Asianet Suvarna News Asianet Suvarna News

IND vs BAN ಗಾಯದ ನಡುವೆ ರೋಹಿತ್ ಹೋರಾಟ, ಬಾಂಗ್ಲಾ ವಿರುದ್ಧ ಮುಗ್ಗರಿಸಿ ಸರಣಿ ಕೈಚೆಲ್ಲಿದ ಭಾರತ!

ಶ್ರೇಯಸ್ ಅಯ್ಯರ್ ಹಾಗೂ ಅಕ್ಸರ್ ಪಟೇಲ್ ಹೋರಾಟ ವ್ಯರ್ಥವಾಗಿದೆ. ಅಂತಿಮ ಹಂತದಲ್ಲಿ ರೋಹಿತ್ ಶರ್ಮಾಗೆ ಎರಡೆರಡು ಜೀವದಾನ ಸಿಕ್ಕಿದರೂ ತಂಡವವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಬಲಿಷ್ಠ ಟೀಂ ಇಂಡಿಯಾ ಎರಡನೇ ಏಕದಿನದಲ್ಲೂ ಬಾಂಗ್ಲಾಗೆ ಶರಣಾಗಿದೆ. ಇದರೊಂದಿಗೆ 0-2 ಅಂತರದಲ್ಲಿ ಏಕದಿನ ಸರಣಿ ಕೈಚೆಲ್ಲಿದೆ.

IND vs BAN Team India surrendered Bangladesh on 2nd odi and lose series by 0-2 ckm
Author
First Published Dec 7, 2022, 7:55 PM IST

ಢಾಕ(ಡಿ.07):  ಟಿ20 ವಿಶ್ವಕಪ್ ಸೋಲಿನ ಬಳಿಕ ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿಇಲ್ಲ ಅನ್ನೋದು ಬಹಿರಂಗವಾಗಿದೆ. ಇದೀಗ ಮತ್ತೆ ಮತ್ತೆ ಇದು ಸಾಬೀತಾಗುತ್ತಿದೆ. ಇದೀಗ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯನ್ನೂ ಭಾರತ ಕೈಚೆಲ್ಲಿದೆ. ಎರಡನೇ ಏಕದಿನ ಪಂದ್ಯದಲ್ಲಿ 272 ರನ್ ಟಾರ್ಗೆಟ್ ಬೆನ್ನಟ್ಟಿದ ಟೀಂ ಇಂಡಿಯಾಗೆ ಶ್ರೇಯಸ್ ಅಯ್ಯರ್ ಹಾಗೂ ಅಕ್ಸರ್ ಪಟೇಲ್ ಹೋರಾಟ ತೋರಿದರು.   ಅಂತಿಮ ಹಂತದಲ್ಲಿ ನಾಯಕ ರೋಹಿತ್ ಶರ್ಮಾ ಬೌಂಡರಿ ಸಿಕ್ಸರ್ ಸಿಡಿಸಿ ಅಬ್ಬರಿಸಿದರೂ ಗೆಲುವು ಸಿಗಲಿಲ್ಲ. ಅಂತಿಮ ಓವರ್‌ನಲ್ಲಿ 20 ರನ್ ಅವಶ್ಯಕತೆ ಇತ್ತು. ಆದರೆ ಭಾರತ 5 ರನ್ ಸೋಲು ಕಂಡಿತು. ಈ ಹಿನ್ನಡೆಯೊಂದಿಗೆ ಭಾರತ 3 ಪಂದ್ಯಗಳ ಸರಣಿಯನ್ನು 0-2 ಅಂತರದಲ್ಲಿ ಕೈಚೆಲ್ಲಿದೆ.

ಭಾರತಕ್ಕೆ 272 ರನ್ ಟಾರ್ಗೆಟ್ ಸಿಕ್ಕಿತ್ತು. ಫೀಲ್ಡಿಂಗ್ ವೇಳೆ ಕೈಬೆರಳಿಗೆ ಗಾಯಗೊಂಡಿದ್ದ ನಾಯಕ ರೋಹಿತ್ ಶರ್ಮಾ ಆಸ್ಪತ್ರೆ ದಾಖಲಾಗಿದ್ದರು. ಹೀಗಾಗಿ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಆರಂಭಿಕರಾಗಿ ಕಣಕ್ಕಿಳಿಯಬೇಕಾಯತು. ಈ ಜೋಡಿ ನಿರೀಕ್ಷಿತ ಆರಂಭ ನೀಡಲು ವಿಫಲವಾಯಿತು. ಕೇವಲ 7 ರನ್ ಜೊತೆಯಾಟಕ್ಕೆ ಆರಂಭಿಕರ ಹೋರಾಟ ಅಂತ್ಯಗೊಂಡಿತು. ವಿರಾಟ್ ಕೊಹ್ಲಿ 5 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಶಿಖರ್ ಧವನ್ 8 ರನ್ ಸಿಡಿಸಿ ಔಟಾದರು.

