ಮುಂಬೈ(ಏ.03): ಕೊರೋನಾ ವೈರಸ್‌ನಿಂದ ಟೀಂ ಇಂಡಿಯಾ ಕ್ರಿಕೆಟಿಗರು ತಮ್ಮ ತಮ್ಮ ಮನೆಗಳಲ್ಲಿ ಸೇರಿಕೊಂಡಿದ್ದಾರೆ. ಬಿಡುವಿಲ್ಲದ ಕ್ರಿಕೆಟ್ ಆಡುತ್ತಿದ್ದ ಟೀಂ ಇಂಡಿಯಾ ಕ್ರಿಕೆಟಿಗರು ಇದೀಗ ವಿಶ್ರಾಂತಿಯಲ್ಲಿದ್ದಾರೆ. ಈ ವೇಳೆ ಜಸ್ಪ್ರೀತ್ ಬುಮ್ರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋ ಎಲ್ಲರ ಗಮನಸೆಳೆದಿದೆ. ಜಸ್ಪ್ರೀತ್ ಬುಮ್ರಾ ಹಂಚಿಕೊಂಡಿರುವ ವಿಡಿಯೋದಲ್ಲಿ ರೋಹಿತ್ ಶರ್ಮಾ ಪುತ್ರಿ ಮುದ್ದಿನ ಆ್ಯಕ್ಷನ್ ಇದೀಗ ಚರ್ಚೆಯಾಗುತ್ತಿದೆ.

ಸಚಿನ್, ಕೊಹ್ಲಿ ಸೇರಿ 40 ಕ್ರೀಡಾಪಟುಗಳ ಜೊತೆ ಪ್ರಧಾನಿ ಮೋದಿ ಮಹತ್ವದ ಸಭೆ!

ರೋಹಿತ್ ಶರ್ಮಾ ಜೊತೆ ಆಟವಾಡುತ್ತಿದ್ದ ಪುತ್ರಿ ಸಮೈರಾ ಬಳಿ, ರಿತಿಕಾ ಸಜ್ದೆ ಬುಂ ಬುಂ ಆ್ಯಕ್ಷನ್ ಹೇಗೆ ಎಂದು ಕೇಳಿದ್ದಾರೆ. ಈ ವೇಳೆ ಬುಮ್ರಾ ಬೌಲಿಂಗ್ ಶೈಲಿಯನ್ನು ಸಮೈರಾ ಮಾಡಿ ತೋರಿಸಿದ್ದಾಳೆ. ಈ ವಿಡಿಯೋವನ್ನು ಬುಮ್ರಾ ಶೇರ್ ಮಾಡಿದ್ದು, ನನಗಿಂತ ಚೆನ್ನಾಗಿದೆ. ನಾನು ಸಮೈರಳ ದೊಡ್ಡ ಅಭಿಮಾನಿ ಎಂದು ಬುಮ್ರಾ ಹೇಳಿದ್ದಾರೆ.

 

ಧೋನಿ ವಿಶ್ವಕಪ್ ಸಿಕ್ಸರ್, ರವಿ ಶಾಸ್ತ್ರಿ ಕಮೆಂಟರಿ ಮೂಲಕ ಪೊಲೀಸರಿಂದ ಕೊರೋನಾ ಜಾಗೃತಿ!

ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಇತರರಿಗೆ ಅನುಕರಣೆ ಮಾಡುವುದು ಕಷ್ಟ. ಇಷ್ಟೇ ಅಲ್ಲ ಬುಮ್ರಾ ಬೌಲಿಂಗ್ ಆ್ಯಕ್ಷನ್ ಬ್ಯಾಟ್ಸ್‌ಮನ್‌ಗಳಿಗೆ ರೀಡ್ ಮಾಡುವುದು ಕೂಡ ಕಷ್ಟ ಹೀಗಿರುವಾಗಿ ರೋಹಿತ್ ಶರ್ಮಾ 15 ತಿಂಗಳ ಪುತ್ರಿ ಸಮೈರಾ ಬುಮ್ರಾ ಬೌಲಿಂಗ್ ಶೈಲಿ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.