'ಪಂದ್ಯಕ್ಕೂ ಮುನ್ನ ಧೋನಿ ಜತೆ ಮಾತಾಡಿದ್ದೆ': ಮ್ಯಾಚ್ ಫಿನಿಶರ್ ರಿಂಕು ಸಿಂಗ್ ಮನದಾಳದ ಮಾತು
ಕೊನೆಯ ಎಸೆತದಲ್ಲಿ ಭಾರತ ಗೆಲ್ಲಲು ಒಂದು ರನ್ ಬೇಕಿತ್ತು. ಆಗ ರಿಂಕು ಸಿಂಗ್ ಆಕರ್ಷಕ ಸಿಕ್ಸರ್ ಸಿಡಿಸಿ ಸಂಭ್ರಮಿಸಿದರು. ಆದರೆ ಶಾನ್ ಅಬ್ಬೋಟ್ ಎಸೆದ ಆ ಚೆಂಡು ನೋ ಬಾಲ್ ಆಗಿದ್ದರಿಂದ ರಿಂಕು ಸಿಂಗ್ ಬಾರಿಸಿದ ಸಿಕ್ಸರ್, ರಿಂಕು ಖಾತೆಗೆ ಸೇರ್ಪಡೆಯಾಗಲಿಲ್ಲ.
ವೈಜಾಗ್(ನ.24): ಟೀಂ ಇಂಡಿಯಾ ಪ್ರತಿಭಾನ್ವಿತ ಬ್ಯಾಟರ್ ರಿಂಕು ಸಿಂಗ್, ಮತ್ತೊಮ್ಮೆ ಅಮೋಘ ಬ್ಯಾಟಿಂಗ್ ಮೂಲಕ ಮ್ಯಾಚ್ ಫಿನಿಶರ್ ಆಗಿ ಗಮನ ಸೆಳೆದಿದ್ದಾರೆ. ಆಸ್ಟ್ರೇಲಿಯಾ ಎದುರಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲೇ ಮತ್ತೊಮ್ಮೆ ಜಾದೂ ಮಾಡಿರುವ ರಿಂಕು ಸಿಂಗ್, ತಂಡವನ್ನು ಯಶಸ್ವಿಯಾಗಿ ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಕಷ್ಟು ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ರಿಂಕು ಸಿಂಗ್ ತಾಳ್ಮೆಕಳೆದುಕೊಳ್ಳದೇ ಯಶಸ್ವಿಯಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರ ಕ್ರೆಡಿಟ್ ಅನ್ನು ರಿಂಕು, ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿಗೆ ನೀಡಿದ್ದಾರೆ.
ಕೊನೆಯ ಎಸೆತದಲ್ಲಿ ಭಾರತ ಗೆಲ್ಲಲು ಒಂದು ರನ್ ಬೇಕಿತ್ತು. ಆಗ ರಿಂಕು ಸಿಂಗ್ ಆಕರ್ಷಕ ಸಿಕ್ಸರ್ ಸಿಡಿಸಿ ಸಂಭ್ರಮಿಸಿದರು. ಆದರೆ ಶಾನ್ ಅಬ್ಬೋಟ್ ಎಸೆದ ಆ ಚೆಂಡು ನೋ ಬಾಲ್ ಆಗಿದ್ದರಿಂದ ರಿಂಕು ಸಿಂಗ್ ಬಾರಿಸಿದ ಸಿಕ್ಸರ್, ರಿಂಕು ಖಾತೆಗೆ ಸೇರ್ಪಡೆಯಾಗಲಿಲ್ಲ.
