ಅಡಿ​ಲೇ​ಡ್‌(ಡಿ.03): ಆಸ್ಪ್ರೇ​ಲಿಯಾದ ಡೇವಿಡ್‌ ವಾರ್ನರ್‌ 400 ರನ್‌ ದಾಖ​ಲೆ​ ಮುರಿ​ಯು​ವ ನಿರೀ​ಕ್ಷೆ​ಯಲ್ಲಿದ್ದೆ ಎಂದು ವೆಸ್ಟ್‌ ಇಂಡೀಸ್‌ ದಿಗ್ಗಜ ಬ್ರಿಯಾನ್‌ ಲಾರಾ ತಿಳಿ​ಸಿ​ದರು. ‘ಅಡಿ​ಲೇ​ಡ್‌​ನ​ಲ್ಲಿದ್ದ ನಾನು, ಸೋ​ಬ​ರ್ಸ್ ಅವ​ರಂತೆ​ಯೇ ವಾರ್ನರ್‌ ಅಭಿ​ನಂದಿ​ಸಲು ಹೊರ​ಟು ನಿಂತಿದ್ದೆ. ದಾಖ​ಲೆ​ಗಳಿರು​ವುದೇ ಮುರಿ​ಯ​ಲು, ವಾರ್ನ​ರ್‌ಗೆ ಇನ್ನೊಂದು ಅವ​ಕಾಶ ಸಿಗ​ಬ​ಹು​ದು’ ಎಂದು ಲಾರಾ ಹೇಳಿ​ದ​ರು. 

ಇದನ್ನೂ ಓದಿ: ಲಾರಾ ದಾಖಲೆ ಮುರಿಯಲು ಟೀಂ ಇಂಡಿಯಾ ಕ್ರಿಕೆಟಿಗನಿಗೆ ಸಾಧ್ಯ; ವಾರ್ನರ್!

ಟೆಸ್ಟ್‌ನಲ್ಲಿ ಗರಿಷ್ಟವೈಯ​ಕ್ತಿಕ ಮೊತ್ತದ ದಾಖ​ಲೆ​ಯನ್ನು ಲಾರಾ 2 ಬಾರಿ ಮುರಿ​ದಿ​ದ್ದರು. 1994ರಲ್ಲಿ ಇಂಗ್ಲೆಂಡ್‌ ವಿರುದ್ಧ 375 ರನ್‌ ದಾಖ​ಲಿ​ಸಿ ಗ್ಯಾರಿ ಸೋಬ​ರ್ಸ್ ಅವರ 36 ವರ್ಷ ಹಿಂದಿನ 365 ರನ್‌ ದಾಖಲೆ ಮುರಿ​ದಿ​ದ್ದರು. 2004ರಲ್ಲಿ ಇಂಗ್ಲೆಂಡ್‌ ವಿರುದ್ಧ ತಮ್ಮ ದಾಖ​ಲೆ​ ಸುಧಾ​ರಿ​ಸಿದ್ದರು. ಅಜೇಯ 400 ರನ್ ಸಿಡಿಸಿ ಹೊಸ ದಾಖಲೆ ಬರೆದಿದ್ದರು. 

ಇದನ್ನೂ ಓದಿ: ಟೆಸ್ಟ್ ತ್ರಿಶತಕಕ್ಕೆ ವಿರೇಂದ್ರ ಸೆಹ್ವಾಗ್ ಕಾರಣ; ವಾರ್ನರ್ ಬಿಚ್ಚಿಟ್ರು ಸೀಕ್ರೆಟ್!.

ಪಾಕ್‌ ವಿರುದ್ಧ ವಾರ್ನರ್‌ 335 ರನ್‌ ಗಳಿ​ಸಿ​ದ್ದಾಗ ನಾಯಕ ಟಿಮ್‌ ಪೈನೆ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿ​ದ್ದರು. ಇದು ಚರ್ಚೆಗೂ ಕಾರಣವಾಗಿತ್ತು. ವಾರ್ನರ್‌ಗೆ ಬ್ರಿಯಾನ್ ಲಾರಾ ದಾಖಲೆ ಮುರಿಯುವ ಎಲ್ಲಾ ಅವಕಾಶವಿತ್ತು. ಅಷ್ಟರಲ್ಲೇ ಟಿಮ್ ಪೈನ್ ಡಿಕ್ಲೇರ್ ಮಾಡಿದ್ದರು. ಬಳಿಕ ಮಾತನಾಡಿದ್ದ ವಾರ್ನರ್, ಲಾರಾ ದಾಖಲೆ ಮುರಿಯುವ ಸಾಮರ್ಥ್ಯ ಟೀಂ ಇಂಡಿಯಾದ ರೋಹಿತ್ ಶರ್ಮಾಗಿದೆ ಎಂದಿದ್ದರು.