Asianet Suvarna News Asianet Suvarna News

ಹೆಬ್ಬೆರಳಿಗೆ ಗಂಭೀರ ಗಾಯವಾದರೂ, ಗೆಲುವಿಗಾಗಿ ಕ್ರೀಸ್‌ಗಿಳಿದ ರೋಹಿತ್‌ ಶರ್ಮ!

ಬಾಂಗ್ಲಾದೇಶ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಹೆಬ್ಬೆರಳಿಗೆ ಗಾಯ ಮಾಡಿಕೊಂಡು ಪಂದ್ಯದ ಹೆಚ್ಚಿನ ಸಮಯ ಹೊರಗೆ ಕಳೆದಿದ್ದ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮ, ತಂಡ ಸೋಲುವಂತಿದ್ದ ಸಮಯದಲ್ಲಿ ಬ್ಯಾಟಿಂಗ್‌ಗೆ ಮಾಡಲು ಇಳಿಯುವ ಮೂಲಕ ಗಮನಸೆಳೆದಿದ್ದಾರೆ.

Rohit Sharma After getting hit on thumb and going to a hospital to get scans come to bat vs bangladesh san
Author
First Published Dec 7, 2022, 7:42 PM IST

ಢಾಕಾ (ಡಿ.7): ಹೆಬ್ಬೆರಳಿಗೆ ಗಾಯ ಮಾಡಿಕೊಂಡು ಪಂದ್ಯದ ನಡುವೆಯೇ ಆಸ್ಪತ್ರೆಗೆ ತೆರಳಿ ಸ್ಕ್ಯಾನ್‌ಗೆ ಒಳಗಾಗಿದ್ದ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮ, ತಂಡ ಸೋಲುವಂತಿದ್ದ ಸಂದರ್ಭದಲ್ಲಿ ಬ್ಯಾಟಿಂಗ್‌ಗೆ ಇಳಿಯುವ ಮೂಲಕ ಸಾಹಸ ಮಾಡಿದ್ದರು. ಟೀಮ್‌ ಇಂಡಿಯಾ ಬೌಲಿಂಗ್‌ ವೇಳೆ ರೋಹಿತ್‌ ಶರ್ಮ ಸ್ಲಿಪ್‌ನಲ್ಲಿ ನಿಂತಿದ್ದರು. ಮೊಹಮದ್‌ ಸಿರಾಜ್‌ ಅವರ ಎಸೆತದಲ್ಲಿ ಬಂದ ಕ್ಯಾಚ್‌ಅನ್ನು ಪಡೆದುಕೊಳ್ಳುವ ಯತ್ನದಲ್ಲಿ ಗಾಯಗೊಂಡಿದ್ದರು. ಬಳಿಕ ಮೈದಾನದಿಂದ ಹೊರಗುಳಿದಿದ್ದ ರೋಹಿತ್‌ ಶರ್ಮ, 8ನೇ ವಿಕೆಟ್‌ಗೆ ಬ್ಯಾಟಿಂಗ್‌ಗೆ ಇಳಿಯುವ ಮೂಲಕ ಧೈರ್ಯ ತೋರಿದರು. ಶಾರ್ದೂಲ್‌ ಠಾಕೂರ್‌ ಔಟಾದ ಬಳಿಕ ಕ್ರೀಸ್‌ಗೆ ರೋಹಿತ್‌ ಶರ್ಮ ಮೈದಾನಕ್ಕೆ ಇಳಿದಿದ್ದರು. ಈ ವೇಳೆ ತಂಡದ ಗೆಲುವಿಗೆ 42 ಎಸೆತಗಳಲ್ಲಿ 64 ರನ್‌ ಬೇಕಿದ್ದವು. ಈ ಹಂತದಲ್ಲಿ ತಮ್ಮ ಕೈಲಾದ ಪ್ರಯತ್ನವನ್ನು ರೋಹಿತ್‌ ಶರ್ಮ ಮಾಡಿದರು.'ನಮ್ಮ ಧೈರ್ಯಶಾಲಿ ಕ್ಯಾಪ್ಟನ್‌. ಹೆಬ್ಬರಳಿಗೆ ಪೆಟ್ಟು ಮಾಡಿಕೊಂಡು, ಸ್ಕ್ಯಾನ್‌ ಮಾಡಲು ಆಸ್ಪತ್ರೆಗೆ ಹೋಗಿದ್ದ ಬಳಿಕವೂ ರೋಹಿತ್‌ ಶರ್ಮ, ಬ್ಯಾಟ್‌ ಹಿಡಿದು ಮೈದಾನಕ್ಕೆ ಆಗಮಿಸಿದ್ದಾರೆ. ಭಾರತಕ್ಕೆ ಈಗ 42 ಎಸೆತಗಳಲ್ಲಿ 64 ರನ್ ಅಗತ್ಯವಿದೆ' ಎಂದು ಬಿಸಿಸಿಐ ಕೂಡ ಟ್ವೀಟ್‌ ಮಾಡಿತ್ತು. 

