ಚೆನ್ನೈನ ಕಾಲೇಜಿನಲ್ಲಿ ಬುಮ್ರಾಗೆ ಸಿಕ್ತು ಭರ್ಜರಿ ವೆಲ್‌ಕಮ್: ಭಾರತೀಯ ಸೂಪರ್ ಸ್ಟಾರ್‌ಗಳ ಸಾಲಿಗೆ ಯಾರ್ಕರ್ ಸ್ಪೆಷಲಿಸ್ಟ್ ಲಗ್ಗೆ

ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾಗೆ ಚೆನ್ನೈನ ಕಾಲೇಜೊಂದರಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Team India Pacer Jasprit Bumrah gets a grand reception at Chennai College video goes viral kvn

ಬೆಂಗಳೂರು: ಸದ್ಯ ಭಾರತೀಯ ಕ್ರಿಕೆಟ್ನಲ್ಲಿ ಸೂಪರ್ ಸ್ಟಾರ್‌ಗಳು ಯಾರು ಅಂದ್ರೆ, ಅದು ವಿರಾಟ್ ಕೊಹ್ಲಿ & ರೋಹಿತ್ ಶರ್ಮಾ. ಇವರಿಬ್ಬರಿಗೆ ಇರೋ ಸ್ಟಾರ್ಡಂ ಬೇರೆ ಯಾರಿಗೂ ಇಲ್ಲ. ಆದ್ರೀಗ, ಟೀಂ ಇಂಡಿಯಾದ ಈ ಆಟಗಾರ ನಾನೂ ಸೂಪರ್ ಸ್ಟಾರೇ ಅಂತ ಪ್ರೂವ್ ಮಾಡಿದ್ದಾರೆ. ಯಾರು ಆ ಆಟಗಾರ ಅಂತೀರಾ..? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ.

ವಿರಾಟ್ ಕೊಹ್ಲಿ- ರೋಹಿತ್ ಶರ್ಮಾ ಸ್ಟಾರ್ಡಂಗೆ ಬುಮ್ರಾ ಸೆಡ್ಡು..! 

ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ನಂತರ, ಟೀಂ ಇಂಡಿಯಾ ಆಟಗಾರರು, ರಿಲ್ಯಾಕ್ಸ್ ಮೂಡ್‌ಗೆ  ಜಾರಿದ್ದಾರೆ. ಫ್ಯಾಮಿಲಿ ಜೊತೆ ಆರಾಮಾಗಿ ಕಾಲ ಕಳೆಯುತ್ತಿದ್ದಾರೆ. ಅದರಲ್ಲೂ ರೋಹಿತ್ ಪಡೆಯ ವೇಗಿ ಜಸ್ಪ್ರೀತ್ ಬುಮ್ರಾ ಟಿ20 ವಿಶ್ವಕಪ್ ನಂತರ  ಯಾವುದೇ ಪಂದ್ಯವಾಡಿಲ್ಲ. ಕ್ರಿಕೆಟ್ನಿಂದ ಬ್ರೇಕ್ ಪಡೆದು ಮಸ್ತಾಗಿ ಲೈಫ್ ಎಂಜಾಯ್ ಮಾಡ್ತಿದ್ದಾರೆ. ಹೋದಲೆಲ್ಲಾ  ಅಭಿಮಾನಿಗಳಿಂದ ಬುಮ್ರಾಗೆ, ಗ್ರ್ಯಾಂಡ್ ವೆಲ್‌ಕಮ್ ಸಿಗ್ತಿದೆ. 

'ನನ್ನಿಂದ ಮಹಾಪರಾಧವಾಯ್ತು..!' ಕೈ ಮುಗಿದು ಅಭಿಮಾನಿಗಳ ಕ್ಷಮೆ ಕೋರಿದ ದಿನೇಶ್ ಕಾರ್ತಿಕ್‌..!

ಯೆಸ್, ಟಿ20 ವಿಶ್ವಕಪ್ ಗೆದ್ದ ನಂತರ ಬುಮ್ರಾ ಲೆವೆಲ್ ಚೇಂಜ್ ಆಗಿದೆ.  ಫ್ಯಾನ್ ಫಾಲೋಯಿಂಗ್ ಹೆಚ್ಚಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸಾಲಿಗೆ ಬುಮ್ರಾ ಸೇರಿದ್ದಾರೆ. ಅದಕ್ಕೆ ವೀಡಿಯೋನೇ  ಸಾಕ್ಷಿ.!

