Asianet Suvarna News Asianet Suvarna News

2019ರಲ್ಲಿ ವಿರಾಟ್ ಪಡೆ ಗೆದ್ದಿದ್ದೆಷ್ಟು? ಸೋತಿದ್ದೆಷ್ಟು? ಇಲ್ಲಿವೆ ಹೆಜ್ಜೆ ಗುರುತುಗಳು

2019ರ ಆರಂಭವನ್ನು ಐತಿಹಾಸಿಕ ಟೆಸ್ಟ್ ಗೆಲುವಿನೊಂದಿಗೆ ಆರಂಭಿಸಿದ್ದ ಟೀಂ ಇಂಡಿಯಾ, ಈ ವರ್ಷಾಂತ್ಯವನ್ನು ವಿಂಡೀಸ್ ವಿರುದ್ಧ ದಾಖಲೆಯ ಗೆಲುವಿನೊಂದಿಗೆ ತನ್ನ ಅಭಿಯಾನ ಅಂತ್ಯಗೊಳಿಸಿಕೊಂಡಿದೆ. 2019ರಲ್ಲಿ ವಿರಾಟ್ ಪಡೆ ಗೆದ್ದಿದ್ದೆಷ್ಟು? ಸೋತಿದ್ದೆಷ್ಟು? ಈ ಬಗೆಗಿನ ಕ್ವಿಕ್ ಲುಕ್ ಇಲ್ಲಿದೆ ನೋಡಿ...

Recap 2019 This how Indian Cricket Team played in 2019
Author
Bengaluru, First Published Dec 30, 2019, 6:24 PM IST
  • Facebook
  • Twitter
  • Whatsapp

ಬೆಂಗಳೂರು[ಡಿ.23]: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ವಿರುದ್ಧ 4 ವಿಕೆಟ್’ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ಕೈವಶ ಮಾಡಿಕೊಂಡಿದೆ. ಇದರ ಜತೆಗೆ 2019ಕ್ಕೆ ಭಾರತ ತಂಡ ಗೆಲುವಿನೊಂದಿಗೆ ವಿದಾಯ ಹೇಳಿದೆ.

2019ರ ವರ್ಷಾರಂಭವನ್ನು ಭರ್ಜರಿಯಾಗಿಯೇ ಮಾಡಿದ್ದ ಟೀಂ ಇಂಡಿಯಾ, ವಿದಾಯವನ್ನು ಅಷ್ಟೇ ಅಚ್ಚುಕಟ್ಟಾಗಿ ಮುಗಿಸಿದೆ. ಹೌದು, 2019ರ ಆರಂಭವನ್ನು ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಮೂಲಕ ಚಾರಿತ್ರಿಕ ಸಾಧನೆ ಮಾಡಿತ್ತು. 71 ವರ್ಷಗಳ ಬಳಿಕ ಆಸೀಸ್ ನೆಲದಲ್ಲಿ ಭಾರತ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆದ್ದು ಬೀಗಿತ್ತು. ಇದೀಗ ಕಟಕ್‌ನ ಬಾರಬತಿ ಮೈದಾನದಲ್ಲಿ ವಿರಾಟ್ ಪಡೆ ಕೆಚ್ಚೆದೆಯ ಹೋರಾಟದ ಮೂಲಕ ಏಕದಿನ ಸರಣಿಯನ್ನು ಗೆದ್ದು ತವರಿನ ಅಭಿಮಾನಿಗಳಿಗೆ ಅಡ್ವಾನ್ಸ್ ನ್ಯೂ ಇಯರ್ ಗಿಫ್ಟ್ ನೀಡಿದೆ.

2019ರಲ್ಲೇ ಟೀಂ ಇಂಡಿಯಾ 4 ಟೆಸ್ಟ್ ಸರಣಿಗಳನ್ನು[ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ] ಗೆದ್ದು ಬೀಗಿದೆ. ಇನ್ನು ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕೊಹ್ಲಿ ಪಡೆ ಸೆಮಿಫೈನಲ್ ಪ್ರವೇಶಿಸಿತ್ತು. ರೌಂಡ್ ರಾಬಿನ್ ಹಂತದಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಟೀಂ ಇಂಡಿಯಾ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಬ್ಯಾಟಿಂಗ್’ನಲ್ಲಿ ಮೊದಲ 45 ನಿಮಿಷ ಕೆಟ್ಟ ಪ್ರದರ್ಶನ ನೀಡಿದ್ದಕ್ಕೆ ಬೆಲೆ ತೆತ್ತಿತ್ತು. ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ 5 ಶತಕ ಸಿಡಿಸಿ ದಾಖಲೆ ಬರೆದಿದ್ದರು.

ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಪರಿಚಯಿಸಿದ ಬಳಿಕವೂ ಟೀಂ ಇಂಡಿಯಾ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಆಡಿದ ಎಲ್ಲಾ 7 ಟೆಸ್ಟ್ ಪಂದ್ಯಗಳನ್ನು ಜಯಿಸುವ ಮೂಲಕ ಇದುವರೆಗೂ 360 ಅಂಕ ಕಲೆಹಾಕಿದ್ದು, ಅಂಕಪಟ್ಟಿಯಲ್ಲಿ ಟೀಂ ಇಂಡಿಯಾ ನಂ.1 ಸ್ಥಾನದಲ್ಲಿ ಮುಂದುವರೆದಿದೆ.

2019ರ ವರ್ಷಾಂತ್ಯದ ಸಂದರ್ಭದಲ್ಲಿ ಸುವರ್ಣ ನ್ಯೂಸ್.ಕಾಂ ಟೀಂ ಇಂಡಿಯಾದ ಟೆಸ್ಟ್, ಏಕದಿನ ಹಾಗೂ ಟಿ20 ಪಂದ್ಯಗಳ ಪ್ರದರ್ಶನವನ್ನು, ಸಾಧನೆಗಳ ಹೆಜ್ಜೆ ಗುರುತುಗಳನ್ನು ದಾಖಲಿಸುತ್ತಿದೆ. 

ಜನವರಿ 2019 [ಭಾರತ ತಂಡವು ಆಸ್ಟ್ರೇಲಿಯಾ ಪ್ರವಾಸ]

Recap 2019 This how Indian Cricket Team played in 2019

ಜನವರಿ 3-7: Ind vs Aus(ಸಿಡ್ನಿ)- 4ನೇ ಟೆಸ್ಟ್ ಡ್ರಾನಲ್ಲಿ ಅಂತ್ಯ: ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಟೀಂ ಇಂಡಿಯಾ 4 ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ಅಂತರದಲ್ಲಿ ಜಯಿಸಿತು. ಇದು ಆಸ್ಟ್ರೇಲಿಯಾ ನೆಲದಲ್ಲಿ ಭಾರತದ ಮೊದಲ ಟೆಸ್ಟ್ ಸರಣಿ ಗೆಲುವಾಗಿದೆ. 

ಜನವರಿ 12: Ind vs Aus(ಸಿಡ್ನಿ) ಮೊದಲ ODI: ಆಸ್ಟ್ರೇಲಿಯಾಗೆ 34 ರನ್‌ಗಳ ಜಯ

ಜನವರಿ 15: Ind vs Aus(ಅಡಿಲೇಡ್) 2ನೇ ODI : ಭಾರತಕ್ಕೆ 6 ವಿಕೆಟ್‌ಗಳ ಜಯ

ಜನವರಿ 18: Ind vs Aus(ಮೆಲ್ಬರ್ನ್) 3ನೇ ODI : ಭಾರತಕ್ಕೆ 7 ವಿಕೆಟ್’ಗಳ ಜಯ ಹಾಗೂ 2-1 ಅಂತರದಲ್ಲಿ ಸರಣಿ ಕೈವಶ

ಜನವರಿ 23: Ind vs NZ(ನೇಪಿಯರ್) ಮೊದಲ ODI : ಭಾರತಕ್ಕೆ 8 ವಿಕೆಟ್‌ಗಳ ಜಯ[ಡೆಕ್ವರ್ತ್ ಲೂಯಿಸ್ ನಿಯಮದನ್ವಯ]

