ಟೀಮ್‌ ಇಂಡಿಯಾ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌, ಮಂಗಳವಾರ 25ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡಿದೆ. ಈ ಸಂದರ್ಭದಲ್ಲಿ ಅವರ ಗೆಳತಿ ಇಶಾ ನೇಗಿ ರೋಮ್ಯಾಂಟಿಕ್‌ ಆಗಿ ಜನ್ಮದಿನದ ಶುಭ ಕೋರಿದ್ದಾರೆ. ದೀರ್ಘಕಾಲದಿಂದ ನೇಗಿ ಹಾಗೂ ರಿಷಭ್‌ ಪಂತ್‌ ಡೇಟಿಂಗ್‌ ಮಾಡುತ್ತಿದ್ದಾರೆ. ಇದನ್ನು ಈ ಬಾರಿಯೂ ಸೋಷಿಯಲ್‌ ಮೀಡಿಯಾದಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಬೆಂಗಳೂರು (ಅ.4): ಟೀಮ್‌ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಹಾಗೂ ಸ್ಫೋಟಕ ಆಟಗಾರ ರಿಷಭ್‌ ಪಂತ್ ಮಂಗಳವಾರ (ಅಕ್ಟೋಬರ್ 4) 25 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅಭಿಮಾನಿಗಳು ಸೇರಿದಂತೆ ಕ್ರೀಡಾ ಲೋಕದ ಅನೇಕ ದಿಗ್ಗಜರು ಕೂಡ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಅದೇ ರೀತಿ ಅವರ ಗೆಳತಿ ಇಶಾ ನೇಗಿ ಕೂಡ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಾರೆ. ಇದು ಪಂತ್‌ಗೆ ಬಹಳ ವಿಶೇಷವಾಗಿತ್ತು. ಇಶಾ ನೇಗಿ ಮತ್ತು ರಿಷಭ್‌ ಪಂತ್ ದೀರ್ಘಕಾಲದಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ, ಈ ಹಿಂದೆ ಸಾಕಷ್ಟು ಬಾರಿ ಸಾಮಾಜಿಕ ಮಾಧ್ಯಮದಲ್ಲೂ ಇದನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಈ ಬಾರಿಯೂ ಅಂಥದ್ದೇ ರೋಮ್ಯಾಂಟಿಕ್‌ ಆಗಿ ಇಶಾ ನೇಗಿ ಅವರು ವಿಶ್‌ ಮಾಡಿದ್ದಾರೆ. ಇಶಾ ನೇಗಿ ಅವರು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ ರಿಷಬ್ ಪಂತ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಅಷ್ಟೇ ಅಲ್ಲ ಇಶಾ ನೇಗಿ, ಪಂತ್ ಅವರ ಕೆಲವು ಫೋಟೋಗಳನ್ನು ಮಿಕ್ಸ್ ಮಾಡಿ ವಿಡಿಯೋ ಮಾಡಿದ್ದಲ್ಲದೆ ಅದರಲ್ಲಿ 'ಮೈ ಲವ್' ಅಂತ ಬರೆದಿದ್ದಾರೆ. ಅದೇನೆಂದರೆ, ಈ ಬಾರಿಯೂ ಇಶಾ ನೇಗಿ ರಿಷಬ್ ಪಂತ್ ಮೇಲೆ ಪ್ರೀತಿಯ ಸುರಿಮಳೆಗೈಯುತ್ತಲೇ ರೊಮ್ಯಾಂಟಿಕ್ ಬರ್ತ್ ಡೇ ಗಿಫ್ಟ್ ನೀಡಿದ್ದಾರೆ. ವೀಡಿಯೊದ ಹಿನ್ನೆಲೆಯಲ್ಲಿ ಹುಟ್ಟುಹಬ್ಬದ ಹಾಡು ಪ್ಲೇ ಆಗುತ್ತಿದೆ. ಇಶಾ ವೀಡಿಯೊ ಶೀರ್ಷಿಕೆಯಲ್ಲಿ, 'ಹ್ಯಾಪಿ ಬರ್ತ್‌ಡೇ ಮೈ ಲವ್‌' ಎಂದು ಬರೆದಿದ್ದಾರೆ. ಇದರೊಂದಿಗೆ ಇಶಾ ನೇಗಿ ಹೃದಯದ ಎಮೋಜಿಯನ್ನೂ ಪೋಸ್ಟ್‌ ಮಾಡಿದ್ದಾರೆ.


