Asianet Suvarna News Asianet Suvarna News

ಲಂಕಾ ಸರಣಿ ತಯಾರಿ ನಡುವೆ ರೋಹಿತ್ ಶರ್ಮಾ ಡ್ಯಾನ್ಸ್, ವೈರಲ್ ವಿಡಿಯೋಗೆ ಭರ್ಜರಿ ರೆಸ್ಪಾನ್ಸ್!

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ನಾಯಕ ರೋಹಿತ್ ಶರ್ಮಾ ತಯಾರಿ ನಡೆಸುತ್ತಿದ್ದಾರೆ. ಜಿಮ್‌ನಲ್ಲಿ ವರ್ಕೌಟ್ ಮಾಡಿ ಬೆವರಿಳಿಸುತ್ತಿದ್ದಾರೆ. ಇದರ ನಡುವೆ ರೋಹಿತ್ ಶರ್ಮಾ ಡ್ಯಾನ್ಸ್ ವಿಡಿಯೋ ಭಾರಿ ವೈರಲ್ ಆಗಿದೆ
 

Rohit sharma dance moves during training session ahead of India vs Sri lanka ODI series ckm
Author
First Published Jan 7, 2023, 7:39 PM IST

ಮುಂಬೈ(ಜ.07): ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಇದೀಗ ಭರ್ಜರಿ ತಯಾರಿ ಆರಂಭಿಸಿದ್ದಾರೆ. ಲಂಕಾ ವಿರುದ್ದದ ಏಕದಿನ ಸರಣಿಗಾಗಿ ರೋಹಿತ್ ಶರ್ಮಾ ಅಭ್ಯಾಸ ನಡೆಸುತ್ತಿದ್ದಾರೆ. ಮತ್ತೊಂದೆಡೆ ಜಿಮ್‌ನಲ್ಲಿ ವರ್ಕೌಟ್ ಮೂಲಕ ಫಿಟ್ನೆಸ್ ಕಡೆಗೂ ಗಮನ ನೀಡಿದ್ದಾರೆ. ಸತತ ವರ್ಕೌಟ್ ನಡುವೆ ರೋಹಿತ್ ಶರ್ಮಾ ಡ್ಯಾನ್ಸ್ ಇದೀಗ ವೈರಲ್ ಆಗಿದೆ. ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ರೋಹಿತ್ ಶರ್ಮಾ ಇದರ ನಡುವೆ ಕೆಲ ಸ್ಟೆಪ್ಸ್ ಹಾಕಿದ್ದಾರೆ. ಈ ವಿಡಿಯೋವನ್ನು ಖುದ್ದು ರೋಹಿತ್ ಶರ್ಮಾ ತಮ್ಮ ಅಧಿಕೃತ ಖಾತೆಯಿಂದ ಪೋಸ್ಟ್ ಮಾಡಿದ್ದಾರೆ.

ಶ್ರೀಲಂಕಾ(India vs Sri lanka Series) ವಿರುದ್ಧದ ಏಕದಿನ ಸರಣಿ ಜನವರಿ 10 ರಿಂದ ಆರಂಭಗೊಳ್ಳುತ್ತಿದೆ. ಮುಂದಿನ ವರ್ಷ ಭಾರತ ಏಕದಿನ ವಿಶ್ವಕಪ್ ಟೂರ್ನಿ(ODi World cup) ಆಯೋಜಿಸುತ್ತಿದೆ. ಹೀಗಾಗಿ ಫಿಟ್ನೆಸ್ ಹಾಗೂ ಫಾರ್ಮ್ ಎರಡೂ ಅತೀ ಅಗತ್ಯವಾಗಿದೆ. ಸತತ ಕ್ರಿಕೆಟ್‌ನಿಂದ ವಿಶ್ರಾಂತಿ ಪಡೆದಿರುವ ರೋಹಿತ್ ಶರ್ಮಾ(Rohit sharma) ಇದೀಗ ಜನವರಿ 10 ರಿಂದ ಏಕದಿನ ತಂಡವನ್ನು(Team India) ಮುನ್ನಡೆಸಲಿದ್ದಾರೆ. ಇದಕ್ಕಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.

ICC ಏಕದಿನ ವಿಶ್ವಕಪ್‌ಗೆ BCCI ಆಯ್ಕೆ ಮಾಡಿದ ಭಾರತ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಯಾರಿಗೆಲ್ಲಾ ಸ್ಥಾನ..?