ಜನವರಿ 26:  Ind vs NZ(ಮೌಂಟ್ ಮಾವುಂಗನುಯಿ) 2ನೇ ODI : ಭಾರತಕ್ಕೆ 90 ರನ್‌ಗಳ ಜಯ

ಜನವರಿ 28:  Ind vs NZ(ಮೌಂಟ್ ಮಾವುಂಗನುಯಿ) 3ನೇ ODI : ಭಾರತಕ್ಕೆ 7 ವಿಕೆಟ್‌ಗಳ ಜಯ

ಜನವರಿ 31: Ind vs NZ(ಹ್ಯಾಮಿಲ್ಟನ್) 4ನೇ ODI : ನ್ಯೂಜಿಲೆಂಡ್’ಗೆ 8 ವಿಕೆಟ್‌ಗಳ ಜಯ

ಫೆಬ್ರವರಿ [ಭಾರತ ತಂಡ ನ್ಯೂಜಿಲೆಂಡ್ ಪ್ರವಾಸ, ಅಸ್ಟ್ರೇಲಿಯಾದಿಂದ ಭಾರತ ಪ್ರವಾಸ]

Recap 2019 This how Indian Cricket Team played in 2019

ಫೆಬ್ರವರಿ 3: Ind vs NZ(ವೆಲ್ಲಿಂಗ್ಟನ್) 5ನೇ ODI : ಭಾರತಕ್ಕೆ 35 ರನ್‌ಗಳ ಜಯ 4-1 ಅಂತರದಲ್ಲಿ ಭಾರತಕ್ಕೆ ಸರಣಿ ಜಯ

ಫೆಬ್ರವರಿ 6: Ind vs NZ(ವೆಲ್ಲಿಂಗ್ಟನ್) ಮೊದಲ T20I : ನ್ಯೂಜಿಲೆಂಡ್‌ಗೆ 80 ರನ್‌ಗಳ ಜಯ

ಫೆಬ್ರವರಿ 8: Ind vs NZ(ಆಕ್ಲೆಂಡ್) 2ನೇ T20I : ಭಾರತಕ್ಕೆ 7 ವಿಕೆಟ್‌ಗಳ ಜಯ

Recap 2019 This how Indian Cricket Team played in 2019

ಫೆಬ್ರವರಿ 10: Ind vs NZ(ಹ್ಯಾಮಿಲ್ಟನ್) 3ನೇ T20I : ನ್ಯೂಜಿಲೆಂಡ್’ಗೆ 4 ರನ್‌ಗಳ ಜಯ. ಕಿವೀಸ್ ಪಾಲಾದ ಟಿ20 ಸರಣಿ[2-1] 

ಫೆಬ್ರವರಿ 24: Ind vs Aus(ವಿಶಾಖಪಟ್ಟಣಂ) ಮೊದಲ T20I : ಆಸ್ಟ್ರೇಲಿಯಾಗೆ 3 ವಿಕೆಟ್’ಗಳ ಜಯ

Recap 2019 This how Indian Cricket Team played in 2019
ಫೆಬ್ರವರಿ 27: Ind vs Aus 2ನೇ(ಬೆಂಗಳೂರು) 2ನೇ T20I : ಆಸ್ಟ್ರೇಲಿಯಾಗೆ 7 ವಿಕೆಟ್’ಗಳ ಜಯ, ಆಸೀಸ್ ಪಾಲಾದ ಟಿ20 ಸರಣಿ[2-0]

ಮಾರ್ಚ್[ಆಸ್ಟ್ರೇಲಿಯಾದಿಂದ ಭಾರತ ಪ್ರವಾಸ]