ಇನ್ನು ಈ ಪಂದ್ಯದ ಕುರಿತಂತೆ ಬಿಸಿಸಿಐ ಜತೆ ಮಾತನಾಡಿದ ರಿಂಕು ಸಿಂಗ್, 15 ಎಸೆತಗಳಲ್ಲಿ 15 ರನ್ ಅಗತ್ಯವಿತ್ತು. ಹೀಗಿರವಾಗ ದಿಢೀರ್ ಎನ್ನುವಂತೆ ಭಾರತ ತಂಡವು ಅಕ್ಷರ್ ಪಟೇಲ್, ರವಿ ಬಿಷ್ಣೋಯಿ, ಅಕ್ಷರ್ ಪಟೇಲ್ ಹಾಗೂ ಆರ್ಶದೀಪ್ ಸಿಂಗ್ ಅವರ ವಿಕೆಟ್ ಕಳೆದುಕೊಂಡಿತು. ಈ ಸಂದರ್ಭದಲ್ಲಿ ದೃತಿಗೆಡದ ರಿಂಕು ತಂಡವನ್ನು ರೋಚಕವಾಗಿ ಗೆಲುವಿನ ದಡ ಸೇರಿಸಿದರು.
'ಅಪ್ಪ ರೂಂನಲ್ಲಿದ್ದಾರೆ, ಇನ್ನೊಂದು ತಿಂಗಳಲ್ಲಿ....': ರೋಹಿತ್ ಶರ್ಮಾ ಮಗಳು ಸಮೈರಾ ಮುದ್ದಾದ ವಿಡಿಯೋ ವೈರಲ್..!
ಈ ಕುರಿತಂತೆ ಮಾತನಾಡಿದ ರಿಂಕು ಸಿಂಗ್, "ನಾನು ಇಂತಹ ಸಂದರ್ಭದಲ್ಲಿ ಅಂತಿಮ ಓವರ್‌ಗಳಲ್ಲಿ ನೀವೇನು ಮಾಡುತ್ತೀರಾ ಎನ್ನುವುದನ್ನು ಧೋನಿ ಅವರ ಬಳಿ ಮಾತನಾಡಿದ್ದೇನೆ. ಆಗ ಅವರು ತಾಳ್ಮೆಯಿಂದ ಇರಬೇಕು ಹಾಗೂ ನೇರವಾಗಿ ಹೊಡೆಯಲು ಯತ್ನಿಸಬೇಕು ಎಂದು ಹೇಳಿದ್ದಾರೆ. ಅದನ್ನೇ ನಾನು ಫಾಲೋ ಮಾಡುತ್ತಿದ್ದೇನೆ. ನಾನು ಸಾಧ್ಯವಾದಷ್ಟು ತಾಳ್ಮೆಯಿಂದ ಇರಲು ಬಯಸುತ್ತೇನೆ ಎಂದು ರಿಂಕು ಹೇಳಿದ್ದಾರೆ.
ಹೇಗಿತ್ತು ಭಾರತ-ಆಸ್ಟ್ರೇಲಿಯಾ ಮೊದಲ ಪಂದ್ಯ?:
ಏಕದಿನ ವಿಶ್ವಕಪ್ ಫೈನಲ್ ಮುಗಿದ ನಾಲ್ಕೇ ದಿನಕ್ಕೆ ಶುರುವಾದ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಶುಭಾರಂಭ ಮಾಡಿದೆ. ಗುರುವಾರ ನಡೆದ ಮೊದಲ ಪಂದ್ಯದಲ್ಲಿ 2 ವಿಕೆಟ್‌ಗಳ ರೋಚಕ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆಯಿತು.
ಮೊದಲು ಬ್ಯಾಟ್ ಮಾಡಿದ ಆಸೀಸ್ ಕಲೆಹಾಕಿದ್ದು 3 ವಿಕೆಟ್‌ಗೆ ಬರೋಬ್ಬರಿ 208 ರನ್. ಜೋಶ್ ಇಂಗ್ಲಿಸ್‌ರ ಆರ್ಭಟ ಭಾರತೀಯ ಬೌಲರ್‌ಗಳನ್ನು ಮಂಕಾಗಿಸಿತು. ಆದರೆ ಬ್ಯಾಟರ್‌ಗಳು ಆರ್ಭಟಿಸಿ, ಆಸೀಸ್‌ಗೆ ಬಿಸಿ ಮುಟ್ಟಿಸಿದರು. ಸೂರ್ಯಕುಮಾರ್, ಇಶಾನ್ ಕಿಶನ್ ಆರ್ಭಟಿಸಿದರೂ ಬಳಿಕ ದಿಢೀರ್ ಕುಸಿತ ಕಂಡಿದ್ದರಿಂದ ಗೆಲುವಿಗೆ 19.5 ಓವರ್ ವರೆಗೂ ಕಾಯಬೇಕಾಯಿತು. ರಿಂಕು ಸಿಂಗ್ ತಮ್ಮ ಘನತೆಗೆ ತಕ್ಕ ಆಟವಾಡಿ ತಂಡವನ್ನು ದಡ ಸೇರಿಸಿದರು.
