* ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಜತೆ ಕೈಜೋಡಿಸಿದ ಹೊಂಬಾಳೆ ಫಿಲ್ಮ್ಸ್* ಹೊಂಬಾಳೆ ಫಿಲ್ಮ್ಸ್​ ಮತ್ತು ಆರ್​ಸಿಬಿ ಸಹಭಾಗಿತ್ವದಲ್ಲಿ ಒಪ್ಪಂದ* ಕ್ರೀಡೆ ಮತ್ತು ಮನರಂಜನೆಯ ಸಮ್ಮಿಲನಕ್ಕೆ 3 ವರ್ಷಗಳ ಕಾಲ ಸಹಿ

ಬೆಂಗಳೂರು(ಏ.11): ಹೊಂಬಾಳೆ ಫಿಲ್ಮ್ಸ್​​, ಸ್ಯಾಂಡಲ್​ವುಡ್​ ದೊಡ್ಡ ನಿರ್ಮಾಣ ಸಂಸ್ಥೆ. ಕೆಜಿಎಫ್​​​ ಅನ್ನೋ ಪ್ಯಾನ್​ ಇಂಡಿಯಾ ಸಿನಿಮಾ ಹುಟ್ಟಿದ್ದು ಇದೇ ಸಂಸ್ಥೆಯಿಂದ. ರಾಕಿಂಗ್​ ಸ್ಟಾರ್ ಯಶ್ ನಟನೆಯ ಕೆಜಿಎಫ್-1 ಸೂಪರ್​ ಡೂಪರ್​​ ಹಿಟ್ ಆದ ಬಳಿಕ ಕೆಜಿಎಫ್ ಚಾಪ್ಟರ್​-2 (KGF-2) ರಿಲೀಸ್​ಗೆ ಸಜ್ಜಾಗಿದೆ. ಏಪ್ರಿಲ್ 14ರಂದು ಮೋಸ್ಟ್​​ ಎಕ್ಸೈಟೆಡ್​​​​ ಮೂವಿ ತೆರೆಗೆ ಅಪ್ಪಳಿಸಲಿದೆ. ದೇಶಾದ್ಯಂತ ಈ ಸಿನಿಮಾ ಹವಾ ಎಬ್ಬಿಸಿರುವಾಗಲೇ ಹೊಂಬಾಳೆ ಫಿಲ್ಮ್ಸ್​​ ಮತ್ತೊಂದು ದೊಡ್ಡ ಸಾಹಸಕ್ಕೆ ಕೈ ಹಾಕಿದೆ.

ಇನ್ನುಂದೆ ಕ್ರಿಕೆಟ್​ ಪ್ರಿಯರಿಗೆ ಥ್ರಿಲ್ಲಿಂಗೋ ಥ್ರಿಲ್ಲಿಂಗ್​​:

ಏಪ್ರಿಲ್​ 10ರ ಬೆಳಿಗ್ಗೆ 11.15ಕ್ಕೆ ಸರಿಯಾಗಿ ಬಿಗ್​​ ಅನೌನ್ಸ್​​​​ ಮೆಂಟ್​ ಮಾಡುವುದಾಗಿ ಹೊಂಬಾಳೆ ಫಿಲ್ಮ್ಸ್ ಹೇಳಿಕೊಂಡಿತ್ತು. ಸಿನಿ ಪ್ರಿಯರು ಕೆಜಿಎಫ್​ ಚಾಪ್ಟರ್​​ -2 ಗೆ ಸಂಬಂಧಿಸಿದ್ದಂತೆ ಏನಾದರೂ ಮಾಹಿತಿ ಹೊರ ಬೀಳಬಹುದು ನಿರೀಕ್ಷಿಸಿದ್ರು. ಇನ್ನೊಂದೆಡೆ ಆರ್​ಸಿಬಿ ಕೂಡ ಇದೇ ಮಾದರಿ ಪೋಸ್ಟ್​ ಅನ್ನ ಟ್ವೀಟರ್​​​​ನಲ್ಲಿ ಹಂಚಿಕೊಂಡಿತ್ತು. ಹೊಂಬಾಳೆ ಫಿಲ್ಮ್ಸ್ ಮತ್ತು ಆರ್​ಸಿಬಿ (RCB), ಸೇಮ್ ಟೈಮ್​​ಗೆ ಬಿಗ್​ ಅನೌನ್ಸ್​​ಮೆಂಟ್​ ಮಾಡುವುದಾಗಿ ಹೇಳ್ತಿದ್ದಂತೆ ಕ್ರಿಕೆಟ್ ಪ್ರಿಯರು ಮತ್ತು ಸಿನಿ ಪ್ರಿಯರ ಹೃದಯ ಬಡಿತ ಹೆಚ್ಚಿಸಿತ್ತು. ಈಗ ಆ ಕುತೂಹಲಕ್ಕೆ ತೆರೆ ಬಿದ್ದಿದ್ದು, ಐಪಿಎಲ್​​ನ ಜನಪ್ರಿಯ ತಂಡಗಳಲ್ಲಿ ಒಂದಾದ ಆರ್​ಸಿಬಿ ಜೊತೆ ಹೊಂಬಾಳೆ ಫಿಲ್ಮ್ಸ್ ಕೈ ಜೋಡಿಸಿದೆ.