ಮಾರ್ಚ್ 2: Ind vs Aus(ಹೈದರಾಬಾದ್) ಮೊದಲ ODI : ಭಾರತಕ್ಕೆ 6 ವಿಕೆಟ್’ಗಳ ಜಯ

ಮಾರ್ಚ್ 5: Ind vs Aus(ನಾಗ್ಪುರ) 2ನೇ ODI : ಭಾರತಕ್ಕೆ 8 ವಿಕೆಟ್’ಗಳ ಜಯ

ಮಾರ್ಚ್ 8: Ind vs Aus(ರಾಂಚಿ) 3ನೇ ODI : ಆಸ್ಟ್ರೇಲಿಯಾಗೆ 32 ರನ್’ಗಳ ಜಯ

ಮಾರ್ಚ್ 10: Ind vs Aus(ಮೊಹಾಲಿ) 4ನೇ ODI : ಆಸ್ಟ್ರೇಲಿಯಾಗೆ 4 ವಿಕೆಟ್’ಗಳ ಜಯ

Recap 2019 This how Indian Cricket Team played in 2019
ಮಾರ್ಚ್ 13: Ind vs Aus(ಡೆಲ್ಲಿ) 5ನೇ ODI : ಆಸ್ಟ್ರೇಲಿಯಾಗೆ 35 ರನ್’ಗಳ ಜಯ. ಆಸ್ಟ್ರೇಲಿಯಾ ಪಾಲಾದ ಏಕದಿನ ಸರಣಿ[3-2]

ಏಪ್ರಿಲ್[ಐಪಿಎಲ್ ಇದ್ದಿದ್ದರಿಂದ ಭಾರತ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲಿಲ್ಲ.]

ಮೇ[ಐಸಿಸಿ ವಿಶ್ವಕಪ್ ಅಭ್ಯಾಸ ಪಂದ್ಯಗಳು]

ಮೇ 25: Ind vs NZ(ಲಂಡನ್) ಅಭ್ಯಾಸ ಪಂದ್ಯ : ನ್ಯೂಜಿಲೆಂಡ್’ಗೆ 6 ವಿಕೆಟ್’ಗಳ ಜಯ
ಮೇ 28: Ind vs Ban(ಕಾರ್ಡಿಫ್) ಅಭ್ಯಾಸ ಪಂದ್ಯ : ಭಾರತಕ್ಕೆ 95 ರನ್’ಗಳ ಜಯ

ಜೂನ್[ಐಸಿಸಿ ಏಕದಿನ ವಿಶ್ವಕಪ್ 2019]
ಜೂನ್ 5: Ind vs SA(ಸೌತ್’ಹ್ಯಾಂಪ್ಟನ್) ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 6 ವಿಕೆಟ್’ಗಳ ಜಯ

ಜೂನ್ 9: Ind vs Aus(ಲಂಡನ್) ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 36 ರನ್’ಗಳ ಜಯ

ಜೂನ್ 13: Ind vs NZ(ನಾಟಿಂಗ್’ಹ್ಯಾಮ್) ನ್ಯೂಜಿಲೆಂಡ್ ವಿರುದ್ಧ ಒಂದು ಎಸೆತ ಕಾಣದೇ ಪಂದ್ಯ ರದ್ದು.

ಜೂನ್ 16: Ind vs Pak(ಮ್ಯಾಂಚೆಸ್ಟರ್) ಪಾಕಿಸ್ತಾನ ವಿರುದ್ಧ ಭಾರತಕ್ಕೆ 89 ರನ್’ಗಳ ಜಯ[ಡೆಕ್ವರ್ತ್ ಲೂಯಿಸ್ ನಿಯಮದನ್ವಯ]

ಜೂನ್ 22: Ind vs Afg(ಸೌತ್’ಹ್ಯಾಂಪ್ಟನ್) ಆಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ 11 ರನ್’ಗಳ ಜಯ

ಜೂನ್ 27: Ind vs WI(ಮ್ಯಾಂಚೆಸ್ಟರ್) ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ 125 ರನ್’ಗಳ ಜಯ

ಜೂನ್ 30: Ind vs Eng(ಬರ್ಮಿಂಗ್’ಹ್ಯಾಮ್) ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 31 ರನ್’ಗಳ ಸೋಲು

ಜುಲೈ [ಐಸಿಸಿ ಏಕದಿನ ವಿಶ್ವಕಪ್]

ಜುಲೈ 2: Ind vs Ban(ಬರ್ಮಿಂಗ್’ಹ್ಯಾಮ್) ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 28 ರನ್’ಗಳ ಜಯ