ವಿಜಯ್ ಹಜಾರೆ ಟ್ರೋಫಿ: ಮಯಾಂಕ್, ಸಮರ್ಥ್ ಭರ್ಜರಿ ಶತಕ, ರಾಜ್ಯಕ್ಕೆ 222 ರನ್ ಬೃಹತ್ ಗೆಲುವು
ಋತುರಾಜ್ ಯಾವುದೇ ಎಸೆತ ಎದುರಿಸದೆ ಶೂನ್ಯಕ್ಕೆ ರನೌಟಾಗಿ ನಿರ್ಗಮಿಸಿದ ಬಳಿಕ, ಯಶಸ್ವಿ ಜೈಸ್ವಾಲ್(21) ಕೂಡಾ ಅವರ ಹಿಂದೆ ಪೆವಿಲಿಯನ್ ಸೇರಿದರು. 3ನೇ ವಿಕೆಟ್‌ಗೆ ಇಶಾನ್(39 ಎಸೆತದಲ್ಲಿ 58) ಜೊತೆ 112 ರನ್ ಸೇರಿಸಿದ ಸೂರ್ಯ ಆಕರ್ಷಕ ಹೊಡೆತಗಳ ಮೂಲಕ ತಂಡಕ್ಕೆ ಗೆಲುವು ಸುಲಭವಾಗಿಸಿದರು. 42 ಎಸೆತದಲ್ಲಿ 9 ಬೌಂಡರಿ, 4 ಸಿಕ್ಸರ್‌ನೊಂದಿಗೆ 80 ರನ್ ಸಿಡಿಸಿ ಗೆಲುವಿನ ಅಂಚಿನಲ್ಲಿ ನಿರ್ಗಮಿಸಿದರು. ರಿಂಕು ಸಿಂಗ್ (ಔಟಾಗದೆ 14 ಎಸೆತದಲ್ಲಿ 22 ರನ್) ಮತ್ತೆ ಫಿನಿಶರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು.
ಪಾಠ ಕಲಿಸಿದ ‘ಇಂಗ್ಲಿಸ್’: ಮೊನಚು ಕಳೆದುಕೊಂಡಿದ್ದ ಭಾರತದ ಬೌಲರ್‌ಗಳನ್ನು ಈ ಪಂದ್ಯದಲ್ಲಿ ಜೋಶ್ ಇಂಗ್ಲಿಸ್ ಚೆನ್ನಾಗಿ ಬೆಂಡೆತ್ತಿದರು. ಮ್ಯಾಥ್ಯೂ ಶಾರ್ಟ್(13) ಔಟಾದ ಬಳಿಕ ಸ್ಟೀವ್ ಸ್ಮಿತ್(52) ಹಾಗೂ ಇಂಗ್ಲಿಸ್ 2ನೇ ವಿಕೆಟ್‌ಗೆ 130 ರನ್ ಚಚ್ಚಿದರು. ಚೆಂಡವನ್ನು ಮೈದಾನದ ಮೂಲೆಮೂಲೆಗೂ ಅಟ್ಟಿದ ಇಂಗ್ಲಿಸ್ 50 ಎಸೆತದಲ್ಲಿ 11 ಬೌಂಡರಿ, 8 ಸಿಕ್ಸರ್‌ನೊಂದಿಗೆ 110 ರನ್ ಸಿಡಿಸಿದರು.