ಹಾಟ್‌ಸ್ಟಾರ್‌ನಲ್ಲಿ ಏಕಕಾಲಕ್ಕೆ 4.3 ಕೋಟಿ ಮಂದಿ ವೀಕ್ಷಣೆ! ಇಂಡೋ-ಪಾಕ್ ದಾಖಲೆ ಉಡೀಸ್
ಇನ್ನು ಭಾರತ-ನ್ಯೂಜಿಲೆಂಡ್ ಪಂದ್ಯದ ವೇಳೆ ಹಾಟ್‌ಸ್ಟಾರ್ ವೀಕ್ಷಣೆಯಲ್ಲೂ ಹೊಸ ದಾಖಲೆ ನಿರ್ಮಾಣವಾಯಿತು. ಚೇಸಿಂಗ್ ವೇಳೆ ವಿರಾಟ್ ಕೊಹ್ಲಿ ಕ್ರೀಸ್‌ನಲ್ಲಿದ್ದಾಗ ಏಕಕಾಲಕ್ಕೆ ಬರೋಬ್ಬರಿ 4.3 ಕೋಟಿ ಮಂದಿ ಪಂದ್ಯ ವೀಕ್ಷಿಸಿದರು.
ಧರ್ಮಶಾಲಾ(ಅ.23): ಸಾಕಷ್ಟು ರೋಚಕತೆಯಿಂದ ಕೂಡಿದ್ದ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, 12 ಎಸೆತ ಬಾಕಿ ಇರುವಂತೆಯೇ 5 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಎರಡು ದಶಕಗಳ ಬಳಿಕ ಐಸಿಸಿ ಟೂರ್ನಿಯಲ್ಲಿ ಟೀಂ ಇಂಡಿಯಾವು, ಬಲಾಢ್ಯ ನ್ಯೂಜಿಲೆಂಡ್ ಎದುರು ಗೆಲುವಿನ ಕೇಕೆ ಹಾಕುವಲ್ಲಿ ಯಶಸ್ವಿಯಾಗಿದೆ. ಇದಷ್ಟೇ ಅಲ್ಲದೇ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕಿವೀಸ್ ತಂಡವನ್ನು ಹಿಂದಿಕ್ಕಿ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ.
ಇನ್ನು ಭಾರತ-ನ್ಯೂಜಿಲೆಂಡ್ ಪಂದ್ಯದ ವೇಳೆ ಹಾಟ್‌ಸ್ಟಾರ್ ವೀಕ್ಷಣೆಯಲ್ಲೂ ಹೊಸ ದಾಖಲೆ ನಿರ್ಮಾಣವಾಯಿತು. ಚೇಸಿಂಗ್ ವೇಳೆ ವಿರಾಟ್ ಕೊಹ್ಲಿ ಕ್ರೀಸ್‌ನಲ್ಲಿದ್ದಾಗ ಏಕಕಾಲಕ್ಕೆ ಬರೋಬ್ಬರಿ 4.3 ಕೋಟಿ ಮಂದಿ ಪಂದ್ಯ ವೀಕ್ಷಿಸಿದರು. ಇದು ಡಿಜಿಟಲ್ ವೀಕ್ಷಣೆಯಲ್ಲೇ ಹೊಸ ದಾಖಲೆ. ಇತ್ತೀಚೆಗೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವನ್ನು ಹಾಟ್‌ಸ್ಟಾರ್‌ನಲ್ಲಿ ಏಕಕಾಲದಲ್ಲಿ ಬರೋಬ್ಬರಿ 3.5 ಕೋಟಿ ಮಂದಿ ಪಂದ್ಯ ವೀಕ್ಷಿಸಿದ್ದರು.
ಅಭಿಮಾನಿಗಳಿಗೆ ನಿರಾಸೆ: ಟೀಂ ಇಂಡಿಯಾ ರನ್ ಮಷೀನ್ ನ್ಯೂಜಿಲೆಂಡ್ ಎದುರು ಅದ್ಭುತ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದರು. ಆದರೆ 95 ರನ್‌ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ ತಮ್ಮ 49ನೇ ಅಂತಾರಾಷ್ಟ್ರೀಯ ಏಕದಿನ ಶತಕ ಸಿಡಿಸುವ ಅವಕಾಶವನ್ನು ಕೈಚೆಲ್ಲಿದರು. ಪಂದ್ಯದುದ್ದಕ್ಕೂ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಕೊಹ್ಲಿ, ಬಾಂಗ್ಲಾದೇಶ ಎದುರು ಬಾರಿಸಿದಂತೆ ಕಿವೀಸ್ ಎದುರು ಕೂಡಾ ರೋಚಕ ಶತಕ ಸಿಡಿಸಬಹುದು ಎನ್ನುವ ನಿರೀಕ್ಷೆ ಕೊನೆಗೂ ಹುಸಿಯಾಯಿತು.
