Asianet Suvarna News Asianet Suvarna News

ಕ್ರಿಕೆಟ್ ಮೂಲಕ ರೋಹಿತ್ ಶರ್ಮಾ ಗಳಿಸಿದ ಹಣವೆಷ್ಟು? ಒಂದು ಇನ್‌ಸ್ಟಾಗ್ರಾಂ ಪೋಸ್ಟ್‌ನಿಂದ ಹಿಟ್‌ಮ್ಯಾನ್‌ ಸಿಗೋದೆಷ್ಟು?

ಭಾರತಕ್ಕೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ರೋಹಿತ್ ಶರ್ಮಾ ಅವರ ಒಟ್ಟು ಆದಾಯವೆಷ್ಟು? ಕ್ರಿಕೆಟ್‌ನಿಂದ ಹಿಟ್‌ಮ್ಯಾನ್ ಗಳಿಸುತ್ತಿರುವುದೆಷ್ಟು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

Rohit Sharma Estimated Rs 344 Crore Net Worth Insights Into Hitman Cricket Earnings, Brand Endorsements Luxury Cars and More kvn
Author
First Published Aug 28, 2024, 5:04 PM IST | Last Updated Aug 28, 2024, 5:04 PM IST

ಬೆಂಗಳೂರು: ರೋಹಿತ್ ಶರ್ಮಾ, ಗ್ರೇಟ್ ಬ್ಯಾಟರ್. ಅಸಾಮಾನ್ಯ ಬ್ಯಾಟಿಂಗ್‌ನಿಂದ ಹಲವು ದಾಖಲೆಗಳನ್ನ ಬರೆದಿದ್ದಾರೆ. ಇದೆಲ್ಲಾ ನಿಮಗೆ ಗೊತ್ತಿರೋದೆ. ಆದ್ರೆ, ಕ್ರಿಕೆಟ್ ಮೂಲಕ ರೋಹಿತ್ ಎಷ್ಟು ಕೋಟಿಗಳಿಸಿದ್ದಾರೆ, ಯಾವ್ಯಾವುದರಿಂದ ಎಷ್ಟೆಷ್ಟು ಕೋಟಿ ಸಂಪಾದಿಸ್ತಾರೆ ಅನ್ನೋದು ನಿಮಗೆ ಗೊತ್ತಾ..? ಹಾಗಾದ್ರೆ, ಈ ಸ್ಟೋರಿ ನೋಡಿ ಗೊತ್ತಾಗುತ್ತೆ..

ಕ್ರಿಕೆಟ್ ಮೂಲಕ ರೋಹಿತ್ ಗಳಿಸಿದ ಹಣವೆಷ್ಟು ಗೊತ್ತಾ..? 

ಬೆಂಗಳೂರು: ರೋಹಿತ್ ಶರ್ಮಾ. ಕ್ರಿಕೆಟ್ ಜಗತ್ತಿನ ಒನ್ ಆ್ಯಂಡ್ ಓನ್ಲಿ ಹಿಟ್‌ಮ್ಯಾನ್. ನಿಂತಲ್ಲೇ ಒಂದಿಂಚೂ ಅಲುಗಾಡದೇ, ಭರ್ಜರಿ ಸಿಕ್ಸರ್‌ಗಳನ್ನ ಬಾರಿಸೋದ್ರಲ್ಲಿ ರೋಹಿತ್ ಮುಂದೆ ಯಾರೂ ಇಲ್ಲ. ಇನ್ನು ಒನ್ಡೇ ಕ್ರಿಕೆಟ್ನಲ್ಲಿ ಒಂದು ಬಾರಿ ದ್ವಿಶತಕ ಬಾರಿಸೋದೆ ದೊಡ್ಡ ಸಾಧನೆ. ಅಂತದ್ರಲ್ಲಿ, ಈ ಮುಂಬೈಕರ್ ಮೂರು ಬಾರಿ ಡಬಲ್ ಸೆಂಚುರಿ ಸಿಡಿಸಿದ್ದಾರೆ. ಆ ಮೂಲಕ ಕೋಟ್ಯಂತರ ಅಭಿಮಾನಿಗಳನ್ನ ಗಳಿಸಿಕೊಂಡಿದ್ದಾರೆ. ಇದರ ಜೊತೆಗೆ ನೂರಾರು ಕೋಟಿ ಮಾಲೀಕರಾಗಿದ್ದಾರೆ. 

