ಫ್ಲಿಂಟಾಫ್ 'ಹೀಗನ್ನದಿದ್ದರೆ' ಬಹುಶಃ ಯುವಿ 6 ಸಿಕ್ಸರ್ ಬಾರಿಸುತ್ತಿರಲಿಲ್ಲವೇನೋ..?
ಬೆಂಗಳೂರು: ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಚೊಚ್ಚಲ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದರಲ್ಲೂ ಇಂಗ್ಲೆಂಡ್ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಬೌಲಿಂಗ್‌ನಲ್ಲಿ ಸತತ 6 ಸಿಕ್ಸರ್ ಸಿಡಿಸಿದ್ದು ಮಾತ್ರವಲ್ಲದೆ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವಿಶ್ವದಾಖಲೆ ಬರೆದಿದ್ದು ಕ್ರಿಕೆಟ್ ಅಭಿಮಾನಿಗಳು ಮರೆಯಲು ಸಾಧ್ಯವೇ?ಇಂಗ್ಲೆಂಡ್ ಆಲ್ರೌಂಡರ್ ಆಂಡ್ರ್ಯೂ ಫ್ಲಿಂಟಾಫ್ ಮಾಡಿದ ಎಡವಟ್ಟಿಗೆ ಸ್ಟುವರ್ಟ್ ಬ್ರಾಡ್ ಬೆಲೆ ತೆರಬೇಕಾಯಿತು. ಟೀಂ ಇಂಡಿಯಾ ರಣಕಲಿ ಯುವಿಗೆ, ಫ್ಲಿಂಟಾಫ್ ಆ ಒಂದು ಮಾತು ಹೇಳದಿದ್ದರೆ ಬಹುಶಃ ಯುವಿ ಸಿಕ್ಸರ್ ಬಾರಿಸುತ್ತಿರಲಿಲ್ಲವೇನೋ. ಅಷ್ಟಕ್ಕೂ 2007ರ ಟಿ20 ವಿಶ್ವಕಪ್ ಟೂರ್ನಿಯ ವೇಳೆ ಫ್ಲಿಂಟಾಫ್ ಹೇಳಿದ್ದೇನು? ಅದಕ್ಕೆ ಯುವಿ ಉತ್ತರ ಹೇಗಿತ್ತು ಎನ್ನೋದನ್ನು ನೀವೇ ನೋಡಿ.

ಸ್ಟುವರ್ಟ್ ಬ್ರಾಡ್ ವಿರುದ್ಧ ಸತತ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ ವಿಶ್ವದಾಖಲೆ ಬರೆದ ಯುವರಾಜ್ ಸಿಂಗ್

ಯುವಿಯನ್ನು ಕೆಣಕಿದರೆ ಏನಾಗುತ್ತೆ ಎಂದು ಇಡೀ ಜಗತ್ತಿಗೆ ಪರಿಚಯ ಮಾಡಿಕೊಟ್ಟ ಪಂಜಾಬ್ ಪುತ್ತರ್

ಇಂಗ್ಲೆಂಡ್ ವೇಗಿ ಫ್ಲಿಂಟಾಫ್ ಎಸೆದ ಪಂದ್ಯದ 18 ಓವರ್‌ನ 4 ಹಾಗೂ 5ನೇ ಎಸೆತದಲ್ಲಿ ಯುವಿ ಬೌಂಡರಿ ಬಾರಿಸಿದ್ದರು.

ಬೌಂಡರಿ ಬಾರಿಸಿದ ಬೆನ್ನಲ್ಲೇ ಫ್ಲಿಂಟಾಫ್, ಇದು ಕೆಟ್ಟ ಹೊಡೆತ ಎಂದಿದ್ದು ಮಾತ್ರವಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದರು.

ಇದಕ್ಕೆ ಯುವಿ ಕೂಡಾ ಅಷ್ಟೇ ಕೆಟ್ಟದಾಗಿ ಫ್ಲಿಂಟಾಫ್‌ಗೆ ಮರು ಉತ್ತರ ನೀಡಿದರು.

ಆಗ ಫ್ಲಿಂಟಾಫ್, ಯುವಿಗೆ ನೀನು ಹೊರಗೆ ಬಾ ನಿನ್ನ ಕತ್ತು ಕತ್ತರಿಸುತ್ತೇನೆ ಎಂದು ಆವಾಜ್ ಹಾಕಿದರು.

ಆಗ ಹೊರಗೆ ಸಿಗೋದು ಆಮೇಲೆ, ಈಗ ಬ್ಯಾಟ್‌ನಲ್ಲೇ ಉತ್ತರಿಸುತ್ತೇನೆ ನೋಡು ಎಂದಿದ್ದರು ಯುವಿ

ಅಷ್ಟರಲ್ಲಿ ಅಂಪೈರ್ ಮಧ್ಯ ಪ್ರವೇಶಿಸಿ ಇಬ್ಬರ ನಡುವಿನ ಜಗಳ ಬಿಡಿಸಿದರು

ಆಗಲೇ ನಾನು ಇವರಿಗೆಲ್ಲ ಬ್ಯಾಟ್‌ನಿಂದಲೇ ಉತ್ತರಿಸಬೇಕೆಂದು ನಿರ್ಧರಿಸಿದೆ ಎಂದು ಯುವಿ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.

18ನೇ ಓವರ್ ಮುಕ್ತಾಯದ ವೇಳೆಗೆ 6 ಎಸೆತಗಳಲ್ಲಿ 2 ಬೌಂಡರಿ ನೆರವಿನಿಂದ 14 ರನ್ ಬಾರಿಸಿದ್ದ ಯುವಿ, 19 ಓವರ್ ಮುಕ್ತಾಯದ ವೇಳೆಗೆ 50 ರನ್ ಪೂರೈಸಿದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.