ಧರ್ಮಶಾಲಾ ಔಟ್‌ಫೀಲ್ಡ್ ಬಗ್ಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಸಿಟ್ಟು!
ಕ್ಯಾಲೆಂಡರ್ ವರ್ಷದಲ್ಲಿ 50 ಸಿಕ್ಸ್: ರೋಹಿತ್ ದಾಖಲೆ!
ಧರ್ಮಶಾಲಾ: ಕ್ಯಾಲೆಂಡರ್ ವರ್ಷದಲ್ಲಿ 50 ಸಿಕ್ಸರ್ ಸಿಡಿಸಿದ ಭಾರತದ ಮೊದಲ ಬ್ಯಾಟರ್ ಎನ್ನುವ ದಾಖಲೆಯನ್ನು ರೋಹಿತ್ ಶರ್ಮಾ ಬರೆದಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಭಾನುವಾರ 4 ಸಿಕ್ಸರ್ ಬಾರಿಸಿ ರೋಹಿತ್ ಈ ಮೈಲಿಗಲ್ಲು ತಲುಪಿದರು. ವರ್ಷದಲ್ಲಿ 50 ಸಿಕ್ಸರ್ ಸಿಡಿಸಿದ ವಿಶ್ವದ 3ನೇ ಬ್ಯಾಟರ್ ಎನ್ನುವ ಹಿರಿಮೆಗೂ ಭಾರತೀಯ ನಾಯಕ ಪಾತ್ರರಾಗಿದ್ದಾರೆ. ಈ ಮೊದಲು 2015ರಲ್ಲಿ ದ.ಆಫ್ರಿಕಾದ ಎಬಿ ಡಿ ವಿಲಿಯರ್ಸ್ 58, 2019ರಲ್ಲಿ ವಿಂಡೀಸ್‌ನ ಕ್ರಿಸ್ ಗೇಲ್ 56 ಸಿಕ್ಸರ್ ಸಿಡಿಸಿದ್ದರು. ರೋಹಿತ್ ಸದ್ಯ 53 ಸಿಕ್ಸರ್ ಬಾರಿಸಿದ್ದು, ವಿಶ್ವ ದಾಖಲೆ ಬರೆಯಲು ಅವಕಾಶವಿದೆ.
IND vs NZ ಕಿವಿಸ್ ವಿರುದ್ಧ ಕೊಹ್ಲಿ ಹೋರಾಟ, ಜಯಸೂರ್ಯ ಸೇರಿ ದಿಗ್ಗಜರ ದಾಖಲೆ ಪುಡಿ ಪುಡಿ!
ಏಕದಿನದಲ್ಲಿ ಗಿಲ್ ವೇಗದ 2000 ರನ್ ದಾಖಲೆ!
ಕಿವೀಸ್ ವಿರುದ್ಧ 26 ರನ್‌ಗಳ ಇನ್ನಿಂಗ್ಸ್‌ನಲ್ಲಿ ಶುಭ್‌ಮನ್ ಗಿಲ್ ಏಕದಿನ ಕ್ರಿಕೆಟ್‌ನಲ್ಲಿ 2000 ರನ್ ದಾಟಿದರು. ಇದರೊಂದಿಗೆ ಅತಿವೇಗವಾಗಿ ಈ ಮೈಲಿಗಲ್ಲು ತಲುಪಿದ ಆಟಗಾರ ಎನ್ನುವ ದಾಖಲೆ ಬರೆದರು. ಗಿಲ್ 2000 ರನ್ ಗಳಿಸಲು ಕೇವಲ 38 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದು, 40 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿ ದಕ್ಷಿಣ ಆಫ್ರಿಕಾದ ಹಾಶೀಮ್ ಆಮ್ಲಾ ಬರೆದಿದ್ದ ದಾಖಲೆಯನ್ನು ಮುರಿದರು.