ಟೀಂ ಇಂಡಿಯಾಗೆ ಕಾಡ್ತಿದೆ ಎಡಗೈ ಬ್ಯಾಟರ್‌ಗಳ ಕೊರತೆ..! ಭಾರತ ಕಪ್ ಸೋಲಲು ಇದೇ ಕಾರಣನಾ?
ಟೀಂ ಇಂಡಿಯಾ ಕಪ್ ಸೋಲಲು ಎಡಗೈ ಬ್ಯಾಟರ್‌ಗಳ ಕೊರತೆ ಕಾರಣ?
ಎಡಗೈ ಬ್ಯಾಟರ್ಸ್ ಇದ್ರೆ ಹೆಚ್ಚುತ್ತೆ ತಂಡದ ಬಲ..!
2007 ಮತ್ತು 2011ರ ವಿಶ್ವಕಪ್ನಲ್ಲಿ ಗಂಭೀರ್ ಅದ್ಭುತ ಆಟ..!
ಬೆಂಗಳೂರು(ಜು.04) ಭಾರತೀಯ ಕ್ರಿಕೆಟ್ನ ಗ್ರೇಟೆಸ್ಟ್ ಕ್ಯಾಪ್ಟನ್ ಯಾರು ಅಂದ್ರೆ, ಅದು ಮಹೇಂದ್ರ ಸಿಂಗ್ ಧೋನಿ. ಯಾಕಂದ್ರೆ, ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ 2 ವಿಶ್ವಕಪ್ ಗೆದ್ದಿದೆ. ಆದ್ರೆ, ಕ್ಯಾಪ್ಟನ್ ಆಗಿ ಧೋನಿ ಯಶಸ್ಸು ಸಾಧಿಸೋಕೆ ಪ್ರಮುಖ ಕಾರಣಾನೇ ಈ ಆಟಗಾರರು. ಈ ಎಡಗೈ ಬ್ಯಾಟರ್ಸ್ ಮಿಂಚದೇ ಹೋಗಿದ್ರೆ, ಧೋನಿ 2 ವಿಶ್ವಕಪ್, 1 ಚಾಂಪಿಯನ್ಸ್ ಟ್ರೋಫಿ ಗೆಲ್ತಾ ಇರಲಿಲ್ಲ.
ಯುವರಾಜ್ ಸಿಂಗ್ ಮತ್ತು ಗೌತಮ್ ಗಂಭೀರ್, ಈ ಇಬ್ಬರು ಧೋನಿ ಸೈನ್ಯದ ರಿಯಲ್ ಮ್ಯಾಚ್ ವಿನ್ನರ್ಸ್ ಆಗಿದ್ರು. ಅಲ್ಲದೇ ಮಿಡಲ್ ಆರ್ಡರ್ನಲ್ಲಿ ತಂಡದ ನಂಬಿಕಸ್ಥ ಬ್ಯಾಟ್ಸ್ಮನ್ಗಳಾಗಿದ್ರು. ಸಂಕಷ್ಟದ ಸಮಯದಲ್ಲಿ ಜವಬ್ದಾರಿಯುತ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾಗ್ತಿದ್ರು.
2007 ಮತ್ತು 2011ರ ವಿಶ್ವಕಪ್ನಲ್ಲಿ ಗಂಭೀರ್ ಅದ್ಭುತ ಆಟ..!
ಯೆಸ್, 2011ರ ಏಕದಿನ ವಿಶ್ವಕಪ್ನಲ್ಲಿ ಯುವರಾಜ್ ಸಿಂಗ್ ಆಟವನ್ನ ಭಾರತೀಯರು ಎಂದಿಗೂ ಮರೆಯಲ್ಲ. ಟೂರ್ನಿಯುದ್ಧಕ್ಕೂ ಪಂಜಾಬ್ ಪುತ್ತರ್, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅಬ್ಬರಿಸಿದ್ರು. ಒಂದೆಡೆ ಕಿತ್ತು ತಿನ್ನುತ್ತಿದ್ದ ಕ್ಯಾನ್ಸರ್ ಮಹಾಮಾರಿ ಜೊತೆ ಹೋರಾಡುತ್ತಲೇ, ಮತ್ತೊಂದೆಡೆ ದೇಶಕ್ಕಾಗಿ ಹೋರಾಡಿದ್ರು. 2007ರ ಟಿ20 ವಿಶ್ವಕಪ್ನಲ್ಲೂ ಯುವಿ ಅಬ್ಬರಿಸಿದ್ರು. ಬಲಿಷ್ಠ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಲ್ಲಿ ಸಿಡಿಲಬ್ಬರದ ಅರ್ಧಶಕತ ಸಿಡಿಸಿದ್ರು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವೇಗಿ ಸ್ಟುವರ್ಟ್ ಬ್ರಾಡ್ ಒಂದೇ ಓವರ್ನಲ್ಲಿ ಆರು ಸಿಕ್ಸರ್ ಸಿಡಿಸಿ ಇತಿಹಾಸ ಸೃಷ್ಟಿಸಿದ್ರು.
ಮಾಜಿ ಆಟಗಾರರನ್ನ ಕಂಟ್ರೋಲ್ ಮಾಡಲು ಹೂಸ ರೂಲ್ಸ್ ಜಾರಿ..?