ಜುಲೈ 6: Ind vs SL(ಲೀಡ್ಸ್) ಶ್ರೀಲಂಕಾ ವಿರುದ್ಧ ಭಾರತಕ್ಕೆ 7 ವಿಕೆಟ್’ಗಳ ಜಯ

ಜುಲೈ 9-10[ಸೆಮಿಫೈನಲ್] Ind vs NZ(ಮ್ಯಾಂಚೆಸ್ಟರ್) ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 18 ರನ್’ಗಳ ಸೋಲು
[ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 46.1 ಓವರ್’ಗಳಲ್ಲಿ 5 ವಿಕೆಟ್ ಕಳೆದುಕೊಂಡು 211 ರನ್ ಬಾರಿಸಿತ್ತು. ಮಳೆಯ ಅಡಚಣೆಯಿಂದಾಗಿ ಪಂದ್ಯ ಎರಡನೇ ದಿನಕ್ಕೆ ಮುಂದೂಡಲ್ಪಟ್ಟಿತು. ಮೀಸಲು ದಿನದಲ್ಲಿ ಆಟ ಮುಂದುವರೆಸಿದ ನ್ಯೂಜಿಲೆಂಡ್ ನಿಗದಿತ 50 ಓವರ್’ಗಳಲ್ಲಿ 8 ವಿಕೆಟ್ ಕಳೆದುಕೊಂಡು 239 ರನ್ ಬಾರಿಸಿತ್ತು. ಇನ್ನು ಭಾರತ 49.3 ಓವರ್’ಗಳಲ್ಲಿ 221 ರನ್ ಬಾರಿಸಿ ಆಲೌಟ್ ಆಯಿತು] 

ಆಗಸ್ಟ್ [ಭಾರತದಿಂದ ವೆಸ್ಟ್ ಇಂಡೀಸ್ ಪ್ರವಾಸ, ಟೆಸ್ಟ್ ಚಾಂಪಿಯನ್’ಶಿಪ್ ಆರಂಭ] Ind vs Aus T20I

ಆಗಸ್ಟ್ 03: Ind vs WI(ಲಾಂಡ್ರಿಹಿಲ್) ಮೊದಲ T20I : ವಿಂಡೀಸ್ ಎದುರು ಭಾರತಕ್ಕೆ 4 ವಿಕೆಟ್’ಗಳ ಜಯ

ಆಗಸ್ಟ್ 4: Ind vs WI(ಲಾಂಡ್ರಿಹಿಲ್) 2ನೇ T20I : ವಿಂಡೀಸ್ ಎದುರು ಭಾರತಕ್ಕೆ 22 ರನ್’ಗಳ ಜಯ[ಡೆಕ್ವರ್ತ್ ಲೂಯಿಸ್ ನಿಯಮದನ್ವಯ]

Recap 2019 This how Indian Cricket Team played in 2019

ಆಗಸ್ಟ್ 6: Ind vs WI(ಪ್ರಾವಿಡೆನ್ಸ್) 3ನೇ T20I : ವಿಂಡೀಸ್ ಎದುರು ಭಾರತಕ್ಕೆ 7 ವಿಕೆಟ್ ಗಳ ಜಯ, (ಭಾರತದ ಪಾಲಾದ ಟಿ20 ಸರಣಿ[3-0]) 

ಆಗಸ್ಟ್ 8: Ind vs WI(ಪ್ರಾವಿಡೆನ್ಸ್) ಮೊದಲ ODI : ಮಳೆಯಿಂದಾಗಿ ಒಂದು ಎಸೆತ ಕಾಣದೇ ಪಂದ್ಯ ರದ್ದು

ಆಗಸ್ಟ್ 11: Ind vs WI(ಪೋರ್ಟ್ ಆಫ್ ಸ್ಪೇನ್) 2ನೇ ODI : ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ 59 ರನ್ ಗಳ ಜಯ[ಡೆಕ್ವರ್ತ್ ಲೂಯಿಸ್ ನಿಯಮದನ್ವಯ] 

Recap 2019 This how Indian Cricket Team played in 2019
ಆಗಸ್ಟ್ 14: Ind vs WI(ಪೋರ್ಟ್ ಆಫ್ ಸ್ಪೇನ್) 3ನೇ ODI : ಭಾರತಕ್ಕೆ 6 ವಿಕೆಟ್ ಗಳ ಜಯ[ಡೆಕ್ವರ್ತ್ ಲೂಯಿಸ್ ನಿಯಮದನ್ವಯ](ಭಾರತಕ್ಕೆ 2-0 ಅಂತರದಲ್ಲಿ ಸರಣಿ ಜಯ)