ಚೆನ್ನೈನ ಕಾಲೇಜಿನಲ್ಲಿ ಬುಮ್ರಾಗೆ ಸಿಕ್ತು ಭರ್ಜರಿ ವೆಲ್‌ಕಮ್: ಭಾರತೀಯ ಸೂಪರ್ ಸ್ಟಾರ್‌ಗಳ ಸಾಲಿಗೆ ಯಾರ್ಕರ್ ಸ್ಪೆಷಲಿಸ್ಟ್ ಲಗ್ಗೆ

ಟೀಂ ಇಂಡಿಯಾ ನಾಯಕ 344 ಕೋಟಿ ಆಸ್ತಿಗೆ ಮಾಲೀಕ..! 

ಯೆಸ್, ಕ್ರಿಕೆಟ್ ಮೂಲಕ ರೋಹಿತ್ ಕೋಟಿ-ಕೋಟಿ ರೂಪಾಯಿ ದುಡಿದಿದ್ದಾರೆ. ಒಟ್ಟು 344 ಕೋಟಿ ಆಸ್ತಿಗೆ ಒಡೆಯರಾಗಿದ್ದಾರೆ. ಆ ಮೂಲಕ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ.  ರೋಹಿತ್ ಆದಾಯದ ಮೂಲಗಳ ಬಗ್ಗೆ ಹೇಳೋದಾದ್ರೆ, BCCI ಸೆಂಟ್ರಲ್ ಕಾಂಟ್ರ್ಯಾಕ್ಟ್ನ A+ ಗ್ರೇಡ್ ಆಟಗಾರನಾಗಿರೋ ರೋಹಿತ್‌ ಶರ್ಮಾಗೆ ವರ್ಷಕ್ಕೆ 7 ಕೋಟಿ ಸಂಬಳ ಸಿಗುತ್ತೆ. ಇದಲ್ಲದೇ, ಮ್ಯಾಚ್ ಫೀಸ್ ರೂಪದಲ್ಲಿ ಟೆಸ್ಟ್ ಪಂದ್ಯವೊಂದಕ್ಕೆ 15 ಲಕ್ಷ, ಒನ್ಡೇ ಪಂದ್ಯಕ್ಕೆ 6 ಲಕ್ಷ ಮತ್ತು ಪ್ರತಿ ಟಿ20 ಪಂದ್ಯದಿಂದ 3 ಲಕ್ಷ ರೂಪಾಯಿ ಪಡೆದುಕೊಳ್ತಾರೆ. ಇದಲ್ಲದೇ, IPLನಲ್ಲಿ ಮುಂಬೈ ಇಂಡಿಯನ್ಸ್ ವರ್ಷಕ್ಕೆ 16 ಕೋಟಿ ವೇತನ ನೀಡುತ್ತೆ. 

ರೋಹಿತ್ ಮನೆ-ಕಾರುಗಳ ಮೌಲ್ಯವೇ 40 ಕೋಟಿ..! 