2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪರ ಯುವರಾಜ್ ಸಿಂಗ್ ಆಲ್ರೌಂಡ್ ಆಟದ ಮೂಲಕ ಮಿಂಚಿದ್ದರು. ಯುವಿ ಬ್ಯಾಟಿಂಗ್‌ನಲ್ಲಿ 362 ರನ್ ಹಾಗೂ ಬೌಲಿಂಗ್‌ನಲ್ಲಿ 15 ವಿಕೆಟ್ ಕಬಳಿಸುವ ಮೂಲಕ ಸರಣಿಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದರು. ಇನ್ನು ಗೌತಮ್ ಗಂಭೀರ್ 2007ರ ಟಿ20 ವಿಶ್ವಕಪ್ ಫೈನಲ್ ಹಾಗೂ 2011ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಕೆಚ್ಚೆದೆಯ ಬ್ಯಾಟಿಂಗ್ ನಡೆಸುವ ಮೂಲಕ ತಂಡ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.
ಎಡಗೈ ಬ್ಯಾಟರ್ಸ್ ಇದ್ರೆ ಹೆಚ್ಚುತ್ತೆ ತಂಡದ ಬಲ..!
ಯಾವುದೇ ತಂಡದ ಟಾಪ್ ಆರ್ಡರ್ನಲ್ಲಿ ಎಡಗೈ ಬ್ಯಾಟ್ಸ್ಮನ್ಗಳಿದ್ರೆ ತಂಡದ ಬ್ಯಾಟಿಂಗ್ ಸ್ಟ್ರೆಂಥ್ ಹೆಚ್ಚುತ್ತೆ. ಲೆಫ್ಟ್ ಮತ್ತು ರೈಟ್ ಹ್ಯಾಂಡ್ ಬ್ಯಾಟರ್ಸ್ ಕ್ರೀಸ್ನಲ್ಲಿದ್ರೆ, ಎದುರಾಳಿ ಬೌಲರ್ಸ್ಗೆ ಬೌಲಿಂಗ್ ಮಾಡೋದು ಕಷ್ಟವಾಗುತ್ತೆ. ಆದ್ರೆ, ಸದ್ಯ ಟೀಂ ಇಂಡಿಯಾದ ಟಾಪ್ ಆರ್ಡರ್ನಲ್ಲಿ ಎಡಗೈ ಬ್ಯಾಟ್ಸ್ಮನ್ಗಳೇ ಇಲ್ಲ. 2021ರ T20 ವಿಶ್ವಕಪ್ ಮತ್ತು 2022ರ T20 ವಿಶ್ವಕಪ್ ಟೂರ್ನಿಯಲ್ಲಿ ತಂಡಕ್ಕೆ ಇದರಿಂದ ಹಿನ್ನಡೆಯಾಗಿತ್ತು. ಈಗ ಏಕದಿನ ವಿಶ್ವಕಪ್ ರೆಡಿ ಯಾಗ್ತಿರೋ ತಂಡಕ್ಕೆ ಮತ್ತದೆ ಕೊರತೆ ಕಾಡ್ತಿದೆ. ರಿಷಭ್ ಪಂತ್ ಇಂಜುರಿಯಾಗಿ ತಂಡದಿಂದ ಹೊರ ನಡೆದಿದ್ದಾರೆ. ಆಲ್ರೌಂಡರ್ ರವೀಂದ್ರ ಜಡೇಜಾ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಬೀಸ್ತಾರೆ.
ಒಟ್ಟಿನಲ್ಲಿ ರೋಹಿತ್ ಪಡೆಗೆ ಅರ್ಜೆಂಟಾಗಿ ಎಡಗೈ ಬ್ಯಾಟ್ಸ್ಮನ್ ಬೇಕಾಗಿದ್ದಾನೆ. ಮ್ಯಾಚ್ ವಿನ್ನರ್ ಲೆಫ್ಟ್ ಹ್ಯಾಂಡರ್ಗಾಗಿ BCCI ಮತ್ತು ಟೀಂ ಮ್ಯಾನೇಜ್ಮೆಂಟ್ ಹುಡುಕಾಟ ನಡೆಸ್ತಿದೆ. ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿಯ ಭಾಗವಾಗಿ ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ಎದುರು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಈ ಸರಣಿಗೆ ಪ್ರತಿಭಾನ್ವಿತ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಸ್ಥಾನ ಪಡೆದಿದ್ದಾರೆ. ಯಶಸ್ವಿ ಜೈಸ್ವಾಲ್, ಅಗ್ರಕ್ರಮಾಂಕದ ಬ್ಯಾಟರ್ ಆಗಿದ್ದು, 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಮಿಂಚಿದ್ದರು. ಇದೀಗ ವೆಸ್ಟ್ ಇಂಡೀಸ್ ಎದುರಿನ ಸರಣಿಯ ವೇಳೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸ ಹೊಂದಿರುವ ಯಶಸ್ವಿ ಮಿಂಚಿನ ಪ್ರದರ್ಶನ ತೋರುವ ಮೂಲಕ ಭಾರತ ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಹೀಗಾದಲ್ಲಿ ಮುಂಬರುವ ದಿನಗಳಲ್ಲಿ ಏಕದಿನ ಕ್ರಿಕೆಟ್‌ಗೂ ಯಶಸ್ವಿ ಎಂಟ್ರಿಕೊಟ್ರು ಅಚ್ಚರಿಯೇನಿಲ್ಲ.