ಹೊಂಬಾಳೆ ಫಿಲ್ಮ್ಸ್ (Hombale Films)​ ಮತ್ತು ಆರ್​ಸಿಬಿ ಸಹಭಾಗಿತ್ವದಲ್ಲಿ ಕ್ರೀಡೆ ಮತ್ತು ಮನರಂಜನೆಯ ಸಮ್ಮಿಲನಕ್ಕೆ 3 ವರ್ಷಗಳ ಕಾಲ ಸಹಿ ಮಾಡಿವೆ. ಈ ಸಹಯೋಗವು ಭರಪೂರ ಮನರಂಜನೆ, ಗ್ಲಾಮರ್​​, ಸಿನಿಮಾ ಮತ್ತು ಕ್ರೀಡೆಗಳ ಅದ್ಭುತ ಸಂಗಮಕ್ಕೆ ಸಾಕ್ಷಿಯಾಗಲಿದೆ. ಇದರಿಂದ ಫ್ಯಾನ್ಸ್​ಗೆ ಭರಪೂರ ಮನರಂಜನೆ ದೊರೆಯಲಿದೆ. ವಿಡಿಯೋದಲ್ಲಿ ಕೆಜಿಎಫ್​​​​-2 ಕ್ಯಾರಕ್ಟ್​ಗಳಂತೆ ಆರ್​ಸಿಬಿ ಆಟಗಾರರನ್ನ ತೋರಿಸಲಾಗಿದೆ. ಅಧೀರನಂತೆ ಫಾಫ್​ ಡುಪ್ಲೆಸಿಸ್​​​, ರವಿನಾ ಟೆಂಡನ್ ರೀತಿಯಲ್ಲಿ ಮ್ಯಾಕ್ಸ್​ವೆಲ್​​ ನಡಿಗೆ, ಯಶ್​ರಂತೆ ಕಿಂಗ್ ಕೊಹ್ಲಿ ಖಡಕ್​ ಲುಕ್​​ನಲ್ಲಿ ಮಿಂಚಿದ್ದಾರೆ. ಇನ್ನು ಕೊನೆಯಲ್ಲಿ ಕ್ರಿಕೆಟರ್ಸ್​ ಬಾಯಿಂದ ಬರೋ ‘‘ಬಾರ್ನ್​ ಇನ್ ಬೆಂಗಳೂರು, ಟು ಥ್ರಿಲ್​ ದ ನೇಶನ್​’’ ಅನ್ನೋ ಮಾತು ಅಂತು ಕೇಳುಗರಿಗೆ ಸಖತ್ ಮಜವಾಗಿದೆ.

Scroll to load tweet…

ಆರ್​ಸಿಬಿ ಜೊತೆ ಹೊಂಬಾಳೆ ಫಿಲ್ಮ್ಸ್​​ ಕೈ ಜೋಡಿಸಿದ್ದೇಕೆ..?:

ಅಂದಹಾಗೇ ವೀಕ್ಷಕರೇ, ಬ್ಲಾಕ್​ ಬಸ್ಟರ್​ ಕೆಜಿಎಫ್​ ಮೂವಿಯನ್ನ ಸಿನಿ ಜಗತ್ತಿಗೆ ನೀಡಿರೋ ಹೊಂಬಾಳೆ ಫಿಲ್ಸ್ಸ್​ ಐಪಿಎಲ್​​​ನ ಆರ್​ಸಿಬಿ ಜೊತೆ ಕೈ ಜೋಡಿಸಿದ್ದರ ಹಿಂದೆ ಒಂದು ಬಲವಾದ ಕಾರಣವಿದೆ. ಅದೇನಂದ್ರೆ ಪ್ರೊಷೊಷನ್​​. ಹೌದು, ಈಗಾಗ್ಲೇ ಆರ್​ಸಿಬಿ ಒಂದು ಬ್ರ್ಯಾಂಡ್​ ಸೃಷ್ಟಿಸಿದೆ. ವಿಶ್ವದಾದ್ಯಂತ ಅಭಿಮಾನಿಗಳನ್ನ ಹೊಂದಿದೆ. ಇದರ ಲಾಭ ಪಡೆದು ಹೊಂಬಾಳೆ ಫಿಲ್ಸ್ಮ್ ತನ್ನ ಬ್ಯಾನರ್​​ ಅಡಿ ನಿರ್ಮಾಣ ಆಗುವ ಮೂವಿಗಳನ್ನ ಪ್ರೊಮೊಷನ್ ಮಾಡಲಿದೆ. ಚಿತ್ರದ ಟ್ರೇಲರ್​​​ಟೀಸರ್​ ಪ್ರಚಾರಕ್ಕೆ ಆರ್​ಸಿಬಿ ಸಹಕರಿಸಲಿದೆ. ಹೇಳಿ ಕೇಳಿ ಆರ್​ಸಿಬಿ ಕೂಡ ಬೆಂಗಳೂರಿನ ಪ್ರೊಡಕ್ಟ್​​​. ಇಲ್ಲೇ ಹುಟ್ಟಿದೆ. ಕೋಟ್ಯಾಂತರ ಕನ್ನಡಿಗರ ಪ್ರೀತಿ ಸಂಪಾದಿಸಿದೆ. ಇನ್ನು ಹೊಂಬಾಳೆ ಫಿಲ್ಮ್ಸ್​ ಕೂಡ ಬೆಂಗಳೂರಿನದ್ದು. ಕೆಜಿಎಫ್​ ಸಿನಿಮಾ ನಿರ್ಮಿಸಿ ದೇಶಾದ್ಯಂತ ಇನ್ನಿಲ್ಲದ ಹವಾ ಸೃಷ್ಟಿಸಿದೆ. ಈಗ ಎರಡು ದಿಗ್ಗಜ ಸಂಸ್ಥೆಗಳು ಕೊಲಾಬ್ರೇಟ್ ಆಗಿರೋದ್ರಿಂದ ಇದು ಮನರಂಜನೆಯ ಹೊಸ ಯುಗಕ್ಕೆ ನಾಂದಿ ಆಗೋದು ಪಕ್ಕಾ.

ಶೀಘ್ರದಲ್ಲೇ KGF ಗ್ಯಾಂಗ್​​​ V/S RCB ಗ್ಯಾಂಗ್ ಮುಖಾಮುಖಿ..?:

ಸದ್ಯದ ಮಾಹಿತಿ ಪ್ರಕಾರ ಶೀಘ್ರದಲ್ಲೇ KGF ಗ್ಯಾಂಗ್​​​ ಮತ್ತು RCB ಗ್ಯಾಂಗ್ ಮುಖಾಮುಖಿಯಾಗಲಿವೆ ಎನ್ನಲಾಗ್ತಿದೆ. ಏಪ್ರಿಲ್​ 12ರಂದು ಆರ್​ಸಿಬಿ ಮತ್ತು ಸಿಎಸ್​ಕೆ ಪಂದ್ಯವಿದೆ. ಈ ಪಂದ್ಯಕ್ಕೂ ಮುನ್ನ ನಟ ಯಶ್ ಸೇರಿದಂತೆ ಕೆಜಿಎಫ್​​ ತಂಡ ಆರ್​ಸಿಬಿ ಪ್ಲೇಯರ್ಸ್​ ಜೊತೆ ಇಂಟರ್​​​ವ್ಯೂವ್​​ ನಡೆಸ್ತಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ಇದು ನಿಜವಾದ್ರೆ ಅಭಿಮಾನಿಗಳಿಗೆ ಮನರಂಜನೆಯ ಫುಲ್​ ಮೀಲ್ಸ್​ ಗ್ಯಾರಂಟಿ.