ನೋಡಿದ್ರಲ್ಲಾ! ಬುಮ್ರಾ ಹವಾ ಹೇಗಿದ ಅಂತ. ಇತ್ತೀಚೆಗೆ ಬುಮ್ರಾ ಚೆನ್ನೈನಲ್ಲಿನ ಕಾಲೇಜುವೊಂದರ ಕಾರ್ಯಕ್ರಮಕ್ಕೆ ಸ್ಪೆಷಲ್ ಗೆಸ್ಟ್ ಆಗಿ ಹಾಜರಾಗಿದ್ರು. ಈ ವೇಳೆ ಬುಮ್ರಾಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಸಾಮಾನ್ಯವಾಗಿ ತಮಿಳುನಾಡಿನಲ್ಲಿ ಸಿನಿಮಾ ಸೂಪರ್‌ಸ್ಟಾರ್‌ಗಳಿಗೆ ಮಾತ್ರ ಇಂತಹ ಸ್ವಾಗತ ಸಿಗುತ್ತೆ.  ಅಂತದ್ರಲ್ಲಿ ಬುಮ್ರಾ ತಮಗೆ ಸಿಕ್ಕ ಈ ವೆಲ್‌ಕಮ್‌ಗೆ ಕ್ರಿಕೆಟ್ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದು ಬುಮ್ರಾ ರೇಂಜ್ ಅಂತಿದ್ದಾರೆ. 

ಬುಮ್ರಾರನ್ನ ಜಗತ್ತಿನ ಎಂಟನೇ ಅದ್ಭುತ ಎಂದಿದ್ದ ಕೊಹ್ಲಿ..!

ಯೆಸ್, ರೋಹಿತ್ ಶರ್ಮಾ ಪಡೆ ಟಿ20 ವರ್ಲ್ಡ್‌ಕಪ್ ಗೆದ್ದು ಬಂದ ನಂತರ ಮುಂಬೈನಲ್ಲಿ ವಿಕ್ಟರಿ ಪರೇಡ್ ನಡೆಸಿತು. ವಾಂಖೇಡೆ ಸ್ಟೇಡಿಯಂನಲ್ಲಿ ಬಿಸಿಸಿಐ ವಿಶ್ವ ವಿಜೇತರಿಗೆ ಅಭಿನಂದನಾ ಸಮಾರಂಭ ಆಯೋಜಿಸಿತ್ತು. ಈ ವೇಳೆ ಮಾತನಾಡಿದ ವಿರಾಟ್ ಕೊಹ್ಲಿ, ಫೈನಲ್ನಲ್ಲಿ ನಮ್ಮ ಗೆಲುವಿಗೆ ಬುಮ್ರಾ ಅದ್ಭುತ ಬೌಲಿಂಗೇ ಪ್ರಮುಖ ಕಾರಣ. ಇನ್ನು ಹಲವು ವರ್ಷಗಳ ಕಾಲ ಬುಮ್ರಾ ಟೀಮ್ ಇಂಡಿಯಾ ಪರ ಆಡ್ಬೇಕು ಅನ್ನೋದೆ ನಮ್ಮ ಆಸೆ. ಅವ್ರು ವಿಶ್ವದ  8ನೇ ಅದ್ಭುತ ಅಂತ ಹೇಳಿದ್ರು. ಕೊಹ್ಲಿಯ ಈ ಮಾತುಗಳೇ ಸಾಕು, ಬುಮ್ರಾ ಎಂತಹ ಗ್ರೇಟ್ ಬೌಲರ್ ಅಂತ ಹೇಳೋದಕ್ಕೆ. 

ಟಿ20 ವಿಶ್ವಕಪ್ ಟೂರ್ನಿಯದ್ಧಕ್ಕೂ ಅಬ್ಬರಿಸಿದ್ದ ಬುಮ್ರಾ..! 