ಆಗಸ್ಟ್ 22-25: Ind vs WI(ನಾರ್ಥ್ ಸೌಂಡ್) ಮೊದಲ ಟೆಸ್ಟ್ : ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ 318 ರನ್’ಗಳ ಜಯ[60 ಅಂಕ ಭಾರತದ ತೆಕ್ಕೆಗೆ]

Recap 2019 This how Indian Cricket Team played in 2019
ಆಗಸ್ಟ್ 30-ಸೆಪ್ಟೆಂಬರ್ 2: Ind vs WI(ಕಿಂಗ್ಸ್’ಟನ್[ಜಮೈಕ]) 2ನೇ ಟೆಸ್ಟ್ : ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ 257 ರನ್’ಗಳ ಜಯ. ಭಾರತದ ಪಾಲಾದ ಟೆಸ್ಟ್ ಸರಣಿ[ಭಾರತದ ತೆಕ್ಕೆಗೆ 120 ಅಂಕಗಳು]

ಸೆಪ್ಟೆಂಬರ್ [ದಕ್ಷಿಣ ಆಫ್ರಿಕಾದಿಂದ ಭಾರತ ಪ್ರವಾಸ]
ಸೆಪ್ಟೆಂಬರ್ 15: Ind vs SA(ಧರ್ಮಶಾಲಾ) ಮೊದಲ T20I : ಒಂದೂ ಎಸೆತ ಕಾಣದೇ ಪಂದ್ಯ ರದ್ದು
ಸೆಪ್ಟೆಂಬರ್ 18: Ind vs SA(ಮೊಹಾಲಿ) 2ನೇ T20I : ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 7 ವಿಕೆಟ್’ಗಳ ಜಯ
ಸೆಪ್ಟೆಂಬರ್ 22: Ind vs SA(ಬೆಂಗಳೂರು) 3ನೇ T20I : ಭಾರತ ವಿರುದ್ಧ ದಕ್ಷಿಣ ಆಫ್ರಿಕಾಗೆ 9 ವಿಕೆಟ್’ಗಳ ಜಯ[1-1 ಅಂತರದಲ್ಲಿ ಸರಣಿ ಸಮ]

ಅಕ್ಟೋಬರ್ [ದಕ್ಷಿಣ ಆಫ್ರಿಕಾದಿಂದ ಭಾರತ ಪ್ರವಾಸ- ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಶಿಪ್]

ಅಕ್ಟೋಬರ್ 2-6: Ind vs SA(ವಿಶಾಖಪಟ್ಟಣಂ) ಮೊದಲ ಟೆಸ್ಟ್ : ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 203 ರನ್’ಗಳ ಜಯ

ಅಕ್ಟೋಬರ್ 10-13: Ind vs SA(ಪುಣೆ) 2ನೇ ಟೆಸ್ಟ್ : ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಇನಿಂಗ್ಸ್ ಹಾಗೂ 137 ರನ್’ಗಳ ಜಯ

ಅಕ್ಟೋಬರ್ 19-22: Ind vs SA(ರಾಂಚಿ) 3ನೇ ಟೆಸ್ಟ್: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಇನಿಂಗ್ಸ್ ಹಾಗೂ 202 ರನ್’ಗಳ ಜಯ[3-0 ಅಂತರದಲ್ಲಿ ಗಾಂಧಿ-ಮಂಡೇಲಾ ಕಪ್ ಜಯಿಸಿದ ಭಾರತ. 120 ಅಂಕಗಳು ಭಾರತದ ತೆಕ್ಕೆಗೆ]

ನವೆಂಬರ್ [ಬಾಂಗ್ಲಾದೇಶ ಭಾರತ ಪ್ರವಾಸ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಶಿಪ್]

ನವೆಂಬರ್ 3: Ind vs Ban(ಡೆಲ್ಲಿ) ಮೊದಲ T20I : ಭಾರತ ವಿರುದ್ಧ ಬಾಂಗ್ಲಾದೇಶಕ್ಕೆ 7 ವಿಕೆಟ್’ಗಳ ಜಯ