ಕೊನೇ ಹಂತದಲ್ಲಿ 28 ಎಸೆತಗಳನ್ನು ಎದುರಿಸಿದ ರೋಹಿತ್‌ ಶರಮ್ ಆಕಷರ್ಕ 5 ಸಿಕ್ಸರ್‌ ಹಾಗೂ ಮೂರು ಬೌಂಡರಿಗಳೊಂದಿಗೆ 51 ರನ್‌ ಸಿಡಿಸಿದರಾದರೂ ಇದಕ್ಕೆ ಫಲ ಸಿಗಲಿಲ್ಲ. ಮುಸ್ತಾಫಿಜುರ್‌ ರೆಹಮಾನ್‌ ಎಸೆದ 48ನೇ ಓವರ್‌ಅನ್ನು ಮೊಹಮದ್‌ ಸಿರಾಜ್‌ ಸಂಪೂರ್ಣವಾಗಿ ಮೇಡನ್‌ ಮಾಡಿದರೆ, 50ನೇ ಓವರ್‌ನಲ್ಲಿ ರೋಹಿತ್‌ ಶರ್ಮ 2 ಬೌಂಡರಿ ಹಾಗೂ 1 ಸಿಕ್ಸರ್‌ ಸಿಡಿಸಿದ್ದರು. ಕೊನೇ ಎಸೆತದಲ್ಲಿ ಆರು ರನ್‌ ಬೇಕಿದ್ದಾಗ ಸಿಕ್ಸರ್‌ ಬಾರಿಸುವ ಯತ್ನದಲ್ಲಿ ರೋಹಿತ್‌ ಎಡವಿದರು. ಆದರೆ, ರೋಹಿತ್‌ ಶರ್ಮ ಆಡಿದ ಆಟ ಮಾತ್ರ ಬಾಂಗ್ಲಾದೇಶವನ್ನು ಕಂಗೆಡಿಸಿತ್ತು.

IND vs BAN ಗಾಯದ ನಡುವೆ ರೋಹಿತ್ ಹೋರಾಟ, ಬಾಂಗ್ಲಾ ವಿರುದ್ಧ ಮುಗ್ಗರಿಸಿ ಸರಣಿ ಕೈಚೆಲ್ಲಿದ ಭಾರತ!

ಇನ್ನೊಂದೆಡೆ ಇದು ಬಾಂಗ್ಲಾದೇಶ ಪಾಲಿಗೆ ಇದು ಸ್ಮರಣೀಯ ಗೆಲುವು ಎನಿಸಿದೆ. ಅದಲ್ಲದೆ, ಏಳು ವರ್ಷಗಳ ಅಂತರದಲ್ಲಿ ಭಾರತದ ವಿರುದ್ಧ ತವರಿನಲ್ಲಿ ತಂಡದ ಸತತ 2ನೇ ಸರಣಿ ಗೆಲುವು ಎನಿಸಿದೆ. 2016ರ ಅಕ್ಟೋಬರ್‌ನಿಂದ ಬಾಂಗ್ಲಾದೇಶ, ಭಾರತದ ವಿರುದ್ಧ ತವರಿನ ಏಕದಿನ ಸರಣಿಯಲ್ಲಿ ಸೋಲು ಕಂಡಿಲ್ಲ. ಆದರೆ, ಈ ಸರಣಿಯ ಫಲಿತಾಂಶವನ್ನು ಯಾರೂ ಕೂಡ ನಿರೀಕ್ಷೆ ಮಾಡಿರಲಿಲ್ಲ.

IND vs BAN ಗಾಯಗೊಂಡ ರೋಹಿತ್ ಬಾಂಗ್ಲಾ ಸರಣಿಗೆ ಡೌಟ್, ಐಪಿಎಲ್‌ಗೆ ಕಮ್‌ಬ್ಯಾಕ್!

ಗಾಯಗೊಂಡಿದ್ದ ನಡುವೆಯೂ ರೋಹಿತ್‌ ಶರ್ಮ ಸಾಕಷ್ಟು ಪ್ರಯತ್ನ ಮಾಡಿದರು. ಸಿಕ್ಸರ್‌ಗಳ ಮೇಲೆ ಸಿಕ್ಸರ್‌ ಸಿಡಿಸಿ ತಂಡವನ್ನು ಗೆಲುವಿನ ದಡಕ್ಕೆ ಮುಟ್ಟಿಸುವ ಪ್ರಯತ್ನ ಮಾಡಿದರು. ಆದರೆ ಕೊನೆಯಲ್ಲಿ ಮುಸ್ತಾಫಿಜುರ್‌ ರೆಹಮಾನ್‌ ಎಸೆದ 48ನೇ ಓವರ್‌ ಪಂದ್ಯದಲ್ಲಿ ಪ್ರಮುಖ ಮಾತ್ರ ವಹಿಸಿತು. ಅದಕ್ಕೂ ಮುನ್ನ ಮಹದಿ ಹಸನ್‌ ಹಾಗೂ ಮಹಮದುಲ್ಲಾ ಎಸೆದ 46ನೇ ಓವರ್‌ನಲ್ಲೂ ಕೇವಲ 1 ರನ್‌ ಮಾತ್ರವೇ ಬಂದಿತ್ತು. ಇದೂ ಕೂಡ ತಂಡದ ಸೋಲಿಗೆ ಕಾರಣವಾಯಿತು. ಎಬಾದತ್‌ ಹಸನ್‌ ಎಸೆದ 46ನೇ ಓವರ್‌ನಲ್ಲಿ ರೋಹಿತ್‌ ಶರ್ಮ ಎರಡು ಸಿಕ್ಸರ್‌ ಹಾಗೂ 1 ಬೌಂಡರಿ ಸಿಡಿಸಿದ್ದರು.

Follow Us:
Download App:
  • android
  • ios