ರೋಹಿತ್ ಶರ್ಮಾ ಮುಂಬೈನ ಪ್ರತಿಷ್ಠಿತ ವರ್ಲಿ ಏರಿಯಾದಲ್ಲಿ 4 BHK ಫ್ಲಾಟ್‌ನಲ್ಲಿ ವಾಸವಾಗಿದ್ದಾರೆ. ಇದರ ಮೌಲ್ಯ 30 ಕೋಟಿಯಾಗಿದೆ. ರೋಹಿತ್ ಬಳಿ  ಲ್ಯಾಂಬೋರ್ನಿಗಿ ಉರಸ್, ಮರ್ಸಿಡೀಸ್ ಬೆನ್ಜ್, BMW X3, SUZUKI ಹಯಬೂಜಾ ಸೇರಿದಂತೆ ಹಲವು ಲಕ್ಸುರಿ ಕಾರ್‌ಗಳಿವೆ. ಇವೆಲ್ಲದರ ಒಟ್ಟು ಮೌಲ್ಯ 6 ರಿಂದ 7 ಕೋಟಿಯಾಗಿದೆ. 

ಇಲೆಕ್ಟ್ರಾನಿಕ್ ಸಿಟಿಗೆ ಭೇಟಿ ಕೊಟ್ಟು ಚಪಾತಿ ಸವಿದ ಜಾಂಟಿ ರೋಡ್ಸ್‌! ಫ್ಯಾನ್ಸ್‌ ಡೌಟ್‌ಗೆ ಉತ್ತರ ಕೊಟ್ಟ ಹರಿಣಗಳ ಲೆಜೆಂಡ್

ಇನ್ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ 1 ಕೋಟಿ ಚಾರ್ಜ್..! 

ಜಿಯೋ ಸಿನಿಮಾ,  ಅಡಿಡಾಸ್, ಸಿಯೆಟ್, ಒಪ್ಪೊ, ಉಷಾ, ವೀಡಿಯೋಕಾನ್ ಸೇರಿದಂತೆ ಹಲವು ಪ್ರತಿಷ್ಠಿತ ಬ್ರ್ಯಾಂಡ್ಗಳಿಗೆ ರೋಹಿತ್ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ದಿನದ ಜಾಹೀರಾತು ಶೂಟಿಂಗ್‌ಗಾಗಿ 5 ಕೋಟಿ ರೂಪಾಯಿ ಪಡೆದುಕೊಳ್ತಾರೆ. ಇನ್ನು ಕೆಲ ಕಂಪನಿಗಳಲ್ಲಿ ರೋಹಿತ್ ಇನ್ವೆಸ್ಟ್ ಮಾಡಿದ್ದಾರೆ. ಆ ಮೂಲಕವೂ ರೋಹಿತ್ ಕೋಟಿಗಳ ಲೆಕ್ಕದಲ್ಲಿ ಹಣ ಗಳಿಸ್ತಿದ್ದಾರೆ. 

ಇನ್ನು ಸೋಷಿಯಲ್ ಮೀಡಿಯಾ ಇನ್ಸ್ಟಾಗ್ರಾಮ್ನಲ್ಲಿ ರೋಹಿತ್ ಶರ್ಮಾ, 2 ಕೋಟಿಗೂ ಅಧಿಕ ಫಾಲೋವರ್ಸ್ನ ಹೊಂದಿದ್ದಾರೆ. ಒಂದು ಕಮರ್ಷಿ ಯಲ್  ಪೋಸ್ಟ್‌ಗೆ 1 ಕೋಟಿ ರೂಪಾಯಿ ಚಾರ್ಜ್ ಮಾಡ್ತಾರೆ. 

ಒಟ್ಟಿನಲ್ಲಿ ರೋಹಿತ್ ಮೈದಾನದಲ್ಲಿ ಅದ್ಭುತ ಬ್ಯಾಟಿಂಗ್ನಿಂದ ದಾಖಲೆ ಬರೀತಾ ಇದ್ರೆ, ಮೈದಾನದಾಚೆ ತಮ್ಮ ಆದಾಯದ ಮೂಲಕ ದಾಖಲೆ ಬರೆಯುತ್ತಿದ್ದಾರೆ.

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್

Latest Videos
Follow Us:
Download App:
  • android
  • ios