ಶ್ರೇಯಸ್ ಅಯ್ಯರ್ ಏಕಾಂಗಿ ಹೋರಾಟ ಆರಂಭಿಸಿದರು. ಇತ್ತ ವಾಶಿಂಗ್ಟನ್ ಸುಂದರ್ 11 ರನ್ ಸಿಡಿಸಿ ಔಟಾದರು. ಇತ್ತ ಕೆಎಲ್ ರಾಹುಲ್ 14 ರನ್ ಸಿಡಿಸಿ ಔಟಾದರು.  65 ರನ್‌ಗೆ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡಿತು. ಇಷ್ಟೇ ಅಲ್ಲ ಟೀಂ ಇಂಡಿಯಾ ಸೋಲಿನತ್ತ ವಾಲತೊಡಗಿತು. ಇತ್ತ ಅಕ್ಸರ್ ಪಟೇಲ್ ಹಾಗೂ ಶ್ರೇಯಸ್ ಅಯ್ಯರ್ ಜೊತೆಯಾಟ ಟೀಂ ಇಂಡಿಯಾದಲ್ಲಿ ಮತ್ತೆ ಗೆಲುವಿನ ಆಸೆ ಚಿಗುರಿಸಿತು. 

ಶ್ರೇಯಸ್ ಅಯ್ಯರ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಇತ್ತ ಅಕ್ಸರ್ ಪಟೇಲ್ ಉತ್ತಮ ಸಾಥ್ ನೀಡಿದರು. ಈ ಪಾರ್ಟ್ನಶಿಪ್ ಬಾಂಗ್ಲಾದೇಶದ ತಲೆನೋವು ಹೆಚ್ಚಿಸಿತು. ಜೊತೆಯಾಟ ಬ್ರೇಕ್ ಮಾಡಲು ಹಲವು ಪ್ರಯತ್ನಗಳನ್ನು ಮಾಡಿದರೂ ಪ್ರಯೋಜನವಾಗಲಿಲ್ಲ. ಶತಕದತ್ತ ಮುನ್ನುಗ್ಗಿದ ಶ್ರೇಯಸ್ ಅಯ್ಯರ್‌ಗೆ ಮೆಹದಿ ಹಸನ್ ವಿಕೆಟ್ ಒಪ್ಪಿಸಿದರು. ಅಯ್ಯರ್ 102 ಎಸೆತದಲ್ಲಿ 82 ರನ್ ಸಿಡಿಸಿ ಔಟಾದರು.

ಹಾಫ್ ಸೆಂಚುರಿ ಸಿಡಿಸಿದ ಅಕ್ಸರ್ ಪಟೇಲ್ 56 ರನ್ ಸಿಡಿಸಿ ಔಟಾದರು. ನಂತರ ಬಂದ ಶಾರ್ದೂಲ್ ಠಾಕೂರ್ ಹಾಗೂ ದೀಪಕ್ ಚಹಾರ್ ಅಬ್ಬರಿಸಲಿಲ್ಲ. ಆದರೆ ಗಾಯದಿಂದ ಚೇರಿಸಿಕೊಂಡ ನಾಯಕ ರೋಹಿತ್ ಶರ್ಮಾ ಅಂತಿಮ ಹಂತದಲ್ಲಿ ಕಣಕ್ಕಿಳಿದರು. ಈ ವೇಳೆ ಬಾಂಗ್ಲಾದೇಶದ ಆತ್ಮವಿಶ್ವಾಸ ಕುಗ್ಗಿತು. ಮೊಹಮ್ಮದ್ ಸಿರಾಜ್ ಜೊತೆ ಸೇರಿದ ರೋಹಿತ್ ಶರ್ಮಾ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿದರು.

49ನೇ ಓವರ್‌ನಲ್ಲಿ ರೋಹಿತ್ ಶರ್ಮಾ ಎರಡು ಕ್ಯಾಚ್ ಡ್ರಾಪ್ ಮಾಡಲಾಯಿತು. ಇದು ಭಾರತಕ್ಕೆ ವರದಾನವಾಯಿತು. ಇತ್ತ ಮೊಹಮ್ಮದ್ ಸಿರಾಜ್ 2 ರನ್ ಸಿಡಿಸಿ ಔಟಾದರು. ಅಂತಿಮ 6 ಎಸೆತದಲ್ಲಿ ಭಾರತ ಗೆಲುವಿಗೆ 20 ರನ್ ಅವಶ್ಯಕತೆ ಇತ್ತು. ಮೊದಲ ಎಸತದಲ್ಲಿ ಯಾವುದೇ ರನ್ ಬರಲಿಲ್ಲ. ಎರಡನೇ ಎಸೆತ ಬೌಂಡರಿ ಗಟ್ಟಿದರೆ, ಮೂರನೇ ಎಸೆತದಲ್ಲಿ ಮತ್ತೊಂದ ಫೋರ್. ಆದರೆ ನಾಲ್ಕನೇ ಎಸೆತದಲ್ಲಿ ನೋ ರನ್. ಅಂತಿಮ 2 ಎಸೆತದಲ್ಲಿ 12 ರನ್ ಅವಶ್ಯಕತೆ ಇತ್ತು. 5ನೇ ಸಿಕ್ಸರ್ ಸಿಡಿಸಿದರೆ, ಅಂತಿಮ ಎಸೆತದಲ್ಲಿ ಯಾವುದೇ ರನ್ ಸಿಡಿಸಲು ಸಾಧ್ಯವಾಗಲಿಲ್ಲ. ಪರಿಣಾಮ ಭಾರತ 5 ರನ್ ಸೋಲು ಕಂಡಿತು. ರೋಹಿತ್ 21 ಎಸೆದಲ್ಲಿ 58 ರನ್ ಸಿಡಿಸಿದರು. ಈ ಸೋಲಿನೊಂದಿಗೆ ಬಾಂಗ್ಲಾದೇಶ 2-0 ಅಂತರದಲ್ಲಿ ಸರಣಿ ಗೆದ್ದಿತು. 

Follow Us:
Download App:
  • android
  • ios