ನವೆಂಬರ್ 7: Ind vs Ban(ರಾಜ್’ಕೋಟ್) 2ನೇ T20I : ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 8 ವಿಕೆಟ್’ಗಳ ಜಯ

Recap 2019 This how Indian Cricket Team played in 2019

ನವೆಂಬರ್ 10: Ind vs Ban(ನಾಗ್ಪುರ) 3ನೇ T20I : ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 30 ರನ್’ಗಳ ಜಯ[ಭಾರತಕ್ಕೆ 2-1 ಅಂತರದಲ್ಲಿ ಸರಣಿ ಜಯ]

ನವೆಂಬರ್ 14-16: Ind vs Ban(ಇಂದೋರ್) ಮೊದಲ ಟೆಸ್ಟ್ : ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ಇನಿಂಗ್ಸ್ ಹಾಗೂ 130 ರನ್’ಗಳ ಜಯ

Recap 2019 This how Indian Cricket Team played in 2019
ನವೆಂಬರ್ 22-24: Ind vs Ban(ಕೋಲ್ಕತಾ) 2ನೇ ಟೆಸ್ಟ್[ಡೇ/ನೈಟ್ ಟೆಸ್ಟ್] : ಬಾಂಗ್ಲಾ ವಿರುದ್ಧ ಭಾರತಕ್ಕೆ ಇನಿಂಗ್ಸ್ ಹಾಗೂ 46 ರನ್’ಗಳ ಜಯ. [ಭಾರತಕ್ಕೆ 2-0 ಅಂತರದಲ್ಲಿ ಸರಣಿ ಜಯ, 120 ಅಂಕಗಳು ಭಾರತದ ತೆಕ್ಕೆಗೆ] 

ಡಿಸೆಂಬರ್ [ವೆಸ್ಟ್ ಇಂಡೀಸ್ ಭಾರತ ಪ್ರವಾಸ] Ind vs WI india T20 Ind vs WI india T20

ಡಿಸೆಂಬರ್ 6: Ind vs WI(ಹೈದರಾಬಾದ್) ಮೊದಲ T20I: ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ 6 ವಿಕೆಟ್’ಗಳ ಜಯ

ಡಿಸೆಂಬರ್ 8: Ind vs WI(ತಿರುವನಂತಪುರಂ) 2ನೇ T20I : ಭಾರತ ವಿರುದ್ಧ ವೆಸ್ಟ್ ಇಂಡೀಸ್’ಗೆ 8 ವಿಕೆಟ್’ಗಳ ಜಯ

Recap 2019 This how Indian Cricket Team played in 2019
ಡಿಸೆಂಬರ್ 11: Ind vs WI(ಮುಂಬೈ) 3ನೇ T20I : ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ 67 ರನ್’ಗಳ ಜಯ.[ಭಾರತಕ್ಕೆ 2-1 ಅಂತರದಲ್ಲಿ ಸರಣಿ ಕೈವಶ

ಡಿಸೆಂಬರ್ 15: Ind vs WI(ಚೆನ್ನೈ) ಮೊದಲ ODI : ಭಾರತ ವಿರುದ್ಧ ವೆಸ್ಟ್ ಇಂಡೀಸ್’ಗೆ 8 ವಿಕೆಟ್’ಗಳ ಜಯ

ಡಿಸೆಂಬರ್ 18: Ind vs WI(ವಿಶಾಖಪಟ್ಟಣಂ) 2ನೇ ODI : ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ 107 ರನ್’ಗಳ ಜಯ

Recap 2019 This how Indian Cricket Team played in 2019
ಡಿಸೆಂಬರ್ 22: Ind vs WI(ಕಟಕ್) 3ನೇ ODI, : ಭಾರತಕ್ಕೆ 4 ವಿಕೆಟ್’ಗಳ ಜಯ[ಭಾರತಕ್ಕೆ 2-1 ಅಂತರದಲ್ಲಿ ಸರಣಿ ಕೈವಶ

ಈ ಸುದ್ದಿಯನ್ನು ಇಂಗ್ಲೀಷ್ ನಲ್ಲಿ ಓದಲು ಈ ಲಿಂಕ್ ಕ್ಲಿಕ್ ಮಾಡಿ...

Follow Us:
Download App:
  • android
  • ios