ಚಂಡಿಘಡ(ಏ.25): ಕೊರೋನಾ ವೈರಸ್ ಹಾವಳಿ ಹೆಚ್ಚಾಗುತ್ತಿದೆ. ಭಾರತದಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಇತ್ತ ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್‌ಡೌನ್ ಆಗಿದೆ. ಲಾಕ್‌ಡೌನ್ ತೆರವಾದ ಬೆನ್ನಲ್ಲೇ ಕೆಲ ಸೇವೆಗಳು ಆರಂಭಗಳೊಳ್ಳಲಿದೆ. ಆದರೆ ಬಹುತೇಕ ಸೇವಗಳ ಮೇಲೆ ನಿರ್ಬಂಧ ಹೇರುವುದು ಖಚಿತ. ಇತ್ತ ಕ್ರಿಕೆಟ್ ಆಯೋಜನೆ ಕುರಿತು ಮಾತುಕತೆಗಳು ನಡೆಯುತ್ತಿದೆ. ಇದೀಗ ಯುವರಾಜ್ ಸಿಂಗ್, ಕೊರೋನಾ ವೈರಸ್ ಭಯ ನಿವಾರಣೆಯಾದ ಮೇಲೆ ಕ್ರಿಕೆಟ್ ಆಯೋಜನೆ ಒಳಿತು ಎಂದಿದ್ದಾರೆ.

ಫ್ಲಿಂಟಾಫ್‌ 'ಹೀಗನ್ನದಿದ್ದರೆ' ಬಹುಶಃ ಯುವಿ 6 ಸಿಕ್ಸರ್ ಬಾರಿಸುತ್ತಿರಲಿಲ್ಲವೇನೋ..?.

ಭಾರತದಿಂದ ಮಾತ್ರವಲ್ಲ ವಿಶ್ವದಿಂದಲೇ ಕೊರೋನಾ ವೈರಸ್ ಸಂಪೂರ್ಣವಾಗಿ ತೊಲಗುವರೆಗೂ ಕ್ರಿಕೆಟ್ ಆಯೋಜನೆ ಉಚಿತವಲ್ಲ. ಆಟಗಾರರಿಗೆ, ಪಂದ್ಯ ವೀಕ್ಷಣೆಗೆ ಆಗಮಿಸುವ ಕ್ರೀಡಾಭಿಮಾನಿಗಳಿಗೆ ವೈರಸ ಭಯ ಇರಬಾರದು. ದೇಶದ ಯಾವುದೇ ಮೂಲೆಯಲ್ಲಿ ಕೊರೋನಾ ವೈರಸ್ ಇದ್ದರೂ ಪಂದ್ಯ ಆಯೋಜನೆ ಒಳಿತಲ್ಲ ಎಂದು 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಹೇಳಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಂಡು ಯಾವುದೇ ಕ್ರೀಡಾಕೂಟ ಆಯೋಜನೆ ಕಷ್ಟ. ಮೈದಾನದಲ್ಲಿ ಆಟಗಾರರ ನಡುವೆ ಅಂತರ ಕಾಯ್ದುಕೊಳ್ಳುವುದು ಅಸಾಧ್ಯ. ಡ್ರೆಸ್ಸಿಂಗ್ ರೂಮ್ ಹೀಗೆ ಪ್ರತಿಯೊಂದು ಕಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟ. ಇನ್ನು ಪಂದ್ಯದ ಒತ್ತಡ ಆಟಗಾರರ ಮೇಲಿರುತ್ತೆ. ಇದರ ಜೊತಗೆ ಕೊರೋನಾ ವೈರಸ್ ಭಯ ಇದ್ದರೆ ನೈಜ ಪ್ರದರ್ಶನ ಅಸಾಧ್ಯ ಎಂದು ಯುವಿ ಹೇಳಿದ್ದಾರೆ.