ಢಾಕ(ಮೇ.26):  ಕೊರೋನಾ ವೈರಸ್ ಕಾರಣ ಈ ಬಾರಿ ಐಪಿಎಲ್ ಟೂರ್ನಿಗೆ ಕಾರ್ಮೋಡ ಕವಿದಿದೆ. ಟೂರ್ನಿ ಆಯೋಜನೆ ಕುರಿತು ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ. ಎಲ್ಲೂ ಕ್ರಿಕೆಟಿಗರೂ ಐಪಿಎಲ್ ಆಯೋಜನೆಯಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಕಾರಣ ಪ್ರತಿ ಭಾರಿಯು ಐಪಿಎಲ್ ಟೂರ್ನಿ ಹಲವು ಕ್ರಿಕೆಟಿಗರ ಭವಿಷ್ಯ ರೂಪಿಸುತ್ತದೆ. ಹೀಗೆ ತಾನೂ ಐಪಿಎಲ್ ಆಡಬೇಕು ಎಂದು ಬಾಂಗ್ಲಾದೇಶದ ಕ್ರಿಕೆಟಿಗ ಮುಶ್ಫೀಕರ್ ರಹೀಮ್ ಹೆಸರು ನೋಂದಾಯಿಸಿಕೊಂಡಿದ್ದರು. ಆದರೆ ಯಾವ ಫ್ರಾಂಚೈಸಿ ಖರೀದಿಸುವ ಆಸಕ್ತಿ ತೋರಲಿಲ್ಲ. ಹರಾಜಿನ ಬಳಿಕ ಪರೋಕ್ಷವಾಗಿ ಅಸಮಧಾನ ತೋಡಿಕೊಂಡಿದ್ದ ಮುಶ್ಫೀಕರ್ ಇದೀಗ ಮತ್ತೆ ಐಪಿಎಲ್ ಕುರಿತು ಮಾತನಾಡಿದ್ದಾರೆ.

ಈ ಸಲ್ ಕಪ್ ನಿಮ್ದೆ; RCB ಟ್ರೋಲ್ ಮಾಡಿದ CSK!

ಮುಶ್ಪೀಕರ್ ರಹೀಮ್ ಹೆಸರು ಅಂತಿಮವಾಗಿ ಹರಾಜಿಗೆ ಸೇರಿಸಲಾಗಿತ್ತು. ಇತ್ತ ಹರಾಜಿನಲ್ಲಿ ನಾಲ್ಕು ಬಾರಿ ಮುಶ್ಫೀಕರ್ ಹೆಸರು ಕೂಗಿದರೂ ಯಾವ ಫ್ರಾಂಚೈಸಿಯೂ ಖರೀದಿ ಮಾಡಲಿಲ್ಲ. ಇದೀಗ ಮುಶ್ಪೀಕರ್ ಐಪಿಎಲ್ ಆಡಲಿಲ್ಲ, ಐಪಿಎಲ್ ಟೂರ್ನಿಗೆ ಆಯ್ಕೆಯಾಗಿಲ್ಲ ಅನ್ನೋ ಕೊರಗಿಲ್ಲ. ಐಪಿಎಲ್ ಟೂರ್ನಿಗಿಂತ ಬಾಂಗ್ಲಾದೇಶ ಪ್ರತಿನಿಧಿಸುವುದು ದೊಡ್ಡದು ಎಂದಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ದಿಗ್ಗಜರ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವುದು ಕ್ರಿಕೆಟಿಗರಿಗೆ ಸಹಕಾರಿಯಾಗಲಿದೆ ನಿಜ. ಆದರೆ ಬಾಂಗ್ಲಾ ತಂಡದಲ್ಲಿ ದಿಗ್ಗಜ ಕ್ರಿಕೆಟಿಗರ ಜೊತೆ ಆಡಿದ್ದೇನೆ. ದೇಶಕ್ಕಾಗಿ ಆಡುವುದೇ ಹೆಮ್ಮೆಯ ವಿಚಾರ ಎಂದಿದ್ದಾರೆ.

ಈ ವರ್ಷ ಐಪಿ​ಎಲ್‌ ಬಗ್ಗೆ ಕ್ರೀಡಾ ಸಚಿವ ಕಿರಣ್ ರಿಜಿಜು ಸುಳಿ​ವು

ಮುಶ್ಫೀಕರ್ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಬಾಂಗ್ಲಾ ಅಭಿಮಾನಿಗಳು ಜೈಕಾರ ಹಾಕಿದ್ದರೆ, ಭಾರತ ಸೇರಿದಂತೆ ಇತರ ದೇಶದ ಕ್ರಿಕೆಟ್ ಅಭಿಮಾನಿಗಳು ಟೀಕಿಸಿದ್ದಾರೆ. ದೇಶಕ್ಕಾಗಿ ಆಡುವುದು ದೊಡ್ಡದೇ. ನಿಮ್ಮ ನಿಲುವು ಇದೇ ಆಗಿದ್ದರೆ, ಐಪಿಎಲ್ ಹರಾಜಿನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.