Asianet Suvarna News Asianet Suvarna News

ಆಗಸ್ಟ್‌ಗೆ ಮುಗಿಯಲಿದೆ ನಿಷೇಧ; ಕ್ರಿಕೆಟ್‌ಗೆ ಮರಳಲು ಶ್ರೀಶಾಂತ್ ಅಭ್ಯಾಸ ಶುರು!

ಟೀಂ ಇಂಡಿಯಾ ವೇಗಿ ಎಸ್ ಶ್ರೀಶಾಂತ್ ಮತ್ತೆ ಅಭ್ಯಾಸ ಆರಂಭಿಸಿದ್ದಾರೆ. ಖ್ಯಾತ ಎನ್‌ಬಿಎ ಪಟು ಮೈಕಲ್ ಜೋರ್ಡನ್  ಮಾಜಿ ತರಬೇತಿದಾರರ ಬಳಿ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಆಗಸ್ಟ್ ತಿಂಗಳಿಗೆ ಶ್ರೀಶಾಂತ್ ನಿಷೇಧ ಶಿಕ್ಷೆ ಅಂತ್ಯವಾಗಲಿದೆ. ಕೇರಳ ರಣಜಿ ತಂಡಕ್ಕೆ ಆಡಲು ಶ್ರೀಶಾಂತ್ ಸಜ್ಜಾಗಿದ್ದಾರೆ.

S Sreesanth gearing up to come back cricket after ban
Author
Bengaluru, First Published Jun 21, 2020, 8:18 PM IST

ಕೇರಳ(ಜೂ.21):  ಸ್ಫಾಟ್ ಫಿಕ್ಸಿಂಗ್ ಆರೋಪದಡಿ ಬಿಸಿಸಿಐನಿಂದ ಅಜೀವ ನಿಷೇದಕ್ಕೊಳಗಾದ್ದ ಟೀಂ ಇಂಡಿಯಾ ವೇಗಿ ಶ್ರೀಶಾಂತ್‌ ಶಿಕ್ಷೆಯನ್ನ ಬಳಿಕ 7 ವರ್ಷಕ್ಕೆ ಕಡಿತಗೊಳಿಸಲಾಗಿತ್ತು. ಇದೀಗ ಇದೇ ಆಗಸ್ಟ್ ತಿಂಗಳಿಗೆ ಶ್ರೀಶಾಂತ್ ಶಿಕ್ಷೆ ಅಂತ್ಯವಾಗಲಿದೆ. ಕಳೆದ 6 ತಿಂಗಳಿಂದ ಅಭ್ಯಾಸ ಆರಂಭಿಸಿದ್ದ ಶ್ರೀಶಾಂತ್ ಇದೀಗ ಮಾನಸಿಕವಾಗಿ ಸಿದ್ಧರಾಗುತ್ತಿದ್ದಾರೆ. ಇದಕ್ಕಾಗೆ ಖ್ಯಾತ ಎನ್‌ಬಿಎ ಪಟು ಮೈಕಲ್ ಜೋರ್ಡನ್ ಮಾಜಿ ತರಬೇತು ದಾರ ಟಿಮ್ ಗ್ರೋವರ್ ಮಾರ್ಗದರ್ಶನ ಪಡೆಯುತ್ತಿದ್ದಾರೆ.

ಶ್ರೀಶಾಂತ್‍‌ಗೆ ಬಿಗ್ ರಿಲೀಫ್; ನಿಷೇಧ ಕಡಿತಗೊಳಿಸಿದ BCCI!

ಶ್ರೀಶಾಂತ್ ವಾರಕ್ಕೆ ಮೂರು ಬಾರಿ ಬೆಳಗ್ಗೆ 5 ಗಂಟೆ ಯಿಂದ 8.30ರ ವರೆಗೆ ಟಿಮ್ ಗ್ರೋವರ್ ಆನ್‌ಲೈನ್ ಸೆಶೆನ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. NBA ಆಟಗಾರರ ಮೆಂಟಲ್ ಹಾಗೂ ಫಿಸಿಕಲ್ ಟ್ರೈನರ್ ಆಗಿರುವ ಟಿಮ್ ಗ್ರೋವರ್, ಟ್ರೈನಿಂಗ್ ಸೆಶನ್ ಉಪಯುಕ್ತವಾಗಿದೆ. ಬೆಳಗಿನ ಆನ್‌ಲೈನ್ ಸೆಶನ್ ಬಳಿಕ ಮಧ್ಯಾಹ್ನ 1.30 ರಿಂದ 6 ಗಂಟೆ ವರೆಗೆ ಇಂಡೋರ್ ಅಭ್ಯಾಸ ನಡೆಸುತ್ತಿದ್ದೇನೆ ಎಂದು ಶ್ರೀಶಾಂತ್ ಹೇಳಿದ್ದಾರೆ.

