ಸಿನಿಮಾದ 360 ಡಿಗ್ರಿ ಹಾಗೂ ಕ್ರಿಕೆಟ್‌ನ 360 ಡಿಗ್ರಿ ಮುಖಾಮುಖಿಯಾಗಿದ್ದಾರೆ. ಹೌದು ಕಾಂತಾರ ಯಶಸ್ಸಿನಲ್ಲಿರುವ ರಿಶಬ್ ಶೆಟ್ಟಿ ಹಾಗೂ ಆರ್‌ಸಿಬಿ ಕ್ರಿಕೆಟಿಗ, ಸೌತ್ ಆಫ್ರಿಕಾ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ ಸಿನಿಮಾ ಹಾಗೂ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣಕ್ಕೆ ರೆಡಿಯಾಗಿದ್ದಾರೆ.  

ಬೆಂಗಳೂರು(ನ.03): ಕ್ರಿಕೆಟ್ ಹಾಗೂ ಸಿನಿಮಾ ಅಭಿಮಾನಿಗಳಿಗೆ ಇದಕ್ಕಿಂತ ಇನ್ನೇನು ಬೇಕು? ಕಾಂತಾರ ಯಶಸ್ಸಿನ ಅಲೆಯಲ್ಲಿರುವ ರಿಶಬ್ ಶೆಟ್ಟಿ ಹಾಗೂ ಕ್ರಿಕೆಟ್‌ನಲ್ಲಿ ಮಿಸ್ಟರ್ 360 ಎಂದೇ ಜನಪ್ರಿಯರಾಗಿರುವ ಸೌತ್ ಆಫ್ರಿಕಾ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ ಹೊಸ ಪಂದ್ಯಕ್ಕೆ ಸಜ್ಜಾಗಿದ್ದಾರೆ. ಇದು ಕ್ರಿಕೆಟ್ ಅಥವಾ ಕಂಬಳವೇ ಅನ್ನೋ ಕುತೂಹಲವನ್ನು ಹೆಚ್ಚಿಸಿದೆ. ಕಾರಣ ಇಬ್ಬರು ಜೊತೆಯಾಗಿ ಕಂಬಳ ಕೋಣ ಒಡಿಸುವ ಮೊದಲು ಹೇಳುವ ಪದವನ್ನು ಹೇಳಿದ್ದಾರೆ. ಈ ಮೂಲಕ ಸಿನಿಮಾ ಕ್ಷೇತ್ರದ 360 ಡಿಗ್ರಿ ಹಾಗೂ ಕ್ರಿಕೆಟ್‌ನ 360 ಡಿಗ್ರಿ ಜೊತೆಯಾಗ ಅಭಿಮಾನಿಗಳಿಗೆ ಹೊಸ ರಸದೌತಣ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಅನ್ನೋ ಸೂಚನೆ ನೀಡಿದ್ದಾರೆ.

ರಿಶಬ್ ಶೆಟ್ಟಿ, ಹೊಂಬಾಳೆ ಫಿಲ್ಮ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ವಿಶೇಷ ವಿಡಿಯೋ ಪೋಸ್ಟ್ ಮಾಡಿದೆ. ಈ ಪೋಸ್ಟ್ ಮೂಲಕ ಹಲವು ಕೂತಹಲಕರ ಸೂಚನೆಯನ್ನು ನೀಡಿದೆ. ಆರಂಭದಲ್ಲಿ ರಿಷಬ್ ಹಾಗೂ ಎಬಿಡಿ ಜೊತೆಯಾಗಿ ಬಿಡಿಯಾ ಎಂದಿದ್ದಾರೆ. ಬಳಿಕ ಕಾಂತಾರ ಎಂದಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿರುವ ರಿಶಬ್ ಶೆಟ್ಟಿ, ಇದು ಪಂದ್ಯ, ನಿಜವಾದ 360ಯನ್ನು ಭೇಟಿಯಾದೆ. ಸೂಪರ್ ಹೀರೋ ಮತ್ತೆ ತಮ್ಮ ಮೂಲಸ್ಥಾನಕ್ಕೆ ಮರಳಿದ್ದಾರೆ. ನಮ್ಮ ಬೆಂಗಳೂರು ಎಂದು ರಿಶಬ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ. 

