ಮುಂಬೈ(ಜು.11): ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆಯ ಮತ್ತೆ ಏಕದಿನ ಮಾದರಿಗೆ ವಾಪಸ್ ಆಗಲು ತಯಾರಿ ನಡೆಸುತ್ತಿದ್ದಾರೆ. ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಅನ್ಯಾಯವಾಗುತ್ತಿದೆ  ಅನ್ನೋ ಕೂಗು ಇಂದು ನಿನ್ನೆಯದಲ್ಲ. ಹಲವು ವರ್ಷಗಳಿಂದ ರಹಾನೆಗೆ ಅನ್ಯಾಯ ಆಗತ್ತಲೇ ಇದೆ. ಆದರೆ ರಹಾನೆ ಎಲ್ಲವನ್ನೂ ತಾಳ್ಮೆಯಿಂದ ಎದುರಿಸಿದ್ದಾರೆ. ಇದೀಗ ರಹಾನೆ ಮತ್ತೆ ಆಯ್ಕೆ ಸಮಿತಿಯ ಕದ ತಟ್ಟುವ ಪ್ರಯತ್ನ ಮಾಡಿದ್ದಾರೆ.

ಕೊರೋನಾ ಎಫೆಕ್ಟ್: ಮನೆ ಕೆಲಸದಲ್ಲಿ ಫುಲ್ ಬ್ಯುಸಿಯಾದ ಅಜಿಂಕ್ಯ ರಹಾನೆ..!.

ಅಜಿಂಕ್ಯ ರಹಾನೆಯ ಮತ್ತೆ ಏಕದಿನ ಮಾದರಿಗೆ ವಾಪಸ್ ಆಗಲು ತಯಾರಿ ನಡೆಸುತ್ತಿದ್ದಾರೆ. ಟೆಸ್ಟ್ ತಂಡಕ್ಕೆ ಸೀಮಿತವಾಗಿರುವ ರಹಾನೆ ಕಳೆದೆರಡು ವರ್ಷದಿಂದ ಏಕದಿನ ತಂಡಕ್ಕೆ ಮರಳಲು ತಯಾರಿ ನಡೆಸುತ್ತಿದ್ದಾರೆ. ಆದರೆ ಆಯ್ಕೆ ಸಮಿತಿ ರಹಾನೆಗೆ ಟೆಸ್ಟ್ ತಂಡದಲ್ಲಿ ಮಾತ್ರ ಸ್ಥಾನ ನೀಡಿದೆ. ಇದೀಗ ರಹಾನೆ ತಾನು ಯಾವುದೇ ಕ್ರಮಾಕದಲ್ಲಿ ಆಡಲು ಸಿದ್ದ ಅನ್ನೋ ಮೂಲಕ ಆಯ್ಕೆ ಸಮಿತಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. 

ಏಕದಿನ ಹಾಗೂ ಟಿ20 ಮಾದರಿಯಲ್ಲಿ ಕ್ರಿಕೆಟ್ ಆಡಲು ರಹಾನೆ ಮಾನಸಿಕವಾಗಿ ಸಜ್ಜಾಗಿದ್ದಾರೆ. ಇಷ್ಟೇ ಅಲ್ಲ ಇಂಡೋರ್ ತಯಾರಿ ಕೂಡ ನಡೆಸುತ್ತಿದ್ದಾರೆ. 2018ರ ಆರಂಭದಲ್ಲಿ ರಹಾನೆ ಟೀಂ ಇಂಡಿಯಾ ಪರ ಏಕದಿನ ಪಂದ್ಯ ಆಡಿದ್ದರು. ಬಳಿಕ ಟೆಸ್ಟ್ ಪಂದ್ಯದಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. 

ಟೀಂ ಇಂಡಿಯಾ ಪರ ಎಲ್ಲಾ ಬ್ಯಾಟಿಂಗ್ ಕ್ರಮಾಂಕದಲ್ಲಿ ರಹಾನೆ ಬ್ಯಾಟ್ ಮಾಡಿದ್ದಾರೆ. ಯಾವುದೇ ಸಂದರ್ಭದಲ್ಲಿ ಅವಕಾಶ ಸಿಕ್ಕರೂ ತಂಡಕ್ಕಾಗಿ ಆಡಲು ಸಿದ್ದವಾಗಿದ್ದೇನೆ. ಆರಂಭಿಕನಾಗಿ ಬ್ಯಾಟಿಂಗ್ ಆನಂದಿಸಿದ್ದೇನೆ. ನಾಲ್ಕನೇ ಕ್ರಮಾಂಕದಲ್ಲೂ ಬ್ಯಾಟಿಂಗ್ ಮಾಡಿದ್ದೇನೆ. ಹೀಗಾಗಿ ಯಾವುದೇ ಕ್ರಮಾಂದಲ್ಲಿ ಬ್ಯಾಟಿಂಗ್ ಮಾಡುತ್ತೇನೆ ಎಂದು ರಹಾನೆ ಹೇಳಿದ್ದಾರೆ.