22 ವರ್ಷದ ರಿಷಬ್ ಪಂತ್ ಹಾಗೂ ಗೆಳತಿ ಇಶಾ ನೇಗಿ ನಡುವಿನ ಪ್ರೀತಿಗೆ 5 ವರ್ಷ ಪೂರೈಸಿದೆ. ಅಂದರೆ ಪಂತ್ ತಮ್ಮ 17ನೇ ವಯಸ್ಸಿನಲ್ಲೇ ಪೀತಿ ಪ್ರೇಮದಾಟ ಆರಂಭಿಸಿದ್ದಾರೆ. ಇದೀಗ ಪಂತ್ ಹೊಸ ವರ್ಷವನ್ನು ಗೆಳತಿಯೊಂದಿಗೆ ಆಚರಿಸಿದ್ದಾರೆ. ಈ ವೇಳೆ ಪ್ರೀತಿ ಆರಂಭ ಕುರಿತ ಮಾಹಿತಿ ಬಿಚ್ಚಿಟ್ಟಿದ್ದಾರೆ.
ನವದೆಹಲಿ(ಜ.04): ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ ಹೊಸ ವರ್ಷವನ್ನು ಪ್ರೇಯಸಿ ಇಶಾ ನೇಗಿ ಜತೆ ಆಚರಿಸಿದ್ದಾರೆ. ಲಂಕಾ ವಿರುದ್ಧ ಟಿ20 ಸರಣಿಗೂ ಮುನ್ನ ಸಿಕ್ಕ ಬಿಡುವಿನ ಸಮಯದಲ್ಲಿ ಪಂತ್, ಇಶಾ ಜತೆ ಹಿಮಪರ್ವತವೊಂದಕ್ಕೆ ತೆರಳಿ ಸಮಯ ಕಳೆದಿದ್ದಾರೆ.
ಇದನ್ನೂ ಓದಿ: ರಿಷಭ್ ಪಂತ್ ಇನ್ನಷ್ಟು ಪಳಗಲಿ: MSK ಪ್ರಸಾದ್
ಇನ್‌ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಹಾಕಿರುವ ಪಂತ್, ‘ನೀನು ನನ್ನೊಂದಿಗಿದ್ದರೆ ನನ್ನನ್ನು ನಾನು ಹೆಚ್ಚು ಇಷ್ಟಪಡುತ್ತೇನೆ’ ಎಂದು ಶೀರ್ಷಿಕೆ ಬರೆದಿದ್ದಾರೆ. ತಮ್ಮಿಬ್ಬರ ಪ್ರೀತಿ 5 ವರ್ಷ ಪೂರೈಸಿದೆ ಎಂದು ಇಶಾ ಇನ್‌ಸ್ಟಾಗ್ರಾಂನಲ್ಲಿ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಪಂತ್ ಮೇಲೆ ಬಿಸಿಸಿಐಗೆ ಮೋಹ, ಅರ್ಥವಾಗುತ್ತಿಲ್ಲ ಇತರರ ದಾಹ!
ನಿಗದಿತ ಓವರ್ ಕ್ರೆಕೆಟ್‌ನಲ್ಲಿ ರಿಷಬ್ ಪಂತ್ ಕಳಪೆ ಬ್ಯಾಟಿಂಗ್ ಪ್ರದರ್ಶನ ಟೀಕೆಗೆ ಗುರಿಯಾಗಿದೆ. ಎಂ.ಎಸ್.ಧೋನಿ ಬದಲು ತಂಡ ಸೇರಿಕೊಂಡಿರುವ ಪಂತ್, ಎಲ್ಲರ ನಿರೀಕ್ಷೆ ಹುಸಿಗೊಳಿಸಿದ್ದಾರೆ. ಸತತ ವೈಫಲ್ಯ ಅನುಭವಿಸಿರುವ ಪಂತ್, ಇದೀಗ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಕಮ್‌ಬ್ಯಾಕ್ ಮಾಡೋ ವಿಶ್ವಾಸದಲ್ಲಿದ್ದಾರೆ.