ಯಾರಿವರು ಇಶಾ ನೇಗಿ: ರಿಷಬ್ ಪಂತ್ ಅವರಂತೆಯೇ ಇಶಾ ನೇಗಿ ಕೂಡ ಉತ್ತರಾಖಂಡದ ಮೂಲದವರು. ಇಶಾ ನೇಗಿ ಇಂಟೀರಿಯರ್ ಡಿಸೈನರ್. ಇದಲ್ಲದೇ ಫ್ಯಾಶನ್ ಡಿಸೈನಿಂಗ್ ಕೂಡ ಮಾಡುತ್ತಾರೆ. ಇಶಾ ನೇಗಿ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಂದ ಸಾಕಷ್ಟು ಚರ್ಚೆಯಲ್ಲಿ ಉಳಿದಿದ್ದಾರೆ. ಈ ಬಾರಿ ಐಪಿಎಲ್ 2022 ರಲ್ಲೂ ನಿರಂತರವಾಗಿ ರಿಷಬ್ ಪಂತ್ ಅವರನ್ನು ಬೆಂಬಲಿಸಲು ಇಶಾ ಬಂದಿದ್ದರು ಮತ್ತು ಅವರ ವೀಡಿಯೊಗಳು, ಫೋಟೋಗಳು ಸಾಕಷ್ಟು ವೈರಲ್ ಆಗಿವೆ.

Asia Cup 2022 ಕೊನೇ ಓವರ್‌ನಲ್ಲಿ ಡೈರೆಕ್ಟ್‌ ಹಿಟ್‌ ಮಿಸ್‌ ಮಾಡಿದ ಪಂತ್‌, ಟ್ವಿಟರ್‌ನಲ್ಲಿ Miss You MS Dhoni ಟ್ರೆಂಡ್‌!

ಇಶಾ ನೇಗಿ ಜನ್ಮದಿನಕ್ಕೂ ವಿಶ್‌ ಮಾಡಿದ್ದ ಪಂತ್‌: ಇನ್ನು ಕಳೆದ ತಿಂಗಳು ಇಶಾ ನೇಗಿ (Isha Negi) ಕೂಡ ತಮ್ಮ ಜನ್ಮದಿನ ಆಚರಿಸಿಕೊಂಡಿದ್ದರು. ಈ ವೇಳೆ ರಿಷಭ್‌ ಪಂತ್‌ (Rishabh Pant) ಕೂಡ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಅನ್ನು ಶೇರ್‌ ಮಾಡುವ ಮೂಲಕ ಜನ್ಮದಿನದ ಶುಭ ಕೋರಿದ್ದರು. ಆ ಪೋಸ್ಟ್‌ನಲ್ಲಿ ರಿಷಭ್‌, ಇಶಾ ನೇಗಿ ಅವರನ್ನು ಕ್ವೀನ್‌ ಎಂದು ಕರೆದಿದ್ದರು. ಇದಕ್ಕೆ ಪ್ರತಿಯಾಗಿ ಇಶಾ ಕೂಡ ರಿಷಬ್ ಪಂತ್ ಗೆ ಐ ಲವ್ ಯೂ ವಿಶ್ ಎಂದು ಹೇಳಿದ್ದರು. ಇಶಾ ನೇಗಿ ಸೋಷಿಯಲ್‌ ಮೀಡಿಯಾದಲ್ಲಿ (Social Media) ಸೆಲಿಬ್ರಿಟಿಯಾಗಿದ್ದು, ಅವರು ಇನ್ಸ್‌ಟಾಗ್ರಾಮ್‌ನಲ್ಲಿ ಲಕ್ಷಾಂತರ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ ಮತ್ತು ಅವರ ವೀಡಿಯೊಗಳು, ಫೋಟೋಗಳು ಸಾಕಷ್ಟು ವೈರಲ್ ಆಗಿವೆ.

ರಕ್ಷಾಬಂಧನ ವಿಶೇಷ: ಸಹೋದರಿಯರಿಂದಲೇ ಸ್ಟಾರ್‌ ಪ್ಲೇಯರ್‌ಗಳಾದ ಐವರು ಕ್ರಿಕೆಟಿಗರು!

ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲಿರುವ ರಿಷಭ್‌: ಇನ್ನು ಎರಡು ವಾರಗಳ ಬಳಿಕ ರಿಷಭ್‌ ಪಂತ್‌ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ(T20 World Cup) ಅವರು ಪಾಲ್ಗೊಳ್ಳಲು ಟೀಮ್‌ ಇಂಡಿಯಾದ ಭಾಗವಾಗಿದ್ದಾರೆ. ಭಾರತ ತಂಡದ ಮೊದಲ ಪಂದ್ಯ ಅಕ್ಟೋಬರ್‌ 23 ರಂದು ಪಾಕಿಸ್ತಾನದ ವಿರುದ್ಧ ನಡೆಯಲಿದೆ. ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧ ತವರಿನ ಟಿ20 ಸರಣಿಯಲ್ಲಿ ಅವರು ಆಡುತ್ತಿದ್ದಾರೆ.