Scroll to load tweet…

ಧರ್ಮಸ್ಥಳದ ಧರ್ಮಾಧಿಕಾರಿಯವರನ್ನು ಭೇಟಿಯಾದ ರಿಷಬ್ ಶೆಟ್ಟಿ ದಂಪತಿ

ಈ ವಿಡಿಯೋ ಮೂಲಕ ರಾಯಲ್ ಚಾಲೆಂಜರ್ಸ್ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದಾರೆ. ಇದೀಗ ರಿಶಬ್ ಶೆಟ್ಟಿ ಜೊತೆ ಸೇರಿಕೊಂಡು ಎಬಿ ಡಿವಿಲಿಯರ್ಸ್ ಕಂಬಳ ಕೋಣ ಒಡಿಸ್ತಾರ ಎಂದು ಹಲವರು ಪ್ರಶ್ನಿಸಿದ್ದಾರೆ. ಇಂದ ಬೆಳಗ್ಗೆ ಎಬಿ ಡಿವಿಲಿಯರ್ಸ್ ಬೆಂಗಳೂರಿಗೆ ಆಗಮಿಸಿದ್ದಾರೆ. ಎಬಿಡಿಗೆ ಆರ್‌ಸಿಬಿ ಅದ್ಧೂರಿ ಸ್ವಾಗತ ನೀಡಿದೆ.

ಬೆಂಗಳೂರು ನನ್ನ ಎರಡನೇ ತವರು: ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಎಬಿ ಡಿವಿಲಿಯರ್ಸ್‌..!

2023ರಲ್ಲಿ ಆರ್‌ಸಿಬಿಗೆ ಮರಳುತ್ತೇನೆ: ಎಬಿಡಿ!
ದ.ಆಫ್ರಿಕಾ ದಿಗ್ಗಜ ಬ್ಯಾಟರ್‌ ಎಬಿ ಡಿ ವಿಲಿಯ​ರ್‍ಸ್ ಮುಂದಿನ ವರ್ಷ ಆರ್‌ಸಿಬಿ ತಂಡದ ಭಾಗವಾಗಿ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಆದರೆ ಆಟಗಾರನಾಗಿ ವಾಪಸ್ಸಾಗುತ್ತಾರೋ ಇಲ್ಲವೇ ಕೋಚ್‌ ಆಗಿ ಕಾರ‍್ಯನಿರ್ವಹಿಸುತ್ತಾರೋ ಎಂಬುದನ್ನು ಸ್ಪಷ್ಟಪಡಿಸಿಲ್ಲ. ‘ಆರ್‌ಸಿಬಿಗೆ ನಾನು ಮರಳುವ ಬಗ್ಗೆ ವಿರಾಟ್‌ ಖಚಿತಪಡಿಸಿದ್ದನ್ನು ಕೇಳಿ ಸಂತೋಷವಾಯಿತು. ಆದರೆ ನಾವು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಮುಂದಿನ ವರ್ಷ ಖಂಡಿತಾ ಐಪಿಎಲ್‌ನಲ್ಲಿರುತ್ತೇನೆ. ಆದರೆ ಯಾವ ಪಾತ್ರದಲ್ಲಿ ಎಂಬುದು ಇನ್ನೂ ಸ್ಪಷ್ಟವಿಲ್ಲ’ ಎಂದಿದ್ದಾರೆ. ‘ನನ್ನ ಎರಡನೇ ತವರು ಬೆಂಗಳೂರಿಗೆ ಮರಳಲು ಕಾತರದಿಂದಿದ್ದೇನೆ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳನ್ನು ನೋಡುವ ಆಸೆಯಿದೆ. ಅದಕ್ಕಾಗಿ ನಾನು ಕಾಯುತ್ತಿದ್ದೇನೆ’ ಎಂದು 2011ರಿಂದ 2021ರ ವರೆಗೆ ತಂಡದ ಭಾಗವಾಗಿದ್ದ ವಿಲಿಯ​ರ್‍ಸ್ ಹೇಳಿದ್ದಾರೆ.