ಪೇಸ್ 42ರಲ್ಲಿ ಗ್ರ್ಯಾಂಡ್ ಸ್ಲಾಂ ಗೆಲ್ಲೋದಾದ್ರೆ ನಾನ್ಯಾಕೆ ಕ್ರಿಕೆಟ್ ಆಡಬಾರದು: ಶ್ರೀಶಾಂತ್!

ಎರ್ನಾಕುಲಂನಲ್ಲಿರುವ ಇಂಡೋರ್ ನೆಟ್ ಅಭ್ಯಾಸದಲ್ಲಿ ಕೇರಳದ ಅಂಡರ್ 23 ಆಟಗಾರರು, ಕೇರಳ ರಣಜಿ ತಂಡದ ಸಚಿನ್ ಬೇಬಿ ಸೇರಿದಂತೆ ಹಲವು ಕ್ರಿಕೆಟಿಗರ ಜೊತೆ ಅಭ್ಯಾಸ ಮಾಡುತ್ತಿದ್ದೇನೆ. ಮೊದಲು ಕೇರಳ ರಣಜಿ ತಂಡಕ್ಕೆ ಆಡಬೇಕಿದೆ. ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ. ಹೀಗಾದಲ್ಲಿ 2021ರ ಐಪಿಎಲ್ ಹರಾಜಿಗೆ ಹೆಸರು ನೀಡಲಿದ್ದೇನೆ ಎಂದು ಶ್ರೀಶಾಂತ್ ಹೇಳಿದ್ದಾರೆ.

ವಾರದ 6 ದಿನ ಬೌಲಿಂಗ್ ಅಭ್ಯಾಸ ಮಾಡುತ್ತಿದ್ದೇನೆ. ಪ್ರತಿ ದಿನ 3 ಗಂಟೆ ನೆಟ್ಸ್‌ನಲ್ಲಿ ಬೌಲಿಂಗ್ ಮಾಡುತ್ತಿದ್ದೇನೆ. ಆರಂಭಿಕ 2 ಗಂಟೆ ರೆಡ್ ಬಾಲ್ ಹಾಗೂ ಅಂತಿಮ 1 ಗಂಟೆ ವೈಟ್ ಬಾಲ್‌ನಲ್ಲಿ ಅಭ್ಯಾಸ ಮಾಡುತ್ತಿದ್ದೇನೆ. ಪ್ರತಿ ದಿನ ಸರಾಸರಿ 12 ಓವರ್ ಬೌಲಿಂಗ್ ಮಾಡುತ್ತಿದ್ದೇನೆ. ಈ ಮೂಲಕ ನನ್ನ ಸಾಮರ್ಥ್ಯ ಹೆಚ್ಚಿಸುತ್ತಿದ್ದೇನೆ ಎಂದು ಶ್ರೀಶಾಂತ್ ಹೇಳಿದ್ದಾರೆ. 

2013ರ ಐಪಿಎಲ್ ಟೂರ್ನಿಯಲ್ಲಿ ಸ್ಫಾಟ್ ಫಿಕ್ಸಿಂಗ್ ನಡೆಸಿದ್ದಾರೆ ಅನ್ನೋ ಆರೋಪದ ಮೇಲೆ ಶ್ರೀಶಾಂತ್‌ಗೆ ಬಿಸಿಸಿಐ ಅಜೀವ ನಿಷೇಧ ಶಿಕ್ಷೆ ನೀಡಿತ್ತು. ಆದರೆ ಕೋರ್ಟ್ ಶ್ರೀಶಾಂತ್ ಮೇಲಿನ ಆರೋಪ ತಳ್ಳಿ ಹಾಕಿತ್ತು. ಆದರೆ ಬಿಸಿಸಿಐ ನಿಷೇಧದ ಶಿಕ್ಷೆ ತೆರವು ಮಾಡಿರಲಿಲ್ಲ. ಶ್ರೀಶಾಂತ್ ಇದರ ವಿರುದ್ಧ ಕಾನೂನು ಹೋರಾಟ ಮುಂದುವರಿಸಿದ್ದರು. ಬಳಿಕ ಬಿಸಿಸಿಐ ಶಿಕ್ಷೆಯನ್ನು 7 ವರ್ಷಕ್ಕೆ ಕಡಿತಗೊಳಿಸಿತ್ತು. ಇದೀಗ 2020ರ ಆಗಸ್ಟ್ ತಿಂಗಳಿಗೆ ಶ್ರೀಶಾಂತ್ ಶಿಕ್ಷೆ ಅಂತ್ಯವಾಗಲಿದೆ. 

Follow Us:
Download App:
  • android
  • ios