ಸಚಿನ್, ಕೊಹ್ಲಿ ಸೇರಿ 40 ಕ್ರೀಡಾಪಟುಗಳ ಜೊತೆ ಪ್ರಧಾನಿ ಮೋದಿ ಮಹತ್ವದ ಸಭೆ!
ಕೊರೋನಾ ವೈರಸ್ ಹರಡದಂತೆ ತಡೆಯಲು ಕೇಂದ್ರ ಸರ್ಕಾರ ಹೆಚ್ಚಿನ ಶ್ರಮ ವಹಿಸುತ್ತಿದೆ. ಇಂದು(ಏ.03) ಪ್ರಧಾನಿ ಮೋದಿ ದೇಶದ ಜನತೆಯಲ್ಲಿ ಮತ್ತೊಂದು ಕರೆ ನೀಡುವ ಮೂಲಕ ಸಂಘಟಿತ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದ್ದಾರೆ. ದೇಶದ ಜನತೆಗೆ ಸಂದೇಶ ನೀಡಿದ ಬಳಿಕ ಮೋದಿ, ನೇರವಾಗಿ ಭಾರತ ದಿಗ್ಗಜ ಹಾಗೂ ಪ್ರಮುಖ ಕ್ರೀಡಾಪಟುಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಪಿವಿ ಸಿಂಧು ಸೇರಿದಂತೆ 40 ಕ್ರೀಡಾಪಟುಗಳ ಜೊತೆ ಮೋದಿ ಚರ್ಚಿಸಿದ ವಿಷವೇನು? ಇಲ್ಲಿದೆ.
ಲಾಕ್‌ಡೌನ್ ನಡುವೆ ದೇಶದ ಜನತೆಗೆ ದೀಪ ಹಚ್ಚಿ ನಾವೆಲ್ಲಾ ಒಗ್ಗಟ್ಟಾಗಿ ಹೋರಾಡೋಣ ಎಂದು ಕರೆ ನೀಡಿದ ಪ್ರಧಾನಿ ಮೋದಿ
ದೇಶದ ಜನತೆಯಲ್ಲಿ ಮನವಿ ಮಾಡಿದ ಬಳಿಕ ಭಾರತದ 40 ಕ್ರೀಡಾಪಟುಗಳು ಜೊತೆ ಮೋದಿ ವಿಡಿಯೋ ಕಾನ್ಫರೆನ್ಸ್
ಕ್ರಿಕೆಟ್‌ನಿಂದ ಸಚಿನ್ ತೆಂಡುಲ್ಕರ್,ಯುವರಾಜ್ ಸಿಂಗ್ ಸೇರಿದಂತೆ ಕೆಲ ಕ್ರಿಕೆಟಿಗರು ಭಾಗಿ
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ವಿರೇಂದ್ರ ಸೆಹ್ವಾಗ್, ಚೇತೇಶ್ವರ್ ಪೂಜಾರ ಕೂಡ ಮೋದಿ ಜೊತೆ ಮಾತುಕತೆ
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಜೊತೆಗೂ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಸಭೆ
ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂ, ಕೋಚ್ ಪುಲ್ಲೇಲ ಗೋಪಿಚಂದ್ ಕೂಡ ಮೋದಿ ಕಾನ್ಫರೆನ್ಸ್ ಸಭೆಯಲ್ಲಿ ಭಾಗಿ
ಮೋದಿ ಸಭೆಯಲ್ಲಿ ಮಾಜಿ ಅಥ್ಲೀಟ್ ಪಿಟಿ ಉಷಾ, ಹಾಲಿ ಕ್ರೀಡಾಪಟು ಹಿಮಾ ದಾಸ್ ಭಾಗಿ
ಚೆಸ್ ದಿಗ್ಗಜ ವಿಶ್ವನಾಥ್ ಆನಂದ್, ಕುಸ್ತಿ ಪಟು ಭಜರಂಗ್ ಪೂನಿಯಾ ಕೂಡ ಮೋದಿ ಭಾಗಿ
40 ಕ್ರೀಡಾಪಟುಗಳ ಜೊತೆ ಮೋದಿ ಕೊರೋನಾ ವೈರಸ್ ವಿರುದ್ಧದ ಹೋರಾಟದ ಕುರಿತು ಚರ್ಚೆ
ಶಿಸ್ತು, ಒಗ್ಗಟ್ಟು, ಹೋರಾಟದ ಮನೋಭಾವದ ಕುರಿತು ಮೋದಿ ಚರ್ಚೆ
ಲಾಕ್‌ಡೌನ್ ವೇಳೆ ಕ್ರೀಡಾಪಟುಗಳು ಸಾಮಾಜಿಕ ಜಾಲತಾಣ ಮೂಲಕ ಭಾರತೀಯರಲ್ಲಿ ಆತ್ಮಸ್ಥರ್ಯ ತುಂಬಲು ಮನವಿ
ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ಜನರಲ್ಲಿ ಅರಿವು ಮೂಡಿಸು ಕ್ರೀಡಾಪಟುಗಳಿಗೆ ಮೋದಿ ಮನವಿ
ಲಾಕ್‌ಡೌನ್ ವೇಳೆ ದೈಹಿಕ ಹಾಗೂ ಮಾನಸಿಕ ಫಿಟ್ನೆಸ್ ಕುರಿತು ಕ್ರೀಡಾಪಟುಗಳ ಜೊತೆ ಮೋದಿ ಚರ್ಚೆ