ರೋಹಿತ್ ಶರ್ಮಾ ಫಿಟ್ನೆಸ್ ಕುರಿತು ಸಾಕಷ್ಟು ಟೀಕೆಗಳು, ಪ್ರಶ್ನೆಗಳು ಇವೆ. ಇದಕ್ಕೆ ಉತ್ತರಿಸಲು ರೋಹಿತ್ ಶರ್ಮಾ ಕಠಿಣ ವರ್ಕೌಟ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ವರ್ಕೌಟ್ ಶೆಡ್ಯೂಲ್‌ನ್ನೂ ವಿಡಿಯೋದಲ್ಲಿ ಸೇರಿಸಿದ್ದಾರೆ. ಈ ಕಠಿಣ ತರಬೇತಿ ನಡುವೆ ಸಿಕ್ಕ ಸಣ್ಣ ಸಣ್ಣ ಬಿಡುವಿನಲ್ಲಿ ರೋಹಿತ್ ಶರ್ಮಾ ಹೆಜ್ಜೆ ಹಾಕುತ್ತಾ ಎಂಜಾಯ್ ಮಾಡಿದ್ದಾರೆ.

 

 

ಮೂರು ಮಾದರಿಯಲ್ಲಿ ಟೀಂ ಇಂಡಿಯಾ ಐಸಿಸಿ ಪ್ರಶಸ್ತಿ ಗೆಲ್ಲಲು ವಿಫಲವಾಗುತ್ತಿರುವುದು ಬಿಸಿಸಿಐ ಸೇರಿದಂತೆ ಟೀಂ ಇಂಡಿಯಾ ಅಭಿಮಾನಿಗಳಿಕೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಬಿಸಿಸಿಐ ಈಗಗಾಲೇ ಪ್ರಯೋಗ ನಡೆಸುತ್ತಿದೆ. ಈ ಮೂಲಕ ಅತ್ಯುತ್ತಮ ತಂಡ ಆಯ್ಕೆಗೆ ಬಿಸಿಸಿಐ ಕಸರತ್ತು ನಡೆಸುತ್ತಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಸೇರಿದಂತೆ ಪ್ರಮುಖ ಆಟಗಾರರ ಮೇಲಿನ ಜವಾಬ್ದಾರಿ ಹೆಚ್ಚಿದೆ. ಹೀಗಾಗಿ ಬಿಸಿಸಿಐ ಟಿ20 ಟೂರ್ನಿಯಿಂದ ಹಿರಿಯರಿಗೆ ವಿಶ್ರಾಂತಿ ನೀಡುತ್ತಿದೆ. ಕೇವಲ ಏಕದಿನ ಹಾಗೂ ಟೆಸ್ಟ್ ಸರಣಿಗೆ ಮಾತ್ರ ಪ್ರಮುಖರಿಗೆ ಅವಕಾಶ ನೀಡುತ್ತಿದೆ.

ಟೆಸ್ಟ್‌, ಏಕದಿನದಲ್ಲಿ ರೋಹಿತ್‌ ಶರ್ಮಾ ನಾಯಕತ್ವ ಅಬಾಧಿತ..!

ಪ್ರಮುಖ ಆಟಾಗರರ ವಿಶ್ರಾಂತಿಗೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಗರಂ ಆಗಿದ್ದಾರೆ. ಪ್ರಮುಖ ಸರಣಿ ಮುಂದಿಟ್ಟುಕೊಂಡು ಪದೇ ಪದೇ ವಿಶ್ರಾಂತಿ ಪಡೆದುಕೊಲ್ಳುವುದು ಸೂಕ್ತವಲ್ಲ ಎಂದಿದ್ದಾರೆ. ವಿಶ್ವಕಪ್ ಟೂರ್ನಿ ಆಗಮಿಸುತ್ತಿದೆ. ಭಾರತದಲ್ಲಿ ಟೂರ್ನಿ ನಡೆಯುತ್ತಿರುವುದರಿಂದ ಟೀಂ ಇಂಡಿಯಾಗೆ ಪ್ರಶಸ್ತಿ ಗೆಲ್ಲುವ ಅವಕಾಶ ಹೆಚ್ಚಿದೆ. ಸದ್ಯ ಆಡೋ ಹನ್ನೊಂದರ ಬಳಗ  ಆಯ್ಕೆಯಾಗಿಲ್ಲ. ಒಂದು ಸೆಟ್ ತಂಡ ಹೆಚ್ಚು ಪಂದ್ಯ ಆಡಿದ ಬಳಿಕವಷ್ಟೇ ಉತ್ತಮ ಫಲಿತಾಂಶ ನೀಡಲು ಸಾಧ್ಯವಾಗಲಿದೆ. ಹೀಗಾಗಿ ವಿಶ್ರಾಂತಿ ಈ ಸಮಸ್ಯೆಗಳಿಗೆ ಉತ್ತರವಾಗುವುದಿಲ್ಲ ಎಂದು ಗಂಭೀರ್ ಹೇಳಿದ್ದಾರೆ.
 

Follow Us:
Download App:
  • android
  • ios