Asianet Suvarna News Asianet Suvarna News

IND vs NZ ಕಿವಿಸ್ ವಿರುದ್ಧ ಕೊಹ್ಲಿ ಹೋರಾಟ, ಜಯಸೂರ್ಯ ಸೇರಿ ದಿಗ್ಗಜರ ದಾಖಲೆ ಪುಡಿ ಪುಡಿ!

ನ್ಯೂಜಿಲೆಂಡ್ ನೀಡಿದ ಟಾರ್ಗೆಟ್ ಚೇಸಿಂಗ್ ಒಂದು ಹಂತದಲ್ಲಿ ಭಾರತಕ್ಕೆ ಹಲವು ಸವಾಲು ಒಡ್ಡಿತ್ತು. ದಿಢೀರ್ ವಿಕೆಟ್ ಪತನ ತಂಡದ ಸಂಕಷ್ಟ ಹೆಚ್ಚಿಸಿತ್ತು. ಆದರೆ ವಿರಾಟ್ ಕೊಹ್ಲಿ ದಿಟ್ಟ ಹೋರಾಟ ನೀಡಿ ಭಾರತಕ್ಕೆ ಗೆಲುವಿನ ಸಿಹಿ ನೀಡಿದ್ದು ಮಾತ್ರವ್ಲ, ಸನತನ್ ಜಯಸೂರ್ಯ ದಾಖಲೆ ಪುಡಿಗಟ್ಟಿದ್ದಾರೆ. 

ICC World Cup 2023 IND vs NZ Virat Kohli breaks sanath jayasuriya most ODI runs record ckm
Author
First Published Oct 22, 2023, 10:29 PM IST

ಧರ್ಮಶಾಲಾ(ಅ.22) ನ್ಯೂಜಿಲೆಂಡ್ ವಿರುದ್ಧ ವಿರಾಟ್ ಕೊಹ್ಲಿ 95 ರನ್ ಸಿಡಿಸಿ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದಾರೆ. ಕೇವಲ 5 ರನ್‌ಗಳಿಂದ ಕೊಹ್ಲಿ ಶತಕ ಮಿಸ್ ಮಾಡಿಕೊಂಡರು. ಈ ಮೂಲಕ ಸಚಿನ್ ತೆಂಡೂಲ್ಕರ್ ಶತಕ ದಾಖಲೆ ಸರಿಗಟ್ಟುವ ಅವಕಾಶ ಕೈಚೆಲ್ಲಿದರು. ಆದರೆ  ಶ್ರೀಲಂಕಾ ದಿಗ್ಗಜ ಸನತ್ ಜಯಸೂರ್ಯ ದಾಖಲೆ ಪುಡಿಗಟ್ಟಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ ಗರಿಷ್ಠ ರನ್ ಸಿಡಿಸಿದ ವಿಶ್ವದ 4ನೇ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೊಹ್ಲಿ ಅಬ್ಬರದಿಂದ ಶ್ರೀಲಂಕಾದ ಸನತ್ ಜಯಸೂರ್ಯ ಇದೀಗ 5ನೇ ಸ್ಥಾನಕ್ಕೆ ಕುಸಿದಿದ್ದಾರೆ. ಕೊಹ್ಲಿ ಸದ್ಯ ಏಕದಿನ ಕ್ರಿಕೆಟ್‌ನಲ್ಲಿ 13437 ರನ್ ಸಿಡಿಸಿದ್ದಾರೆ. ಇನ್ನು ಜಯಸೂರ್ಯ 13430 ರನ್ ಸಿಡಿಸಿದ್ದಾರೆ.  ಮೊದಲ ಸ್ಥಾನದಲ್ಲಿರುವ ಸಚಿನ್ ತೆಂಡೂಲ್ಕರ್ ಏಕದಿನದಲ್ಲಿ 18426 ರನ್ ಸಿಡಿಸಿದ್ದಾರೆ.

IND VS NZ ಕೊಹ್ಲಿ ಅಬ್ಬರಕ್ಕೆ ನ್ಯೂಜಿಲೆಂಡ್ ಕಂಗಾಲು, 20 ವರ್ಷ ಬಳಿಕ ವಿಶ್ವಕಪ್‌ನಲ್ಲಿ ಭಾರತಕ್ಕೆ ಗೆಲುವು!

ಏಕದಿನದಲ್ಲಿ ಗರಿಷ್ಠ ರನ್ ಸಾಧಕರು
ಸಚಿನ್ ತೆಂಡೂಲ್ಕರ್: 18426 ರನ್
ಕುಮಾರ್ ಸಂಗಕ್ಕಾರ: 14234
ರಿಕಿ ಪಾಂಟಿಂಗ್:13704
ವಿರಾಟ್ ಕೊಹ್ಲಿ: 13437    
ಸನತ್ ಜಯಸೂರ್ಯ: 13430    

ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಸೆಂಚುರಿ ಸಿಡಿಸಿದ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿಗಿದೆ. ತೆಂಡೂಲ್ಕರ್ 49 ಶತಕ ಸಿಡಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಕೊಹ್ಲಿ ಕೇವಲ 5 ರನ್‌ಗಳಿಂದ ಶತಕ ಮಿಸ್ ಮಾಡಿಕೊಂಡರು. ಈ ಮೂಲಕ ಸಚಿನ್ ದಾಖಲೆ ಸರಿಗಟ್ಟುವ ಅವಕಾಶ ಕೈಚೆಲ್ಲಿದರು. ಸದ್ಯ ಕೊಹ್ಲಿ ಏಕದಿನದಲ್ಲಿ 48 ಶತಕ ಸಿಡಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ಏಕದಿನದಲ್ಲಿ ಗರಿಷ್ಠ ಸೆಂಚುರಿ ದಾಖಲೆ
ಸಚಿನ್ ತೆಂಡೂಲ್ಕರ್:49
ವಿರಾಟ್ ಕೊಹ್ಲಿ:48
ರೋಹಿತ್ ಶರ್ಮಾ:31
ರಿಕಿ ಪಾಂಟಿಂಗ್:30

IND vs NZ ರೋಹಿತ್-ವಿರಾಟ್ ನಡುವೆ ನಡೆಯಿಯಾ ಮಾತಿನ ಚಕಮಕಿ? ವಿಡಿಯೋ ವೈರಲ್!

ಒಂದೆಡೆ ವಿಕೆಟ್ ಪತನ, ಮತ್ತೊಂದೆಡೆ ರನ್ ರೇಟ್ ಕುಸಿತದಿಂದ ಭಾರತದ ಸಂಕಷ್ಟ ಹೆಚ್ಚಾಗಿತ್ತು. ಇವೆಲ್ಲರ ಜೊತೆಗೆ ಕಳೆದ 2 ದಶಕದಿಂದ ಐಸಿಸಿ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆದ್ದಿಲ್ಲ ಅನ್ನೋ ಮಾನಸಿಕ ಒತ್ತಡ ಟೀಂ ಇಂಡಿಯಾ ಮೇಲೆ ಪರಿಣಾಮ ಬೀರಿತು. ಆದರೆ ಒತ್ತಡದ ನಡುವೆಯೂ ವಿರಾಟ್ ಕೊಹ್ಲಿ ಹೋರಾಟ ಅಭಿಮಾನಿಗಳ ಆತ್ಮವಿಶ್ವಾಸ ಹೆಚ್ಚಿಸಿತ್ತು. ಕೊಹ್ಲಿ ಹಾಗೂ ರವೀಂದ್ರ ಜಡೇಜಾ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದರು. 
 

Follow Us:
Download App:
  • android
  • ios