Asianet Suvarna News

ಕೊಹ್ಲಿಗಿಂತ ರೋಹಿತ್ ಬೆಸ್ಟ್; ಕಾರಣ ಹೇಳಿದ ಗೌತಮ್ ಗಂಭೀರ್!

ನಿಗಧಿತ ಓವರ್ ಕ್ರಿಕೆಟ್‌ನಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಇಬ್ಬರು ವಿಶ್ವದ ಬೆಸ್ಟ್ ಬ್ಯಾಟ್ಸ್‌ಮನ್. ಆದರೆ  ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಇವರಿಬ್ಬರಲ್ಲಿ ಯಾರು ಬೆಸ್ಟ್ ಅನ್ನೋದನ್ನು ಬಹಿರಂಗ ಪಡಿಸಿದ್ದಾರೆ.

Rohit sharma impact player than virat kohli says gautam gambhir
Author
Bengaluru, First Published May 4, 2020, 9:17 PM IST
  • Facebook
  • Twitter
  • Whatsapp

ದೆಹಲಿ(ಮೇ.04): ನಿಗಧಿತ ಓವರ್ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾರನ್ನು ಮೀರಿಸುವ ಬ್ಯಾಟ್ಸ್‌ಮನ್‌ಗಳಿಲ್ಲ. ಇವರಿಬ್ಬರ ಆಟದ ಶೈಲಿ ಭಿನ್ನ.  ಹಾಲಿ ಕ್ರಿಕೆಟಿಗರ ಪೈಕಿ ಇಬ್ಬರೂ ಕೂಡ ಶ್ರೇಷ್ಠ ಕ್ರಿಕೆಟಿಗರು. ಆದರೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಪೈಕಿ ಶ್ರೇಷ್ಠ ಯಾರು ಅನ್ನೋದನ್ನು ಬಹಿರಂಗ ಪಡಿಸಿದ್ದಾರೆ. ವೈಟ್ ಬಾಲ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಗಿಂತ ರೋಹಿತ್ ಶರ್ಮಾ ಹೆಚ್ಚು ಪರಿಣಾಮಕಾರಿ ಆಟಗಾರ ಎಂದಿದ್ದಾರೆ.

ಸಾರ್ವಕಾಲಿಕ ಕನಸಿನ ಭಾರತ ತಂಡ ಹೆಸರಿಸಿದ ಗಂಭೀರ್, 3 ಕನ್ನಡಿಗರಿಗೆ ಸ್ಥಾನ..!

ನಿಗದಿತ ಓವರ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಹೆಚ್ಚು ರನ್ ಗಳಿಸುತ್ತಾರೆ. ಇದರಲ್ಲಿ ಯಾವುದೇ ಸಂದೇಹವಿಲ್ಲ. ಕರಿಯರ್‌ನಲ್ಲಿ ರೋಹಿತ್ ಶರ್ಮಾಗಿಂತ ಹೆಚ್ಚು ರನ್ ಸಿಡಿಸುತ್ತಾರೆ. ಆದರೆ ರೋಹಿತ್ ಶರ್ಮಾ ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಾರೆ. ರೋಹಿತ್ ಓರ್ವ ಇಂಪಾಕ್ಟ್ ಪ್ಲೇಯರ್ ಎಂದು ಗುಣಗಾನ ಮಾಡಿದ್ದಾರೆ. 

ಟೀಂ ಇಂಡಿಯಾದ ಈ ಮಾಜಿ ನಾಯಕನಿಗಾಗಿ ಪ್ರಾಣ ನೀಡಲು ಸಿದ್ದವೆಂದ ಗೌತಮ್ ಗಂಭೀರ್..!.

3 ತ್ರಿಶತಕ, ವಿಶ್ವಕಪ್ ಟೂರ್ನಿಯಲ್ಲಿ 5 ಶತಕ ಸಿಡಿಸಿದ ರೋಹಿತ್ ಶರ್ಮಾ ಪ್ರತಿ ಪಂದ್ಯದಲ್ಲೂ ಪರಿಣಾಮಕಾರಿಯಾಗಿರುತ್ತಾರೆ. ರೋಹಿತ್ ಶರ್ಮಾ ಸೆಂಚುರಿ ಸಿಡಿಸಿದ ಬಳಿಕ ಔಟಾದಾಗ ಇವತ್ತು ಡಬಲ್ ಸೆಂಚುರಿ ಮಿಸ್ಸಾಯ್ತು ಎಂದು ಅಭಿಮಾನಿಗಳು ಮಾತನಾಡುತ್ತಾರೆ. ಇದು ರೋಹಿತ್ ಸಾಮರ್ಥ್ಯವನ್ನು ಹೇಳುತ್ತದೆ ಎಂದು ಗಂಭೀರ್ ಹೇಳಿದ್ದಾರೆ. 

ಸ್ಫೋಟಕ ಬ್ಯಾಟ್ಸಮನ್ ರೋಹಿತ್ ಶರ್ಮಾ ನಿದ್ದೆಗೆಡಿಸಿದ ಬೌಲರ್ಸ್ ಇವರು!.

33 ವರ್ಷದ ರೋಹಿತ್ ಶರ್ಮಾ 224 ಏಕದಿನ ಕ್ರಿಕೆಟ್‌ನಿಂದ 9115 ರನ್ ಸಿಡಿಸಿದ್ದಾರೆ.29 ಶತಕ ಹಾಗೂ 43 ಅರ್ಧಶತಕ ಸಿಡಿಸಿದ್ದಾರೆ. ಇತ್ತ 31 ವರ್ಷದ ವಿರಾಟ್ ಕೊಹ್ಲಿ 248 ಏಕದಿನ ಪಂದ್ಯಿದಿಂದ 11867 ರನ್ ಸಿಡಿಸಿದ್ದಾರೆ. ಕೊಹ್ಲಿ 43 ಶತಕ ಹಾಗೂ 58 ಅರ್ಧಶತಕ ಸಿಡಿಸಿದ್ದಾರೆ.

Follow Us:
Download App:
  • android
  • ios