ಯೆಸ್, ಟಿ20 ವಿಶ್ವಕಪ್ ಟೂರ್ನಿಯುದ್ಧಕ್ಕೂ ಬುಮ್ರಾ ಖತರ್ನಾಕ್ ಬೌಲಿಂಗ್ನಿಂದ ಧೂಳೆಬ್ಬಿಸಿದ್ರು. ಪ್ರತಿ ಪಂದ್ಯದಲ್ಲೂ ಅದ್ಭುತ ಎಸೆತಗಳ ಮೂಲಕ ಬ್ಯಾಟ್ಸ್ಮನ್ಗಳಿಗೆ ಕಂಟವಾಗಿದ್ರು. ತಂಡಕ್ಕೆ ಅಗತ್ಯವಾಗಿದ್ದಾಗಲೆಲ್ಲಾ ವಿಕೆಟ್ ಬೇಟೆಯಾಡಿದ್ರು. ಫೈನಲ್ನಲ್ಲಿ 4 ಓವರ್ ಬೌಲಿಂಗ್ ಮಾಡಿ ಕೇವಲ 18 ರನ್ ನೀಡಿ, ಎರಡು ವಿಕೆಟ್ ಎಗರಿಸಿದ್ರು. ಬದ್ಧವೈರಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ  ಬುಮ್ರಾ ಇಲ್ಲದೇ ಹೋಗಿದ್ರೆ,  ಟಿ20 ವರ್ಲ್ಡ್ಕಪ್ ಹಿಸ್ಟ್ರಿಯಲ್ಲಿ ಭಾರತ ಎರಡನೇ ಬಾರಿ ಪಾಕ್ ಶರಣಾಗ್ತಾ ಇತ್ತು. 

ಇಲೆಕ್ಟ್ರಾನಿಕ್ ಸಿಟಿಗೆ ಭೇಟಿ ಕೊಟ್ಟು ಚಪಾತಿ ಸವಿದ ಜಾಂಟಿ ರೋಡ್ಸ್‌! ಫ್ಯಾನ್ಸ್‌ ಡೌಟ್‌ಗೆ ಉತ್ತರ ಕೊಟ್ಟ ಹರಿಣಗಳ ಲೆಜೆಂಡ್

ಈ ಪಂದ್ಯದಲ್ಲಿ ಭಾರತ ನೀಡಿದ್ದ 120 ರನ್ ಟಾರ್ಗೆಟ್ ಅನ್ನು ಪಾಕಿಸ್ತಾನ ಬೆನ್ನಟ್ಟಿತ್ತು. ಅಲ್ಲಿಗೆ  ಭಾರತಕ್ಕೆ ಸೋಲು ಫಿಕ್ಸ್ ಅಂತ ಕ್ರಿಕೆಟ್ ಜಗತ್ತು ಭಾವಿಸಿತ್ತು. ಅದ್ರಂತೆ 14ನೇ ಓವರ್ವರೆಗೂ ಪಂದ್ಯ  ಪಾಕಿಸ್ತಾನದ ಕಂಟ್ರೋಲ್ನಲ್ಲಿತ್ತು. ವಿನ್ನಿಂಗ್ ಪ್ರೆಡಿಕ್ಷನ್ ಕೂಡ ಪಾಕಿಸ್ತಾನ ಪರ ಇತ್ತು. ಆದ್ರೆ, ಬುಮ್ರ ಮ್ಯಾಜಿಕ್ಗೆ ಪಾಕ್ ತತ್ತರಿಸಿ ಹೋಯ್ತು.  ಒಟ್ಟಾರೆ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿದ ಬುಮ್ರಾ, 14 ರನ್‌ಗೆ 3 ವಿಕೆಟ್  ಉರುಳಿಸಿದ್ರು. 

ಒಟ್ಟಿನಲ್ಲಿ ಭಾರತೀಯ ಕ್ರಿಕೆಟ್ನಲ್ಲಿ ಇಷ್ಟು ದಿನ ಬ್ಯಾಟ್ಸ್ಮನ್ಗಳಿಗೆ ಮಾತ್ರ ಸ್ಟಾರ್ಡಂ ಸಿಗ್ತಿತ್ತು. ಆದ್ರೀಗ, ಬುಮ್ರಾ ಬ್ಯಾಟರ್ಸ್ ಅಷ್ಟೇ ಅಲ್ಲ. ಬೌಲರ್ಗಳೂ ಸ್ಟಾರ್ಗಳೇ ಅಂತ ಪ್ರೂವ್ ಮಾಡಿದ್ದಾರೆ. ಮುಂದಿನ ಪಂದ್ಯಗಳಲ್ಲೂ ಬುಮ್ರಾ ಅದ್ಭುತ ಪ್ರದರ್ಶನ ನೀಡಲಿ, ಭಾರತಕ್ಕೆ ಮತ್ತಷ್ಟು ಪಂದ್ಯಗಳನ್ನ ಗೆದ್ದುಕೊಡಲಿ ಅನ್ನೋದೆ ನಮ್ಮ ಆಶಯ.

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 

Latest Videos
Follow Us:
Download App:
  • android
  • ios