನೀಡಿದ್ದು, ನನ್ನ ಟ್ವಿಟರ್ ಜೀವನ ಸಾರ್ಥಕವಾಗಿದೆ ಎಂದು ಬರೆದುಕೊಂಡಿದ್ದಾರೆ.
ವಾಸೀಂ ಅಕ್ರಂರಿಂದ ಕಾಪಾಡಿ ಎಂದು ಸಚಿನ್‌ಗೆ ಕೈಮುಗಿದಿದ್ದ ವಿರೇಂದ್ರ ಸೆಹ್ವಾಗ್..! ಯಾಕೆ?
ಜನವರಿ 2023 ರಲ್ಲಿ ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್‌ನಲ್ಲಿ, ಫೀಲ್ಡರ್ ಒಬ್ಬ ಮೂರು ಪ್ರಯತ್ನದಲ್ಲಿ ಕ್ಯಾಚ್‌ಅನ್ನು ಹಿಡಿದಿದ್ದ. ಫೀಲ್ಡರ್ ಬೌಂಡರಿ ಒಳಗೆ ಮೊದಲು ಚೆಂಡನ್ನು ಹಿಡಿದಿದ್ದ, ಆದರೆ, ಬ್ಯಾಲೆನ್ಸ್ ಸಾಲದೆ ಬೌಂಡರಿ ಲೈನ್‌ನ ಆಚೆ ಹೋಗುವ ವೇಳೆ ಗಾಳಿಯಲ್ಲಿ ಮತ್ತೊಮ್ಮೆ ಇದನ್ನು ಹಾರಿಸಿದ್ದ. ಫೀಲ್ಡರ್ ನೇಸರ್ ಬೌಂಡರಿ ಲೈನ್‌ನ ಹೊರಗೆ 2-3 ಮೀಟರ್‌ಗಳ ದೂರ ಹೋಗಿದ್ದರೆಂದು ಕಾಣುತ್ತದೆ. ಮತ್ತೊಮ್ಮೆ ಗಾಳಿಯಲ್ಲಿ ಹಾರಿ ಚೆಂಡನ್ನು ಮರಳಿ ಬೌಂಡರಿ ಲೈನ್‌ನ ಒಳಗೆ ಹಾಕಿದ್ದರು. ಬಳಿಕ ತಾವೂ ಬೌಂಡರಿ ಲೈನ್‌ನ ಒಳಗೆ ಬಂದು ಕ್ಯಾಚ್ ಹಿಡಿಯುವ ಮೂಲಕ ಬ್ಯಾಟ್ಸ್‌ಮನ್‌ಅನ್ನು ಔಟ್ ಮಾಡಿದ್ದರು. ಈ ಕ್ಯಾಚ್‌ನ ಬಗ್ಗೆ ಕ್ರಿಕೆಟ್ ಪಂಡಿತರು ಕೂಡ ಸಾಕಷ್ಟು ಚರ್ಚೆ ಮಾಡಿದ್ದರು.